For Quick Alerts
ALLOW NOTIFICATIONS  
For Daily Alerts

ದಪ್ಪ ಹಾಗೂ ಉದ್ದದ ಕೂದಲಿನ ಆರೈಕೆಗೆ ಹೀಗೆ ಮಾಡಿ...

By Hemanth
|

ಪ್ರತಿಯೊಬ್ಬ ಮಹಿಳೆ ಕೂಡ ಬಯಸುವುದು ತನ್ನ ಕೂದಲು ತುಂಬಾ ದಪ್ಪ, ಕಪ್ಪಗೆ ಹಾಗು ಉದ್ದವಾಗಿರಬೇಕೆಂದು. ಉದ್ದ ಹಾಗೂ ದಪ್ಪಗಿನ ಕೂದಲನ್ನು ಗಾಳಿಯಲ್ಲಿ ಹಾಗೆ ಬಿಟ್ಟು ಓಡಾಡಿಕೊಂಡಿದ್ದರೆ ಸುತ್ತಲಿನ ಜನರು ಅದರತ್ತ ದೃಷ್ಟಿ ಹಾಯಿಸಬೇಕು. ಇಂತಹ ಕೂದಲು ಬೇಕು ಎನ್ನುವುದು ಪ್ರತಿಯೊಬ್ಬರ ಆಸೆ ಕೂಡ. ಕೂದಲು ಎನ್ನುವುದು ಮಹಿಳೆಯ ಸೌಂದರ್ಯ ಹಾಗೂ ಆಕೆಯ ಆತ್ಮವಿಶ್ವಾಸದ ಪ್ರತೀಕ. ಉದ್ದಗಿನ ಕೂದಲು ಇದ್ದರೆ ಆಕೆ ತುಂಬಾ ಆತ್ಮವಿಶ್ವಾಸದ ಮಹಿಳೆ ಎಂದು ಹೇಳಲಾಗುತ್ತದೆ.

ಆದರೆ ಕೂದಲಿನ ಮೇಲೆ ರಾಸಾಯನಿಕಗಳ ಪ್ರಯೋಗ, ಕಲ್ಮಶ, ಧೂಳು ಇತ್ಯಾದಿಗಳಿಂದಾಗಿ ಕೂದಲು ಉದುರಿ ತೆಳುವಾಗುವುದು. ಇಂತಹ ಕೂದಲನ್ನು ನೋಡಿದಾಗ ಅಯ್ಯೋ ಅನ್ನಿಸುವುದು. ಕಾಂತಿಯು, ರೇಷ್ಮೆಯಂತಹ ಕೂದಲು ಪಡೆಯಲು ನಿಮಗೆ ಹಲವಾರು ರೀತಿಯ ವಿಧಾನಗಳು ತಿಳಿದಿರಬಹುದು. ಆದರೆ ಅದೆಲ್ಲವೂ ತುಂಬಾ ದುಬಾರಿ ಮತ್ತು ಅಡ್ಡಪರಿಣಾಮ ಉಂಟು ಮಾಡಬಹುದು. ಇದಕ್ಕಾಗಿ ನಾವು ಈ ಲೇಖನದಲ್ಲಿ ನಿಮಗೆ ದಪ್ಪ ಹಾಗೂ ಉದ್ದಗಿನ ಕೂದಲು ಪಡೆಯುವುದು ಹೇಗೆ ಎಂದು ಹೇಳಿಕೊಡಲಿದ್ದೇವೆ. ಓದಲು ತಯಾರಾಗಿರಿ....

coconut oil

ತೆಂಗಿನೆಣ್ಣೆ
ತೆಂಗಿನೆಣ್ಣೆ ಬಳಸಿಕೊಂಡು ಹಲವಾರು ರೀತಿಯ ಸೌಂದರ್ಯಸಾಧನಗಳನ್ನು ಉತ್ಪಾದಿಸುವ ಬಗ್ಗೆ ನಾವು ಕೇಳಿದ್ದೇವೆ. ತೆಂಗಿನೆಣ್ಣೆಯನ್ನು ಕೂದಲಿಗೆ ಹಚ್ಚಿಕೊಳ್ಳಿ ಮತ್ತು ಅದನ್ನು ಬುಡದಿಂದ ತುದಿಯ ತನಕ ಚೆನ್ನಾಗಿ ಮಸಾಜ್ ಮಾಡಿ. ಟವೆಲ್ ಕಟ್ಟಿಕೊಂಡು ಸುಮಾರು 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಶಾಂಪೂ ಬಳಸಿ ಕೂದಲು ತೊಳೆಯಿರಿ. ವಾರದಲ್ಲಿ ಎರಡು ಅಥವಾ ಮೂರು ಸಲ ಇದನ್ನು ನೀವು ಬಳಸಬಹುದು.

ಅವಕಾಡೋ ಮಾಸ್ಕ್
ಅವಕಾಡೋ ಪ್ರೋಟೀನ್ ಮಾಸ್ಕಗೆ ಬೇಕಾಗುವ ಸಾಮಗ್ರಿಗಳು
1 ಅವಕಾಡೋ
1 ಮೊಟ್ಟೆ
2 ಚಮಚ ಆಲಿವ್ ತೈಲ

ತಯಾರಿಸುವ ವಿಧಾನ
ಪಿಂಗಾಣಿಗೆ ಹಾಕಿ ಒಂದು ಮೊಟ್ಟೆಯನ್ನು ಸರಿಯಾಗಿ ಕಲಸಿ ಮತ್ತು ಒಂದು ಅವಕಾಡೋದ ತಿರುಳನ್ನು ಹಾಕಿ. ಎರಡು ಚಮಚ ಆಲಿವ್ ತೈಲ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿಕೊಂಡು, ಸರಿಯಾಗಿ ಮುಚ್ಚಿಕೊಳ್ಳಿ. 25-30 ನಿಮಿಷ ಕಾಲ ಹಾಗೆ ಇರಲಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಜೇನುತುಪ್ಪ ಮತ್ತು ಎಣ್ಣೆ ಮಾಸ್ಕ್ ಗೆ ಬೇಕಾಗುವ ಸಾಮಗ್ರಿಗಳು
2 ಚಮಚ ಮೊಶ್ಚಿರೈಸರ್
1 ಚಮಚ ಜೇನುತುಪ್ಪ
2 ಚಮಚ ಆಲಿವ್ ತೈಲ

ತಯಾರಿಸುವ ವಿಧಾನ
ಒಂದು ಪಿಂಗಾಣಿಯಲ್ಲಿ ಎಲ್ಲವನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಂಡ ಬಳಿಕ ಶವರ್ ಕ್ಯಾಪ್ ನಿಂದ ಮುಚ್ಚಿಕೊಳ್ಳಿ. 20 ನಿಮಿಷ ಬಿಟ್ಟ ಬಳಿಕ ನೀರಿನಿಂದ ತೊಳೆಯಿರಿ. ಜೇನುತುಪ್ಪ ಮತ್ತು ಆಲಿವ್ ತೈಲದ ಮಿಶ್ರಣ ಮಾಡಿಕೊಂಡು ಶಾಂಪೂ ಹಾಕಿಕೊಂಡು ತೊಳೆದ ಬಳಿಕ ಹಚ್ಚಿಕೊಳ್ಳಿ. 5 ನಿಮಿಷ ಬಿಟ್ಟು ಇದನ್ನು ಶಾಂಪೂ ಹಾಕಿ ತೊಳೆಯಿರಿ. ಇದು ಕಂಡೀಷನರ್ ಹಾಗೆ ಕೆಲಸ ಮಾಡಿ ಕೂದಲನ್ನು ಬಲಗೊಳಿಸುವುದು. ಇದರಿಂದ ಕೂದಲ ಬೆಳವಣಿಗೆಯಾಗುವುದು.

ಆಲ್ಕೋಹಾಲ್
ಆಲ್ಕೋಹಾಲ್ ಇರುವಂತಹ ಕೂದಲಿನ ಉತ್ಪನ್ನಗಳನ್ನು ನೀವು ಬಳಕೆ ಮಾಡಲು ಹೋಗಬೇಡಿ. ಮೊಶ್ಚಿರೈಸರ್ ಇರುವಂತಹ ಶಾಂಪೂ ಆಯ್ಕೆ ಮಾಡಿಕೊಳ್ಳಿ ಮತ್ತು ಇದರಿಂದ ಕೂದಲು ಯಾವಾಗಲೂ ತೇವಾಂಶದಿಂದ ಇರುವುದು ಮತ್ತು ನಯವಾಗಿರುವುದು. ಇದರಿಂದ ಕೂದಲಿನ ಬೆಳವಣಿಗೆಯಾಗುವುದು. ಆರೋಗ್ಯಕರ ಆಹಾರ ಹಾಗೂ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸೇವನೆ ಮಾಡಿ.

ರಾಸಾಯನಿಕ ಚಿಕಿತ್ಸೆ ಮಾಡಕೊಳ್ಳಬೇಡಿ
ಟವೆಲ್ ಬಳಸಿಕೊಂಡು ಅದನ್ನು ಸುತ್ತಿಕೊಂಡು ಕೂದಲು ಒಣಗಿಸುವುದು, ಕೂದಲಿಗೆ ರಾಸಾಯನಿಕ ಬಳಕೆ ಮತ್ತು ಬಿಸಿಯಾಗಿಸುವ ಯಂತ್ರಗಳನ್ನು ಬಳಸುವುದರಿಂದ ಕೂದಲ ಬುಡಕ್ಕೆ ಹಾನಿಯಾಗಬಹುದು. ಇದರಿಂದ ಕೂದಲ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು. ಕೂದಲು ತೊಳೆಯಲು ಹೆಚ್ಚು ಬಿಸಿ ಇರುವ ನೀರು ಬಳಸಬೇಡಿ. ಬಿಸಿ ನೀರು ಬಳಸಿದರೆ ಕೂದಲು ಒಣಗುವುದು ಮತ್ತು ಕೂದಲು ನಷ್ಟವಾಗುವುದು.

ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿದೆ ಮತ್ತು ಇತರ ಕೆಲವೊಂದು ಖನಿಜಾಂಶಗಳು ಇದರಲ್ಲಿ ಇವೆ. ಇದು ಕೂದಲಿಗೆ ಮಾಯಿಶ್ಚರೈಸ್ ನೀಡಿ ಬಲಪಡಿಸುವುದು. ಇದರಿಂದ ಕೂದಲು ಉದುರುವುದು ಕಡಿಮೆಯಾಗುವುದು.

ಬೇಕಾಗುವ ಸಾಮಗ್ರಿಗಳು
1 ಹಣ್ಣಾದ ಬಾಳೆಹಣ್ಣು
2 ಚಮಚ ಮೊಸರು
2 ಚಮಚ ರೋಸ್ ವಾಟರ್

ತಯಾರಿಸುವ ವಿಧಾನ
ಬಾಳೆಹಣ್ಣನ್ನು ಹಿಚುಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಮೊಸರು ಮತ್ತು ರೋಸ್ ವಾಟರ್ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಈ ಮಾಸ್ಕ್ ನ್ನು ಕೂದಲಿಗೆ ಹಚ್ಚಿಕೊಂಡು, ಒಂದು ಗಂಟೆ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ಕೂದಲು ತೊಳೆಯಿರಿ. ಮಾಸ್ಕ್ ಹಚ್ಚಿಕೊಂಡ ಬಳಿಕ ಶಾವರ್ ಕ್ಯಾಪ್ ಹಾಕಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ
ಆರೋಗ್ಯವು ಚೆನ್ನಾಗಿರಬೇಕೆಂದರೆ ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕು ಎಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಅದರಲ್ಲೂ ಬೇಸಿಗೆಯಲ್ಲಿ ನೀರು ಕಡಿಮೆ ಕುಡಿದರೆ ಅದರಿಂದ ಚರ್ಮವು ಒಣಗಿ ಹೋಗುವುದು. ಪ್ರತಿನಿತ್ಯ ನಾಲ್ಕು ಲೀಟರ್ ನೀರು ಕುಡಿಯಿರಿ. ನೀವು ಸಾಕಷ್ಟು ನೀರು ಕುಡಿದಾಗ ದೇಹವು ಅದನ್ನು ಹೀರಿಕೊಂಡು ಕೂದಲು ಮತ್ತು ತಲೆಬುರುಡೆಗೆ ಮೊಶ್ಚಿರೈಸರ್ ನೀಡುವುದು ಮಾತ್ರವಲ್ಲದೆ, ಕೂದಲಿನ ಕೋಶಗಳನ್ನು ಬಲಪಡಿಸುವುದು.

ಪ್ರತಿನಿತ್ಯ ಕೂದಲು ತೊಳೆಯಬೇಡಿ
ಪ್ರತಿನಿತ್ಯ ಕೂದಲು ತೊಳೆದರೆ ಅದರಿಂದ ಸ್ವಚ್ಛ ಹಾಗೂ ಆರೋಗ್ಯಕರ ಕೂದಲು ಪಡೆಯಬಹುದು ಎಂದು ಹೇಳಲಾಗುತ್ತದೆ. ಆದರೆ ಇದು ಸರಿಯಲ್ಲ. ಪ್ರತಿನಿತ್ಯ ಕೂದಲು ತೊಳೆದರೆ ಅದರಿಂದ ತಲೆಬುರುಡೆಯು ಮತ್ತಷ್ಟು ಎಣ್ಣೆಯುಕ್ತವಾಗುವುದು. ಇದರಿಂದ ನೀವು ವಾರದಲ್ಲಿ ಮೂರು ಸಲ ಕೂದಲು ತೊಳೆದರೆ ಒಳ್ಳೆಯದು.

English summary

How To Grow Hair In 1 Month?

Who wouldn't love to have that thick, bouncy and long hair? After all, smooth, silky and healthier hair adds on to one's own personality along with enhancing the beauty. Here are some home remedies that help you to increase hair growth within a month.
Story first published: Wednesday, April 11, 2018, 19:58 [IST]
X
Desktop Bottom Promotion