For Quick Alerts
ALLOW NOTIFICATIONS  
For Daily Alerts

ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಮೊಟ್ಟೆಯ ಹೇರ್ ಪ್ಯಾಕ್

By Divya Pandith
|

ಒರಟಾದ ಕೇಶರಾಶಿಗೆ ನಯವಾದ ಆರೈಕೆ

ಕೇಶರಾಶಿಗೆ ಉತ್ತಮ ಆರೈಕೆ ಮಾಡುವುದು ಮೊಟ್ಟೆ

ಮೊಟ್ಟೆಯಿಂದ ಕೇಶರಾಶಿಗೆ ಆರೈಕೆಮಾಡಿ.

ನಿಮ್ಮ ಕೇಶರಾಶಿಯು ಮೃದುವಾಗಿ, ಆಕರ್ಷಕವಾಗಿರಬೇಕೇ? ಹಾಗಾದರೆ ಮೊಟ್ಟೆಯ ಥೆರಪಿ ಮಾಡಿ...

ಸೌಂದರ್ಯದ ವರ್ಧನೆ ಅಥವಾ ಆಕರ್ಷಣೆಯಲ್ಲಿ ಕೇಶರಾಶಿಯ ಪಾತ್ರವೂ ಮಹತ್ವವಾಗಿರುತ್ತದೆ. ನಯವಾದ ಕೂದಲು, ಹೊಳಪಿನಿಂದ ಆಕರ್ಷಣೆಗೆ ಒಳಗಾಗುವಂತೆ ಮಾಡುತ್ತದೆ. ಅದೇ ಒರಟಾದ ಕೇಶರಾಶಿಯು ನಮ್ಮ ಸಂಪೂರ್ಣ ನೋಡವನ್ನೇ ಅನಪೇಕ್ಷಿತ ರೀತಿಯಲ್ಲಿ ಹಾಳುಮಾಡುತ್ತದೆ. ಕೇಶರಾಶಿಯ ಒರಟು ತನಕ್ಕೆ ಅನೇಕ ಕಾರಣಗಳಿರಬಹುದು. ಅದಕ್ಕೆ ಚಿಂತಿಸುತ್ತಾ ಸಮಯವನ್ನು ಹಾಳು ಮಾಡುವ ಬದಲು ಅದರ ಆರೈಕೆ ಅಥವಾ ಆಕರ್ಷಕ ಕೇಶರಾಶಿಯನ್ನು ಪಡೆಯುವುದು ಹೇಗೆ? ಎನ್ನುವುದನ್ನು ತಿಳಿದುಕೊಳ್ಳಬೇಕು.

Egg White Hair Masks That Can Make Rough Hair Soft

ಕೇಶರಾಶಿಯ ಆರೈಕೆಗೆ ಹಲವಾರು ವಿಧಾನಗಳಿವೆ. ಅವುಗಳ ಮೊರೆ ಹೋದರೆ ಅನೇಕ ಸಮಯವನ್ನು ವ್ಯಯಿಸಬೇಕಾಗುವುದು. ಬಹು ಬೇಗ ಕೂದಲುಗಳನ್ನು ಮೃದುಗೊಳಿಸಿ, ಸದಾ ಕಂಗೊಳಿಸುವಂತೆ ಮಾಡಬಹುದಾದ ಶಕ್ತಿ ಇರುವ ಘಟಕ ಎಂದರೆ ಮೊಟ್ಟೆಯಲ್ಲಿರುವ ಬಿಳಿ ಭಾಗ. ಹೌದು, ಸಮೃದ್ಧವಾದ ಪ್ರೋಟೀನ್ ಮತ್ತು ಆಂಟಿ ಆಕ್ಸಿಡೆಂಟ್‍ಗಳನ್ನು ಒಳಗೊಂಡಿರುವ ಮೊಟ್ಟೆಯ ಬಿಳಿಭಾಗವು ಕೇಶ ರಾಶಿಗೆ ಅತ್ಯುತ್ತಮ ಆರೈಕೆ ಮಾಡುತ್ತದೆ.

ನಿಮಗೂ ಕಡಿಮೆ ಸಮಯದಲ್ಲಿ ನಿಮ್ಮ ಕೇಶರಾಶಿಯನ್ನು ಸುಂದರ ಹಾಗೂ ಆರೋಗ್ಯದಿಂದ ಕೂಡಿರುವಂತೆ ಮಾಡಬೇಕು ಎನ್ನುವ ಆಸೆ ಇದ್ದರೆ ಮೊಟ್ಟೆಯ ಬಿಳಿ ಭಾಗ ಮತ್ತು ಕೆಲವು ನೈಸರ್ಗಿಕ ಉತ್ಪನ್ನಗಳನ್ನು ಮಿಶ್ರಣ ಮಾಡುವುದರ ಮೂಲಕ ಕೇಶರಾಶಿಯನ್ನು ಆರೋಗ್ಯದಿಂದ ಕೂಡಿರುವಂತೆ ಮಾಡಬಹುದು. ಅದಕ್ಕಾಗಿ ಸೂಕ್ತ ಮಾಹಿತಿಯನ್ನು ಈ ಮುಂದೆ ನೀಡಲಾಗಿದೆ...

1. ಮೊಟ್ಟೆಯ ಬಿಳಿ ಭಾಗ-ಆಲಿವ್ ಎಣ್ಣೆ+ಜೊಜೊಬಾ ಎಸೆನ್ಸಿಯಲ್ ಎಣ್ಣೆ:

1. ಮೊಟ್ಟೆಯ ಬಿಳಿ ಭಾಗ-ಆಲಿವ್ ಎಣ್ಣೆ+ಜೊಜೊಬಾ ಎಸೆನ್ಸಿಯಲ್ ಎಣ್ಣೆ:

- ಮೊಟ್ಟೆಯ ಬಿಳಿ ಭಾಗಕ್ಕೆ 1 ಟೇಬಲ್ ಚಮಚ ಆಲಿವ್ ಎಣ್ಣೆ ಮತ್ತು 4-5 ಹನಿ ಜೊಜೊಬಾ ಎಸೆನ್ಸಿಯಲ್ ಎಣ್ಣೆ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ.

- ನಂತರ ಶವರ್ ಕವರ್ ಧರಿಸಿ, ಒಂದು ಗಂಟೆಗಳ ಕಾಲ ನೆನೆಯಲು ಬಿಡಿ.

- ಬಳಿಕ ಬೆಚ್ಚಗಿನ ನೀರು ಮತ್ತು ಹರ್ಬಲ್ ಶ್ಯಾಂಪುವಿನ ಸಹಾಯದಿಂದ ಕೇಶರಾಶಿಯನ್ನು ತೊಳೆಯಿರಿ.

2. ಮೊಟ್ಟೆಯ ಬಿಳಿ ಭಾಗ + ಬಾದಾಮಿ ಎಣ್ಣೆ:

2. ಮೊಟ್ಟೆಯ ಬಿಳಿ ಭಾಗ + ಬಾದಾಮಿ ಎಣ್ಣೆ:

- ಒಂದು ಬೌಲ್ ನಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ಮತ್ತು 2 ಟೀ ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ.

- ಒಂದು ಗಂಟೆಗಳ ಕಾಲ ನೆನೆಯಲು ಬಿಡಿ.

- ಬಳಿಕ ಬೆಚ್ಚಗಿನ ನೀರು ಮತ್ತು ನಿತ್ಯ ಬಳಸುವ ಶ್ಯಾಂಪುವಿನ ಸಹಾಯದಿಂದ ಕೇಶರಾಶಿಯನ್ನು ತೊಳೆಯಿರಿ.

3. ಮೊಟ್ಟೆಯ ಬಿಳಿ ಭಾಗ + ಆಪಲ್ ಸೈಡರ್ ವಿನೆಗರ್:

3. ಮೊಟ್ಟೆಯ ಬಿಳಿ ಭಾಗ + ಆಪಲ್ ಸೈಡರ್ ವಿನೆಗರ್:

- ಮೊಟ್ಟೆಯ ಬಿಳಿ ಭಾಗಕ್ಕೆ 1 ಟೀಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ.

- ಒಂದು ಗಂಟೆಗಳ ಕಾಲ ನೆನೆಯಲು ಬಿಡಿ.

- ಬಳಿಕ ಬೆಚ್ಚಗಿನ ನೀರು ಮತ್ತು ನಿತ್ಯ ಬಳಸುವ ಶ್ಯಾಂಪುವಿನ ಸಹಾಯದಿಂದ ಕೇಶರಾಶಿಯನ್ನು ತೊಳೆಯಿರಿ.

4. ಮೊಟ್ಟೆಯ ಬಿಳಿ ಭಾಗ + ಜೇನುತುಪ್ಪ:

4. ಮೊಟ್ಟೆಯ ಬಿಳಿ ಭಾಗ + ಜೇನುತುಪ್ಪ:

- ಒಂದು ಗ್ಲಾಸ್ ಬೌಲ್‍ನಲ್ಲಿ ಮೊಟ್ಟೆಯ ಬಿಳಿ ಭಾಗ ಮತ್ತು 3 ಟೀಚಮಚ ಜೇನುತುಪ್ಪ ಸೇರಿಸಿ, ಚೆನ್ನಾಗಿ ತಿರುವಿ ಮಿಶ್ರಗೊಳಿಸಿ.

- ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.

- ಬಳಿಕ ಒಂದು ಗಂಟೆಗಳ ಕಾಲ ಆರಲು ಬಿಡಿ.

- ಬೆಚ್ಚಗಿನ ನೀರು ಮತ್ತು ನಿತ್ಯ ಬಳಸುವ ಶ್ಯಾಂಪುವಿನ ಸಹಾಯದಿಂದ ಕೇಶರಾಶಿಯನ್ನು ತೊಳೆಯಿರಿ.

5. ಮೊಟ್ಟೆಯ ಬಿಳಿ ಭಾಗ + ಗ್ಲಿಸರಿನ್:

5. ಮೊಟ್ಟೆಯ ಬಿಳಿ ಭಾಗ + ಗ್ಲಿಸರಿನ್:

- ಮೊಟ್ಟೆಯ ಬಿಳಿ ಭಾಗಕ್ಕೆ 1 ಟೀ ಚಮಚ ಗ್ಲಿಸರಿನ್ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ.

- 40-45 ನಿಮಿಷಗಳ ಕಾಲ ಆರಲು ಬಿಡಿ.

- ಬೆಚ್ಚಗಿನ ನೀರು ಮತ್ತು ನಿತ್ಯ ಬಳಸುವ ಶ್ಯಾಂಪುವಿನ ಸಹಾಯದಿಂದ ಕೇಶರಾಶಿಯನ್ನು ತೊಳೆಯಿರಿ.

6. ಮೊಟ್ಟೆಯ ಬಿಳಿ ಭಾಗ + ಆಲೋವೆರಾ:

6. ಮೊಟ್ಟೆಯ ಬಿಳಿ ಭಾಗ + ಆಲೋವೆರಾ:

- ಮೊಟ್ಟೆಯ ಬಿಳಿ ಭಾಗಕ್ಕೆ 2-3 ಟೇಬಲ್ ಚಮಚ ಆಲೋವೆರಾ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ.

- 40-45 ನಿಮಿಷಗಳ ಕಾಲ ಆರಲು ಬಿಡಿ.

- ಬೆಚ್ಚಗಿನ ನೀರು ಮತ್ತು ನಿತ್ಯ ಬಳಸುವ ಶ್ಯಾಂಪುವಿನ ಸಹಾಯದಿಂದ ಕೇಶರಾಶಿಯನ್ನು ತೊಳೆಯಿರಿ.

7. ಮೊಟ್ಟೆಯ ಬಿಳಿ ಭಾಗ + ಗ್ರೀನ್ ಟೀ:

7. ಮೊಟ್ಟೆಯ ಬಿಳಿ ಭಾಗ + ಗ್ರೀನ್ ಟೀ:

- ಒಂದು ಕಪ್ ಸಿಹಿ ರಹಿತವಾದ ಗ್ರೀನ್ ಟೀಗೆ ಮೊಟ್ಟೆಯ ಬಿಳಿ ಭಾಗ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ, ಮಸಾಜ್ ಮಾಡಿ.

- ಉತ್ತಮ ಫಲಿತಾಂಶಕ್ಕೆ 40-45 ನಿಮಿಷಗಳ ಕಾಲ ಆರಲು ಬಿಡಿ.

- ಬೆಚ್ಚಗಿನ ನೀರು ಮತ್ತು ನಿತ್ಯ ಬಳಸುವ ಶ್ಯಾಂಪುವಿನ ಸಹಾಯದಿಂದ ಕೇಶರಾಶಿಯನ್ನು ತೊಳೆಯಿರಿ.

8. ಮೊಟ್ಟೆಯ ಬಿಳಿ ಭಾಗ + ವಿಟಮಿನ್ ಇ ಎಣ್ಣೆ:

8. ಮೊಟ್ಟೆಯ ಬಿಳಿ ಭಾಗ + ವಿಟಮಿನ್ ಇ ಎಣ್ಣೆ:

- ಎರಡು ವಿಟಮಿನ್ ಇ ಮಾತ್ರೆಯ ಎಣ್ಣೆಯನ್ನು ತೆಗೆದು ಮೊಟ್ಟೆಯ ಬಿಳಿ ಭಾಗಕ್ಕೆ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ.

- ಉತ್ತಮ ಫಲಿತಾಂಶಕ್ಕೆ 40 ನಿಮಿಷಗಳ ಕಾಲ ಆರಲು ಬಿಡಿ.

- ಬೆಚ್ಚಗಿನ ನೀರು ಮತ್ತು ನಿತ್ಯ ಬಳಸುವ ಶ್ಯಾಂಪುವಿನ ಸಹಾಯದಿಂದ ಕೇಶರಾಶಿಯನ್ನು ತೊಳೆಯಿರಿ.

English summary

DIY Egg White Hair Masks That Can Make Rough Hair Soft

Here, we've listed some of the best egg white hair masks that you can use for treating rough hair. Easy-to-prepare and inexpensive, these hair masks are far better than commercial hair care products that do more harm than good. Weekly application of any of the below-stated hair masks can help you achieve flaunt-worthy tresses. Take a look at these masks, here:
X
Desktop Bottom Promotion