For Quick Alerts
ALLOW NOTIFICATIONS  
For Daily Alerts

  ಪುರುಷರ ಬೊಕ್ಕ ತಲೆ ಸಮಸ್ಯೆಗೆ, ಇಲ್ಲಿದೆ ಪವರ್ ಫುಲ್ ಮನೆಮದ್ದುಗಳು

  By Deepu
  |

  ಬೋಳು ಅಥವಾ ಬೊಕ್ಕ ತಲೆ ಹೊಂದಿದ್ದರೆ ಅವರ ಸಮಸ್ಯೆ ಹೇಳತೀರದು. ಈ ಬೋಳುತಲೆಯನ್ನು ಹಿಡಿದುಕೊಂಡು ಎಲ್ಲಿಗೂ ಹೋಗುವಂತಿಲ್ಲ. ನಾಲ್ಕು ಜನರ ಮಧ್ಯೆ ನಿಂತರೆ ಬೋಳುತಲೆಯೇ ಎದ್ದು ಕಾಣುವಂತಿರುತ್ತದೆ. ಇಂತಹ ಬೋಳು ತಲೆಯಿಂದಾಗಿ ನಿಮ್ಮ ನಿದ್ದೆ ಮಾಯವಾಗಿದೆಯಾ? ಬೋಳುತಲೆಯ ಬಗ್ಗೆ ನೀವು ಈಗಲೇ ಗಮನಹರಿಸದೇ ಇದ್ದರೆ ಅದು ದೊಡ್ಡ ಸಮಸ್ಯೆಯನ್ನೇ ಉಂಟು ಮಾಡಬಹುದು.

  ಬೋಳು ತಲೆಗೆ ನೀವು ಕೂದಲನ್ನು ಕಸಿ ಮಾಡಲು ಅಥವಾ ಬೇರೆ ಯಾವುದೇ ರೀತಿಯ ದುಬಾರಿ ಚಿಕಿತ್ಸೆಗೆ ಮುಂದಾಗಿದ್ದರೆ ಒಂದು ನಿಮಿಷ ನಿಲ್ಲಿ ಮತ್ತು ಇತ್ತ ಗಮನಹರಿಸಿ. ಯಾಕೆಂದರೆ ಹರಳೆಣ್ಣೆ ನಿಮ್ಮ ಬೋಳು ತಲೆಯ ಸಮಸ್ಯೆ ನಿವಾರಿಸಬಹುದು. ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನಿಮಗೆ ಕಾತುರತೆ ಇದೆಯಾ ಹಾಗಾದರೆ ಲೇಖನವನ್ನು ಮುಂದಕ್ಕೆ ಓದಿ..

  ಪುರುಷರ ಬೊಕ್ಕ ತಲೆ ಸಮಸ್ಯೆಗೆ, ಪವರ್ ಫುಲ್ ಮನೆಮದ್ದುಗಳು

  1. ಹೀರೇಕಾಯಿ (Ribbed Gourd)

  1. ಹೀರೇಕಾಯಿ (Ribbed Gourd)

  ಹಿಗ್ಗಿ ಹಿಗ್ಗಿ ಹೀರೇಕಾಯಿಯಾದ ಎಂಬ ಗಾದೆಯೇ ಇದೆ. ಇಲ್ಲಿ ಹಿಗ್ಗಲು ಕಾರಣ ಇದರ ಕೂದಲ ರಕ್ಷಣೆಯ ಶಕ್ತಿ. ಇದಕ್ಕಾಗಿ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಅದರಲ್ಲಿ ಹೀರೇಕಾಯಿಯನ್ನು ಅಡ್ಡಲಾಗಿ ಕತ್ತರಿಸಿದ ಕೆಲವು ಹೋಳುಗಳನ್ನು ಚಿಕ್ಕ ಉರಿಯಲ್ಲಿ ಕುದಿಸಿ. ಎಷ್ಟು ಕುದಿಸಬೇಕು ಎಂದರೆ ಈ ಹೋಳುಗಳು ಸುಟ್ಟು ಕಪ್ಪಗಾಗುವಷ್ಟು. ಬಳಿಕ ಈ ಎಣ್ಣೆಯನ್ನು ತಣಿಯಲು ಬಿಟ್ಟು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ಎಣ್ಣೆಯನ್ನು ನಿತ್ಯವೂ ತಲೆಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ನಯವಾಗಿ ಮಸಾಜ್ ಮಾಡಿ. ಇದರಿಂದ ಕೂದಲು ಉದುರುವ ಸಾಧ್ಯತೆ ಕಡಿಮೆಯಾಗುತ್ತದೆ.

  2. ಪೇರಳೆ ಮರದ ಎಲೆಗಳು

  2. ಪೇರಳೆ ಮರದ ಎಲೆಗಳು

  ಕೆಲವು ಪೇರಳೆ ಎಲೆಗಳನ್ನು (ತುಂಬಾ ಬಲಿತವೂ ಅಲ್ಲ, ತೀರಾ ಎಳೆಯವೂ ಅಲ್ಲ) ಕೊಂಚ ನೀರಿನೊಂದಿಗೆ ನಯವಗಿ ಅರೆಯಿರಿ. ಈ ಲೇಪನವನ್ನು ದಪ್ಪನಾಗಿ ತಲೆಯ ಕೂದಲಿಗೆ ಹಚ್ಚಿ ಒಣಗಲು ಬಿಡಿ. ಇಪ್ಪತ್ತು ನಿಮಿಷದ ಬಳಿಕ ಕೇವಲ ತಣ್ಣೀರು ಉಪಯೋಗಿಸಿ ತೊಳೆದುಕೊಳ್ಳಿ. ಇದು ಕೂದಲು ಉದುರುವುದನ್ನು ತಡೆಯುವುದರ ಜೊತೆಗೇ ಕೂದಲಿಗೆ ಕಾಂತಿ ನೀಡಲೂ ನೆರವಾಗುತ್ತದೆ.

  3. ಸೋರೆ ಕಾಯಿ ರಸ

  3. ಸೋರೆ ಕಾಯಿ ರಸ

  ಸೋರೆಕಾಯಿಯ ತಿರುಳಿನ ಕೆಲವು ತುಂಡುಗಳನ್ನು ಅರೆದು ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸವನ್ನು ತಲೆಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಈ ವಿಧಾನದಿಂದಲೂ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಉದುರಿದ ಕೂದಲಿನ ಸ್ಥಾನದಲ್ಲಿ ಹೊಸ ಕೂದಲು ಹುಟ್ಟಲು ನೆರವಾಗುತ್ತದೆ.

  4. ಗೋರಂಟಿ ಎಲೆಗಳು / ಮದರಂಗಿ ಎಲೆಗಳು

  4. ಗೋರಂಟಿ ಎಲೆಗಳು / ಮದರಂಗಿ ಎಲೆಗಳು

  ಇದು ಭಾರತದಲ್ಲಿ ಅತ್ಯಂತ ಪ್ರಸಿದ್ಧ ಕೇಶವರ್ಧಕ ಮತ್ತು ಕೂದಲನ್ನು ಕಪ್ಪಾಗಿಡಲು ಬಳಸುವ ಔಷಧ. ಇದು ಮದುವೆಯ ಸಮಯದಲ್ಲಿ ಕೈಯಲ್ಲಿ ಬಿಡಿಸುವ ವಿವಿಧ ಚಿತ್ತಾರಗಳ ಕಾರಣದಿಂದಲೂ ಬಹಳ ಪ್ರಸಿದ್ಧ. ಸಾಸಿವೆ ಎಣ್ಣೆಯಲ್ಲಿ ಮದರಂಗಿ ಎಲೆಗಳನ್ನು ಬೇಯಿಸಬೇಕು ಇದನ್ನು ಸಾಮಾನ್ಯ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹಾಗೂ ತಲೆಯ ಮೇಲೆ ಹಚ್ಚಿಕೊಳ್ಳಿ.

  5. ನೆಲ್ಲಿಕಾಯಿ

  5. ನೆಲ್ಲಿಕಾಯಿ

  ಕೂದಲಿನ ವೃದ್ಧಿಸಲು ಹಾಗೂ ಕೂದಲನ್ನು ಸುಸ್ಥಿತಿಯಲ್ಲಿಡುವಲ್ಲಿ ನೆಲ್ಲಿಕಾಯಿಯ ಪಾತ್ರ ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿರುವ ವಿಟಮಿನ್ ಸಿ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೆಲ್ಲಿಕಾಯಿ ರಸ ಮತ್ತು ಲಿಂಬೆ ಹಣ್ಣಿನ ರಸಗಳ ಮಿಶ್ರಣವನ್ನು ಕೂದಲು ಉದುರಿರುವ ಜಾಗಕ್ಕೆ ಹಚ್ಚಿ, ಅಲ್ಲದೆ ಒಂದು ದಿನ ಹಾಗೆಯೇ ಬಿಡಿ ಹಾಗೂ ಮರುದಿನ ಸ್ನಾನ ಮಾಡುವಾಗ ನೈಸರ್ಗಿಕ ಶಾಂಪೂ ಬಳಸಿ ಸ್ನಾನ ಮಾಡಿ.

  6. ಮೆಂತೆ ಸೊಪ್ಪು

  6. ಮೆಂತೆ ಸೊಪ್ಪು

  ಮೆಂತೆ ಸೊಪ್ಪು ಕೂದಲು ಉದುರುವಿಕೆಯನ್ನು ತಡೆಯಲು ಬಹಳ ಸುಲಭದ ಮತ್ತು ಪರಿಣಮಕಾರಿ ದಾರಿಯಾಗಿದೆ. ಇವುಗಳಲ್ಲಿರುವ ಹಾರ್ಮೋನು ವರ್ಧಕ ಗುಣದಿಂದಾಗಿ ಕೂದಲು ಬಹಳ ಬೇಗನೆ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಇವುಗಳಲ್ಲಿ ನಿಕೊಟಿನಿಕ್ ಆಮ್ಲಗಳೂ ಇವೆ. ಮೆಂತೆ ಸೊಪ್ಪುನಿಂದ ಪೇಸ್ಟ್ ತಯಾರಿಸಿ ಇದನ್ನು ಸ್ನಾನದ ಒಂದು ಗಂಟೆಗೆ ಮುನ್ನ ಹಚ್ಚಿ ಸ್ನಾನ ಮಾಡಿ.

  7. ಈರುಳ್ಳಿ

  7. ಈರುಳ್ಳಿ

  ದೊಡ್ಡ ಈರುಳ್ಳಿಯನ್ನು ರುಬ್ಬಿ ಅದರಿಂದ ರಸವನ್ನು ತೆಗೆಯಿರಿ ಇದನ್ನು ಆಲೋವೆರಾದ ಜೊತೆಗೆ ಮಿಶ್ರಣ ಮಾಡಿ ಸ್ನಾನಕ್ಕೆ 10 - 15 ನಿಮಿಷಗಳ ಮುಂಚೆ ಹಚ್ಚಿ ಸ್ನಾನ ಮಾಡಿ.

  8. ಹರಳೆಣ್ಣೆ

  8. ಹರಳೆಣ್ಣೆ

  ಹರಳೆಣ್ಣೆಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಒಂದು ಅಥವಾ ಎರಡು ಟೇಬಲ್ ಚಮಚ ಹರಳೆಣ್ಣೆಯನ್ನು ಅಂಗೈನಲ್ಲಿ ತೆಗೆದುಕೊಂಡು ಬೊಕ್ಕತಲೆಯ ಭಾಗದಲ್ಲಿ ಲೇಪಿಸಿಕೊಳ್ಳಿ. ಇದರಿಂದ ಸ್ವಾಭಾವಿಕವಾಗಿ ನಿಮ್ಮ ಕೂದಲು ಆ ಭಾಗದಲ್ಲಿ ಬೆಳೆಯುತ್ತದೆ.

  9. ಮೆಂತೆ ಕಾಳು

  9. ಮೆಂತೆ ಕಾಳು

  ಮೆಂತೆ ಕಾಳುಗಳೂ ಕೂಡ ಕೂದಲು ಉದುರುವಿಕೆಯನ್ನು ತಡೆಯಲು ಬಹಳ ಸುಲಭದ ಮತ್ತು ಪರಿಣಾಮಕಾರಿ ದಾರಿಯಾಗಿದೆ. ಇವುಗಳಲ್ಲಿರುವ ಹಾರ್ಮೋನು ವರ್ಧಕ ಗುಣದಿಂದಾಗಿ ಕೂದಲು ಬಹಳ ಬೇಗನೆ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಹಾಗಾಗಿ ಮೆಂತೆ ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.

  10. ಬೀಟ್ ರೂಟ್ ಜ್ಯೂಸ್

  10. ಬೀಟ್ ರೂಟ್ ಜ್ಯೂಸ್

  ರಕ್ತದಂತೆ ಕೆಂಪಾಗಿರುವ ಬೀಟ್ ರೂಟ್ ತುಂಬಾ ಆರೋಗ್ಯಕಾರಿ ತರಕಾರಿಯಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ, ವಿಟಮಿನ್ ಬಿ ಮತ್ತು ಸಿ ಹಾಗೂ ಪ್ರೋಟೀನ್ ಇದೆ. ಕೂದಲು ಆರೋಗ್ಯಕರವಾಗಿ ಬೆಳೆಯಲು ಇದು ನೆರವಾಗುವುದು ಮತ್ತು ಬೊಕ್ಕ ತಲೆ ಸಮಸ್ಯೆ ನಿವಾರಣೆ ಮಾಡುವುದು.

  ಒಂದು ತುರಿದಿರುವ ಬೀಟ್ ರೂಟ್ ಮೂರು ಚಮಚ ಗೋರಂಟಿ ಅಗತ್ಯವಿರುವಷ್ಟು ನೀರು

  ಒಂದು ತುರಿದಿರುವ ಬೀಟ್ ರೂಟ್

  ಮೂರು ಚಮಚ ಗೋರಂಟಿ

  ಅಗತ್ಯವಿರುವಷ್ಟು ನೀರು

  ವಿಧಾನ

  *ತುರಿದುಕೊಂಡಿರುವ ತಾಜಾ ಬೀಟ್ ರೂಟ್ ನಿಂದ ರಸ ತೆಗೆಯಿರಿ.

  *ಇದಕ್ಕೆ ಗೋರಂಟಿ ಹಾಕಿಕೊಂಡು ಪೇಸ್ಟ್ ಮಾಡಿ. ಪೇಸ್ಟ್ ತುಂಬಾ ದಪ್ಪವಾಗಿದ್ದರೆ

  *ಸ್ವಲ್ಪ ನೀರು ಹಾಕಿ.

  *ಕೂದಲಿಗೆ ಇದನ್ನು ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ. ವಾರದಲ್ಲಿ ಎಷ್ಟು

  *ಸಲ ಸಾಧ್ಯವೋ ಅಷ್ಟು ಸಲ ಇದನ್ನು ಬಳಸಿಕೊಳ್ಳಿ.

  11. ಎಳ್ಳೆಣ್ಣೆಯಿಂದ ಮಸಾಜ್ ಮಾಡಿ

  11. ಎಳ್ಳೆಣ್ಣೆಯಿಂದ ಮಸಾಜ್ ಮಾಡಿ

  ಅವಶ್ಯಕ ಎಣ್ಣೆಗಳಾದ (Essential oils) ಎಳ್ಳೆಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆ ಸರಿಸುಮಾರು ನೀರಿನಷ್ಟೇ ತೆಳ್ಳಗಿರುವುದರಿಂದ ತಲೆಗೆ ಹಚ್ಚಿ ಮಾಲಿಶ್ ಮಾಡಿಕೊಳ್ಳುವುದು ಸುಲಭವೂ ಆರೋಗ್ಯಕರವೂ ಆಗಿದೆ. ಈ ಎಣ್ಣೆಯನ್ನು ತಲೆಯ ಚರ್ಮ ಸುಲಭವಾಗಿ ಹೀರಿಕೊಂಡು ಕೂದಲ ಬುಡಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇದರಿಂದ ಕೂದಲುದುರುವುದು ಕಡಿಮೆಯಾಗುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

  English summary

  Effective Natural Ways to Prevent Hair Loss in men

  When it is all about hair, we are very conscious when it comes to taking care of it. Even after constant care and remedies for long thick hair, losing out on those precious strands every now and then can ruin the entire thing. In this article, we are here to share some of the best tested home remedies that you can try to avoid baldness. These home remedies help to increase the volume of hair and also help in maintaining a healthy shine, have a look
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more