For Quick Alerts
ALLOW NOTIFICATIONS  
For Daily Alerts

ಮೇಯನೇಸ್ ಬಳಸುವುದರ ಮೂಲಕ ಹೇನುಗಳಿಂದ ಮುಕ್ತಿ ಪಡೆಯಬಹುದೇ?

|

ಮಹಿಳೆಯರು ಜೀವನದಲ್ಲಿ ಒಮ್ಮೆಯಾದರೂ ಹೇನುಗಳ ಕಾಟಕ್ಕೆ ಒಳಗಾಗದೆ ಇರಲಿಕ್ಕೆ ಸಾಧ್ಯವಿಲ್ಲ. ಬೆವರು, ಧೂಳು, ಮಣ್ಣು ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ತಲೆಯಲ್ಲಿ ಹೇನುಗಳು ತುಂಬಿಕೊಳ್ಳುತ್ತವೆ. ದಿನದಿಂದ ದಿನಕ್ಕೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವ ಈ ಹೇನುಗಳನ್ನು ಸಣ್ಣ ರಾಕ್ಷಸ ಕುಲ ಎಂದು ಹೇಳಬಹುದು. ಹೇನುಗಳ ಕಾಟದಿಂದ ತಲೆಯಲ್ಲಿ ವಿಪರೀತವಾದ ತುರಿಕೆ, ಬೊಬ್ಬೆಗಳು, ಗಾಯ, ಹುಣ್ಣುಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುವುದು.

ಹೇನುಗಳ ಕಾಟಕ್ಕೆ ಒಳಗಾದವರ ಜೊತೆಯಲ್ಲಿ ಮಲಗುವುದು, ಕುಳಿತುಕೊಳ್ಳುವುದರ ಮೂಲಕವೂ ಇದು ಹರಡುತ್ತದೆ. ಹಾಗಾಗಿಯೇ ಇದನ್ನು ಒಬ್ಬರ ತಲೆಯಿಂದ ಒಬ್ಬರಿಗೆ ಹರಡಬಹುದಾದ ಪುಟ್ಟ ರಾಕ್ಷಸರು ಎಂದು ಸಹ ಕರೆಯುತ್ತಾರೆ. ಇವುಗಳ ನಿವಾರಣೆ ಕೊಂಚ ಕಷ್ಟ. ಇವುಗಳ ಹೆಚ್ಚಳವು ವಿಪರೀತವನ್ನು ಮೀರಿದರೆ ಕಣ್ಣುಗಳ ರೆಪ್ಪೆಗೆ, ಹುಬ್ಬುಗಳಿಗೆ ಸೇರಿದಂತೆ ದೇಹದ ಇತರೆಡೆಯಲ್ಲೂ ಹರಡುವ ಸಾಧ್ಯತೆಗಳಿರುತ್ತವೆ.

ಮನೆಯ ಆರೈಕೆಯಿಂದ ಹೇನುಗಳನ್ನು ಓಡಿಸುವುದು ಹೇಗೆ?

ಹೇನುಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧೀಯ ಉತ್ಪನ್ನಗಳು ದೊರೆಯುತ್ತವೆ. ಆದರೆ ಅವುಗಳಿಂದ ಸಂಪೂರ್ಣವಾಗಿ ಹೇನುಗಳನ್ನು ನಿವಾರಿಸಲು ಸಾಧ್ಯವಾಗದೆಯೂ ಇರಬಹುದು ಅಥವಾ ಅವುಗಳ ಬಳಕೆಯಿಂದ ಇತರ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಕೆಲವು ಮನೆ ಆರೈಕೆಯ ವಿಧಾನದಿಂದ ಹೇನುಗಳನ್ನು ಓಡಿಸುವುದು ಸೂಕ್ತ.

ಹೌದು, ನಿಮಗೆ ಆಶ್ಚರ್ಯ ಎನಿಸಬಹುದು. ಆದರೆ ಇದು ಸತ್ಯ. ಮಾರುಕಟ್ಟೆಯಲ್ಲಿ ದೊರೆಯುವ ಮೇಯನೇಸ್ ಬಳಸಿಕೊಂಡು ಸುಲಭ ರೀತಿಯಲ್ಲಿ ಹೇನುಗಳನ್ನು ನಿವಾರಿಸಬಹುದು. ಹಾಗಾದರೆ ಅದು ಹೇಗೆ ಎನ್ನುವ ಕುತೂಹಲ ನಿಮ್ಮದಾಗಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಅರಿಯಿರಿ...

ವಿಧಾನ-1:

ಬೇಕಾಗುವ ಪದಾರ್ಥಗಳು:

* 1 ಟೇಬಲ್ ಚಮಚ ಮೇಯನೇಸ್

* ಸ್ವಲ್ಪ ತೆಂಗಿನ ಎಣ್ಣೆ

* ಶವರ್ ಕ್ಯಾಪ್

ಬಳಸುವ ವಿಧಾನ:

- ಒಂದು ಬೌಲ್ ತೆಗೆದುಕೊಳ್ಳಿ.

- ಅದಕ್ಕೆ ಮೇಯನೇಸ್ ಸೇರಿಸಿ.

- ಮೇಯನೇಸ್‍ಗೆ ಸ್ವಲ್ಪ ತೆಂಗಿನ ಎಣ್ಣೆಯ ಹನಿಗಳನ್ನು ಸೇರಿಸಿ.

- ಪದಾರ್ಥಗಳನ್ನು ಚೆನ್ನಾಗಿ ಬೆರೆಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ನೆತ್ತಿ ಹಾಗೂ ಸಂಪೂರ್ಣವಾಗಿ ಕೂದಲುಗಳಿಗೆ ಅನ್ವಯಿಸಿ.

- ಬಳಿಕ ಶವರ್ ಕ್ಯಾಪ್ ಧರಿಸಿ, ರಾತ್ರಿಯಿಡೀ ಹಾಗೇ ಉಳಿಯಲು ಬಿಡಿ.

- ಮುಂಜಾನೆ ತಲೆ ಸ್ನಾನ ಮಾಡುವ ಮುನ್ನ ಕೂದಲುಗಳನ್ನು ಸಂಪೂರ್ಣವಾಗಿ ಒಣಗಿಸಿ.

- ಬಳಿಕ ಉತ್ತಮ ಶಾಂಪೂ ಬಳಕೆಯಿಂದ ಕನಿಷ್ಠ 15 ನಿಮಿಷಗಳ ಕಾಲ ಕೂದಲನ್ನು ಚೆನ್ನಾಗಿ ತೊಳೆಯಿರಿ.

- ಹೇನುಗಳನ್ನು ತೆಗೆಯಲು ಸೂಕ್ತ ರೀತಿಯಲ್ಲಿ ಬಾಚಿಕೊಳ್ಳಿ.

- ಪುನಃ ಕೂದಲನ್ನು ತೊಳೆಯಿರಿ.

- ಬಳಿಕ ಟವೆಲ್‍ಗಳ ಸಹಾಯದಿಂದ ಕೂದಲುಗಳನ್ನು ಒಣಗಿಸಿ.

- ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಮೂರು ಬಾರಿ ಈ ಪ್ರಕ್ರಿಯೆಯನ್ನು ಮುಂದುವರಿಸಿ.

ವಿಧಾನ-2:

ಬೇಕಾಗುವ ಪದಾರ್ಥಗಳು:

* 1 ಟೇಬಲ್ ಚಮಚ ಮೇಯನೇಸ್

* 1 ಟೀಚಮಚ ಟೀ ಟ್ರೀ ಎಣ್ಣೆ.

* 1 ಟೀಚಮಚ ವಿನೆಗರ್.

ಬಳಸುವ ವಿಧಾನ:

- ಒಂದು ಸಣ್ಣ ಬೌಲ್ ತೆಗೆದುಕೊಳ್ಳಿ.

- ಅದಕ್ಕೆ ಮೇಯನೇಸ್ ಸೇರಿಸಿ.

- ಹತ್ತು ಹನಿ ಟೀ ಟ್ರೀ ಎಣ್ಣೆಯನ್ನು ಮೇಯನೇಸ್‍ಗೆ ಸೇರಿಸಿ.

- ಬಳಿಕ ವಿನೆಗರ್ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

- ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಇತರ ಭಾಗಗಳಿಗೆ ಅನ್ವಯಿಸಿ.

- ಮೇಲೆ ಹೇಳಿರುವ ಮೊದಲ ವಿಧಾನದಂತೆ ಅನುಸರಿಸಬಹುದು.

- ಇಲ್ಲವೇ ಸುಮಾರು 2 ಗಂಟೆಗಳ ಕಾಲ ಆರಲು ಬಿಡಿ.

- ಉತ್ತಮ ಶಾಂಪೂ ಬಳಕೆ ಮಾಡುವುದರ ಮೂಲಕ ಕೂದಲನ್ನು ತೊಳೆಯಿರಿ.

- ಹೇನುಗಳನ್ನು ತೆಗೆಯಲು ಸೂಕ್ತ ರೀತಿಯಲ್ಲಿ ಬಾಚಿಕೊಳ್ಳಿ.

- ಪುನಃ ಕೂದಲನ್ನು ತೊಳೆಯಿರಿ.

- ಬಳಿಕ ಟವೆಲ್‍ಗಳ ಸಹಾಯದಿಂದ ಕೂದಲುಗಳನ್ನು ಒಣಗಿಸಿ.

- ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಈ ಪ್ರಕ್ರಿಯೆಯನ್ನು ಮುಂದುವರಿಸಿ.

ಹೇನುಗಳ ಸುಲಭ ನಿವಾರಣೆಗೆ ಈ ಎರಡು ವಿಧಾನಗಳು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಈ ಕ್ರಮಗಳನ್ನು ಅನ್ವಯಿಸುವಾಗ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನ್ವಯಿಸಬೇಕಾಗುವುದು.

ಮುನ್ನೆಚ್ಚರಿಕೆ ಕ್ರಮಗಳು:

- ಔಷಧಗಳನ್ನು ಅನ್ವಯಿಸಿದ ನಂತರ ಶವರ್ ಕ್ಯಾಪ್ ಅನ್ನು ಸೂಕ್ತ ರೀತಿಯಲ್ಲಿ ಧರಿಸಿದ್ದೀರಾ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

- ಮಕ್ಕಳಿಗೆ ಇದನ್ನು ಹಾಕುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು.

- ಕೂದಲನ್ನು ಅಗೆಯುವ ಮಕ್ಕಳಾಗಿದ್ದರೆ ಈ ವಿಧಾನದಿಂದ ಹಾನಿ ಉಂಟಾಗಬಹುದು. ಔಷಧದಿಂದ ಕೂಡಿದ ಕೂದಲನ್ನು ಅಗೆಯುವುದರಿಂದ ಹೊಟ್ಟೆಗೆ ಹಾನಿಯುಂಟಾಗುವುದು.

- ಕೆಲವರಿಗೆ ಮೇಯನೇಸ್ ವಾಸನೆ ಅಷ್ಟಾಗಿ ಹಿಡಿಸುವುದಿಲ್ಲ. ಕೆಲವರಿಗೆ ತಲೆನೋವು ಬರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ವಾಸನೆ ಒಗ್ಗದ ಮನೆ ಮಂದಿಯಿಂದ ದೂರ ಉಳಿದು ಈ ಕ್ರಮವನ್ನು ಅನ್ವಯಿಸಿ.

- ಮಿಶ್ರಣವನ್ನು ತೆಗೆಯಲು ಶಾಂಪೂ ಬಳಕೆಯನ್ನು ಕಡ್ಡಾಯವಾಗಿ ಮಾಡಬೇಕು. ಇಲ್ಲವಾದರೆ ಸಂಪೂರ್ಣವಾಗಿ ಸ್ವಚ್ಛವಾಗದು.

- ಹೇನು ತೆಗೆಯಲು ಬಾಚಿದ ಬಳಿಕ ಬಾಚಣಿಕೆಯನ್ನು ಸ್ವಚ್ಛಗೊಳಿಸಿ ಇಡಿ.

Read more about: hair care
English summary

ಮೇಯನೇಸ್ ಬಳಸುವುದರ ಮೂಲಕ ಹೇನುಗಳಿಂದ ಮುಕ್ತಿ ಪಡೆಯಬಹುದೇ?

is-it-possible-to-get-rid-of-lice-using-mayonnaise
X
Desktop Bottom Promotion