For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ಮೊಟ್ಟೆ ಹಾಗೂ ಜೇನು ಬಳಸಿಕೊಂಡು ಮಾಡಿ 'ಹೇರ್ ಸ್ಪಾ'

|

ತಿಂಗಳಿಗೆ ಒಮ್ಮೆಯಾದರೂ ಚರ್ಮ ಹಾಗೂ ಕೂದಲಿನ ಆರೈಕೆ ಮಾಡುವುದು ಅತೀ ಅಗತ್ಯವಾಗಿರುವುದು. ಆರೈಕೆಯೆಂದರೆ ಕೇವಲ ಶಾಂಪೂ ಹಾಕಿ ತೊಳೆಯುವುದಲ್ಲ. ಮುಖದ ಸೌಂದರ್ಯಕ್ಕಾಗಿ ನೀವು ಹೇಗೆ ಫೇಶಿಯಲ್ ಮಾಡಿಕೊಳ್ಳುತ್ತೀರೋ ಅದೇ ರೀತಿಯಲ್ಲಿ ಕೂದಲಿಗೆ ಕೂಡ ಸ್ವಲ್ಪ ಹೆಚ್ಚಿನ ಆರೈಕೆ ಮಾಡಬೇಕು. ಇದಕ್ಕಾಗಿ ನೀವು ತೇವಾಂಶ, ಪೋಷಣೆ ಮತ್ತು ಕೂದಲನ್ನು ಸರಿಪಡಿಸುವ ಹೇರ್ ಸ್ಪಾಕ್ಕಿಂತ ಒಳ್ಳೆಯದು ಬೇರೆನೂ ಇದೆ ಹೇಳಿ?

ಹೇರ್ ಸ್ಪಾದ ಬಗ್ಗೆ ಮಾತನಾಡಿದಾಗ ನೀವು ಸಲೂನ್ ಅಥವಾ ಸ್ಪಾದಲ್ಲಿ ದುಬಾರಿ ಹಣ ವ್ಯಯಿಸಬೇಕು ಮತ್ತು ಗಂಟೆಗಟ್ಟಲೆ ಅಲ್ಲಿ ಕಾದು ಕುಳಿತುಕೊಳ್ಳಬೇಕು ಎಂದು ಭಾವಿಸಬಹುದು. ಆದರೆ ಮನೆಯಲ್ಲೇ ಕೆಲವೊಂದು ಕಡಿಮೆ ಸಾಮಗ್ರಿಗಳನ್ನು ಬಳಸಿಕೊಂಡು ಹೇರ್ ಸ್ಪಾ ಚಿಕಿತ್ಸೆ ಮಾಡಬಹುದು ಎಂದು ನಿಮಗೆ ತಿಳಿದಿದೆಯಾ? ಹೌದು, ನೀವು ಇದನ್ನು ಮನೆಯಲ್ಲೇ ಮಾಡಬಹುದು. ಸರಿಯಾದ ಮಾರ್ಗದರ್ಶನ ಮತ್ತು ಕೆಲವೊಂದು ಪ್ರಮುಖ ಸಾಮಗ್ರಿಗಳಾಗಿರುವ ಹಾಲು, ಜೇನು, ತೆಂಗಿನೆಣ್ಣೆ ಮತ್ತು ಮೊಟ್ಟೆಗಳನ್ನು ಬಳಸಿಕೊಂಡು ಹೇರ್ ಸ್ಪಾ ಮನೆಯಲ್ಲೇ ಮಾಡಬಹುದು.

hair spa at home

ಮೊಟ್ಟೆ ಮತ್ತು ಜೇನುತುಪ್ಪದಲ್ಲಿ ಹೆಚ್ಚಿನ ನೈಸರ್ಗಿಕ ಕಂಡೀಷನರ್ ಗುಣಗಳು ಇವೆ ಮತ್ತು ಇದು ನಿಸ್ತೇಜ, ಒಣ ಮತ್ತು ಹಾನಿಗೀಡಾದ ಕೂದಲಿಗೆ ಒಳ್ಳೆಯ ಚಿಕಿತ್ಸೆ ನೀಡುವುದು. ಮೊಟ್ಟೆ ಮತ್ತು ಜೇನುತುಪ್ಪವನ್ನು ಕೂದಲಿಗೆ ಕಂಡೀಷನ್ ಮಾಡಲು ಮತ್ತು ಸರಿಪಡಿಸಲು ಬಳಸುವುದು ಹೇಗೆ ಎಂದು ತಿಳಿಯುವ ಮೊದಲು ನೀವು ಮೊಟ್ಟೆ ಮತ್ತು ಜೇನುತುಪ್ಪದ ಲಾಭಗಳ ಬಗ್ಗೆ ತಿಳಿಯಬೇಕು.

ಕೂದಲಿಗೆ ಮೊಟ್ಟೆ ಮತ್ತು ಜೇನುತುಪ್ಪ ಹೇಗೆ ಲಾಭಕಾರಿ?

ವಿಟಮಿನ್ ಗಳು, ಪೋಷಕಾಂಶಗಳು ಮತ್ತು ಪ್ರೋಟೀನ್ ಒಳಗೊಂಡಿರುವಂತಹ ಮೊಟ್ಟೆಯು ಕೂದಲಿಗೆ ತುಂಬಾ ಒಳ್ಳೆಯ ಸಾಮಗ್ರಿ. ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮಾತ್ರವಲ್ಲದೆ, ಕೂದಲು ಉದುರುವಿಕೆ ಕಡಿಮೆ ಮಾಡಿ, ತಲೆಬುರುಡೆಗೆ ಪೋಷಣೆ ಮತ್ತು ಒಣಗುವುದನ್ನು ದೂರ ಮಾಡುವುದು. ಕೂದಲಿನ ಪ್ರಮಾಣ ಮತ್ತು ಕಾಂತಿ ಹೆಚ್ಚಿಸುವುದು. ಇದು ಕಂಡೀಷನ್ ಗುಣವನ್ನು ಹೊಂದಿದೆ ಮತ್ತು ಕೂದಲಿನ ವಿನ್ಯಾಸ ಉತ್ತಮಪಡಿಸುವುದು.

Most Read: ಚಳಿಗಾಲದಲ್ಲಿ ಕೂದಲಿನ ಆರೈಕೆಗಾಗಿ ಒಂದಿಷ್ಟು ಸರಳ ಟಿಪ್ಸ್

ಇನ್ನೊಂದು ವಿಧದಲ್ಲಿ ಮೊಟ್ಟೆ ಮತ್ತು ಜೇನುತುಪ್ಪವು ಕೂದಲಿಗೆ ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುವುದು. ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುವುದು ಮತ್ತು ಕೂದಲು ಉದುರದಂತೆ ತಡೆಯುವುದು. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂದಲಿನ ಸಮಸ್ಯೆ ಯಾಗಿರುವಂತಹ ತಲೆಹೊಟ್ಟು ಮತ್ತು ತಲೆಬುರುಡೆಯ ಸೋಂಕನ್ನು ನಿವಾರಿಸುವುದು. ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ಆಳವಾಗಿ ಪೋಷಣೆ ನೀಡಿ, ಬಲ, ಆರೋಗ್ಯ ಮತ್ತು ಕಾಂತಿಯುತ ಕೂದಲಿಗೆ ನೆರವಾಗುವುದು. ಮೊಟ್ಟೆ ಮತ್ತು ಜೇನುತುಪ್ಪ ಬಳಸಿಕೊಂಡು ಮನೆಯಲ್ಲೇ ಕೂದಲಿನ ಸ್ಪಾವನ್ನು ಸರಳ, ಕ್ಷಿಪ್ರ ಹಾಗೂ ಅಗ್ಗವಾಗಿ ಮಾಡುವುದು ಹೇಗೆ ಎಂದು ತಿಳಿಯಿರಿ.

ಮೊಟ್ಟೆ ಮತ್ತು ಜೇನುತುಪ್ಪದ ಹೇರ್ ಸ್ಪಾ ಮನೆಯಲ್ಲೇ ಮಾಡುವುದು ಹೇಗೆ?

ಮನೆಯಲ್ಲೇ ಮೊಟ್ಟೆ ಮತ್ತು ಜೇನುತುಪ್ಪದ ಸ್ಪಾ ಮಾಡಲು ಕೆಲವೊಂದು ಮೂಲ ಸಾಮಗ್ರಿಗಳು ನಿಮಗೆ ಬೇಕಾಗುವುದು. ಹೇರ್ ಸ್ಪಾ ಚಿಕಿತ್ಸೆಯನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗಿದೆ. ಇದು ಯಾವುದು ಎಂದು ಮುಂದೆ ಓದುತ್ತಾ ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು

  • 2 ಮೊಟ್ಟೆ
  • 4 ಚಮಚ ಜೇನುತುಪ್ಪ
  • 1 ಚಮಚ ಆಲಿವ್ ತೈಲ
  • 1 ಚಮಚ ತೆಂಗಿನೆಣ್ಣೆ
  • 1 ತಟ್ಟೆ ಬಿಸಿ ನೀರು
  • ಸಾಮಾನ್ಯ ಶಾಂಪೂ ಮತ್ತು ಕಂಡೀಷನರ್
  • ಒಂದು ದಪ್ಪದ ಟವೆಲ್

Most Read: ಡ್ಯಾಂಡ್ರಫ್ ಸಮಸ್ಯೆ ಇದೆಯೇ? ಹಾಗಾದರೆ, ಸೀಗೆಕಾಯಿ ಹೇರ್ ಮಾಸ್ಕ್ ಬಳಸಿ

ಹೇರ್ ಸ್ಪಾಗೆ ಮೊಟ್ಟೆಯ ಮಾಸ್ಕ್ ತಯಾರಿಸುವುದು ಹೇಗೆ?

•ಸಣ್ಣ ಪಿಂಗಾಣಿಗೆ ಮೊಟ್ಟೆಗಳನ್ನು ಒಡೆದು ಹಾಕಿ ಮತ್ತು ಅದನ್ನು ಸರಿಯಾಗಿ ಕಲಸಿಕೊಂಡು ಬದಿಗೆ ಇಟ್ಟುಬಿಡಿ.
•ಇನ್ನೊಂದು ಪಿಂಗಾಣಿ ತೆಗೆದುಕೊಂಡು ಅದಕ್ಕೆ ಜೇನುತುಪ್ಪ, ಆಲಿವ್ ತೈಲ ಮತ್ತು ತೆಂಗಿನೆಣ್ಣೆ ಹಾಕಿ.
•ಜೇನುತುಪ್ಪ ಮತ್ತು ತೈಲದ ಮಿಶ್ರಣಕ್ಕೆ ಮೊಟ್ಟೆ ಹಾಕಿ ಸರಿಯಾಗಿ ಕಲಸಿಕೊಳ್ಳಿ. ಸಂಪೂರ್ಣವಾಗಿ ಇದು ಮಿಶ್ರಣವಾಗಲಿ.
•ಮೊಟ್ಟೆ ಮತ್ತು ಜೇನುತುಪ್ಪದ ಹೇರ್ ಸ್ಪಾ ಮಾಸ್ಕ್ ಈಗ ಹಚ್ಚಲು ತಯಾರಾಗಿದೆ.

ಮೊಟ್ಟೆ ಮತ್ತು ಜೇನುತುಪ್ಪದ ಹೇರ್ ಸ್ಪಾ ಮನೆಯಲ್ಲೇ ಮಾಡುವ ವಿಧಾನ

ಮೊದಲ ಹಂತ

ಸಣ್ಣ ಪಿಂಗಾಣಿಯಲ್ಲಿ ಬೇಕಾದಷ್ಟು ಪ್ರಮಾಣದ ಆಲಿವ್ ತೈಲ ಮತ್ತು ತೆಂಗಿನೆಣ್ಣೆ ಮಿಶ್ರಣ ಮಾಡಿ. ಕೆಲವು ನಿಮಿಷ ಕಾಲ ಇದನ್ನು ಬಿಸಿ ಮಾಡಿ, ಅದು ಉಗುರುಬೆಚ್ಚಗೆ ಆದಾಗ ಅದನ್ನು ತೆಗೆದು ತಲೆಬುರುಡೆಗೆ ಹಚ್ಚಿಕೊಳ್ಳಿ. ಕೂದಲಿಗೆ ಕೂಡ ಇದನ್ನು ಸರಿಯಾಗಿ ಹಚ್ಚಿಕೊಳ್ಳಿ. 5-10 ನಿಮಿಷ ಕಾಲ ಮಸಾಜ್ ಮಾಡಿ ಮತ್ತು ಎರಡನೇ ಹಂತಕ್ಕೆ ಮುಂದುವರಿಯಿರಿ.

ಎರಡನೇ ಹಂತ

ಒಂದು ತಟ್ಟೆ ಬಿಸಿ ನೀರು ತೆಗೆದುಕೊಳ್ಳಿ, ಇದರತ್ತ ಕೂದಲನ್ನು ಬಗ್ಗಿಸಿ ಮತ್ತು ಕೂದಲು ಹಾಗೂ ತಟ್ಟೆಯನ್ನು ದಪ್ಪಗಿನ ಟವೆಲ್ ನಿಂದ ಮುಚ್ಚಿಕೊಳ್ಳಿ. ಇದರ ಹಬೆಯು ಕೂದಗೆ ಹತ್ತು ನಿಮಿಷ ಕಾಲ ಬರಲಿ. ಹತ್ತು ನಿಮಿಷ ಬಿಟ್ಟ ಬಳಿಕ ಮುಂದಿನ ಹಂತಕ್ಕೆ ಸಾಗಿ. ಕೂದಲನ್ನು ಶಾಂಪೂ ಮತ್ತು ಕಂಡೀಷನರ್ ನಿಂದ ತೊಳೆಯಿರಿ.

ಮೂರನೇ ಹಂತ

ಈ ಹಂತದಲ್ಲಿ ನೀವು ಕೂದಲನ್ನು ಶಾಂಪೂವಿನಿಂದ ತೊಳೆದುಕೊಂಡು ಕೂದಲು ಮತ್ತು ತಲೆಬುರುಡೆಯಲ್ಲಿ ಇರುವಂತಹ ಎಣ್ಣೆಯಂಶವನ್ನು ತೆಗೆದುಹಾಕಬೇಕು. ಹೀಗೆ ಮಾಡಿದ ಬಳಿಕ ನೀವು ಕಂಡೀಷನರ್ ಬಳಸಿಕೊಳ್ಳಿ.

ನಾಲ್ಕನೇ ಹಂತ

ಅಂತಿಮವಾಗಿ ನೀವು ಮೊಟ್ಟೆ ಮತ್ತು ಜೇನುತುಪ್ಪ ಬಳಸಿದ ಹೇರ್ ಮಾಸ್ಕ್ ಬಳಸಿಕೊಳ್ಳಿ. ಈ ಮಸ್ಕ್ ನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ. ತಲೆಗೆ ಶಾವರ್ ಕ್ಯಾಪ್ ಬಳಸಿ ಮತ್ತು ಇದು 15-20 ನಿಮಿಷ ಕಾಲ ಹಾಗೆ ಇರಲಿ. ಇದರ ಬಳಿಕ ನೀವು ಉಗುರುಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ ಮತ್ತು ಗಾಳಿಯಿಂದ ಕೂದಲು ಒಣಗಿಸಿ.

English summary

How To Do Egg & Honey Hair Spa At Home?

It is a great thing to pamper your hair once a while with something extra. Getting a hair spa done has become very easy now with proper guidance and some basic ingredients like milk, honey, coconut oil, and even eggs. Eggs and honey have excellent natural conditioning properties and provide the best treatment for dull, dry, and damaged hair.
X
Desktop Bottom Promotion