For Quick Alerts
ALLOW NOTIFICATIONS  
For Daily Alerts

ಡ್ಯಾಂಡ್ರಫ್ ಸಮಸ್ಯೆ ಇದೆಯೇ? ಮೊಟ್ಟೆ ಮತ್ತು ಮೊಸರು ಬಳಸಿ

|

ಹದಿಹರೆಯದಲ್ಲಿ ಸೌಂದರ್ಯವನ್ನು ಎತ್ತಿ ತೋರಿಸುವಂತಹ ದೇಹದ ಅಂಗವೆಂದರೆ ಅದು ಕೂದಲು. ಇದು ದೇಹ ಸೌಂದರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಅದೇ ರೀತಿ ಹಲವಾರು ಸಮಸ್ಯೆಗಳು ಕೂಡ ಕೂದಲನ್ನು ಕಾಡುವುದು. ಇದರಲ್ಲಿ ಪ್ರಮುಖವಾಗಿ ತಲೆಹೊಟ್ಟು ಮತ್ತು ತುರಿಕೆ. ಹದಿಹರೆಯದಲ್ಲಿ ಈ ಸಮಸ್ಯೆಗೆ ಚಿಕಿತ್ಸೆ ಸರಿಯಾಗಿ ಮಾಡಿಕೊಳ್ಳದೆ ಇದ್ದರೆ ಅದು ಜೀವಮಾನವಿಡಿ ನಿಮ್ಮನ್ನು ಕಾಡುತ್ತಲಿರಬಹುದು.

ಅದರಲ್ಲೂ ಇಂದಿನ ಯುವಜನರು ಮಾರುಕಟ್ಟೆಯಲ್ಲಿನ ಉತ್ಪನ್ನಗಳಿಗೆ ಮಾರು ಹೋಗಿರುವ ಕಾರಣದಿಂದ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತದೆ. ತಲೆಹೊಟ್ಟಿನ ಸಮಸ್ಯೆ ಹೋಗಲಾಡಿಬೇಕಾದರೆ ಬುಡಕ್ಕೆ ಹೋಗಬೇಕಾಗುತ್ತದೆ. ಇದು ಕೂದಲಿನ ಬುಡಕ್ಕಲ್ಲ, ಸಮಸ್ಯೆಯ ಆಳಕ್ಕೆ ಹೋಗಬೇಕು. ತಲೆಹೊಟ್ಟು ಎನ್ನುವುದು ಹಲವಾರು ಕಾರಣಗಳಿಂದ ಕಾಣಿಸಿ ಕೊಳ್ಳಬಹುದು.

ಲಿಂಬೆಹಣ್ಣನ್ನು ಬಳಸಿ ತಲೆ ಹೊಟ್ಟಿನಿಂದ ಮುಕ್ತಿ ಪಡೆಯಿರಿ

beauty tips in kannada

ಶಾಂಪೂ ಹಾಕಿಕೊಳ್ಳುವುದರಿಂದ, ಪದರಗಳು ಕಾಣಿಸಿಕೊಳ್ಳುವುದರಿಂದಲೂ ಬರಬಹುದು. ಇದು ಶಿಲೀಂಧ್ರಿಯದಿಂದ ಬರುವಂತಹ ಸಮಸ್ಯೆಯಾಗಿದೆ. ಇದಕ್ಕೆ ತಕ್ಷಣ ಚಿಕಿತ್ಸೆ ಮಾಡಿಕೊಳ್ಳಬೇಕು. ತಲೆಹೊಟ್ಟಿಗೆ ಸಾಮಾನ್ಯ ಕಾರಣವಾಗಿರುವ ಒಣ ತಲೆಬುರುಡೆ ಸಮಸ್ಯೆಗೆ ಹಲವಾರು ಮನೆಮದ್ದುಗಳು ಇವೆ. ಮೊಟ್ಟೆ ಮತ್ತು ಮೊಸರು ಬಳಸಿಕೊಂಡು ತಲೆಹೊಟ್ಟು ಹೇಗೆ ನಿವಾರಣೆ ಮಾಡಬಹುದು ಎಂದು ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

1 ಕಪ್ ಮೊಸರು

1 ಮೊಟ್ಟೆ

ವಿಧಾನ

ವಿಧಾನ

*ಮೊಸರು ಮತ್ತು ಮೊಟ್ಟೆಯನ್ನು ಮಿಶ್ರಣ ಮಾಡಿಕೊಂಡು ಸರಿಯಾಗಿ ಕಲಸಿಕೊಳ್ಳಿ.

*ಇದನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ಅರ್ಧ ಗಂಟೆ ಕಾಲ ಈ ಮಾಸ್ಕ್ ನ್ನು ಹಾಗೆ ಬಿಡಿ.

*ಲಘು ಶಾಂಪೂ ಬಳಸಿ ತೊಳೆಯಿರಿ.

* ಫಲಿತಾಂಶ ಬರುವ ತನಕ ಈ ವಿಧಾನವನ್ನು ವಾರಕ್ಕೊಂದು ಸಲ ಬಳಸಿ.

ಇದು ಹೇಗೆ ನೆರವಾಗುವುದು

ಇದು ಹೇಗೆ ನೆರವಾಗುವುದು

*ನೈಸರ್ಗಿಕ ಪ್ರೋಟೀನ್ ಇರುವ ಮೊಟ್ಟೆಯು ಕೂದಲನ್ನು ಬಲಪಡಿಸುವುದು ಮತ್ತು ಶಕ್ತಿ ನೀಡುವುದು.

*ಮೊಸರಿನಲ್ಲಿ ಇರುವಂತಹ ನೈಸರ್ಗಿಕ ಕೊಬ್ಬು ತಲೆಬುರುಡೆಗೆ ಮಾಯಿಶ್ಚರೈಸರ್ ನೀಡುವುದು ಮತ್ತು ತುರಿಕೆ ತಡೆಯುವುದು.

*ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವ ಮೊಸರು ತಲೆಬುರುಡೆಯನ್ನು ಒಣಗಿಸಿ, ಪದರ ಮತ್ತು ತುರಿಕೆ ಉಂಟು ಮಾಡುವ ಇಸುಬನ್ನು ತಡೆಯುವುದು.

ಮತ್ತಷ್ಟು ಸಲಹೆಗಳು

ಕರಿಮೆಣಸು

ಕರಿಮೆಣಸು

ಕರಿಮೆಣಸಿನಲ್ಲಿ ನೈಸರ್ಗಿಕವಾಗಿರುವಂತಹ ಶಿಲೀಂಧ್ರ ವಿರೋಧಿ ಗುಣಗಳು ಇವೆ. ಶಿಲೀಂಧ್ರಿಯದ ಸೋಂಕನ್ನು ಇದು ಪರಿಣಾಮಕಾರಿಯಾಗಿ ನಿವಾರಿಸುವುದು. ಮೊಟ್ಟೆ ಮತ್ತು ಕೂದಲಿನ ಹೇರ್ ಮಾಸ್ಕ್ ನ್ನು ಬಳಸುವಾಗ ಒಂದು ಚಮಚ ಕರಿಮೆಣಸಿನ ಹುಡಿಯನ್ನು ಮಿಶ್ರಣ ಮಾಡಬೇಕು. ತಲೆಹೊಟ್ಟು ನಿವಾರಣೆ ಮಾಡುವ ಶಿಲೀಂಧ್ರೀಯ ಸೋಂಕನ್ನು ಇದು ತಡೆಯುವುದು.

ಮೆಂತ್ಯೆ

ಮೆಂತ್ಯೆ

ತಲೆಹೊಟ್ಟು ಕೇವಲ ಒಂದು ಸಮಸ್ಯೆಯಾಗಿ ಬರುವುದಿಲ್ಲ. ಇದರೊಂದಿಗೆ ಕೂದಲಿನ ಇನ್ನಿತರ ಹಲವಾರು ಸಮಸ್ಯೆಗಳು ಜತೆಯಾಗಿರುವುದು. ಇದರಲ್ಲಿ ಪ್ರಮುಖವಾಗಿ ಕೂದಲು ಉದುರುವುದು.

ಒಂದು ಚಮಚ ಮೆಂತ್ಯೆಯನ್ನು ನೆನೆಯಲು ಹಾಕಿ, ಅದನ್ನು ರುಬ್ಬಿಕೊಂಡು ಹೇರ್ ಮಾಸ್ಕ್ ಜತೆಗೆ ಸೇರಿಸಿಕೊಳ್ಳಿ. ಇದು ಕೂದಲು ಉದುರುವುದನ್ನು ನಿಲ್ಲಿಸುವುದು.

ಲಿಂಬೆ ರಸ

ಲಿಂಬೆ ರಸ

ಮೊಟ್ಟೆಯ ದುರ್ನಾತ ಕೂದಲಿನಲ್ಲಿ ಹಾಗೆ ಉಳಿದುಕೊಳ್ಳುತ್ತದೆ ಎಂದು ನಿಮಗನಿಸಿದರೆ ಆಗ ಒಂದು ಚಮಚ ಲಿಂಬೆರಸವನ್ನು ಕೂದಲಿನ ಮಾಸ್ಕ್ ಗೆ ಹಾಕಿ ಬಳಿಕ ಕೂದಲಿಗೆ ಹಚ್ಚಿಕೊಳ್ಳಿ. ಲಿಂಬೆಯಲ್ಲಿ ಶಿಲೀಂಧ್ರ ವಿರೋಧಿ ಗುಣಗಳು ಇವೆ ಮತ್ತು ಇದು ಶಿಲೀಂಧ್ರ ಸೋಂಕು ತಡೆಯುವುದು.

ಗಮನಿಸಬೇಕಾದ ಅಂಶಗಳು

ಗಮನಿಸಬೇಕಾದ ಅಂಶಗಳು

ಸಮಯ ಬೇಕಾಗುವುದು

ಮನೆಯಲ್ಲೇ ತಯಾರಿಸಿರುವಂತಹ ಕೂದಲಿನ ಮಾಸ್ಕ್ ಗಳಿಗೆ ಪರಿಣಾಮ ಬೀರಲು ಸಮಯ ಬೇಕಾಗುಉದು. ನಿಮಗೆ ತಲೆಹೊಟ್ಟು ಅಥವಾ ತಲೆಬುರುಡೆಯಿಂದ ಬೇರೆ ಸಮಸ್ಯೆಗಳು ದೀರ್ಘ ಸಮಯದಿಂದ ಇದ್ದರೆ ಹೇರ್ ಮಾಸ್ಕ್ ಗೆ ಕಾರ್ಯನಿರ್ವಹಿಸಲು ಸಮಯ ಬೇಕಾಗಬಹುದು. ಮೊಸರಿನ ಹೇರ್ ಮಾಸ್ಕ್ ಗೆ ನೀವು ಸುಮಾರು 30 ನಿಮಿಷ ಸಮಯ ನೀಡಬೇಕು. ಇದರ ಬಳಿಕ ಕೂದಲು ತೊಳೆಯಿರಿ.

ಲಘು ಉತ್ಪನ್ನ ಬಳಸಿ

ಲಘು ಉತ್ಪನ್ನ ಬಳಸಿ

ತಲೆಹೊಟ್ಟು ನಿವಾರಣೆ ಮಾಡುವುದು ಮತ್ತು ಅದನ್ನು ಸಂಪೂರ್ಣವಾಗಿ ತೆಗೆದುಹಾಕಲು ಸರಿಯಾದ ಶಾಂಪೂ ಆಯ್ಕೆ ಮಾಡಿಕೊಳ್ಳುವುದು ಅತೀ ಅಗತ್ಯ. ತಲೆಹೊಟ್ಟಿನ ಸಮಸ್ಯೆ ಇದ್ದಾಗ ಲಘು ಶಾಂಪೂ ಬಳಸಿ. ತಲೆಹೊಟ್ಟು ತೆಗೆಯುವಂತಹ ಶಾಂಪೂಗಳು ತುಂಬಾ ಪ್ರಬಲ ರಾಸಾಯನಿಗಳನ್ನು ಬಳಸುತ್ತವೆ. ಕೂದಲು ಇದನ್ನು ಅವಲಂಬಿಸಿದರೆ ಆಗ ತಲೆಬುರುಡೆಯ ಸಂಪೂರ್ಣ ಆರೋಗ್ಯಕ್ಕೆ ನಿಧಾನ ವಿಷ ನೀಡಿದಂತೆ.

ನೀರು, ನೀರು, ನೀರು

ನೀರು, ನೀರು, ನೀರು

ಕೂದಲು ಮತ್ತು ತಲೆಬರುಡೆಯನ್ನು ತೊಳೆಯಲು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಬಳಸದರೆ ಇರುವುದು ಕೂಡ ತಲೆಹೊಟ್ಟಿಗೆ ಕಾರಣವಾಗಿದೆ. ಸೋಪು ಅಥವಾ ಶಾಂಪೂ ಕೂದಲು ತೊಳೆದ ಬಳಿಕ ಕೂಡ ಉಳಿದಿದ್ದರೆ ಅದು ಪದರ ನಿರ್ಮಾಣ ಮಾಡುವುದು ಮತ್ತು ಇದರಿಂದ ತಲೆಹೊಟ್ಟು ಬರುವುದು. ಕೂದಲಿಗೆ ಶಾಂಪೂ ಅಥವಾ ಬೇರೆ ಉತ್ಪನ್ನ ಬಳಕೆ ಮಾಡಿದಾಗ ಸಾಕಷ್ಟು ನೀರು ಬಳಸಿ. ಸಾಕಷ್ಟು ನೀರು ಹಾಕದೆ ತಲೆಬುರುಡೆ ತೊಳೆಯುವುದು ತಲೆಹೊಟ್ಟಿಗೆ ಆಹ್ವಾನ ನೀಡಿದಂತೆ.

ನಿಧಾನವಾಗಿ

ನಿಧಾನವಾಗಿ

ಮನೆಯಲ್ಲಿ ತಯಾರಿಸಿರುವ ಮಾಸ್ಕ್ ಬಳಸುವಾಗ ಸಮಯ ತೆಗೆದುಕೊಳ್ಳಿ. ತಲೆಬುರುಡೆಗೆ ಇದನ್ನು ಮಸಾಜ್ ಮಾಡುವುದು ಮತ್ತು ಸರಿಯಾದ ಉತ್ಪನ್ನ ಆಯ್ಕೆ ಮಾಡುವುದು ಮುಖ್ಯ. ಒಂದು ಬದಿಗೆ ಮೊಸರು ಮತ್ತು ಮೊಟ್ಟೆಯ ಮಾಸ್ಕ್ ನ ಪದರ ಹಾಕಿಕೊಂಡು ಮಸಾಜ್ ಮಾಡಿ. ಇದರ ಬಳಿಕ ಇನ್ನೊಂದು ಬದಿಗೆ ಹಾಕಿಕೊಂಡು ಮಸಾಜ್ ಮಾಡಿ.

ನಿರಂತರತೆ ಅಗತ್ಯ

ನಿರಂತರತೆ ಅಗತ್ಯ

ಮನೆಮದ್ದುಗಳನ್ನು ಬಳಸುವಾಗ ಹೆಚ್ಚಿನವರು ಕೇವಲ ಒಂದು ಅಥವಾ ಎರಡು ಸಲ ಬಳಸಿಕೊಂಡು ಬಿಟ್ಟುಬಿಡುವರು. ಇದಕ್ಕೆ ಸಮಯದ ಅಭಾವವು ಕಾರಣ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಈ ಮಾಸ್ಕ್ ಬಳಸಿ ಮತ್ತು ತಲೆಹೊಟ್ಟು ನಿವಾರಣೆ ಆಗುವ ತನಕ ಮುಂದುವರಿಸಿ. ಮಧ್ಯದಲ್ಲೇ ಚಿಕಿತ್ಸೆ ನಿಲ್ಲಿಸಿದರೆ ಆಗ ಸಮಸ್ಯೆ ನಿವಾರಣೆ ಕಷ್ಟಸಾಧ್ಯ.

ವೈದ್ಯರನ್ನು ಸಂಪರ್ಕಿಸಿ

ವೈದ್ಯರನ್ನು ಸಂಪರ್ಕಿಸಿ

ಯಾವುದು ಕೆಲಸ ಮಾಡದರೆ ಇರುವಾಗ ಟ್ರೈಕಾಲಜಿಸ್ಟ್ ನ್ನು ಭೇಟಿಯಾಗಿ ಸಮಸ್ಯೆ ಬಗ್ಗೆ ತಿಳಿಸಿ. ತಲೆಬುರುಡೆಯ ಇಸುಬು, ಸೋರಿಯಾಸಿಸ್, ಇತರ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರ ಸೋಂಕು ಆಗಿರಬಹುದು. ಮನೆಮದ್ದು ಬಳಸುವ ಮೊದಲು ವೈದ್ಯರನ್ನು ಭೇಟಿಯಾಗಿ. ಸಮಸ್ಯೆಯ ಮೂಲ ಮೊದಲು ಹುಡುಕಿ.

ಅದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ

ಅದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ

ತಲೆಹೊಟ್ಟು ಎನ್ನುವುದು ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವುದು ಎಂದು ಭಾವಿಸಬೇಡಿ. ಜಾಹೀರಾತುಗಳಲ್ಲಿ ಹಾಗೆ ತೋರಿಸುತ್ತಾರೆಂದು ನೀವು ಕೂಡ ಹಾಗೆ ಅಂದುಕೊಳ್ಳಬೇಡಿ. ಇದು ನಿಮ್ಮ ಸ್ವಪ್ರತಿಷ್ಠೆಯ ವಿಷಯವಲ್ಲ. ತಲೆಹೊಟ್ಟು ಎನ್ನುವುದು ಸ್ವಚ್ಛತೆಯ ಸಮಸ್ಯೆಯಲ್ಲ. ಇದಕ್ಕೆ ಹಲವಾರು ಸೋಂಕುಗಳು ಕಾರಣವಾಗಿರಬಹುದು.

English summary

Egg And Yogurt – For Healthy, Dandruff-free Hair

One of the toughest hair problems to deal with is dandruff or an itchy, flaky scalp. It may start in adolescence, when one is just entering their teens but, if left untreated, it might affect them their whole lives. In trying to rid the hair of this behemoth of a problem, people try all kinds of strong, chemical-laced shampoos and other hair care products, which only end up aggravating the problem.
X
Desktop Bottom Promotion