For Quick Alerts
ALLOW NOTIFICATIONS  
For Daily Alerts

ತಲೆಹೊಟ್ಟು ಸಮಸ್ಯೆಯ ನಿವಾರಣೆಗೆ ಈರುಳ್ಳಿ ರಸ ಬಳಸಿ ನೋಡಿ

By Lekhaka
|

ನಮಗೆ ತುಂಬಾ ಕಿರಿಕಿರಿ ಉಂಟು ಮಾಡುವಂತಹ ವಿಚಾರವೆಂದರೆ ಅದು ತಲೆಹೊಟ್ಟು. ಸಾಮಾಜಿಕವಾಗಿ ಬೆರೆಯಲು ಹಿಂಜರಿಯುವಂತಹ ಸಮಸ್ಯೆಯಿದು. ಯಾಕೆಂದರೆ ಹಾಕಿದಂತಹ ಬಟ್ಟೆಯ ಮೇಲೆ ತಲೆಹೊಟ್ಟು ಬಿದ್ದಿರುವುದು ಮಾತ್ರವಲ್ಲದೆ ತಲೆಯಲ್ಲಿ ತುರಿಕೆ ಕಾಣಿಸಿಕೊಂಡು ಮುಜುಗರ ಅನುಭವಿಸಬೇಕಾಗುತ್ತದೆ. ತಲೆಹೊಟ್ಟಿಗೆ ಹಲವಾರು ರೀತಿಯ ಕಾರಣಗಳು ಇವೆ. ಕಲ್ಮಶ, ಕಲುಷಿತ ವಾತಾವರಣ, ನೀರು ಹಾಗೂ ಆರೋಗ್ಯ ಕ್ರಮ. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡು ಹಲವಾರು ರೀತಿಯ ತಲೆಹೊಟ್ಟು ನಿವಾರಕ ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿ ರಾಸಾಯನಿಕಗಳನ್ನು ಹೊರತುಪಡಿಸಿದರೆ ಬೇರೇನೂ ಇರದು. ಅದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದು. ಇದಕ್ಕೆ ಬದಲು ಮನೆಯಲ್ಲೇ ಸಿಗುವಂತಹ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಬಹುದು.

ಕೂದಲು ಸೊಂಪಾಗಿ ಬೆಳೆಯಬೇಕೇ? ಈರುಳ್ಳಿ ರಸ ಹಚ್ಚಿ...

ಅದರಲ್ಲೂ ಈರುಳ್ಳಿ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈರುಳ್ಳಿ ರಸದಿಂದ ತಲೆಹೊಟ್ಟು ನಿವಾರಣೆ ಮಾಡಿದರೆ ಮುಂದೆ ಸಮಸ್ಯೆ ಕಾಡದು. ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಈರುಳ್ಳಿಯನ್ನು ಹಲವಾರು ವಿಧಗಳಿಂದ ತಲೆಹೊಟ್ಟು ನಿವಾರಣೆಗೆ ಬಳಸಿಕೊಳ್ಳಬಹುದು. ಅದು ತುಂಬಾ ಪರಿಣಾಮಕಾರಿ ಕೂಡ. ತಲೆಹೊಟ್ಟು ನಿವಾರಣೆಗೆ ಈರುಳ್ಳಿ ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ....

ಈರುಳ್ಳಿ ರಸ ಮತ್ತು ಲಿಂಬೆರಸ

ಈರುಳ್ಳಿ ರಸ ಮತ್ತು ಲಿಂಬೆರಸ

*ಎರಡು ಚಮಚ ಈರುಳ್ಳಿ ರಸ ಮತ್ತು 3-4 ಚಮಚ ಲಿಂಬೆ ರಸ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ.

*ಐದು ನಿಮಿಷ ಕಾಲ ಬೆರಳಿನಿಂದ ಮಸಾಜ್ ಮಾಡಿಕೊಳ್ಳಿ.

*ಬಳಿಕ 15 ನಿಮಿಷ ಕಾಲ ಹಾಗೆ ಬಿಡಿ.

*ಉಗುರುಬೆಚ್ಚಗಿನ ನೀರಿನಿಂದ ತಲೆ ತೊಳೆಯಿರಿ.

*ಪರಿಣಾಮಕಾರಿಯಾಗಲು ವಾರದಲ್ಲಿ ಎರಡು ಸಲ ಈ ಮನೆಮದ್ದು ಬಳಸಿ.

ಈರುಳ್ಳಿ ರಸ ಮತ್ತು ಅಲೋವೆರಾ ಲೋಳೆ

ಈರುಳ್ಳಿ ರಸ ಮತ್ತು ಅಲೋವೆರಾ ಲೋಳೆ

*ಒಂದು ಚಮಚ ಈರುಳ್ಳಿ ರಸ ಮತ್ತು 3-4 ಚಮಚ ಅಲೋವೆರಾ ಲೋಳೆ ಮಿಶ್ರಣ ಮಾಡಿಕೊಳ್ಳಿ.

*ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಕೆಲವು ನಿಮಿಷ ಕಾಲ ಮಸಾಜ್ ಮಾಡಿ.

*ಉಗುರುಬೆಚ್ಚಗಿನ ನೀರಿನಿಂದ ತೊಳೆದ ಬಳಿಕ ನಿಯಮಿತವಾಗಿ ಬಳಸುವ ಶಾಂಪೂ ಹಾಕಿ ಕೂದಲು ತೊಳೆಯಿರಿ.

*ವೇಗವಾದ ಫಲಿತಾಂಶ ಬೇಕಾದರೆ ವಾರದಲ್ಲಿ 2-3 ಸಲ ಇದನ್ನು ಬಳಸಿ.

ಈರುಳ್ಳಿ ರಸ, ಅಡುಗೆ ಸೋಡಾ ಮತ್ತು ಆಲಿವ್ ತೈಲ

ಈರುಳ್ಳಿ ರಸ, ಅಡುಗೆ ಸೋಡಾ ಮತ್ತು ಆಲಿವ್ ತೈಲ

*ಅರ್ಧ ಚಮಚ ಅಡುಗೆ ಸೋಡಾ, ಒಂದು ಚಮಚ ಈರುಳ್ಳಿ ರಸ ಮತ್ತು 2 ಚಮಚ ಆಲಿವ್ ತೈಲ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ. 20-25 ನಿಮಿಷ ಕಾಲ ಹಾಗೆ ಬಿಡಿ.

*ಉಗುರು ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ.

*ತಲೆಹೊಟ್ಟು ನಿವಾರಣೆಗೆ ತಿಂಗಳಲ್ಲಿ ಎರಡು ಸಲ ಬಳಸಿಕೊಳ್ಳಿ.

ಈರುಳ್ಳಿ ರಸ, ತೆಂಗಿನೆಣ್ಣೆ ಮತ್ತು ಚಹಾ ಮರದ ಎಣ್ಣೆ

ಈರುಳ್ಳಿ ರಸ, ತೆಂಗಿನೆಣ್ಣೆ ಮತ್ತು ಚಹಾ ಮರದ ಎಣ್ಣೆ

*ಒಂದು ಚಮಚ ಈರುಳ್ಳಿ ರಸ, 2 ಚಮಚ ತೆಂಗಿನೆಣ್ಣೆ ಮತ್ತು 4-5 ಹನಿ ಚಹಾ ಮರದ ಎಣ್ಣೆ ಹಾಕಿ ಮಿಶ್ರಣ ಮಾಡಿ.

*ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ.

*20 ನಿಮಿಷ ಬಳಿಕ ನಿಯಮಿತ ಶಾಂಪೂ ಬಳಸಿ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ.

*ತಲೆಹೊಟ್ಟು ನಿವಾರಣೆಗೆ ವಾರದಲ್ಲಿ ಒಂದು ಸಲ ಕೂದಲಿಗೆ ಈರುಳ್ಳಿ ರಸ ಹಾಕಿಕೊಳ್ಳಿ.

ಈರುಳ್ಳಿ ರಸ ಮತ್ತು ಆ್ಯಪಲ್ ಸೀಡರ್ ವಿನೇಗರ್

ಈರುಳ್ಳಿ ರಸ ಮತ್ತು ಆ್ಯಪಲ್ ಸೀಡರ್ ವಿನೇಗರ್

*ಎರಡು ಚಮಚ ಈರುಳ್ಳಿ ರಸದೊಂದಿಗೆ 4-5 ಹನಿ ಆ್ಯಪಲ್ ಸೀಡರ್ ವಿನೇಗರ್ ಹಾಕಿ ಕಲಸಿಕೊಳ್ಳಿ.

*ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು 10 ನಿಮಿಷ ಕಾಲ ಹಾಗೆ ಇರಲಿ.

*ನಿಯಮಿತವಾಗಿ ಬಳಸುವ ಶಾಂಪೂ ಹಾಕಿ ತಣ್ಣೀರಿನಿಂದ ತೊಳೆಯಿರಿ.

*ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ನಿಮಗೆ ಫಲಿತಾಂಶ ಸಿಗುವುದು.

ಈರುಳ್ಳಿ ರಸ ಮತ್ತು ಹೆನ್ನಾ ಹುಡಿ

ಈರುಳ್ಳಿ ರಸ ಮತ್ತು ಹೆನ್ನಾ ಹುಡಿ

*ಒಂದು ಚಮಚ ಹೆನ್ನಾ ಹುಡಿ, ಒಂದು ಚಮಚ ಈರುಳ್ಳಿ ರಸ ಮತ್ತು 2 ಚಮಚ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ.

*ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ.

*ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ.

*ಇದನ್ನು ವಾರದಲ್ಲಿ ಒಂದು ಸಲ ಬಳಸಿದರೆ ತಲೆಹೊಟ್ಟು ನಿವಾರಣೆಯಾಗುವುದು ಮತ್ತು ಮತ್ತೆ ಬರದಂತೆ ತಡೆಯುವುದು.

ಈರುಳ್ಳಿ ರಸ ಮತ್ತು ಮುಲ್ತಾನಿ ಮಿಟ್ಟಿ

ಈರುಳ್ಳಿ ರಸ ಮತ್ತು ಮುಲ್ತಾನಿ ಮಿಟ್ಟಿ

*ಮೂರು ಚಮಚ ಈರುಳ್ಳಿ ರಸಕ್ಕೆ ಒಂದು ಚಮಚ ಮುಲ್ತಾನಿ ಮಿಟ್ಟಿ ಹಾಕಿ ಬೆರೆಸಿ.

*ಇದನ್ನು ತಲೆಬುರುಡೆಗೆ ಹಚ್ಚಿ ಮಸಾಜ್ ಮಾಡಿ.

*20-25 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ವಾರದಲ್ಲಿ ಒಂದು ಸಲ ಇದನ್ನು ಬಳಸಿ ನಿಮಗೆ ಕಿರಿಕಿರ ಮಾಡುವ ತಲೆಹೊಟ್ಟು ನಿವಾರಿಸಿ.

ಈರುಳ್ಳಿ ರಸ ಮತ್ತು ಬೇವಿನ ರಸ

ಈರುಳ್ಳಿ ರಸ ಮತ್ತು ಬೇವಿನ ರಸ

*ಒಂದು ಚಮಚ ಈರುಳ್ಳಿ ರಸ ಮತ್ತು ಎರಡು ಚಮಚ ಬೇವಿನ ರಸ ಮತ್ತು 2-3 ಚಮಚ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ.

*10-15 ನಿಮಿಷ ಕಾಲ ಕೂದಲಲ್ಲಿ ಹಾಗೆ ಇದನ್ನು ಬಿಟ್ಟುಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ತಲೆಹೊಟ್ಟು ನಿವಾರಣೆ ಮಾಡಲು ಈ ಮನೆಮದ್ದನ್ನು ವಾರದಲ್ಲಿ ಒಂದು ಸಲ ಬಳಸಿ.

English summary

How To Use Onion Juice To Banish Dandruff

There are plenty of anti-dandruff hair products available in the beauty stores. However, most of them are packed with chemicals that can do more harm than good. Instead of relying on such products, it is best to try natural remedies. And one remedy that is known to be particularly effective in banishing dandruff is onion juice.
X
Desktop Bottom Promotion