For Quick Alerts
ALLOW NOTIFICATIONS  
For Daily Alerts

ಕೂದಲಿನ ಸರ್ವ ರೋಗಕ್ಕೂ ಸರಳವಾಗಿ ಮಾಡಬಹುದಾದ 'ಬೇವಿನ ಟಾನಿಕ್' !

By Hemanth
|

ಪ್ರತಿಯೊಬ್ಬರಿಗೂ ಕೂದಲು ಉದುರುವ, ತುಂಡಾಗುವ ಸಮಸ್ಯೆಯು ಇರುವುದು. ಇಂತಹ ಸಮಸ್ಯೆಗಳು ತಲೆಬುರುಡೆಯಲ್ಲಿ ಮೊಶ್ಚಿರೈಸರ್ ಕಡಿಮೆಯಾಗುವುದರಿಂದ ಕಾಣಿಸಿಕೊಳ್ಳುವುದು. ಇದಕ್ಕಾಗಿ ಕೆಲವರು ಹೇರ್ ಟಾನಿಕ್ ಬಳಕೆ ಮಾಡುವರು. ಈ ಹೇರ್ ಟಾನಿಕ್ ಗಳು ಫ್ರೀ ರ್ಯಾಡಿಕಲ್ ಮತ್ತು ವಾತಾವರಣದಲ್ಲಿನ ಬದಲಾವಣೆಗಳಿಂದ ಕೂದಲಿನ ರಕ್ಷಣೆ ಮಾಡುವುದು. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಹೇರ್ ಟಾನಿಕ್ ಗಳು ಲಭ್ಯವಿದೆ. ಆದರೆ ಹೆಚ್ಚಿನ ಹೇರ್ ಟಾನಿಕ್ ಗಳಲ್ಲಿ ರಾಸಾಯನಿಕ ಬಳಕೆ ಮಾಡಲಾಗುತ್ತದೆ. ಇದರಿಂದ ದೀರ್ಘಾವಧಿಗೆ ಇದು ನಿಮ್ಮ ಕೂದಲಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಇಂತಹ ರಾಸಾಯನಿಕಯುಕ್ತ ಹೇರ್ ಟಾನಿಕ್ ಬದಲಿಗೆ ಕೆಲವು ನೈಸರ್ಗಿಕವಾದ, ಮನೆಯಲ್ಲೇ ತಯಾರಿಸಿದ ಹೇರ್ ಟಾನಿಕ್ ಬಳಸಿದರೆ ಅದರಿಂದ ಕೂದಲು ಸುರಕ್ಷಿತವಾಗಿರುವುದು ಮತ್ತು ಯಾವುದೇ ಅಡ್ಡಪರಿಣಾಮಗಳು ಆಗದು. ನೀವೇ ತಯಾರಿಸಬಹುದಾದ ಹೇರ್ ಟಾನಿಕ್ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಈ ಲೇಖನದಲ್ಲಿ ಹೇಳಿಕೊಡಲಿದೆ.

hair care tips

ಕೂದಲಿನ ಸರ್ವ ರೋಗಕ್ಕೂ ಬೇವಿನ ಟಾನಿಕ್

ಬೇವಿನ ಎಲೆಗಳ ಹುಡಿಯಿಂದ ಮಾಡಿರುವ ಹೇರ್ ಟಾನಿಕ್ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಕೂದಲಿನ ಹಲವಾರು ಸಮಸ್ಯೆಗಳಿಗೆ ಮತ್ತು ಕೂದಲು ಆರೋಗ್ಯಕರ ಹಾಗೂ ಬಲಿಷ್ಠವಾಗಿ ಬೆಳೆಯಲು ಪ್ರಮುಖವಾದ ಸಾಮಗ್ರಿಯೇ ಬೇವಿನ ಎಲೆಗಳು. ನೈಸರ್ಗಿಕದತ್ತ ಬೇವಿನ ಎಲೆಗಳಿಂದ ಮಾಡುವಂತಹ ಹೇರ್ ಟಾನಿಕ್ ಯಾವುದೇ ಅಡ್ಡಪರಿಣಾಮ ಬೀರದು. ಇದು ತಲೆಬುರುಡೆಯ ಸಮತೋಲನ ಕಾಪಾಡಿಕೊಂಡು ಅದನ್ನು ಮೊಶ್ಚಿರೈಸ್ ಆಗಿ ಇಟ್ಟು, ಶಿಲೀಂಧ್ರಿಯ ಸೋಂಕಿನಿಂದ ಕಾಪಾಡುವುದು. ಈ ಹೇರ್ ಟಾನಿಕ್ ಕೂದಲಿನ ಕೋಶಗಳನ್ನು ಬಲಗೊಳಿಸಿ, ಹೊಸ ಕೂದಲು ಬೆಳೆಯಲು ನೆರವಾಗುವುದು.

ಬೇಕಾಗಿರುವ ಸಾಮಗ್ರಿಗಳು

ಬೇಕಾಗಿರುವ ಸಾಮಗ್ರಿಗಳು

  • 1 ಕಪ್ ಶುದ್ಧೀಕರಿಸಿದ ನೀರು
  • 1 ಚಮಚ ಬೇವಿನ ಎಲೆ ಹುಡಿ
  • 1 ಚಮಚ ಚೆಂಡುಹೂವಿನ ಹುಡಿ
  • 5-6 ಚಮಚ ರೋಸ್ಮೆರಿ ಎಣ್ಣೆ
  • 5-6 ಚಮಚ ಮಿರ್ಹ್ ಸಾರಭೂತ ತೈಲ
  • 1 ಚಮಚ ಬಾದಾಮಿ ಎಣ್ಣೆ
  • ತಯಾರಿಸುವ ವಿಧಾನ

    ತಯಾರಿಸುವ ವಿಧಾನ

    * ಒಂದು ಪಾತ್ರೆಯಲ್ಲಿ ನೀರು ಹಾಕಿ ಮತ್ತು ಕುದಿಸಿ

    * ಬೇವಿನ ಎಲೆಗಳ ಮತ್ತು ಚೆಂಡುಹೂವಿನ ಹುಡಿ ಹಾಕಿ.

    * ಪಾತ್ರೆಗೆ ಮುಚ್ಚಲ ಹಾಕಿ, ಕುದಿಯಲು ಬಿಡಿ.

    * 5-10 ನಿಮಿಷ ಬಳಿಕ ಪಾತ್ರೆಯನ್ನು ಬೆಂಕಿಯಿಂದ ತೆಗೆಯಿರಿ.

    * ಇದು ತಣ್ಣಗಾಗಲು ಬಿಡಿ.

    * ತಯಾರಾದ ಬಳಿಕ ಸಾರಭೂತ ತೈಲ ಮತ್ತು ಬಾದಾಮಿ ತೈಲ ಹಾಕಿ.

    * ಸರಿಯಾಗಿ ಕಲಸಿಕೊಂಡು ಟಾನಿಕ್ ನ್ನು ಗಾಜಿನ ಬಾಟಲಿಗೆ ಹಾಕಿಡಿ.

    ಬಳಸುವುದು ಹೇಗೆ

    ಬಳಸುವುದು ಹೇಗೆ

    * ಸ್ವಚ್ಛ ಹಾಗೂ ಒಣ ಕೂದಲಿಗೆ ಈ ಟಾನಿಕ್ ಹಚ್ಚಿ.

    * 2-3 ಹನಿ ಟಾನಿಕ್ ನ್ನು ನಿಮ್ಮ ಅಂಗೈಗೆ ಹಾಕಿಕೊಳ್ಳಿ.

    * ಸರಿಯಾಗಿ ಉಜ್ಜಿಕೊಂಡ ಬಳಿಕ ತಲೆಬುರುಡೆಗೆ ಮಸಾಜ್ ಮಾಡಿ.

    * ನಿಧಾನವಾಗಿ ಮಸಾಜ್ ಮಾಡಿದ ಬಳಿಕ ಕೂದಲು ಬಾಚಿಕೊಳ್ಳಿ.

    * ದಿನಪೂರ್ತಿ ಟಾನಿಕ್ ಕೂದಲಿನಲ್ಲಿ ಹಾಗೆ ಇರಲಿ.

    ವಾರದಲ್ಲಿ 3-4 ಸಲ ಇದನ್ನು ಬಳಸಿ

    ಪರಿಣಾಮಕಾರಿ ಮತ್ತು ವೇಗದ ಫಲಿತಾಂಶಕ್ಕಾಗಿ ವಾರದಲ್ಲಿ 3-4 ಸಲ ಇದನ್ನು ಬಳಸಿ.

    ಬಳಸಿದ ಸಾಮಗ್ರಿಗಳ ಲಾಭಗಳು

    ಬೇವಿನ ಎಲೆ

    ಬೇವಿನ ಎಲೆ

    ತಲೆಬುರುಡೆಯ ಸ್ವಚ್ಛಗೊಳಿಸಲು ಬಳಸುವಂತಹ ನೈಸರ್ಗಿಕ ಸಾಮಗ್ರಿಯಾಗಿರುವ ಬೇವಿನ ಎಲೆಗಳು ಕೂದಲು ಆರೋಗ್ಯಕರ ಹಾಗೂ ಬಲವಾಗಿ ಬೆಳೆಯಲು ಇದು ನೆರವಾಗುವುದು. ಇದು ಕೂದಲಿಗೆ ಆಳವಾಗಿ ಮೊಶ್ಚಿರೈಸ್ ನೀಡುವುದು. ಇದರಿಂದ ಒಣ ಹಾಗೂ ಗಡಸು ತಲೆಬುರುಡೆ ಸಮಸ್ಯೆ ಕಾಡದು. ಬೇವಿನಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಬುರುಡೆಯನ್ನು ಸೋಂಕಿನಿಂದ ದೂರವಿಡುವುದು.

    ಚೆಂಡು ಹೂ

    ಚೆಂಡು ಹೂ

    ಈ ಹೂ ಪುನರ್ ಶ್ಚೇತನಗೊಳಿಸುವ ಗುಣ ಹೊಂದಿದೆ. ಇದು ಕೂದಲು ಉದುರುವಿಕೆಗೆ ಮಾತ್ರವಲ್ಲದೆ ಹೊಸ ಹಾಗೂ ಆರೋಗ್ಯಕರ ಕೂದಲು ಬೆಳೆಯಲು ನೆರವಾಗುವುದು. ತಲೆಹೊಟ್ಟು ಮತ್ತು ತಲೆಬುರುಡೆಯ ಸೋಂಕನ್ನು ಇದು ನಿವಾರಣೆ ಮಾಡುವುದು. ಇದು ಕೂದಲಿನ ಕೋಶಗಳನ್ನು ಬಲಗೊಳಿಸಿ, ತುಂಡಾಗುವುದನ್ನು ತಡೆಯುವುದು. ಅಷ್ಟೇ ಅಲ್ಲ ಚೆಂಡು ಹೂವುಗೆ ವೊಲಾಟೈಲ್ ಎಣ್ಣೆ, ಸಾವಯವ ಆಮ್ಲಗಳು ಮತ್ತು ಸ್ಟಿರೋಲ್‍ಗಳು ಇರುತ್ತವೆ. ಇವು ಒಳ್ಳೆಯ ಉಪಶಮನಕಾರಿ ಗುಣಗಳನ್ನು ಹೊಂದಿರುತ್ತವೆ. ತ್ವಚೆಯ ಮೇಲೆ ಕೀಟಾಣುಗಳು ಕಡಿತದಿಂದ, ಸುಟ್ಟ ಗಾಯದಿಂದ ಅಥವಾ ಗಾಯದಿಂದ ತುರಿಕೆ ಉಂಟಾದಲ್ಲಿ ಕ್ಯಾಲೆಂಡುಲದ ಕ್ರೀಮನ್ನು ಹಚ್ಚಿ ತಕ್ಷಣ ಉಪಶಮನವನ್ನು ಪಡೆಯಿರಿ. ಇದರಿಂದ ಗಾಯವು ಬೇಗ ಮಾಯುತ್ತದೆ.

    ರೋಸ್ಮೆರಿ ಎಣ್ಣೆ

    ರೋಸ್ಮೆರಿ ಎಣ್ಣೆ

    ಕೂದಲಿನ ಆರೈಕೆಗೆ ರೋಸ್ಮೆರಿ ಎಣ್ಣೆ ಬಳಸಲಾಗುವುದು. ಇದನ್ನು ತಲೆಬುರುಡೆಗೆ ಹಚ್ಚಿಕೊಂಡರೆ ರಕ್ತಸಂಚಾರವು ಉತ್ತಮವಾಗುವುದು ಮತ್ತು ಆರೋಗ್ಯಕರ ಕೂದಲಿನ ಬೆಳವಣಿಗೆಗೆ ನೆರವಾಗುವುದು. ಕೂದಲು ತೆಳುವಾಗುವುದಕ್ಕೆ ಇದು ಒಳ್ಳೆಯ ಪರಿಹಾರ. ಇದು ಕೂದಲನ್ನು ದಪ್ಪಗೊಳಿಸುವುದು. ತಲೆಬುರುಡೆ ಕೆಂಪಾಗಿಸಿ, ತುರಿಕೆ ಉಂಟುಮಾಡುವ ಇಸಬುನಂತಹ ಶಿಲೀಂಧ್ರ ಸೋಂಕಿಗೆ ಇದು ಪರಿಣಾಮಕಾರಿ.

    ಮಿರ್ಹ್ ಸಾರಭೂತ ತೈಲ

    ಮಿರ್ಹ್ ಸಾರಭೂತ ತೈಲ

    ಒಣ ಕೂದಲಿಗೆ ಹೇಳಿ ಮಾಡಿಸಿದಂತಿರುವ ಮಿರ್ಹ್ ಸಾರಭೂತ ತೈಲವು ಕೂದಲಿನ ಬುಡಕ್ಕೆ ಆಳವಾದ ಪೋಷಣೆ ನೀಡಿ, ಮೊಶ್ಚಿರೈಸ್ ಇರುವಂತೆ ನೋಡಿಕೊಳ್ಳುವುದು. ಈ ಎಣ್ಣೆ ಬಳಸುವುದರಿಂದ ತಲೆಬುರುಡೆಯು ಆರೋಗ್ಯಕರ ಮತ್ತು ಎಲ್ಲಾ ಸಮಯದಲ್ಲೂ ಮೊಶ್ಚಿರೈಸ್ ಆಗಿರುವುದು.

    ಬಾದಾಮಿ ಎಣ್ಣೆ

    ಬಾದಾಮಿ ಎಣ್ಣೆ

    ಒಮೆಗಾ-3 ಕೊಬ್ಬಿನಾಮ್ಲ ಹೊಂದಿರುವ ಬಾದಾಮಿ ಎಣ್ಣೆಯು ಕೂದಲಿನ ಕೋಶಗಳನ್ನು ಪರಿಣಾಮಕಾರಿಯಾಗಿ ಬಲಗೊಳಿಸುವುದು ಮತ್ತು ತುಂಡಾಗದಂತೆ ತಡೆಯುವುದು. ಕೂದಲು ಉದುರುವಿಕೆಗೆ ಇದು ತುಂಬಾ ಪರಿಣಾಮಕಾರಿ ಔಷಧಿ. ಬಾದಾಮಿಯಲ್ಲಿರುವ ವಿಟಮಿನ್ ಹಾಗೂ ಖನಿಜಾಂಶಗಳು ಕೂದಲು ದಪ್ಪ ಹಾಗೂ ಕಾಂತಿಯುತವಾಗುವಂತೆ ಮಾಡುವುದು. ಕೂದಲಿನ ಆರೈಕೆಗೆ ನೀವು ಮನೆಯಲ್ಲೇ ತಯಾರಿಸಿದ ಈ ಹೇರ್ ಟಾನಿಕ್ ಬಳಕೆ ಮಾಡಿಕೊಂಡು ಒಳ್ಳೆಯ ಫಲಿತಾಂಶ ಪಡೆಯಿರಿ. ಬಾದಾಮಿ ಎಣ್ಣೆಯ ಇನ್ನಷ್ಟು ಪ್ರಯೋಜನಗಳು ಸ್ವಲ್ಪ ಬಾದಾಮಿ ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮೃದುವಾದ ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ. ರೇಷ್ಮೆಯಂತಹ ಕೂದಲನ್ನು ಪಡೆಯಲು ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ. ಕೂದಲ ಹೊಳಪನ್ನೂ ಹೆಚ್ಚಿಸುತ್ತದೆ!... ಹೌದು, ಕೂದಲ ಹೊಳಪು ಹೆಚ್ಚಿಸಲು ಇದುವರೆಗೆ ಹಲವು ಚಿಕಿತ್ಸೆ ಅಥವಾ ಸೀರಂಗಳನ್ನು ನೀವು ಉಪಯೋಗಿಸಿದ್ದಿರಬಹುದು. ಆದರೆ ಇದಕ್ಕೂ ಉತ್ತಮ ಪೋಷಣೆಯನ್ನು ಬಾದಾಮಿ ಎಣ್ಣೆ ನೀಡುತ್ತದೆ. ಇದಕ್ಕಾಗಿ ಸ್ನಾನದ ಬಳಿಕ ಕೂದಲು ಒದ್ದೆ ಇದ್ದಂತೆಯೇ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಕೂದಲ ಬುಡದಿಂದ ತುದಿಯವರೆಗೂ ನಯವಾಗಿ ಹಚ್ಚಿ. ಇದರಿಂದ ಕೂದಲು ರೇಶ್ಮೆಯಂತೆ ಹೊಳೆಯುತ್ತದೆ ಹಾಗೂ ದೃಢವಾಗುತ್ತದೆ.

English summary

DIY Leave-in Neem Hair Tonic For Long And Strong Hair

Leave-in hair tonics can optimize moisture balance in the scalp and protect your hair from the damaging free radicals or environmental factors. You can make a hair tonic at home using neem leaves. Used extensively for hair care purposes, neem is a true favourite remedy for treating a myriad of hair problems and encouraging the growth of healthy and strong hair.
X
Desktop Bottom Promotion