Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ಕೇಶರಾಶಿಗೆ ತೆಂಗಿನೆಣ್ಣೆಯ ಆರೈಕೆ ಮಾಡಿ, ದಟ್ಟವಾದ ಕೂದಲನ್ನು ಪಡೆಯಿರಿ
ಶುಷ್ಕವಾದ ಕೇಶರಾಶಿ, ಒರಟಾಗುವಿಕೆ, ನಿರ್ಜಲೀಕರಣ ಮತ್ತು ಜೀವ ರಹಿತವಾಗಿ ಕಾಣುತ್ತದೆ. ಕಳೆಗುಂದಿದ ಕೇಶರಾಶಿಯು ಸೌಂದರ್ಯದ ಗುಣಮಟ್ಟವನ್ನು ತಗ್ಗಿಸುತ್ತದೆ. ಮಾಲಿನ್ಯದ ಸಮಸ್ಯೆ, ಅನುಚಿತ ರೀತಿಯ ಕೂದಲ ಆರೈಕೆ ಹಾಗೂ ರಾಸಾಯನಿಕ ಪದಾರ್ಥಗಳಿಂದ ಕೂಡಿರುವ ಶಾಂಪುಗಳ ಬಳಕೆಯು ಕೇಶದ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಕೂದಲ ಸಂರಕ್ಷಣೆ ಮಾಡಲು ಇರುವ ಉತ್ತಮ ವಿಧಾನವೆಂದರೆ ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸುವ ಎಣ್ಣೆಗಳ ಬಳಕೆ.
ಕೂದಲು ಉದುರುವಿಕೆಯನ್ನು ತಡೆಯುವುದು, ದಟ್ಟವಾದ ಮತ್ತು ಕಪ್ಪು ಬಣ್ಣದಿಂದ ಕೂಡಿರುವಂತೆ ಮಾಡುವ ಎಣ್ಣೆಯೆಂದರೆ ತೆಂಗಿನ ಎಣ್ಣೆ. ಚಳಿಗಾಲದಂತಹ ಶುಷ್ಕ ವಾತಾವರಣದಲ್ಲಿ ಕೇಶರಾಶಿಯು ಬಹು ಬೇಗ ಆರೋಗ್ಯವನ್ನು ಕಳೆದುಕೊಳ್ಳುತ್ತವೆ. ಉದುರುವಿಕೆ ಹಾಗೂ ಒರಟಾಗುವ ಪ್ರಕ್ರಿಯೆಯು ಹೆಚ್ಚಾಗುವುದು. ಅಂತಹ ಸಮಯದಲ್ಲಿ ತೆಂಗಿನ ಎಣ್ಣೆ ಹಾಗೂ ಅದರೊಂದಿಗೆ ಇನ್ನಿತರ ನೈಸರ್ಗಿಕ ಉತ್ಪನ್ನಗಳನ್ನು ಬಳಕೆ ಮಾಡುವುದರಿಂದ ಕೂದಲ ಸೌಂದರ್ಯವನ್ನು ಕಾಪಾಡಬಹುದು. ತೆಂಗಿನ ಎಣ್ಣೆಯಿಂದ 10 ಬಗೆಯಲ್ಲಿ ಕೇಶಗಳ ಆರೈಕೆ ಮಾಡಬಹುದು. ಅವು ಹೇಗೆ? ಎನ್ನುವ ವಿಧಾನವನ್ನು ತಿಳಿದುಕೊಳ್ಳಬೇಕೆನ್ನುವ ಮನಸ್ಸಾದರೆ ಈ ಮುಂದಿರುವ ವಿವರಣೆಯನ್ನು ಓದಿ...

ತೆಂಗಿನ ಎಣ್ಣೆ + ಮೊಟ್ಟೆಯ ಬಿಳಿಭಾಗ
*ಒಂದು ಬೌಲ್‍ನಲ್ಲಿ ಮೊಟ್ಟೆಯ ಬಿಳಿಭಾಗ ಹಾಗೂ 2 ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ.
*ಮಿಶ್ರಗೊಳಿಸಿದ ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
*30 ನಿಮಿಷಗಳ ಕಾಲ ಆರಲು ಬಿಟ್ಟು, ನಂತರ ಮೃದುವಾದ ಶಾಂಪುಗಳನ್ನು ಬಳಸಿ ಕೂದಲನ್ನು ಸ್ವಚ್ಛಗೊಳಿಸಿ.
*ವಾರದಲ್ಲಿ ಎರಡು ಬಾರಿ ಈ ಮಿಶ್ರಣವನ್ನು ಅನ್ವಯಿಸಿದರೆ ಕೇಶರಾಶಿಯನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದು.

ತೆಂಗಿನ ಎಣ್ಣೆ + ಬೆಣ್ಣೆ ಹಣ್ಣು
*ಚೆನ್ನಾಗಿ ಹಣ್ಣಾದ ಬೆಣ್ಣೆ ಹಣ್ಣಿನ ತಿರುಳು ಮತ್ತು 2 ಟೇಬಲ್ ಚಮಚ ತೆಂಗಿನ ಎಣ್ಣೆ ಸೇರಿಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
*30 ನಿಮಿಷಗಳ ಬಳಿಕ ಬೆಚ್ಚಗಿನ ನೀರು ಮತ್ತು ಮೃದುವಾದ ಶ್ಯಾಂಪುಗಳನ್ನು ಬಳಸಿ ಕೂದಲನ್ನು ಸ್ವಚ್ಛಗೊಳಿಸಿ.
*ತಿಂಗಳಲ್ಲಿ ಎರಡು ಬಾರಿ ಈ ಮಿಶ್ರಣವನ್ನು ಅನ್ವಯಿಸಿದರೆ ಪರಿಣಾಮಕಾರಿ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ತೆಂಗಿನ ಎಣ್ಣೆ + ಜೇನುತುಪ್ಪ
*2 ಟೇಬಲ್ ಚಮಚ ತೆಂಗಿನ ಎಣ್ಣೆ ಮತ್ತು 2 ಟೀ ಚಮಚ ಜೇನುತುಪ್ಪ ಸೇರಿಸಿ ಮಿಶ್ರಗೊಳಿಸಿ.
*ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
*20-25 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.
*ವಾರಕ್ಕೆ ನಿಯಮಿತವಾಗಿ ಅನ್ವಯಿಸುವುದರಿಂದ ಮೃದು ಹಾಗೂ ದೃಢವಾದ ಕೇಶರಾಶಿಯನ್ನು ಪಡೆಯಬಹುದು.

ತೆಂಗಿನ ಎಣ್ಣೆ+ ಬಾಳೆಹಣ್ಣು
*ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಕಿವುಚಿ, 2 ಟೇಬಲ್ ಚಮಚ ತೆಂಗಿನ ಎಣ್ಣೆ ಸೇರಿಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
*15 ನಿಮಿಷಗಳ ಬಳಿಕ ಬೆಚ್ಚಗಿನ ನೀರು ಮತ್ತು ಮೃದುವಾದ ಶ್ಯಾಂಪುಗಳನ್ನು ಬಳಸಿ ಸ್ವಚ್ಛಗೊಳಿಸಿ.
*ವಾರಕ್ಕೆ ನಿಯಮಿತವಾಗಿ ಅನ್ವಯಿಸುವುದರಿಂದ ಕೇಶರಾಶಿಯ ಬೆಳವಣಿಗೆಯನ್ನು ಉತ್ತಮ ಪಡಿಸಬಹುದು.

ತೆಂಗಿನ ಎಣ್ಣೆ + ಹಾಲು
*2 ಟೇಬಲ್ ಚಮಚ ತೆಂಗಿನ ಎಣ್ಣೆ ಮತ್ತು 1 ಟೇಬಲ್ ಚಮಚ ಹಾಲನ್ನು ಸೇರಿಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
*ಅನ್ವಯಿಸಿದ ಮಿಶ್ರಣ ಒಣಗಿದ ಬಳಿಕ ಬೆಚ್ಚಗಿನ ನೀರು ಮತ್ತು ಮೃದುವಾದ ಶಾಂಪುಗಳನ್ನು ಬಳಸಿ ಸ್ವಚ್ಛಗೊಳಿಸಿ.
*ವಾರಕ್ಕೆ ನಿಯಮಿತವಾಗಿ ಅನ್ವಯಿಸುವುದರಿಂದ ಶುಷ್ಕ ಕೇಶರಾಶಿಯು ಆರೋಗ್ಯ ಪೂರ್ಣ ಬೆಳವಣಿಗೆ ಕಾಣುವುದು.

ತೆಂಗಿನ ಎಣ್ಣೆ+ ಆರ್ಗಾನ್ ಎಣ್ಣೆ
*1 ಟೀ ಚಮಚ ಆರ್ಗನ್ ಎಣ್ಣೆಗೆ 2 ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಬೆರೆಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
ಅನ್ವಯಿಸಿ 20 ನಿಮಿಷಗಳ ಬಳಿಕ ಬೆಚ್ಚಗಿನ ನೀರು ಮತ್ತು ಮೃದುವಾದ ಶಾಂಪುಗಳನ್ನು ಬಳಸಿ ಸ್ವಚ್ಛಗೊಳಿಸಿ.
*ವಾರಕ್ಕೆ ಒಮ್ಮೆ ನಿಯಮಿತವಾಗಿ ಅನ್ವಯಿಸುವುದರಿಂದ ಶುಷ್ಕ ಕೇಶರಾಶಿಯ ಆರೋಗ್ಯದಿಂದ ಕೂಡಿರುವುದು.

ತೆಂಗಿನ ಎಣ್ಣೆ+ಆಪಲ್ ಸೈಡರ್ ವಿನೆಗರ್
*2-3 ಟೇಬಲ್ ಚಮಚ ತೆಂಗಿನ ಎಣ್ಣೆ ಮತ್ತು 1/2 ಟೀ ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಎಲ್ಲಾ ಭಾಗಗಳಿಗೂ ಅನ್ವಯಿಸಿ.
*ಅನ್ವಯಿಸಿ 30 ನಿಮಿಷಗಳ ಬಳಿಕ ಬೆಚ್ಚಗಿನ ನೀರು ಮತ್ತು ಮೃದುವಾದ ಶ್ಯಾಂಪುಗಳನ್ನು ಬಳಸಿ ಸ್ವಚ್ಛಗೊಳಿಸಿ.
*ನಿಯಮಿತವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಶುಷ್ಕ ಕೇಶರಾಶಿಯು ಆರೋಗ್ಯದಿಂದ ಕೂಡಿರುವುದು.

ತೆಂಗಿನ ಎಣ್ಣೆ+ ವಿಟಮಿನ್ ಇ ಎಣ್ಣೆ
*ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ತೆಗೆದುಕೊಳ್ಳಿ. ಬಳಿಕ 2 ಟೇಬಲ್ ಚಮಚ ತೆಂಗಿನ ಎಣ್ಣೆ ಸೇರಿಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಇರತ ಭಾಗಗಳಿಗೆ ಅನ್ವಯಿಸಿ ಮಸಾಜ್ ಮಾಡಿ.
*40-45 ನಿಮಿಷಗಳ ಕಾಲ ಆರಲು ಬಿಟ್ಟು, ಬಳಿಕ ಬೆಚ್ಚಗಿನ ನೀರು ಮತ್ತು ಶ್ಯಾಂಪುವಿನ ಸಹಾಯದಿಂದ ಸ್ವಚ್ಛಗೊಳಿಸಿ.
*ವಾರದಲ್ಲಿ ಒಮ್ಮೆ ಈ ಆರೈಕೆ ಮಾಡುವುದರಿಂದ ಪರಿಣಾಮಕಾರಿ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ತೆಂಗಿನ ಎಣ್ಣೆ + ಬೆಣ್ಣೆ
*2-3 ಟೇಬಲ್ ಚಮಚ ತೆಂಗಿನ ಎಣ್ಣೆಗೆ 2 ಟೀ ಚಮಚ ಬೆಣ್ನೆಯನ್ನು ಸೇರಿಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಇರತ ಭಾಗಗಳಿಗೆ ಅನ್ವಯಿಸಿ ಮಸಾಜ್ ಮಾಡಿ.
*20-25 ನಿಮಿಷಗಳ ಕಾಲ ಆರಲು ಬಿಟ್ಟು, ಬಳಿಕ ಬೆಚ್ಚಗಿನ ನೀರು ಮತ್ತು ಶ್ಯಾಂಪುವಿನ ಸಹಾಯದಿಂದ ಸ್ವಚ್ಛಗೊಳಿಸಿ.
*ಪ್ರತಿ ವಾರ ನಿಯಮಿತವಾಗಿ ಅನ್ವಯಿಸುವುದರಿಂದ ಆರೋಗ್ಯ ಪೂರ್ಣ ಕೇಶರಾಶಿಯನ್ನು ಹೊಂದಬಹುದು.

ತೆಂಗಿನ ಎಣ್ಣೆ ಆಲಿವ್ ಎಣ್ಣೆ ಗ್ರೀನ್ ಟೀ
*ಒಂದು ಬೌಲ್‍ನಲ್ಲಿ 2 ಟೇಬಲ್ ಚಮಚ ತೆಂಗಿನ ಎಣ್ಣೆ, 1 ಟೇಬಲ್ ಚಮಚ ಆಲಿವ್ ಎಣ್ಣೆ+ 2 ಟೀ ಚಮಚ ಸಕ್ಕರೆ ರಹಿತವಾದ ಗ್ರೀನ್ ಟೀ ಸೇರಿಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಇರತ ಭಾಗಗಳಿಗೆ ಅನ್ವಯಿಸಿ.
ಒಂದು ಗಂಟೆಯ ಬಳಿಕ ಬೆಚ್ಚಗಿನ ನೀರು ಮತ್ತು ಶ್ಯಾಂಪುವಿನ ಸಹಾಯದಿಂದ ಸ್ವಚ್ಛಗೊಳಿಸಿ.
*ಪ್ರತಿ ವಾರ ನಿಯಮಿತವಾಗಿ ಅನ್ವಯಿಸುವುದರಿಂದ ಆರೋಗ್ಯ ಪೂರ್ಣ ಕೇಶರಾಶಿಯನ್ನು ಹೊಂದಬಹುದು.



Click it and Unblock the Notifications