For Quick Alerts
ALLOW NOTIFICATIONS  
For Daily Alerts

  ಡ್ಯಾಂಡ್ರಫ್ ಸಮಸ್ಯೆ ಇದ್ದರೆ, ಒಮ್ಮೆ ಈ ಮನೆಮದ್ದು ಪ್ರಯತ್ನಿಸಿ

  By Arshad
  |

  ತಲೆಹೊಟ್ಟಿನ (ಡ್ಯಾಂಡ್ರಫ್) ನಿವಾರಣೆಗೆ ನೂರಾರು ಉತ್ಪನ್ನಗಳನ್ನು ಪ್ರಯತ್ನಿಸಿ ಸೋತಿದ್ದೀರಾ? ಇನ್ನೂ ತಲೆಹೊಟ್ಟು ಹೋಗಿಲ್ಲವೇ? ಇದಕ್ಕೆ ಉತ್ತರ ನಕಾತ್ಮಕವಾಗಿದ್ದರೆ ಈ ತೊಂದರೆ ಕೇವಲ ನಿಮಗೊಬ್ಬರಿಗೆ ಮಾತ್ರವೇ ಅಲ್ಲ, ನೂರಾರು ಜನರಿಗೆ ಎದುರಾಗಿದೆ. ತಲೆಹೊಟ್ಟಿನ ಪರಿಣಾಮವಾಗಿ ತಲೆಯಲ್ಲಿ ತುರಿಕೆ ಹಾಗೂ ತಲೆಹೊಟ್ಟಿನ ಪಕಳೆಗಳು ಭುಜದ ಮೇಲೆಲ್ಲಾ ಪುಡಿಯಂತೆ ಬಿದ್ದಿರುವುದು ಎರಡು ಪ್ರಮುಖ ತೊಂದರೆಗಳಾಗಿವೆ. ಈ ತೊಂದರೆಯನ್ನು ಅಲಕ್ಷಿಸುವುದು ತಲೆಗೂದಲ ಆರೋಗ್ಯಕ್ಕೆ ಅತಿ ಮಾರಕವಾಗಿದೆ.

  ತಲೆಯಲ್ಲಿ ಹೊಟ್ಟಿದ್ದರೆ ಇದು ಕೂದಲಿನ ದೃಢತೆಯನ್ನು ಕಡಿಮೆಗೊಳಿಸಿ ಸುಲಭವಾಗಿ ತುಂಡಾಗಲು ಕಾರಣವಾಗುತ್ತದೆ. ಆದ್ದರಿಂದ ತಲೆಹೊಟ್ಟಿನ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ತಲೆಹೊಟ್ಟು ಎದುರಾದ ಬಳಿಕ ಮೊದಲಾಗಿ ಮಾಡುವ ಕೆಲಸವೆಂದರೆ ಆಂಟಿ ಡ್ಯಾಂಡ್ರಫ್ ಶಾಂಪೂ ಎಂಬ ಸೌಂದರ್ಯ ಪ್ರಸಾಧನವನ್ನು ಕೊಂಡು ತರುವುದು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ತಲೆಗೆ ಹಚ್ಚಿಕೊಳ್ಳುವುದು. ಅಥವಾ ಯಾವುದಾದರೂ ಸೌಂದರ್ಯ ಮಳಿಗೆಗೆ ಹೋಗಿ ದುಬಾರಿ ಬೆಲೆಯ ಸೇವೆಯನ್ನು ಪಡೆಯುವುದು. ಈ ಮೂಲಕ ಪ್ರಬಲವಾದ ರಾಸಾಯನಿಕಗಳನ್ನು ನಾವೇ ನಮ್ಮ ಕೈಯಾರೆ ನಮ್ಮ ತಲೆಗೆ ಹಚ್ಚಿಕೊಳ್ಳುತ್ತೇವೆ. ಹಾಗೂ ತಾತ್ಕಾಲಿಕವಾಗಿ ತಲೆಹೊಟ್ಟು ಹೋದಂತೆ ಅನ್ನಿಸಿದರೂ ಮರುದಿನ ಮತ್ತಷ್ಟು ತಲೆಹೊಟ್ಟು ಹೆಚ್ಚುತ್ತದೆ. ಆದ್ದರಿಂದ ಈ ತರಹ ತಲೆಹೊಟ್ಟನ್ನು ಹೆಚ್ಚಿಸುತ್ತಾ ಹೋಗುವ ಬದಲು ನೈಸರ್ಗಿಕ ಹಾಗೂ ಸುರಕ್ಷಿತವಾದ ವಿಧಾನವನ್ನೇ ಅನುಸರಿಸುವುದು ಮೇಲು.

  ನೈಸರ್ಗಿಕ ವಿಧಾನ ಅನುಸರಿಸಲು ಸಿದ್ದ ರೂಪದ ಪ್ರಸಾಧನದವನ್ನು ಕೊಳ್ಳಬೇಕಾಗಿಲ್ಲ. ಬದಲಿಗೆ ಇಂತಹ ಒಂದು ಉತ್ತಮ ಶಾಂಪೂವನ್ನು ನೀವೇ ನಿಮ್ಮ ಮನೆಯಲ್ಲಿಯೇ ತಯಾರಿಸಿಕೊಳ್ಳುವುದೇ ಉತ್ತಮ. ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು ಸಹಾ ನಿಮ್ಮ ಅಡುಗೆ ಮನೆಯಲ್ಲಿಯೇ ಲಭ್ಯವಿವೆ. ವರ್ಷಗಳಿಂದ ತಲೆಹೊಟ್ಟನ್ನು ಸಮರ್ಥವಾಗಿ ನಿವಾರಿಸುತ್ತಾ ಬಂದಿರುವ ನೆಲ್ಲಿಕಾಯಿ ಪುಡಿ, ಅಂಟುವಾಳ ಪುಡಿ, ಸೀಗೆಪುಡಿ ಮೊದಲಾದವೇ ಈ ಸಾಮಾಗ್ರಿಗಳು. ಇವುಗಳಲ್ಲಿರುವ ಶಿಲೀಂಧ್ರ ನಿವಾರಕ ಗುಣ ತಲೆಹೊಟ್ಟಿಗೆ ಕಾರಣವಾಗಿರುವ ಶಿಲೀಂಧ್ರವನ್ನು ನಿವಾರಿಸಿ ಇದರಲ್ಲಿ ಆಶ್ರಯಪಡೆದಿದ್ದ ಬ್ಯಾಕ್ಟೀರಿಯಾಗಳನ್ನೂ ನಿವಾರಿಸಿ ತಲೆಹೊಟ್ಟನ್ನು ಮೂಲದಿಂದಲೇ ಇಲ್ಲವಾಗಿಸುತ್ತದೆ. ತಲೆಯ ಚರ್ಮಕ್ಕೆ ಸೂಕ್ತ ಆರೈಕೆ ನೀಡುವ ಮೂಲಕ ಚರ್ಮದ ಹೊರಪದರ ಒಣಗಿ ಪಕಳೆಯಂತೆ ಏಳುವ ಹಾಗೂ ತಲೆಹೊಟ್ಟಾಗುವುದನ್ನು ತಡೆಯುತ್ತದೆ. ಬನ್ನಿ, ಈ ಸಮರ್ಥ ಶಾಂಪೂ ತಯಾರಿಸಲು ಬೇಕಾಗಿರುವ ಯಾವ ಸಾಮಾಗ್ರಿಗಳು ಬೇಕು ಎಂದು ನೋಡೋಣ: 

  ತಲೆಹೊಟ್ಟನ್ನು ಬೇರು ಸಮೇತ ಕಿತ್ತು ಹಾಕುವ ಮನೆಮದ್ದು

  ಎಚ್ಚರಿಕೆ: ಈ ಶಾಂಪೂವನ್ನು ತಯಾರಿಸಿದ ಬಳಿಕ ಕೊಂಚ ಪ್ರಮಾಣವನ್ನು ನಿಮ್ಮ ತ್ವಚೆಯ ಒಂದು ಭಾಗಕ್ಕೆ ಹಚ್ಚಿಕೊಂಡು ಇದರಲ್ಲಿ ನಿಮಗೆ ಯಾವುದೇ ಅಲರ್ಜಿಕಾರಕ ಪರಿಣಾಮವಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡಾ ಬಳಿಕವೇ ಮುಂದುವರೆಯಿರಿ...

  ತಲೆಹೊಟ್ಟಿಗೆ ಕಾರಣಗಳು

  ತಲೆಹೊಟ್ಟಿಗೆ ಕಾರಣಗಳು

  *ತಲೆಯ ಸ್ವಚ್ಛತೆಯ ಕಾಳಜಿಯ ಕೊರತೆ

  *ಶಿಲೀಂಧ್ರದ ಸೋಂಕು

  *ತಲೆಯ ಚರ್ಮದಲ್ಲಿ ಅತಿ ಹೆಚ್ಚು ಎಣ್ಣೆಯ ಪಸೆ

  *ಕೆಟ್ಟ ಗುಣಮಟ್ಟದ ಕೂದಲ ಉತ್ಪನ್ನಗಳ ಬಳಕೆ

  *ಅನುವಂಶಿಕ ಕಾರಣಗಳು

  *ಮಾನಸಿಕ ಒತ್ತಡ

  ಈ ಶಾಂಪೂ ಬಳಸುವುದರಿಂದ ಲಭಿಸುವ ಪ್ರಯೋಜನಗಳು

  ಈ ಶಾಂಪೂ ಬಳಸುವುದರಿಂದ ಲಭಿಸುವ ಪ್ರಯೋಜನಗಳು

  * ಈ ಅದ್ಭುತ, ಮನೆಯಲ್ಲಿಯೇ ತಯಾರಿಸಿದ, ಸುರಕ್ಷಿತವಾದ ಶಾಂಪೂವಿನಲ್ಲಿ ಬ್ಯಾಕ್ಟೀರಿಯಾನಿವಾರಕ ಹಾಗೂ ಉರಿಯೂತ ನಿವಾರಕ ಗುಣಗಳು ಹೆಚ್ಚಿನ ಪ್ರಮಾಣದಲ್ಲಿವೆ. ಈ ಶಾಂಪೂ ತಯಾರಿಸಲು ಉಪಯೋಗಿಸುವ ಸಾಮಾಗ್ರಿಗಳೆಲ್ಲವೂ ಕೂದಲ ಪೋಷಣೆ ಹೆಚ್ಚಿಸುವ ಪೋಷಕಾಂಶಗಳಿಂದ ಕೂಡಿವೆ.

  * ಈ ಶಾಂಪೂದಲ್ಲಿರುವ ಗುಣಗಳು ಸೋಂಕುಕಾರಕ ಬ್ಯಾಕ್ಟೀರಿಯಾಗಳನ್ನು ಕೊಂದು ತಲೆಹೊಟ್ಟನ್ನು ಬುಡದಿಂದ ನಿವಾರಿಸಲು ನೆರವಾಗುತ್ತದೆ.

  * ಈ ಶಾಂಪೂವನ್ನು ನಿತ್ಯವೂ ಬಳಸುವ ಮೂಲಕ ಕೂದಲನ್ನು ಇನ್ನಷ್ಟು ಘಾಸಿಯಾಗುವುದರಿಂದ ರಕ್ಷಿಸುತ್ತದೆ ಹಾಗೂ ತಲೆಹೊಟ್ಟಿನ ಮೂಲಕ ಎದುರಾಗುವ ಮುಜುಗರದಿಂದ ಪಾರಾಗಬಹುದು ಹಾಗೂ ಭವಿಷ್ಯದಲ್ಲಿ ಮತ್ತೆ ಬರದಂತೆ ತಡೆಯುತ್ತದೆ.

  ಅಗತ್ಯವಿರುವ ಸಾಮಾಗ್ರಿಗಳು

  ಅಗತ್ಯವಿರುವ ಸಾಮಾಗ್ರಿಗಳು

  *ಒಂದು ಚಿಕ್ಕಚಮಚ ನೆಲ್ಲಿಕಾಯಿ ಪುಡಿ

  *ಐದಾರು ಬೇವಿನ ಎಲೆಗಳು

  *ಒಂದು ಚಿಕ್ಕ ಚಮಚ ಸೀಗೇಪುಡಿ

  *ಒಂದು ಚಿಕ್ಕ ಚಮಚ ಮೆಂತೆ ಪುಡಿ

  *ಒಂದು ಚಿಕ್ಕ ಚಮಚ ಅಂಟುವಾಳದ ಪುಡಿ

  *ಒಂದು ಕಪ್ ನೀರು

  ತಯಾರಿಸುವ ವಿಧಾನ

  ತಯಾರಿಸುವ ವಿಧಾನ

  *ಒಂದು ಚಿಕ್ಕ ಪಾತ್ರೆಯಲ್ಲಿ ನೀರನ್ನು ಹಾಕಿ ಉಳಿದೆಲ್ಲಾ ಪರಿಕರಗಳನ್ನು ಇದರಲ್ಲಿ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

  *ಈ ಪಾತ್ರೆಯನ್ನು ಬಿಸಿಮಾಡಿ ಮುಚ್ಚಳ ಮುಚ್ಚಿ ಸುಮಾರು ಹತ್ತು ನಿಮಿಷ ಕುದಿಸಿ

  *ಬಳಿಕ ಉರಿ ಆರಿಸಿ ಮುಚ್ಚಳ ತೆರೆದು ತಣಿಯಲು ಬಿಡಿ.

  ತಯಾರಿಸುವ ವಿಧಾನ

  ತಯಾರಿಸುವ ವಿಧಾನ

  *ತಣಿಯುವವರೆಗೂ ಚಮಚದಲ್ಲಿ ಅಲುಗಾಡಿಸುತ್ತಾ ಇರಿ.

  *ತಣಿದ ಬಳಿಕ ಈ ಮಿಶ್ರಣವನ್ನು ಸೋಸಿ ಬಾಟಲಿಯೊಂದರಲ್ಲಿ ಸಂಗ್ರಹಿಸಿ.

  ಬಳಕೆಯ ವಿಧಾನ

  ಬಳಕೆಯ ವಿಧಾನ

  *ಒಂದು ದೊಡ್ಡ ಚಮಚದಷ್ಟು ಶಾಂಪೂ ಪ್ರಮಾಣವನ್ನು ನಿಮ್ಮ ತಲೆಯ ಮೇಲೆ ಹಚ್ಚಿಕೊಳ್ಳಿ.

  *ಈ ಶಾಂಪೂವಿನಿಂದ ತಲೆಗೂದಲನ್ನು ತೋಯಿಸಿ ಬೆರಳುಗಳ ತುದಿಯಿಂದ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ.

  *ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

  ಈ ಬಗ್ಗೆ ಎಚ್ಚರವಹಿಸಿ

  ಈ ಬಗ್ಗೆ ಎಚ್ಚರವಹಿಸಿ

  *ಈ ಶಾಂಪೂವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಮಾತ್ರವೇ ಬಳಸುವ ಮೂಲಕ ಅತ್ಯುತ್ತಮ ಫಲಿತಾಂಶ ಪಡೆಯಬಹುದು.

  *ನಿಮ್ಮ ಕೂದಲನ್ನು ಸೋಂಕುಗಳಿಂದ ದೂರವಿರಿಸಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಿ.

  *ನಿಯಮಿತವಾಗಿ ನಿಮ್ಮ ತಲೆಗೂದಲನ್ನು ಶಾಂಪೂವಿನ ಆರೈಕೆ ನೀಡಬೇಕು ಹಾಗೂ ಇತರ ಪ್ರಸಾದನಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ಉಪಯೋಗಿಸಿ.

  English summary

  Hair Solution To Cure Dandruff

  Itchy scalp and flakes all over the shoulders are the two most common signs of this harrowing hair condition. And, turning a blind eye to this specific problem can prove to be extremely harmful for your tresses. Here we've listed all the information you need regarding this effective hair solution: Note: Test the following solution on a patch of your scalp before applying it all over your head. Before learning on how to make the solution, have a look at the list of factors that cause dandruff.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more