For Quick Alerts
ALLOW NOTIFICATIONS  
For Daily Alerts

ತಲೆಗೆ ಮೌತ್ ವಾಶ್ 'ಲಿಸ್ಟರಿನ್' ಬಳಸಿದರೆ ತಲೆಹೊಟ್ಟು ಮಂಗಮಾಯ!

|

ತಲೆಹೊಟ್ಟು ಎನ್ನುವುದು ತುಂಬಾ ಅಸಹ್ಯ ಹಾಗೂ ಕಿರಿಕಿರಿ ಉಂಟು ಮಾಡುವಂತಹ ಸಮಸ್ಯೆಯಾಗಿದ್ದು, ಇದರಿಂದಾಗಿ ಸಾಮಾಜಿಕವಾಗಿ ಬೆರೆಯಲು ಕೂಡ ಕೆಲವರು ಹಿಂಜರಿಯುವರು. ತಲೆಬುರುಡೆಯಲ್ಲಿ ಅತಿಯಾಗಿ ಕೊಳೆ ಶೇಖರಣೆಯಾದರೆ ಆಗ ಚರ್ಮವು ಒಣ ಹಾಗೂ ತುರಿಕೆ ಉಂಟು ಮಾಡುವುದು. ಮಾರುಕಟ್ಟೆಯಲ್ಲಿ ತಲೆಹೊಟ್ಟಿಗೆ ಹಲವಾರು ರೀತಿಯ ಶಾಂಪೂಗಳು ಹಾಗೂ ಎಣ್ಣೆಗಳು ಲಭ್ಯವಿದೆ. ಇದೆಲ್ಲವೂ ಒಂದೆರಡು ಮಂದಿಗೆ ಲಾಭಕಾರಿಯಾಗಿರಬಹುದು. ಇನ್ನು ಹೆಚ್ಚಿನವರಿಗೆ ಇದರಿಂದ ಯಾವುದೇ ಪ್ರಯೋಜನವಾಗದೆ ಇರಬಹುದು. ತಲೆಹೊಟ್ಟನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗದೆ ಇರುವಾಗ ಹಲವಾರು ರೀತಿಯ ಪರಿಹಾರಗಳನ್ನು ಇದಕ್ಕಾಗಿ ಹುಡುಕುತ್ತಾ ಇರುತ್ತೇವೆ.

ಕೆಲವು ಮೌಥ್ ವಾಶ್ ಬಳಸಿಕೊಂಡು ತಲೆಹೊಟ್ಟನ್ನು ನಿವಾರಿಸಿದ್ದಾರೆ ಎನ್ನುವ ಬಗ್ಗೆ ನಿಮಗೆ ತಿಳಿದಿದೆಯಾ? ಹೌದು, ಲಿಸ್ಟರಿನ್ ನ್ನು ತಲೆಹೊಟ್ಟಿಗೆ ಪರಿಹಾರ ನೀಡಬಲ್ಲದು. ಇದರಲ್ಲಿರುವ ಶಿಲೀಂಧ್ರ ಮತ್ತು ನಂಜುನಿರೋಧಕ ಗುಣಗಳು ತುರಿಕೆ ನಿವಾರಣೆ ಮಾಡಿ, ತಲೆಬುರುಡೆಗೆ ಮೊಶ್ಚಿರೈಸ್ ನೀಡುವುದು. ತಲೆಬುರುಡೆಯನ್ನು ಶಮನ ಹಾಗೂ ತಾಜಾಗೊಳಿಸಿ, ತಲೆಹೊಟ್ಟಿನಿಂದ ಆಗುವ ಕಿರಿಕಿರಿ ತಡೆಯುವುದು.
ಇದರಿಂದ ಲಿಸ್ಟರಿನ್ ನ್ನು ತಲೆಹೊಟ್ಟಿಗೆ ಒಳ್ಳೆಯ ಪರಿಹಾರವಾಗಿದೆ. ಲಿಸ್ಟರಿನ್ ನ್ನು ಯಾವ ರೀತಿಯಿಂದ ತಲೆಹೊಟ್ಟಿಗೆ ಮತ್ತು ಕೂದಲಿನ ಆರೋಗ್ಯಕ್ಕೆ ಬಳಸಿಕೊಳ್ಳಬಹುದು ಎಂದು ತಿಳಿಯುವ. ನಿಮ್ಮ ತಲೆಯಲ್ಲಿ ಯಾವುದೇ ಗಾಯವಿದ್ದರೆ ಆಗ ಅದು ಸಂಪೂರ್ಣವಾಗಿ ಒಣಗಿದ ಬಳಿಕ ಲಿಸ್ಟರಿನ್ ಬಳಸಿ, ಇಲ್ಲವಾದಲ್ಲಿ ಉರಿ ಉಂಟಾಗಬಹುದು.

how to treat dandruff

ಸರಳ ಟಿಪ್ಸ್: ತಲೆಹೊಟ್ಟು ಸಮಸ್ಯೆಗೆ ಪವರ್‌ಫುಲ್ ಮನೆಮದ್ದುಗಳು

ತಲೆಹೊಟ್ಟಿಗೆ ಲಿಸ್ಟರಿನ್

ತಲೆಹೊಟ್ಟು ಮತ್ತು ತುರಿಕೆ ಉಂಟು ಮಾಡುವ ತಲೆಗೆ ಇದು ಸುಲಭ ಪರಿಹಾರ

ಬೇಕಾಗುವ ಸಾಮಗ್ರಿಗಳು

  • 1 ಚಮಚ ಲಿಸ್ಟರಿನ್
  • ಹತ್ತಿ ಉಂಡೆ

ವಿಧಾನ

1.ಹತ್ತಿ ಉಂಡೆಯನ್ನು ಲಿಸ್ಟರಿನ್ ನಲ್ಲಿ ಅದ್ದಿಕೊಳ್ಳಿ.
2.ಇದನ್ನು ನಿಧಾನವಾಗಿ ತಲೆಬುರುಡೆಗೆ ಹಚ್ಚಿಕೊಳ್ಳಿ.
3.ಹಚ್ಚಿಕೊಂಡ ಬಳಿಕ 5-10 ನಿಮಿಷ ಕಾಲ ಹಾಗೆ ಬಿಡಿ ಮತ್ತು ಸಲ್ಫೇಟ್ ಇಲ್ಲದೆ ಇರುವ ಶಾಂಪೂ ಹಾಕಿ ತೊಳೆಯಿರಿ.
ವಾರದಲ್ಲಿ 2-3 ಸಲ ನೀವು ಇದನ್ನು ಬಳಸಿದರೆ ವೇಗವಾಗಿ ಫಲಿತಾಂಶ ಸಿಗುವುದು.

ಲಿಸ್ಟರಿನ್ ಮತ್ತು ನೀರು

ಶಿಲೀಂಧ್ರ ವಿರೋಧಿ ಹಾಗೂ ನಂಜುನಿರೋಧಕ ಗುಣಗಳನ್ನು ಹೊಂದಿರುವ ಲಿಸ್ಟರಿನ್ ತುರಿಕೆ ಉಂಟು ಮಾಡುವ ತಲೆಬುರುಡೆಗೆ ತುಂಬಾ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು

  • 2 ಚಮಚ ಲಿಸ್ಟರಿನ್
  • 2 ಚಮಚ ನೀರು
  • ಸ್ಪ್ರೇ ಬಾಟಲಿ

ವಿಧಾನ

1.ಮೊದಲು ಕೂದಲನ್ನು ಶಾಂಪೂ ಅಥವಾ ಕಂಡೀಷನರ್ ನಿಂದ ತೊಳೆಯಿರಿ.
2.ಸ್ಪ್ರೇ ಬಾಟಲಿಗೆ ಲಿಸ್ಟರಿನ್ ಮತ್ತು ನೀರು ಹಾಕಿ ಬೆರೆಸಿಕೊಳ್ಳಿ.
3.ಸ್ಪ್ರೇ ಬಾಟಲಿಯನ್ನು ಸರಿಯಾಗಿ ಅಲುಗಾಡಿಸಿಕೊಂಡು ಕೂದಲು ಮತ್ತು ತಲೆಬುರುಡೆಗೆ ಸ್ಪ್ರೇ ಮಾಡಿ.
4.ಕೆಲವು ನಿಮಿಷ ಹಾಗೆ ಬಿಡಿ ಮತ್ತು ಬಳಿಕ ತಂಪು ಅಥವಾ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
ವಾರದಲ್ಲಿ ಎರಡು ಮೂರು ಸಲ, ಎರಡು ವಾರ ಹೀಗೆ ಮಾಡಿ.

ಲಿಸ್ಟರಿನ್ ಮತ್ತು ಆಪಲ್ ಸೀಡರ್ ವಿನೇಗರ್

ತಲೆಬುರುಡೆಯಲ್ಲಿ ಅತಿಯಾಗಿರುವ ಪದರವನ್ನು ತೆಗೆದುಹಾಕಿ ಪಿಎಚ್ ಮಟ್ಟವನ್ನು ಕಾಪಾಡಲು ಆ್ಯಪಲ್ ಸೀಡರ್ ವಿನೇಗರ್ ನೆರವಾಗುವುದು. ಇದರಿಂದ ತಲೆಬುರುಡೆಯು ಆರೋಗ್ಯಕರ ಮತ್ತು ತಲೆಹೊಟ್ಟು ನಿವಾರಣೆಯಾಗುವುದು.

ಬೇಕಾಗುವ ಸಾಮಗ್ರಿಗಳು

  • 2 ಚಮಚ ಲಿಸ್ಟರಿನ್
  • 1 ಚಮಚ ಆ್ಯಪಲ್ ಸೀಡರ್ ವಿನೇಗರ್
  • 1 ಚಮಚ ನೀರು
  • 1 ಕಪ್ ನೀರು
  • ಸ್ಪ್ರೇ ಬಾಟಲಿ

ತಯಾರಿಸುವ ವಿಧಾನ

1.ನಿಯಮಿತವಾಗಿ ಬಳಸುವ ಶಾಂಪೂವಿನಿಂದ ಕೂದಲು ತೊಳೆಯಿರಿ.
2.ಸ್ಪ್ರೇ ಬಾಟಲಿಗೆ ನೀರು ಹಾಗೂ ಲಿಸ್ಟರಿನ್ ಹಾಕಿಕೊಂಡು ಬೆರೆಸಿಕೊಳ್ಳಿ ಮತ್ತು ಕೂದಲಿಗೆ ಸ್ಪ್ರೇ ಮಾಡಿ.
3.ಕೆಲವು ನಿಮಿಷ ಹಾಗೆ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ.
4.ಈಗ ಆ್ಯಪಲ್ ಸೀಡರ್ ವಿನೇಗರ್ ನ್ನು ನೀರಿನೊಂದಿಗೆ ಬೆರೆಸಿ ಮತ್ತು ಅಂತಿಮವಾಗಿ ಕೂದಲು ತೊಳೆಯಲು ಬಳಸಿ.
ವಾರದಲ್ಲಿ ಒಂದು ಸಲ ಇದನ್ನು ಬಳಸಿಕೊಂಡರೆ ನಿಮಗೆ ವೇಗದ ಫಲಿತಾಂಶ ಸಿಗುವುದು.

ಲಿಸ್ಟರಿನ್ ಮತ್ತು ಮಗುವಿನ ಎಣ್ಣೆ

ಒಣ ಕೂದಲು ಇರುವವರಿಗೆ ಈ ಮನೆಮದ್ದು ತುಂಬಾ ಪರಿಣಾಮಕಾರಿಯಾಗಿರಲಿದೆ ಮತ್ತು ಮಗುವಿನ ಎಣ್ಣೆ ಮತ್ತು ಲಿಸ್ಟರಿನ್ ಬಳಸಿಕೊಂಡರೆ ಅದರಿಂದ ಕೂದಲು ಒಣಗುವುದು ತಪ್ಪುವುದು.

ಬೇಕಾಗುವ ಸಾಮಗ್ರಿಗಳು

  • 2 ಚಮಚ ಲಿಸ್ಟರಿನ್
  • 2 ಚಮಚ ಮಗುವಿನ ಎಣ್ಣೆ

ವಿಧಾನ

1. ಲಿಸ್ಟರಿನ್ ಮತ್ತು ಮಗುವಿನ ಎಣ್ಣೆ ಮಿಶ್ರಣ ಮಾಡಿ.
2. ಕೂದಲನ್ನು ಸಲ್ಫೇಟ್ ಮುಕ್ತ ಶಾಂಪೂ ಅಥವಾ ಕಂಡೀಷನರ್ ನಿಂದ ತೊಳೆಯಿರಿ.
3. ಈ ಮಿಶ್ರಣವನ್ನು ತಲೆಬುರುಡೆಗೆ ಹಾಕಿಕೊಳ್ಳಿ.
4. ಕೆಲವು ನಿಮಿಷ ಕಾಲ ಮಸಾಜ್ ಮಾಡಿ ಮತ್ತು ಸಾಮಾನ್ಯ ನೀರಿನಿಂದ ತೊಳೆಯಿರಿ.
ವಾರದಲ್ಲಿ ಮೂರು ದಿನಗಳ ಕಾಲ ಎರಡು ವಾರ ಹೀಗೆ ಮಾಡಿ.

English summary

How To Treat Dandruff With Listerine?

Dandruff can be irritating and embarrassing at times. Not only the itchiness caused but also the level up to which it takes up our confidence to present our self in public makes it even more worst. Dandruffs are usually caused when there are excess dirt build up on the scalp that makes the skin dry and itchy. Listerine help to treat the itchy scalp and restore moisture.It also helps in getting rid of the irritation caused due to dandruff by cooling and refreshing the scalp.
X
Desktop Bottom Promotion