For Quick Alerts
ALLOW NOTIFICATIONS  
For Daily Alerts

ಈ ವಸ್ತುಗಳನ್ನು ನಿಮ್ಮ ಶಾಂಪೂಗೆ ಸೇರಿಸಿ ಇನ್ನಷ್ಟು ಲಾಭ ಪಡೆಯಿರಿ

By Sushma Charhra
|

ಶಾಂಪೂ ಪ್ರತಿಯೊಬ್ಬರು ತಮ್ಮ ಕೂದಲಿನ ಸೌಂದರ್ಯಕ್ಕಾಗಿ ಬಳಸುವ ವಸ್ತು. ನಿಮ್ಮ ಕೂದಲಿಗೆ ಅನುಸಾರವಾಗಿ ನೀವು ಬೇರೆಬೇರೆ ವಿಧಧ ಶಾಂಪೂಗಳನ್ನು ಮಾರ್ಕೆಟ್ ನಲ್ಲಿ ಪಡೆದುಕೊಳ್ಳಬಹುದು.

ಹೇರ್ ಮಾಸ್ಕ್ ಮತ್ತು ಇತರೆ ಕೂದಲಿನ ಸೌಂದರ್ಯವರ್ಧಕಗಳನ್ನು ಬಳಸಲು ಸಮಯವಿಲ್ಲದೆ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಹೆಣಗಾಡುತ್ತಿರುವವರಿಗಾಗಿ ಇಲ್ಲೊಂದಿಷ್ಟು ಸರಳ ಮತ್ತು ಸುಲಭ ಉಪಾಯಗಳಿವೆ. ಶಾಂಪೂಗೆ ಇದನ್ನು ಮಿಕ್ಸ್ ಮಾಡಿ ಬಳಸುವುದರಿಂದಾಗಿ ಕೂದಲಿನ ಸೌಂದರ್ಯ ಮತ್ತಷ್ಟು ಹೆಚ್ಚಲಿದೆ.

ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗೆ ನಿಮ್ಮ ಶ್ಯಾಂಪೂನಲ್ಲೇ ಇದೆ ಮದ್ದು

ನಿಮ್ಮ ಹೆಚ್ಚಿನ ಸಮಯ ಬೇಡದೆ ಬಹಳ ಬೇಗನೆ ಪರಿಣಾಮವನ್ನುಂಟು ಮಾಡಬಲ್ಲ ಐಡಿಯಾಗಳಿವು.ಅಷ್ಟೇ ಅಲ್ಲ ಇವುಗಳನ್ನು ಬಳಸುವುದು ಸುಲಭ ಮತ್ತು ಹೆಚ್ಚಿನವರ ಮನೆಗಳಲ್ಲಿ ಲಭ್ಯವಿರುವ ವಸ್ತುಗಳೇ ಆಗಿವೆ. ಆದರೆ ನೀವು ಎಚ್ಚರಿಕೆ ವಹಿಸಬೇಕಾಗಿರುವುದು ಯಾವುದೆಂದರೆ ನೀವು ಮಾರ್ಕೆಟ್ ನಲ್ಲಿ ಕೊಂಡುಕೊಳ್ಳುವ ಶಾಂಪೂ ಸಲ್ಪೇಟ್ ಮತ್ತು ಪ್ಯಾರಬೆನ್ಸ್ ನಿಂದ ಮುಕ್ತವಾಗಿರಬೇಕು.

ಇಂತಹ ಕೆಮಿಕಲ್ ಗಳು ಶಾಂಪೂವಿನಲ್ಲಿ ಅಧಿಕವಾಗಿರುವುದರಿಂದಾಗಿ ನಿಮ್ಮ ಸ್ಕಾಲ್ಪ್ ಗೆ ಹೆಚ್ಚಿನ ತೊಂದರೆ ಉಂಟಾಗಿ ತುರಿಕೆ, ಕಜ್ಜಿ ಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ರೆಪ್ಯುಟೆಡ್ ಕಂಪೆನಿಯ ಶಾಂಪೂವನ್ನು ಖರೀದಿಸಿ ಬಳಸುವುದು ನಿಮ್ಮ ಕೂದಲಿನ ಹಿತದೃಷ್ಟಿಯಿಂದ ಬಹಳ ಒಳ್ಳೆಯದು.

 ರೋಸ್ ವಾಟರ್

ರೋಸ್ ವಾಟರ್

ತುರಿಕೆ ಮತ್ತು ನೆವೆಯಿಂದ ನಿಮ್ಮ ಸ್ಕಾಲ್ಪ್ ನಿಮಗೆ ತೊಂದರೆ ನೀಡುತ್ತಿದ್ದರೆ ನೀವು ಖಂಡಿತ ಈ ವಿಧಾನವನ್ನು ಬಳಸಲೇಬೇಕು. ಒಂದು ಕಪ್ ನಷ್ಟು ಗುಲಾಬಿ ರಸವನ್ನು ನಿಮ್ಮ ಶಾಂಪ್ಯೂವಿಗೆ ಮಿಕ್ಸ್ ಮಾಡಿ ಕೂದಲನ್ನು ತೊಳೆದುಕೊಳ್ಳಿ.ಸೆನ್ಸಿಟೀವ್ ಸ್ಕಾಲ್ಪ್ ಇರುವವರು ಕೂಡ ಇದನ್ನು ಬಳಸಬಹುದು. ರೋಸ್ ವಾಟರ್ ಬಳಸುವುದರಿಂದಾಗಿ ತುರಿಕೆ ಕಡಿಮೆಯಾಗಲಿದೆ. ನಿಮಗೆ ಸ್ಕಾಲ್ಪ್ ತುರಿಕೆಯಾಗುತ್ತಿದ್ದರೆ ಕೂಡಲೆ ಈ ವಿಧಾನ ಬಳಸಿ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ನಿಂಬೆ ರಸ

ನಿಂಬೆ ರಸ

ಕೂದಲಿನ ಸ್ವಚ್ವತೆ ಸರಿಯಾಗಿ ಆಗುತ್ತಿಲ್ಲವೆಂದು ನಿಮಗೆ ಅನ್ನಿಸುತ್ತಿದ್ದರೆ ಒಂದು ಟೇಬಲ್ ಸ್ಪೂನ್ ನಷ್ಟು ನಿಂಬೆರಸವನ್ನು ಕೂದಲಿಗೆ ಆಡ್ ಮಾಡಿ ಕೂದಲನ್ನು ತೊಳೆಯಿರಿ.

ಕೂದಲಿನ ಅಲಂಕಾರಕ್ಕಾಗಿ ಯಾವುದಾದರೂ ಕೆಮಿಕಲ್ ಗಳನ್ನು ಬಳಸಿದಾಗ, ಹೆಚ್ಚು ಎಣ್ಣೆಯಂಶವಿದ್ದು ಜಿಡ್ಡುಜಿಡ್ಡು ಭಾವನೆಯಿದ್ದಾಗ, ಕೂದಲಿನಲ್ಲಿ ಯಾವುದೋ ಹೋಗಲಾಡಿಸಿದ ಕೊಳೆ ಇದೆ ಎಂದು ನಿಮಗೆ ಅನ್ನಿಸಿದಾಗ ನೀವಿದನ್ನು ಬಳಸಬಹುದು.

ಜೇನು

ಜೇನು

ಕೂದಲು ಡ್ರೈ ಆದ ಅನುಭವವಾಗುತ್ತಿದ್ದರೆ ಒಂದು ಟೇಬಲ್ ಸ್ಪೂನ್ ನಷ್ಟು ಜೇನುಹನಿಯನ್ನು ಶಾಂಪೂವಿಗೆ ಮಿಕ್ಸ್ ಮಾಡಿಕೊಳ್ಳಿ. ಕೂದಲಿನಲ್ಲಿರುವ ಬ್ಯಾಕ್ಟೀರಿಯಾದ ಅಂಶವನ್ನು ಜೇನು ತೊಡೆದುಹಾಕುತ್ತೆ ಮತ್ತು ಕೂದಲಿನ ಆರೋಗ್ಯ ವೃದ್ಧಿಗೆ ಇದು ಸಹಕರಿಸುತ್ತೆ.

ಆದರೆ ನೆನಪಿರಲಿ ಶಾಂಪೂವಿಗೆ ಹನಿ ಸೇರಿಸಿದ ನಂತ್ರ ಕೂದಲನ್ನು ಚೆನ್ನಾಗಿ ತೊಳೆಯುವುದನ್ನು ಮರೆಯಬೇಡಿ. ಒಂದು ವೇಳೆ ಜೇನು ಕೂದಲಿನಲ್ಲಿ ಹಾಗೆಯೇ ಉಳಿದರೆ ಅದರಿಂದ ಸ್ಟಿಕ್ಕಿ ಸ್ಟಿಕ್ಕಿಯಾದಂತೆ ಭಾಸವಾಗಿ ಕೂದಲು ಅಸಹ್ಯವೆನಿಸುವ ಸಾಧ್ಯತೆ ಇರುತ್ತೆ

 ಲ್ಯಾವೆಂಡರ್ ಎಸೆನ್ಸಿಯಲ್ಸ್

ಲ್ಯಾವೆಂಡರ್ ಎಸೆನ್ಸಿಯಲ್ಸ್

ನೀವು ಒತ್ತಡದಿಂದ ಬಳಲುತ್ತಿದ್ದು ರಿಲ್ಯಾಕ್ಸ್ ಆಗಬೇಕು ಎಂದು ಭಾವಿಸುತ್ತಿದ್ದರೆ ಖಂಡಿತ ನಿಮಗೆ ಈ ಉಪಾಯ ಸಹಾಯ ಮಾಡಲಿದೆ. ಲ್ಯಾವೆಂಡರ್ ಎಣ್ಣೆಯ ಎಸೆನ್ಸಿಯಲ್ಸ್ ನ್ನು ಶಾಂಪೂವಿಗೆ ಮಿಕ್ಸ್ ಮಾಡಿ ಕೂದಲು ತೊಳೆಯಿರಿ. ಇದರಿಂದ ಕೂದಲು ಫಳಫಳ ಹೊಳೆಯುವುದಲ್ಲದೆ ಕೂದಲಿನ ಆರೋಗ್ಯ ಇಮ್ಮಡಿಗೊಳ್ಳುತ್ತದೆ ಮತ್ತು ನಿಮ್ಮ ಒತ್ತಡ ಕಡಿಮೆಯಾಗಿ ನಿಮ್ಮ ಕೂದಲಿನ ಪರಿಮಳ ನಿಮ್ಮನ್ನ ಇಡೀ ದಿನ ಫ್ರೆಷ್ ಭಾವನೆಯಲ್ಲಿರುವಂತೆ ಮಾಡುತ್ತೆ

ಅಲವೀರಾ ಜೆಲ್

ಅಲವೀರಾ ಜೆಲ್

ಎಲ್ಲರಿಗೂ ತಿಳಿದಿರುವಂತೆ ಅಲವೀರಾ ಅಂದರೆ ಆರೋಗ್ಯದ ಆಗರ. ಪ್ರತಿಯೊಬ್ಬರು ಕೂಡ ಕೂದಲಿನ ಆರೋಗ್ಯಕ್ಕೆ ಅಲವೀರಾ ಜೆಲ್ ಬಳಸಲು ಇಚ್ಛಿಸುತ್ತಾರೆ.

ಹಾಗಾಗಿ ಅಲವೀರಾದಿಂದ ತಯಾರಿಸಿರುವ ಹಲವಾರು ಪ್ರೊಡಕ್ಟ್ ಗಳು ಮಾರ್ಕೆಟ್ ನಲ್ಲಿ ರಾರಾಜಿಸುತ್ತಿವೆ. ಅದೇ ರೀತಿ ಅಲವೀರಾ ಲಾಭಗಳು ಹಾಗೆಯೇ ಇವೆ. ಸ್ಕಾಲ್ಪ್ ನಲ್ಲಿ ಯಾವುದೇ ರೀತಿಯ ತೊಂದರೆ ಇದ್ದರೂ ಅದನ್ನು ನಿವಾರಿಸುವ ತಾಕತ್ತು ಅಲವೀರಾ ಜೆಲ್ ಗಿದೆ.ಇದು ಕೂದಲು ಕಟ್ ಆಗುವುದು, ಉದುರುವುದು ಹಾಗೂ ಇತರೆ ಯಾವುದೇ ರೀತಿಯ ಸಮಸ್ಯೆಯನ್ನೂ ನಿವಾರಿಸಬಲ್ಲದು. ಅಷ್ಟೇ ಅಲ್ಲ ಕೂದಲು ಉದ್ದವಾಗುವುದಕ್ಕೂ ಕೂಡ ಇದು ನೆರವಾಗಲಿದೆ.

 ನೆಲ್ಲಿಕಾಯಿ ರಸ

ನೆಲ್ಲಿಕಾಯಿ ರಸ

ನಿಮ್ಮ ಕೂದಲಿನ ಸರ್ವತೋಮುಖ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ನೆಲ್ಲಿಕಾಯಿ ಒಂದು ರಾಮಬಾಣವಿದ್ದಂತೆ.ಒಂದು ಟೀ ಸ್ಪೂನ್ ನಷ್ಟು ಫ್ರೆಷ್ ನೆಲ್ಲಿಕಾಯಿ ರಸವನ್ನು ನಿಮ್ಮ ಶಾಂಪೂವಿಗೆ ಮಿಕ್ಸ್ ಮಾಡಿ ಬಳಸುವುದರಿಂದ ನಿಮ್ಮ ಕೂದಲು ಕಪ್ಪಾಗಿಯೂ, ದಟ್ಟವಾಗಿಯೂ ಇರಲು ಸಾಧ್ಯವಾಗುತ್ತೆ. ಉತ್ತಮ ಲಾಭವನ್ನು ಪಡೆಯಬೇಕೆಂದರೆ ಪದೇ ಪದೇ ಈ ವಿಧಾನವನ್ನು ಅನುಸರಿಸುವುದು ಸೂಕ್ತ.

 ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್ ನಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಪ್ರಾಪರ್ಟಿ ಇರುವುದರಿಂದಾಗಿ ಇದೊಂದು ಉತ್ತಮ ವಿಧಾನವಾಗಿದೆ. ನಿಮ್ಮ ಶಾಂಪೂವಿಗೆ ಟೀ ಟ್ರೀ ಆಯಿಲ್ ಮಿಕ್ಸ್ ಮಾಡಿ ಸ್ನಾನ ಮಾಡುವುದನ್ನು ರೂಢಿಸಿಕೊಳ್ಳಿ.

ಕೆಲವೇ ದಿನಗಳಲ್ಲಿ ಉತ್ತಮ ಪರಿಣಾಮವನ್ನು ನೀವು ಗಮನಿಸಬಹುದು. ಡ್ಯಾಂಡ್ರಫ್ ಅಧಿಕವಾಗಿದ್ದಾಗ ಮತ್ತು ಹೆಚ್ಚು ಬ್ಯಾಕ್ಟೀರಿಯಾಗಳು ಕೂದಲಿಗೆ ದಾಳಿ ಇಟ್ಟು ನಿಮ್ಮ ಕೂದಲಿನ ಆರೋಗ್ಯವನ್ನು ಹಾಳು ಮಾಡುತ್ತಿರುವ ಸಂದರ್ಬದಲ್ಲಿ ನೀವು ರೂಢಿಸಿಕೊಳ್ಳಬಹುದಾದ ಅತ್ಯುತ್ತಮ ವಿಧಾನವೆಂದರೆ ನಿಮ್ಮ ಶಾಂಪ್ಯೂವಿಗೆ ಟೀ ಟ್ರೀ ಆಯಿಲ್ ನ್ನು ಮಿಕ್ಸ್ ಮಾಡಿ ಸ್ನಾನ ಮಾಡುವುದು. ವಾರಕೊಮ್ಮೆ ಈ ವಿಧಾನವನ್ನು ಬಳಸಿ ನೋಡಿ. ನೀವೇ ಆಶ್ಚರ್ಯಗೊಳ್ಳುವಿರಿ.

English summary

ಈ ವಸ್ತುಗಳನ್ನು ನಿಮ್ಮ ಶಾಂಪೂಗೆ ಸೇರಿಸಿ ಇನ್ನಷ್ಟು ಲಾಭ ಪಡೆಯಿರಿ

There is a way to ensure that your shampoo does not damage your locks, and instead helps them become strong and beautiful. All you need to do is add natural ingredients to your shampoo before using it, to help your locks combat issues such as dandruff, itchy scalp, hair loss, etc. Some of the best natural ingredients such as rose water, lemon juice etc when added to your shampoo can make your hair look beautiful
Story first published: Thursday, April 19, 2018, 16:36 [IST]
X
Desktop Bottom Promotion