For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಬೊಕ್ಕತಲೆಯನ್ನು ತಡೆಗಟ್ಟಲು ಇಲ್ಲಿವೆ ಕೆಲವು ಸಲಹೆಗಳು

By Sushma Charhra
|

ಪ್ರತಿಯೊಬ್ಬ ಪುರುಷರೂ ಕೂಡ ತಮ್ಮ ಕೂದಲು ಆರೋಗ್ಯವಾಗಿರಬೇಕು ಎಂದು ಬಯಸುತ್ತಾರೆ. ಸಣ್ಣಸಣ್ಣ ಬೊಕ್ಕ ಜಾಗಗಳಿದ್ದರೂ,ಕುಗ್ಗುತ್ತಿರುವ ಕೂದಲೇ ಆಗಿದ್ದರೂ ಅದರ ಆರೋಗ್ಯದ ಬಗ್ಗೆ ಚಿಂತಿಸುತ್ತಾರೆ. ಪುರುಷರ ಸೌಂದರ್ಯಕ್ಕಾಗಿ ಕೂದಲು ಬಹಳ ಮುಖ್ಯವಾಗಿರುತ್ತೆ.

ಕೂದಲು ಉದುರುವುದು ಹೆಚ್ಚಿನ ಪುರುಷರು ಅನುಭವಿಸುವ ದೊಡ್ಡ ಸಮಸ್ಯೆಯಾಗಿದೆ. ಹೊಸ ಕೂದಲು ಹುಟ್ಟಲು ಕಷ್ಟದಾಯಕವಾದ ಮತ್ತು ಪದೇ ಪದೇ ಕೂದಲು ಉದುರಿ ತಲೆ ಬೋಳಾಗುವ ಸನ್ನಿವೇಶವು ಪುರುಷರಿಗೆ ದೊಡ್ಡ ಸವಾಲು ಮತ್ತು ಕ್ಲಿಷ್ಟಕರವಾದದ್ದು. ಈ ಸಮಸ್ಯೆಯು ಬಹಳ ಕಾರಣಗಳಿಂದಾಗಿ ಬರಬಹುದು, ವಯಸ್ಸು, ಅನಾರೋಗ್ಯ, ಕೆಟ್ಟ ನೀರಿನ ಬಳಕೆ, ಕೊಳಕುತನ ಇತ್ಯಾದಿ.

ಕೆಲವು ತಿಳುವಳಿಕೆ ಇರುವವರ ಸಹಾಯದಿಂದಾಗಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು, ಆದರೆ ಇದು ದುಬಾರಿ ಮತ್ತು ಸಮಯವನ್ನು ತಿನ್ನುತ್ತದೆ. ಥೆರಪಿಗಳಿಗೆ ಒಳಪಟ್ಟರೆ ಪದೇ ಪದೇ ವೈದ್ಯರ ಬಳಿ ತೆರಳುತ್ತಲೇ ಇರಬೇಕಾಗುತ್ತದೆ.

ಡಯಟ್ ಸರಿಯಾಗಿ ಮಾಡುವುದು ಮತ್ತೊಂದು ಪ್ರಮುಖ ವಿಚಾರವಾಗಿದೆ. ಆಹಾರ ಕ್ರಮವು ನೇರವಾಗಿ ಕೂದಲಿನ ಮೇಲೆ ಪರಿಣಾಮ ಬೀರುತ್ತೆ. ಅನಾರೋಗ್ಯಕಾರಿ ಆಹಾರ ಸೇವನೆ ಮತ್ತು ಫಾಸ್ಟ್ ಫುಡ್, ಜಂಕ್ ಫುಡ್ ಗಳ ಸೇವನೆಯು ಕೂದಲನ್ನು ತೆಳುಗೊಳಿಸುತ್ತೆ ಯಾಕೆಂದರೆ ದೇಹಕ್ಕೆ ಸರಿಯಾದ ಪ್ರಮಾಣದ ಮಿನರಲ್ಸ್ ಮತ್ತು ಪ್ರೋಟೀನ್ ಗಳು ಲಭ್ಯವಾಗದೇ ಕೂದಲ ಬೆಳವಣಿಗೆ ಮತ್ತು ಆರೋಗ್ಯ ಕುಂಠಿತಗೊಳ್ಳುತ್ತೆ.

ನೀವೇನಾದರೂ ಸಮಯ ಮತ್ತು ಹಣವನ್ನು ಹೆಚ್ಚು ವ್ಯರ್ಥ ಮಾಡದೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ..

ಹಾಗಾದ್ರೆ ಇಲ್ಲಿ ಕೆಲವು ಹೇರ್ ಡೈ ಗಳನ್ನು ಬರೆಯಲಾಗಿದೆ. ಇವು ಕೂದಲು ಉದುರುವಿಕೆಯನ್ನು ತಡೆಗಟ್ಟಿ , ಒಳ್ಳೆಯ ರೀತಿಯಲ್ಲಿ ಕೂದಲಿನ ಬೆಳವಣಿಗೆಯಾಗಲು ನೆರವಾಗುತ್ತವೆ.

1. ಬೀಟ್ ರೂಟ್ ಮತ್ತು ಮೆಹಂದಿ ಹೇರ್ ಪ್ಯಾಕ್

1. ಬೀಟ್ ರೂಟ್ ಮತ್ತು ಮೆಹಂದಿ ಹೇರ್ ಪ್ಯಾಕ್

ಬೀಟ್ ರೂಟ್ ನಲ್ಲಿ ಉತ್ತಮ ಪ್ರಮಾಣದಲ್ಲಿ ಫೋಲೀಕ್ ಆಸಿಡ್,ವಿಟಮಿನ್ ಬಿ6, ಕಬ್ಬಿಣಾಂಶ, ಇತ್ಯಾದಿಗಳಿದ್ದು, ಇವೆಲ್ಲ ಪೋಷಕಾಂಶಗಳು ಕೂದಲಿನ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತವೆ. ಮೆಹಂದಿಯು ನೆತ್ತಿಯಲ್ಲಿ ಹೋಲುಗಳಾಗುವುದನ್ನು ತಡೆಯುತ್ತದೆ. ಪಿಎಚ್ ಲೆವೆಲ್ ನ್ನು ತಹಬದಿಯಲ್ಲಿಟ್ಟು, ನಿಮ್ಮ ಕೂದಲು ಸರಿಯಾಗಿ ಬೆಳವಣಿಗೆ ಹೊಂದುವಂತೆ ನೋಡಿಕೊಳ್ಳುತ್ತೆ ಮತ್ತು ಕೂದಲು ತುಂಡಾಗುವುದನ್ನು ಇದು ನಿಯಂತ್ರಿಸುತ್ತೆ.

ಬೇಕಾಗುವ ವಸ್ತುಗಳು :

ಬೀಟ್ ರೂಟ್ ಎಲೆಗಳು -2 ರಿಂದ 3

ಬೀಟ್ ರೂಟ್ -ಅರ್ಧ

ಮೆಹಂದಿ ಎಲೆಗಳು -2-3

ಮಾಡುವ ವಿಧಾನ :

ಬೀಟ್ ರೂಟ್ ಮತ್ತು ಮೆಹಂದಿ ಎಲೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ, ಮತ್ತು ಅರ್ಧ ಬೀಟ್ ರೂಟ್ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ, ಅದನ್ನು ತಲೆಗೆ ಹಚ್ಚಿ ಸುಮಾರು 20 ನಿಮಿಷ ಹಾಗೆಯೇ ಬಿಡಿ. ನಂತರ ಸೌಮ್ಯ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ

2. ಸಿಟ್ರಸ್ ಹಣ್ಣುಗಳು

2. ಸಿಟ್ರಸ್ ಹಣ್ಣುಗಳು

ಸಿಟ್ರಸ್ ಗಳಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿರುತ್ತೆ. ಅಷ್ಟೇ ಅಲ್ಲ ಅದರಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳನ್ನು ಅವುಗಳು ನೆತ್ತಿಯ ರಂಧ್ರಗಳನ್ನು ತೆರೆಯಲು ಸಹಾಯ ಮಾಡುತ್ತೆ. ಹಾಗಾಗಿ ಯಾವುದೇ ಬ್ಯಾಕ್ಟೀರಿಯಾ ಅಥವಾ ಫಂಗಲ್ ಸೋಂಕು ತಗುಲದಂತೆ ನೋಡಿಕೊಳ್ಳುತ್ತೆ. ನಿಂಬೆ, ಕಿತ್ತಲೆ, ಮೂಸಂಬಿ, ಕಿವಿಫ್ರೂಟ್,ಇತ್ಯಾದಿಗಳು ನೆತ್ತಿಯನ್ನು ಸ್ವಚ್ಛಗೊಳಿಸಲು ಸಹಕಾರಿಯಾಗಿದ್ದು ಕೂದಲಿನ ಬೆಳವಣಿಗೆ ಮತ್ತು ಕೂದಲನ್ನು ಬಲಿಷ್ಟಗೊಳಿಸಲು ನೆರವಾಗುತ್ತೆ.

ಬೇಕಾಗುವ ವಸ್ತುಗಳು :

ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ

ಮೂಸಂಬಿ - 1

ನಿಂಬೆ -2 ರಿಂದ 3

ಕಿವಿ - 1

ಮಾಡುವ ವಿಧಾನ :

ಹಣ್ಣನ್ನು ಕಿವುಚಿ ರಸವನ್ನು ತೆಗೆದುಕೊಳ್ಳಿ. ಆ ರಸವನ್ನು ನಿಮ್ಮ ಕೂದಲಿನ ಚರ್ಮದ ಭಾಗಕ್ಕೆ ಅಪ್ಲೈ ಮಾಡಿ. 15 ರಿಂದ 20 ನಿಮಿಷ ಅದನ್ನು ಮುಟ್ಟಬೇಡಿ. ಸೌಮ್ಯ ಶಾಂಪೂ ಬಳಸಿ ನಂತರ ಅದನ್ನು ತೊಳೆದುಕೊಳ್ಳಿ.

3. ಕೂದಲುದುರುವಿಕೆ ಮತ್ತು ಕೂದಲಿನ ಬೆಳವಣಿಗೆಗಾಗಿ ದಾಸವಾಳ

3. ಕೂದಲುದುರುವಿಕೆ ಮತ್ತು ಕೂದಲಿನ ಬೆಳವಣಿಗೆಗಾಗಿ ದಾಸವಾಳ

ಅಮೈನೋ ಆಸಿಡ್ ಮತ್ತು ವಿಟಮಿನ್ ಸಿಗಳನ್ನು ನೀಡಿ ದಾಸವಾಳವು ನಿಮ್ಮ ಕೂದಲುದುರುವಿಕೆ ಮತ್ತು ಕೂದಲಿನ ಸಮಸ್ಯೆಯನ್ನು ನಿವಾರಿಸಿ ಕೂದಲು ಆರೋಗ್ಯವಾಗಿ ಬೆಳೆಯಲು ನೆರವಾಗುತ್ತೆ. ಅಷ್ಟೇ ಅಲ್ಲ, ನಿಮ್ಮ ಕೂದಲು ಶುಷ್ಕವಾಗಿದ್ದರೆ ಇದೊಂದು ಬೆಸ್ಟ್ ಕಂಡೀಷನರ್ ನಂತೆ ಕೆಲಸ ನಿರ್ವಹಿಸುತ್ತೆ.,

ಬೇಕಾಗುವ ವಸ್ತುಗಳು:

ದಾಸವಾಳದ ಹೂವು 1 ರಿಂದ 2

ಮಾಡುವ ವಿಧಾನ :

ದಾಸವಾಳದ ಹೂವನ್ನು ನೀರನ್ನು ಬೆರೆಸಿ ಮಿಕ್ಸಿ ಮಾಡಿ. ಅದನ್ನು ಕೂದಲಿಗೆ ಅಪ್ಲೈ ಮಾಡಿ20 ನಿಮಿಷ ಹಾಗೆಯೇ ಬಿಟ್ಟು ಒಣಗಿಸಿ. ನಂತರ ಸ್ವಚ್ಛ ನೀರಿನಿಂದ ತೊಳೆಯಿರಿ.

4. ಈರುಳ್ಳಿ ರಸ

4. ಈರುಳ್ಳಿ ರಸ

ಕೂದಲಿನ ಬೆಳವಣಿಗೆಗೆ ಬಹಳ ಸಹಾಯಕವಾಗಿರುವ ತರಕಾರಿಗಳಲ್ಲಿ ಈರುಳ್ಳಿಯೂ ಒಂದು.ಯಾವುದೇ ಡ್ಯಾಮೇಜ್ ಆಗದಂತೆ ಕೂದಲನ್ನು ರಕ್ಷಿಸುವಲ್ಲಿ ಇದು ನೆರವಾಗುತ್ತೆ. ತಲೆಹೊಟ್ಟು ತಡೆಯಲು ಸಹಕಾರಿಯಾಗಿದೆ. ಇದರಲ್ಲಿ ಸಲ್ಫರ್ ಅಂಶವಿದ್ದು, ಅದು ನೆತ್ತಿಯ ರಂಧ್ರಗಳಲ್ಲಾಗುವ ಸೋಂಕನ್ನು ನಿವಾರಿಸುತ್ತೆ.

ಬೇಕಾಗುವ ವಸ್ತುಗಳು :

ಈರುಳ್ಳಿ -1

ಮಾಡುವ ವಿಧಾನ :

ಈರುಳ್ಳಿ ಸಿಪ್ಪೆ ಬಿಡಿಸಿ,ನಾಲ್ಕು ಹೋಳುಗಳನ್ನಾಗಿ ಮಾಡಿ. ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಮಿಕ್ಸಿ ಮಾಡಿ. ಅದನ್ನು ಒಳ್ಳೆಯ ಬಟ್ಟೆಯಲ್ಲಿ ಸೋಸಿ ರಸ ತೆಗೆಯಿರಿ. ನಿಮ್ಮ ಕೂದಲಿಗೆ ಈರುಳ್ಳಿ ಅಂಶಗಳು ಅಂಟಿ ಅಸಹ್ಯವಾಗಬಾರದು ಅನ್ನುವ ಕಾರಣಕ್ಕೆ ಈ ವಿಧಾನ. ಈ ಮಿಶ್ರಣವನ್ನು ತಲೆಗೆ ಹಚ್ಚಿ 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.

5. ತೆಂಗಿನ ಎಣ್ಣೆ

5. ತೆಂಗಿನ ಎಣ್ಣೆ

ಇದು ಪ್ರಯೋಗಿಸಿದ ಮತ್ತು ಪರಿಶೀಲಿಸಿದ ಒಂದು ಅತ್ಯುತ್ತಮ ವಿಧಾನವಾಗಿದೆ. ಪ್ರತಿಯೊಬ್ಬರೂ ಈ ಎಣ್ಣೆಯನ್ನು ಖಂಡಿತ ಒಂದಲ್ಲ ಒಂದು ಬಾರಿ ಕೂದಲಿಗೆ ಹಚ್ಚಿರುತ್ತಾರೆ. ತೆಂಗಿನ ಎಣ್ಣೆ ಮತ್ತು ಹಾಲು ಪ್ರೋಟೀನ್ ನಿಂದ ಕೂಡಿದೆ ಮತ್ತು ಇದು ಕೂದಲನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ.ಇದು ಕೂದಲನ್ನು ಹೊಳೆಯುವಂತೆ ಮಾಡುತ್ತೆ ಮತ್ತು ಬಲಿಷ್ಟಗೊಳಿಸುತ್ತೆ.

ಬೇಕಾಗುವ ಸಾಮಗ್ರಿಗಳು :

ತೆಂಗಿನ ಎಣ್ಣೆ ಅಥವಾ ತೆಂಗಿನ ಹಾಲು -1 ಕಪ್

ಮಾಡುವ ವಿಧಾನ :ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚಿ ಸುಮಾರು 15 ನಿಮಿಷ ಮಸಾಜ್ ಮಾಡಿ. ಒಂದು ರಾತ್ರಿ ಹಾಗೆಯೇ ಕೂದಲಲ್ಲಿ ಇರಲು ಬಿಡಿ.ಬೆಳಿಗ್ಗೆ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ವಾರಕ್ಕೆ 3 ಬಾರಿ ಹೀಗೆ ಮಾಡಿ.

6. ಗ್ರೀನ್ ಟೀ

6. ಗ್ರೀನ್ ಟೀ

ಗ್ರೀನ್ ಟೀ ದೇಹಕ್ಕೆ ಮತ್ತು ಕೂದಲಿಗೆ ಎರಡಕ್ಕೂ ಬಹಳ ಒಳ್ಳೆಯದು.ಆಂಟಿ ಇನ್ ಫ್ಲಮೇಟರಿ ಗುಣಗಳು ಇದರಲ್ಲಿದ್ದು, ನೆತ್ತಿಯಲ್ಲಿ ವಾಸಿಸುವ ಪರಾವಲಂಬಿಗಳ ನಾಶಕ್ಕೆ ಇದು ಸಹಕಾರಿ. ನೆತ್ತಿಯಲ್ಲಿ ಇದು ರಕ್ತಸಂಚಾರವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಗ್ರೀನ್ ಟೀ ನೀವು ಕುಡಿಯಲೂ ಬಹುದು ಮತ್ತು ಅದನ್ನೂ ಕೂದಲಿಗೂ ಅಪ್ಲೈ ಮಾಡಬಹುದು.

ಬೇಕಾಗುವ ವಸ್ತುಗಳು :

ಗ್ರೀನ್ ಟೀ - 3 ರಿಂದ 4 ಟೀ ಬ್ಯಾಗ್

ನೀರು -ಅರ್ಧ ಲೀಟರ್

ಮಾಡುವ ವಿಧಾನ :

ಅರ್ಧ ಲೀಟರ್ ನೀರಿನಲ್ಲಿ ಮೂರರಿಂದ ನಾಲ್ಕು ಟೀ ಬ್ಯಾಗ್ ಗಳನ್ನು ಡಿಪ್ ಮಾಡಿ ನಂತರ ಅದನ್ನು ಬಳಸಿ ನಿಮ್ಮ ಕೂದಲನ್ನು ತೊಳೆಯಿರಿ. 10 ನಿಮಿಷ ಹಾಗೆಯೇ ಬಿಟ್ಟು ನಂತರ ಸ್ವಚ್ಛ ನೀರಿನಿಂದ ಮತ್ತೆ ಕೂದಲನ್ನು ತೊಳೆಯರಿ

7. ಬೇವಿನ ನೀರು

7. ಬೇವಿನ ನೀರು

ಬೇವು ಭಾರತೀಯರ ಮೆಚ್ಚಿನ ಗಿಡವಾಗಿದ್ದು, ಇದು ಕೂದಲಿನ ಎಲ್ಲಾ ರೀತಿಯ ಸಮಸ್ಯೆಗೂ ಪರಿಹಾರ ನೀಡಬಲ್ಲದು. ಕೂದಲಿನ ಕೊಳೆ,ಜಿಡ್ಡಿನಂಶ, ಸೋಂಕು, ಮತ್ತು ನೆತ್ತಿಯಲ್ಲಿನ ಪದರಗಳನ್ನು ತೆಗೆಯಲು ಇದು ಸಹಕಾರಿ.ಇದು ರಂಧ್ರಗಳನ್ನು ತೆರೆಯುವಂತೆ ಮಾಡಿ, ಯಾವುದೇ ಅಡ್ಡಪರಿಣಾಮಗಳನ್ನು ಮಾಡದೆ ಕೂದಲಿನ ಬೆಳವಣಿಗೆಗೆ ಸಹಕರಿಸುತ್ತೆ

ಬೇಕಾಗುವ ವಸ್ತುಗಳು :

ಬೇವಿನ ಎಲೆಗಳು -12 ರಿಂದ 15

ಮಾಡುವ ವಿಧಾನ :

ಬೇವಿನ ಎಲೆಗಳನ್ನು ಹಾಕಿ ನೀರನ್ನು ಕಾಯಿಸಿ ನಂತರ ಅದು ತಣಿಯಲು ಬಿಡಿ. ಆ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ., 10 ನಿಮಿಷ ಕಾಯಿರಿ. ನಂತರ ಸ್ವಚ್ಛ ನೀರಿನಿಂದ ಕೂದಲನ್ನು ತೊಳೆಯಿರಿ.

ಕೂದಲುದುರುವಿಕೆ ತಡೆಯಲು ಕೆಲವು ಸಿಂಪಲ್ ಸಲಹೆಗಳು

. ಕೂದಲನ್ನು ಬಾಚಲು ಮೃದುವಾದ ಬಾಚಣಿಗೆ ಬಳಸಿ

. ಅಗಲ ಹಲ್ಲುಗಳಿರುವ ಬಾಚಣಿಗೆ ಬಳಸಿ

. ಗಿಡಮೂಲಿಕೆಗಳಿಂದ ತಯಾರಿಸಿದ ಸೌಮ್ಯ ಶಾಂಪೂ ಬಳಸಿ

. ಕೂದಲಿನ ಸಂಬಂಧಿಸಿದ ಪ್ರೊಡಕ್ಟ್ ಗಳನ್ನು ಕಡಿಮೆ ಬಳಸಿ

. ಅತಿಯಾಗಿ ತಲೆ ಬಾಚುವುದನ್ನು ನಿಲ್ಲಿಸಿ

. ಸೂರ್ಯನ ಕಿರಣಗಳಡಿ ಹೋಗುವಾಗ ಅಂದರೆ ಹೊರಗಡೆ ಹೋಗುವಾಗ ಆದಷ್ಟು ಟೊಪ್ಪಿ ಹಾಕಿಕೊಳ್ಳಿ

. ನಿಮ್ಮ ಕೂದಲಿನ ಬಗ್ಗೆ ನೀವು ಮೃದುವಾಗಿರಿ.

English summary

DIY TIPS TO PREVENT HAIR FALL BALDNESS IN MEN

Hair loss is one of the major hair-related problems that a lot of men face. This can be very embarrassing, as the men suffering from such problems tend to lose their hair continuously and it becomes very tough to grow new hair. This problem can occur because of various factors such as age, poor health, usage of poor quality water, bad hygiene, etc
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more