For Quick Alerts
ALLOW NOTIFICATIONS  
For Daily Alerts

ಕೂದಲು ದಪ್ಪವಾಗಿ ಬೆಳೆಯಬೇಕೇ? ಮೊಟ್ಟೆ, ತೆಂಗಿನೆಣ್ಣೆ ಹೇರ್ ಮಾಸ್ಕ್ ಬಳಸಿ

|

ಉದ್ದ, ದಪ್ಪ ಕೂದಲು ಪ್ರತಿಯೊಬ್ಬ ಮಹಿಳೆಯ ಕನಸಾಗಿರುವುದು. ಇದು ಸೌಂದರ್ಯವನ್ನು ಹೆಚ್ಚಿಸುವುದು. ಕೂದಲು ಆರೋಗ್ಯಕಾರಿಯಾಗಿ ತುಂಬಾ ಕಾಂತಿಯುತವಾಗಿದ್ದರೆ ಆಗ ಪ್ರತಿಯೊಬ್ಬರಿಗೂ ಅದರತ್ತ ದೃಷ್ಟಿ ಹರಿಯುವುದು. ಆದರೆ ಇಂತಹ ಸುಂದರ ಕೂದಲನ್ನು ಪಡೆಯಲು ತುಂಬಾ ಶ್ರಮ ವಹಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಉತ್ಪನ್ನಗಳು ಕೂದಲನ್ನು ಉದ್ದ ಹಾಗೂ ದಪ್ಪ ಬೆಳೆಯುವಂತೆ ಮಾಡುವುದು ಎಂದು ಜಾಹೀರಾತುಗಳು ಸಾಲು ಸಾಲಾಗಿ ಬರುವುದು.

Egg And Coconut Oil Mask For Hair Growth

ಆದರೆ ಇವುಗಳು ಫಲಿತಾಂಶ ನೀಡುವುದು ಮಾತ್ರ ಕಡಿಮೆ. ಇದು ಕೂದಲಿಗೆ ಲಾಭ ಉಂಟು ಮಾಡುವ ಬದಲು ಹೆಚ್ಚು ಹಾನಿಯುಂಟು ಮಾಡುವುದು. ಈ ಲೇಖನದಲ್ಲಿ ನಾವು ನಿಮಗೆ ಒಂದು ಹೇರ್ ಮಾಸ್ಕ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ಕೇವಲ ಎರಡು ಸಾಮಗ್ರಿಗಳನ್ನು ಬಳಸಿಕೊಂಡು ಮಾಡಬಹುದಾದ ಹೇರ್ ಮಾಸ್ಕ್. ಮೊಟ್ಟೆ ಮತ್ತು ತೆಂಗಿನೆಣ್ಣೆಯ ಮಾಸ್ಕ್ ಹೇಗೆ ಪರಿಣಾಮಕಾರಿಯಾಗಿರಲಿದೆ ಎಂದು ತಿಳಿಯಿರಿ.

Most Read: ಮನೆಯಲ್ಲೇ ಮೊಟ್ಟೆ ಹಾಗೂ ಜೇನು ಬಳಸಿಕೊಂಡು ಮಾಡಿ 'ಹೇರ್ ಸ್ಪಾ'

ಇದಕ್ಕೆ ಏನು ಬೇಕು?

ಇದಕ್ಕೆ ಏನು ಬೇಕು?

  • 2 ಮೊಟ್ಟೆ
  • 1 ಚಮಚ ತೆಂಗಿನೆಣ್ಣೆ
  • 1 ಚಮಚ ಆಲಿವ್ ತೈಲ
  • ತಯಾರಿಸುವ ವಿಧಾನ

    1. ಸ್ವಚ್ಛವಾಗಿರುವ ಪಿಂಗಾಣಿಗೆ ಮೊಟ್ಟೆ, ತೆಂಗಿನೆಣ್ಣೆ ಮತ್ತು ಆಲಿವ್ ತೈಲವನ್ನು ಹಾಕಿ.

    2. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ನೊರೆಯಂತಹ ಮಿಶ್ರಣ ಬರುವಂತೆ ನೋಡಿಕೊಳ್ಳಿ.

    3. ಇದನ್ನು ಹಚ್ಚಿಕೊಳ್ಳುವ ಮೊದಲು ನೀವು ತಲೆಬುರುಡೆ ಮತ್ತು ಕೂದಲಿಗೆ ಕೈಬೆರಳುಗಳಿಂದ ಮಸಾಜ್ ಮಾಡಿಕೊಳ್ಳಿ. ಇದರಿಂದ ಮಾಸ್ಕ್ ಹಚ್ಚಿಕೊಳ್ಳುವ ಮೊದಲೇ ಸರಿಯಾಗಿ ರಕ್ತ ಸಂಚಾರ ಸುಧಾರಣೆಯಾಗುವುದು.

    4. ಮಸಾಜ್ ಮಾಡಿಕೊಂಡ ಬಳಿಕ ಕೈಗಳಿಂದ ಮಾಸ್ಕ್ ನ್ನು ಕೂದಲಿಗೆ ಹಚ್ಚಿಕೊಳ್ಳಿ. ತಲೆಬುರುಡೆಗೂ ಇದನ್ನು ಹಚ್ಚಿ ಮತ್ತು ಕೂದಲಿನ ಬುಡಕ್ಕೂ ಇದು ತಾಗಬೇಕು.

    5. ಇದರ ಬಳಿಕ ಮತ್ತೆ ತಲೆಬುರುಡೆ ಮತ್ತು ಕೂದಲಿಗೆ 2-5 ನಿಮಿಷ ಕಾಲ ಮಸಾಜ್ ಮಾಡಿ.

    6. ಈ ಮಾಸ್ಕ್ ನ್ನು ರಾತ್ರಿಯಿಡಿ ಹಾಗೆ ಬಿಡಿ.

    7. ಈ ಮಾಸ್ಕ್ ಹಾಸಿಗೆಗೆ ತಗಲುವುದನ್ನು ತಪ್ಪಿಸಲು ಶಾವರ್ ಕ್ಯಾಪ್ ಅಥವಾ ಟವೆಲ್ ನ್ನು ತಲೆಗೆ ಸುತ್ತಿಕೊಳ್ಳಿ.

    8. ಮರುದಿನ ಬೆಳಗ್ಗೆ ನೀವು ಸಲ್ಫೇಟ್ ಮುಕ್ತವಾಗಿರುವ ಶಾಂಪೂವಿನಿಂದ ಕೂದಲು ತೊಳೆಯಿರಿ.

    9. ವೇಗವಾಗಿ ಫಲಿತಾಂಶ ಪಡೆಯಲು ನೀವು ಈ ಹೇರ್ ಮಾಸ್ಕ್ ನ್ನು ವಾರದಲ್ಲಿ ಒಂದು ಸಲ ಬಳಸಿ.

    Most Read: ಕೂದಲಿನ ಸೌಂದರ್ಯ ಹೆಚ್ಚಿಸಲು ಪಪ್ಪಾಯ ಹಣ್ಣಿನ ಹೇರ್ ಮಾಸ್ಕ್ ಬಳಸಿ

    ಮೊಟ್ಟೆಯ ಲಾಭಗಳು

    ಮೊಟ್ಟೆಯ ಲಾಭಗಳು

    ಮೊಟ್ಟೆಯಲ್ಲಿ ಇರುವಂತಹ ಉನ್ನತ ಮಟ್ಟದ ಪ್ರೋಟೀನ್ ಮತ್ತು ವಿಟಮಿನ್ ಗಳು ಕೂದಲಿನ ಬುಡಕ್ಕೆ ತುಂಬಾ ಆಳವಾಗಿ ಪೋಷಣೆ ನೀಡುವುದು ಮತ್ತು ಕೂದಲು ಬೆಳೆಯಲು ನೆರವಾಗುವುದು. ಇದರಲ್ಲಿರುವಂತಹ ವಿಟಮಿನ್ ಎ ಮತ್ತು ಇ ಕೂದಲಿನ ಕಿರುಚೀಲಗಳು ಪುನರ್ಶ್ಚೇತನಗೊಳ್ಳಲು ಮತ್ತು ಕೂದಲು ಬಲಗೊಳ್ಳಲು ನೆರವಾಗುವುದು. ಮೊಟ್ಟೆಯ ಮಾಸ್ಕ್ ನ್ನು ನಿಯಮಿತವಾಗಿ ನಿಯಮಿತವಾಗಿ ಬಳಸಿದರೆ ಆಗ ಕೂದಲು ನಯವಾಗುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು.

    ತೆಂಗಿನೆಣ್ಣೆ ಲಾಭಗಳು

    ತೆಂಗಿನೆಣ್ಣೆ ಲಾಭಗಳು

    ತೆಂಗಿನೆಣ್ಣೆಯಲ್ಲಿ ಇರುವಂತಹ ಲಾರಿಕ್ ಆಮ್ಲವು ಕೂದಲನ್ನು ಬುಡದಿಂದಲೇ ರಕ್ಷಿಸುವುದು ಮತ್ತು ಕೂದಲು ತುಂಡಾಗದಂತೆ ತಡೆಯುವುದು. ತೆಂಗಿನೆಣ್ಣೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಪ್ರಬಲವಾಗಿದ್ದು, ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಕೂದಲಿಗೆ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿದರೆ ರಕ್ತಸಂಚಾರವು ಸುಧಾರಣೆಯಾಗುವುದು.

    Most Read: ಒಂದೇ ಒಂದು 'ಟೊಮೆಟೊ' ಕೂದಲಿನ ಅಂದ-ಚೆಂದ ಹೆಚ್ಚಿಸುತ್ತದೆ!

    ಆಲಿವ್ ತೈಲದ ಲಾಭಗಳು

    ಆಲಿವ್ ತೈಲದ ಲಾಭಗಳು

    ಆಲಿವ್ ತೈಲದಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಇದ್ದು, ತಲೆಬುರುಡೆ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾ ನೆರವಾಗುವುದು. ನಿಯಮಿತವಾಗಿ ಆಲಿವ್ ತೈಲದಿಂದ ತಲೆಬುರುಡೆಗೆ ಮಸಾಜ್ ಮಾಡುತ್ತಲಿದ್ದರೆ ಆಗ ರಕ್ತ ಸಂಚಾರವು ಸುಗಮವಾಗುವುದು ಮತ್ತು ಕೂದಲಿನ ಬೆಳವಣಿಗೆಯಾಗುವುದು. ಆಲಿವ್ ತೈಲವು ತಲೆಬುರುಡೆಯನ್ನು ತೇವಾಂಶದಿಂದ ಇಡುವುದು ಮತ್ತು ಮೊಶ್ಚಿರೈಸ್ ನೀಡುವುದು. ಇದರಿಂದ ತಲೆಹೊಟ್ಟು ಮತ್ತು ತಲೆಬುರುಡೆಯ ಪದರ ಕಿತ್ತು ಬರುವ ಸಮಸ್ಯೆ ನಿವಾರಣೆಯಾಗುವುದು.

English summary

Egg And Coconut Oil Mask For Hair Growth

Here in this article, we'll be discussing an easy overnight hair mask that has two main ingredients like egg and coconut oil.
X
Desktop Bottom Promotion