For Quick Alerts
ALLOW NOTIFICATIONS  
For Daily Alerts

ತಲೆಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವಾಗ ಏನು ಮಾಡಬೇಕು? ಏನು ಮಾಡಬಾರದು?

|

ಹೆಣ್ಣಿನ ಸೌಂದರ್ಯಕ್ಕೆ ಕಲಶಪ್ರಾಯವಾಗಿರುವಂತಹದ್ದು ಆಕೆಯ ಕೂದಲಾಗಿದೆ. ನೀಳವಾಗಿ ದಪ್ಪವಾಗಿರುವ ಕೂದಲು ಯಾರನ್ನೂ ಕೂಡ ಆಕರ್ಷಿಸಬಲ್ಲುದು. ಯಾರದೇ ಉದ್ದ ಕೂದಲನ್ನು ನೋಡಿದರೆ ನಮ್ಮ ಚೋಟುದ್ದ ಜಡೆಯನ್ನು ನೋಡಿ ನಾವು ಮರುಪಕಡುತ್ತೇವೆ. ಸುಂದರವಾದ ಉದ್ದನೆಯ ಕೂದಲನ್ನು ಪಡೆಯುವುದು ಎಂದರೆ ಎಲ್ಲರಿಗೂ ಆಸೆಯಾಗಿರುತ್ತದೆ ಮತ್ತು ಇದು ಪ್ರತಿಯೊಬ್ಬರ ಹಂಬಲವಾಗಿರುತ್ತದೆ. ಆದರೆ ಪ್ರಸ್ತುತ ಜೀವನ ಶೈಲಿಯಲ್ಲಿ ನಾವು ಕೂದಲಿನ ಕಡೆಗೆ ಗಮನವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂಬುದೇ ಹೆಚ್ಚಿನ ಸ್ತ್ರೀಯರ ಅಳಲಾಗಿದೆ. ವಾರಾಂತ್ಯ ರಜೆಯಲ್ಲಿ ಮನೆಯ ಕೆಲಸಗಳೇ ಸಾಕಷ್ಟಿರುವಾಗ ಕೂದಲಿನ ಕಾಳಜಿಯನ್ನು ಮಾಡುವುದು ಹೇಗೆ ಎಂಬುದೇ ಅವರ ಪ್ರಶ್ನೆಯಾಗಿದೆ.

ನಿತ್ಯವೂ ಕಚೇರಿಗೆ ಓಡುವ ಧಾವಂತದಲ್ಲಿ ಸಿಕ್ಕ ಸಿಕ್ಕ ಶ್ಯಾಂಪೂ ಬಳಸಿ, ಕೂದಲಿಗೆ ಎಣ್ಣೆಯ ಪೋಷಣೆಯನ್ನು ನೀಡದೆಯೇ ಅದನ್ನು ಸರಿಯಾಗಿ ಬಾಚದೇ ಕೂದಲನ್ನು ರಾತ್ರಿ ಮಲಗುವ ಸಮಯದಲ್ಲಿ ಬಿಡಿಸಿಕೊಂಡು ಸಿಕ್ಕಿರುವುದನ್ನು ಗಮನಿಸದೇ ಬೇಕಾಬಿಟ್ಟಿಯಾಗಿ ಬಿಟ್ಟುಕೊಂಡಿರುತ್ತೇವೆ. ಇನ್ನು ಕೆಲವೊಮ್ಮೆ ತಲೆ ಸ್ನಾನ ಮಾಡಿ ಅದು ಒಣಗದೇ ಇದ್ದಲ್ಲಿ ಕೃತಕ ಮಾದರಿಯಲ್ಲಿ ಅದನ್ನು ಮಿಶನ್ ಸಹಾಯದಿಂದ ಒಣಗಿಸಿಕೊಳ್ಳುತ್ತೇವೆ. ಒಮ್ಮೊಮ್ಮೆ ಸ್ಟ್ರೇಟನಿಂಗ್, ಕರ್ಲಿಂಗ್‌ಗಾಗಿ ಕೂಡ ನಮ್ಮ ಕೂದಲಿನ ಶೋಷಣೆಯನ್ನು ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ನಿಮ್ಮ ಕೂದಲು ಉದುರುವುದು ಸರಿಯಾದ ಪೋಷಣೆ ದೊರೆಯದೇ ಆಗಿದೆ. ಹೌದು ಹಿಂದೆಲ್ಲಾ ನಮ್ಮ ಅಮ್ಮ ಅಜ್ಜಿಯಂದಿರು ನಮ್ಮ ಕೂದಲಿಗೆ ಎಣ್ಣೆಯ ಪೋಷಣೆಯನ್ನು ಮಾಡಿ, ಸಿಕ್ಕು ಬಿಡಿಸಿ, ಕೂದಲಿಗೆ ನೈಸರ್ಗಿಕ ವಸ್ತುಗಳನ್ನು ಬಳಸಿ ಪೋಷಣೆಯನ್ನು ಮಾಡಿ ಮುತುವರ್ಜಿ ವಹಿಸುತ್ತಾರೆ. ಆದರೆ ಇದೇ ವಿಧಾನವನ್ನು ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಮಾಡಿದರೆ ಸಾಕು ನಿಮ್ಮ ಕೂದಲು ನಷ್ಟಮಾಡಿಕೊಂಡ ಪೋಷಣೆಯನ್ನು ಪುನಃ ಪಡೆದುಕೊಳ್ಳಬಹುದಾಗಿದೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಆ ಸಲಹೆಗಳನ್ನು ಬಳಸಿಕೊಂಡು ನೀವು ಕೂದಲಿನ ಕಾಳಜಿಯನ್ನು ಮಾಡಿಕೊಳ್ಳಬಹುದು. ಬನ್ನಿ ಅದೇನು ಎಂಬುದನ್ನು ನೋಡೋಣ

ಏನು ಮಾಡಬೇಕು

ಏನು ಮಾಡಬೇಕು

ತಲೆಬುರುಡೆಗೆ ಹೆಚ್ಚಿನ ಮಹತ್ವ ನೀಡಿ

ನೀವು ತಲೆಗೆ ಎಣ್ಣೆ ಮಸಾಜ್ ಮಾಡುವಾಗ ಯಾವಾಗಲೂ ಕೂದಲಿನ ತುದಿಗೆ ಎಣ್ಣೆಯನ್ನು ಹಚ್ಚುವುದರ ಜೊತೆಗೆ ಕೂದಲಿನ ಬುಡಕ್ಕೆ ಕೂಡ ಎಣ್ಣೆ ಮಸಾಜ್ ಅನ್ನು ಮಾಡಬೇಕು. ನಿಮ್ಮ ತಲೆಬುಡು ಗಟ್ಟಿಯಾಗಿದ್ದರೆ ನೀವು ಎದುರಿಸುವ ಸವಾಲುಗಳು ಕಡಿಮೆ ಇರುತ್ತದೆ. ನಿಮ್ಮ ಕೂದಲಿನ ಬುಡಕ್ಕೆ ಕೊಂಚ ಎಣ್ಣೆಯನ್ನು ಬಿಸಿ ಮಾಡಿಕೊಂಡು ನಂತರ ಹಚ್ಚಿಕೊಳ್ಳಿ. ಇದರಿಂದ ತಲೆಹೊಟ್ಟಿನ ನಿಯಂತ್ರಣವನ್ನು ಮಾಡಿಕೊಳ್ಳಬಹುದು ಜೊತೆಗೆ ಕೂದಲಿಗೆ ಬಿಸಿಯ ಮಸಾಜ್ ಕೂಡ ದೊರೆಯುತ್ತದೆ.

Most Read: ಆಲೂಗಡ್ಡೆ ಫೇಸ್ ಪ್ಯಾಕ್ ಬಳಸಿ ಹೊಳೆಯುವ ತ್ವಚೆ ಪಡೆದುಕೊಳ್ಳಿ

ನಿಮ್ಮ ಕೂದಲಿಗೆ ನಿಯಮಿತವಾಗಿ ಮಸಾಜ್ ಮಾಡಿ

ನಿಮ್ಮ ಕೂದಲಿಗೆ ನಿಯಮಿತವಾಗಿ ಮಸಾಜ್ ಮಾಡಿ

ನಿಮ್ಮ ಕೂದಲಿನ ಕಾಳಜಿ ಮಾಡುವುದು ಎಂದರೆ ಕೂದಲಿಗೆ ನಿಯಮಿತ ಮಸಾಜ್ ಮಾಡುವುದಾಗಿದೆ. ನಿಮ್ಮ ಕೂದಲಿಗೆ ನಿತ್ಯವೂ ಮಸಾಜ್ ಮಾಡಿ ಎಣ್ಣೆಯನ್ನು ಬಿಸಿ ಮಾಡಿ ಅದನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಬೇಕಾದ ಪೋಷಣೆ ಉತ್ತಮ ನ್ಯೂಟ್ರಿನ್ ಅಂಶಗಳು ದೊರೆಯುತ್ತವೆ. ಬುಡದಿಂದ ಎಣ್ಣೆಯನ್ನು ಹಚ್ಚಿಕೊಂಡು ಅದನ್ನು ತುದಿಯವರೆಗೆ ಮಸಾಜ್ ಮಾಡಿ. ನಿಮ್ಮದು ಜಿಡ್ಡಿನ ಕೂದಲಾಗಿದ್ದರೆ ವಾರಕ್ಕೊಮ್ಮೆ ಕೂದಲಿನ ಮಸಾಜ್ ಮಾಡಿ. ನಿಮ್ಮದು ಒಣ ಕೂದಲು ಎಂದಾದಲ್ಲಿ ವಾರಕ್ಕೆ ಮೂರು ಬಾರಿಯಾದರೂ ನೀವು ಎಣ್ಣೆಯನ್ನು ಹಚ್ಚಿ ಕೂದಲಿನ ಮಸಾಜ್ ಮಾಡಿಕೊಳ್ಳಬೇಕು.

ಅಂತಿಮ ಸ್ಪರ್ಶ ನೀಡುವುದು

ಅಂತಿಮ ಸ್ಪರ್ಶ ನೀಡುವುದು

ನಿಮ್ಮ ಕೂದಲಿಗೆ ಎಣ್ಣೆಯನ್ನು ಹಚ್ಚಿ ಅದನ್ನು ಮಸಾಜ್ ಮಾಡಿದ ನಂತರ ನಿಯಮಿತ ಶ್ಯಾಂಪೂ ಮತ್ತು ಕಂಡೀಷನರ್ ಅನ್ನು ಬಳಸಿಕೊಂಡು ಕುದಲನ್ನು ತೊಳೆದುಕೊಳ್ಳಿ. ಕಂಡೀಷನರ್ ನಿಮ್ಮ ಕೂದಲಿಗೆ ಸ್ಟೈಲಿಂಗ್ ಟೂಲ್ ಆಗಿ ಕೆಲಸ ಮಾಡುತ್ತದೆ. ಬಿಸಿ ಎಣ್ಣೆಯನ್ನು ಮಸಾಜ್ ಮಾಡಿಕೊಂಡು ಅದನ್ನು ಕೂದಲಿಗೆ ಹಚ್ಚುವುದರಿಂದ ನಿಮ್ಮ ಕೂದಲಿಗೆ ಮೃದುತ್ವ ದೊರೆಯುತ್ತದೆ ಮತ್ತು ಕೂದಲು ಸಿಕ್ಕಾಗುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಏನು ಮಾಡಬಾರದು

ಏನು ಮಾಡಬಾರದು

ಎಣ್ಣೆ ಹಚ್ಚುವುದನ್ನು ಬಿಡಬೇಡಿ

ಎಣ್ಣೆ ಹಚ್ಚಿ ಮಸಾಜ್ ಮಾಡುವುದನ್ನು ನೀವು ಎಂದಿಗೂ ಬಿಡಬೇಡಿ. ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡುವುದು ಅತಿ ಮುಖ್ಯವಾದುದು. ಕೂದಲಿನಿಂದ ಧೂಳು, ಕೊಳೆ ನಿವಾರಣೆಯಾಗಬೇಕು ಎಂದಾದಲ್ಲಿ ನಿತ್ಯವೂ ಮಸಾಜ್ ಮಾಡಿ ನೈಸರ್ಗಿಕ ಶ್ಯಾಂಪೂ ಹಚ್ಚಿ ಕೂದಲನ್ನು ತೊಳೆದುಕೊಳ್ಳಿ. ಇದರಿಂದ ಕೂದಲು ಒಣಗುವುದನ್ನು ತಡೆಗಟ್ಟಬಹುದಾಗಿದೆ. ದಿನದ ಕೊನೆಯಲ್ಲಿ ಬಿಸಿ ಎಣ್ಣೆಯ ಮಸಾಜ್ ಅನ್ನು ಕೂದಲಿಗೆ ಮಾಡಿಕೊಳ್ಳಿ.

Most Read: ಬರೀ ಹದಿನೈದೇ ದಿನಗಳಲ್ಲಿ ಬಿಳಿ ಕೂದಲನ್ನು ಕಪ್ಪು ಮಾಡುವ ಮನೆಮದ್ದುಗಳು

ಹೆಚ್ಚು ಬಳಸಬೇಡಿ

ಹೆಚ್ಚು ಬಳಸಬೇಡಿ

ಎಲ್ಲರಿಗೂ ತಿಳಿದಂತೆ ಹೆಚ್ಚು ಬಳಕೆ ಮಾಡುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ನಮ್ಮ ಕೂದಲಿನ ಬುಡ ಮತ್ತು ತುದಿಗೆ ಎಣ್ಣೆಯ ಮಸಾಜ್ ಅತೀ ಅಗತ್ಯವಾಗಿದೆ. ಆದರೆ ಎಣ್ಣೆಯನ್ನು ಅತಿಯಾಗಿ ಬಳಸುವುದೂ ಕೂಡ ಕೂದಲಿಗೆ ಮಾರಕವಾಗಿದೆ. ಎಣ್ಣೆ ಹಚ್ಚಿ ಹೆಚ್ಚು ಸಮಯ ಹಾಗೆಯೇ ಬಿಡಿಬೇಡಿ. ಕೊಂಚ ಹೊತ್ತು ಎಣ್ಣೆಯನ್ನು ಕೂದಲಿನಲ್ಲಿ ಬಿಟ್ಟು ನಂತರ ತಲೆ ಸ್ನಾನ ಮಾಡಿಕೊಳ್ಳಿ. ಹಾಗಿದ್ದರೆ ಕೂದಲಿಗೆ ಎಣ್ಣೆ ಹಚ್ಚಿ ಯಾವ ರೀತಿಯಲ್ಲಿ ಪೋಷಣೆ ಮಾಡಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಂಡಿದ್ದೀರಿ ಎಂಬುದು ನಮ್ಮ ಭಾವನೆಯಾಗಿದೆ.

English summary

Hair care tips: Dos & Don'ts Of Oiling Your Hair

Oiling your hair is actually good for your scalp as well as your hair. It deeply nourishes your scalp, thus strengthening your roots. Moreover, it also boosts blood circulation in your scalp.Whether it is coconut oil or some essential hair oil, your hair surely receives the required nourishment. After all, who doesn't want beautiful, long, strong, shiny, & healthy hair
X
Desktop Bottom Promotion