For Quick Alerts
ALLOW NOTIFICATIONS  
For Daily Alerts

ಸಕ್ಕರೆ ಬಾಯಿಗೆ ಸಿಹಿ ಮಾತ್ರವಲ್ಲ, ಡ್ಯಾಂಡ್ರಫ್ ಕೂಡ ನಿವಾರಿಸುವುದು!

|

ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸಲ ತಲೆಹೊಟ್ಟಿನ ಸಮಸ್ಯೆಯು ಕಾಡಿರುವುದು ದಿಟ. ಸತ್ತ ಚರ್ಮದ ಕೋಶಗಳು ತಲೆಬುರುಡೆಯಲ್ಲಿ ಜಮೆಯಾಗಿ ತಲೆಹೊಟ್ಟು ಹಾಗೂ ಪದರ ಎದ್ದುಬರುವ ತಲೆಬುರುಡೆ ನಿರ್ಮಾಣವಾಗುವುದು. ತಲೆಬುರುಡೆಯಲ್ಲಿ ಅತಿಯಾಗಿ ಎಣ್ಣೆಯು ಉತ್ಪತ್ತಿಯಾಗುವುದು ಕೂಡ ತಲೆಹೊಟ್ಟಿಗೆ ಪ್ರಮುಖ ಕಾರಣವಾಗಿದೆ. ತಲೆಹೊಟ್ಟಿನಿಂದಾಗಿ ತುರಿಕೆ ಮತ್ತು ತಲೆಬುರುಡೆಯಲ್ಲಿ ರಕ್ತಸ್ರಾವ ಕೂಡ ಕಂಡುಬರಬಹುದು.

ಈ ಸಮಸ್ಯೆಯನ್ನು ಸರಿಯಾದ ಸಮಯದಲ್ಲಿ ನಿವಾರಣೆ ಮಾಡುವುದು ಕೂಡ ಅಗತ್ಯ. ಯಾಕೆಂದರೆ ಸಣ್ಣ ಸಮಸ್ಯೆಯೆಂದು ಕಡೆಗಣಿಸಿದರೆ, ಅದು ಗಂಭೀರ ಸಮಸ್ಯೆಯಾಗಬಹುದು. ತಲೆಹೊಟ್ಟು ನಿವಾರಣೆ ಮಾಡಲು ಪ್ರಮುಖ ಹಂತವೇ ಕಿತ್ತುಹಾಕುವುದು. ತಲೆಬುರುಡೆಯಿಂದ ನಿಯಮಿತವಾಗಿ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಬೇಕು. ಇದರಿಂದ ತಲೆಹೊಟ್ಟಿನಿಂದ ಪರಿಹಾರ ಪಡೆಯಬಹುದು. ನಾವು ಚಹಾ, ಕಾಫಿ ಮತ್ತು ಇತರ ಕೆಲವು ಸಿಹಿತಿಂಡಿಗಳಿಗೆ ಬಳಸುವಂತಹ ಸಕ್ಕರೆ ಬಳಸಿಕೊಂಡು ತಲೆಹೊಟ್ಟನ್ನು ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯುವ. ತಲೆಹೊಟ್ಟು ಮತ್ತು ಒಣತಲೆಬುರುಡೆಗೆ ಸಕ್ಕರೆ ಚಿಕಿತ್ಸೆ ಹೇಗೆ?

 ಸಕ್ಕರೆ ಸ್ಕ್ರಬ್

ಸಕ್ಕರೆ ಸ್ಕ್ರಬ್

ತಲೆಬುರುಡೆಯಲ್ಲಿ ಅತಿಯಾಗಿ ಎಣ್ಣೆಯು ಉತ್ಪತ್ತಿಯಾಗುತ್ತಲಿದ್ದರೆ ಆಗ ನೀವು ಈ ಸ್ಕ್ರಬ್ ನ್ನು ಬಳಸಿಕೊಳ್ಳಬಹುದು. ಸ್ವಲ್ಪ ಸಕ್ಕರೆ, ಆಲಿವ್ ತೈಲ ಮತ್ತು ಒಂದು ಚಿಟಿಕೆ ಉಪ್ಪು ಜತೆ ಸೇರಿಸಿ ಸ್ಕ್ರಬ್ ಮಾಡಿ. ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಬೆರಳುಗಳನ್ನು ಬಳಸಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಹಾಗೆ ಬಿಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ತಲೆಬುರುಡೆಯಲ್ಲಿರುವ ದದ್ದುಗಳು ಮತ್ತು ತಲೆಹೊಟ್ಟನ್ನು ಇದು ನಿವಾರಿಸುವುದು. ವಾರದಲ್ಲಿ ಒಂದು ಸಲ ಬಳಸಿದರೆ ವೇಗದ ಫಲಿತಾಂಶ ಪಡೆಯಬಹುದು.

ಸಕ್ಕರೆ ಮತ್ತು ಅಲೋವೆರಾ

ಸಕ್ಕರೆ ಮತ್ತು ಅಲೋವೆರಾ

ಅಲೋವೆರಾದಲ್ಲಿ ಶಮನಕಾರಿ ಗುಣಗಳಿವೆ ಮತ್ತು ಇದು ಒಣತಲೆಬುರುಡೆ ಮತ್ತು ತಲೆಹೊಟ್ಟನ್ನು ನಿವಾರಿಸಲು ನೆರವಾಗುವುದು. ಒಂದು ತಾಜಾ ಅಲೋವೆರಾ ಎಲೆ ತೆಗೆದುಕೊಂಡು ಅದರ ಎರಡು ಬದಿ ಕತ್ತರಿಸಿಕೊಂಡು ಸಿಪ್ಪೆ ತೆಗೆದು, ಅದರಿಂದ ಬಿಳಿಯ ಲೋಳೆ ತೆಗೆಯಿರಿ. ಇದನ್ನು ಒಂದು ಸ್ವಚ್ಛ ಪಾತ್ರೆಗೆ ಹಾಕಿ. ಸಕ್ಕರೆಯನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿ. ಸಕ್ಕರೆ ಹುಡಿಯನ್ನು ಅಲೋವೆರಾ ಲೋಳೆಗೆ ಮಿಶ್ರಣ ಮಾಡಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಸ್ಕ್ರಬ್ ಮಾಡಿ. 30 ನಿಮಿಷ ಬಿಟ್ಟು ತೊಳೆಯಿರಿ. ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಎರಡು ವಾರಕ್ಕೊಮ್ಮೆ ಇದನ್ನು ಬಳಸಿಕೊಳ್ಳಿ.

ಶಾಂಪೂ ಜತೆಗೆ ಸಕ್ಕರೆ

ಶಾಂಪೂ ಜತೆಗೆ ಸಕ್ಕರೆ

ತಲೆಬುರುಡೆಯಲ್ಲಿರುವ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು ಅತೀ ಅಗತ್ಯವಾಗಿರುವುದು ಮತ್ತು ಇದರಿಂದ ತಲೆಬುರುಡೆಯನ್ನು ಆರೋಗ್ಯವಾಗಿಡ ಬಹುದು. ಇದು ತುಂಬಾ ಸರಳ ವಿಧಾನ. ಒಂದು ಚಮಚ ಸಕ್ಕರೆಗೆ ನಿಮ್ಮ ನಿಯಮಿತ ಶಾಂಪೂ ಹಾಕಿ. ಈ ಮಿಶ್ರಣವನ್ನು ಕೂದಲಿಗೆ ಶಾಂಪೂ ಮಾಡಿ. ನಿಯಮಿತವಾಗಿ ಮಾಡುವಂತೆ ಇದನ್ನು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಇದನ್ನು ಬಳಸಿ.

Most Read:ಅಕಾಲಿಕ ಕೂದಲು ಬಿಳಿಯಾಗುವುದಕ್ಕೆ ಕರ್ಪೂರದ ಚಿಕಿತ್ಸೆ

ಸಕ್ಕರೆ ಮತ್ತು ಸಾರಭೂತ ತೈಲ

ಸಕ್ಕರೆ ಮತ್ತು ಸಾರಭೂತ ತೈಲ

ಸಕ್ಕರೆ ಮತ್ತು ಸಾರಭೂತ ತೈಲವನ್ನು ಮಿಶ್ರಣ ಮಾಡಿಕೊಂಡು ಸ್ಕ್ರಬ್ ಮಾಡಬಹುದು. ಇದು ಕೂದಲು ಮತ್ತು ತಲೆಬುರುಡೆಯಲ್ಲಿ ಒಳ್ಳೆಯ ಸುವಾಸನೆ ಉಂಟು ಮಾಡುವುದು. 8-10 ಚಮಚ ಸಕ್ಕರೆ, 5 ಚಮಚ ದ್ರಾಕ್ಷಿಬೀಜ(ಗ್ರೇಪ್ ಸೀಡ್) ತೈಲ, 3-4 ಹನಿ ರೋಸ್ಮೆರಿ ತೈಲ ಮತ್ತು ಪಾತ್ರೆಗೆ ಲಿಂಬೆಯ ಸಾರಭೂತ ತೈಲ ಹಾಕಿಕೊಳ್ಳಿ. ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿಕೊಂಡು ತಲೆ, ಕೂದಲಿನ ಬುಡ ಹಾಗೂ ತುದಿಗೆ ಮಸಾಜ್ ಮಾಡಿ. ಕೆಲವು ನಿಮಿಷ ಮಸಾಜ್ ಮಾಡಿದ ಬಳಿಕ ಒಂದು ಗಂಟೆ ಕಾಲ ಹಾಗೆ ಬಿಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. 15 ದಿನಕ್ಕೊಮ್ಮೆ ಹೀಗೆ ಮಾಡಿದರೆ ವೇಗ ಹಾಗೂ ಉತ್ತಮ ಫಲಿತಾಂಶ ಸಿಗುವುದು.

ಬ್ರೌನ್ ಶುಗರ್ ಮತ್ತು ಆಲಿವ್ ತೈಲ

ಬ್ರೌನ್ ಶುಗರ್ ಮತ್ತು ಆಲಿವ್ ತೈಲ

ದೀರ್ಘಕಾಲದಿಂದ ನಿಮಗೆ ತಲೆಹೊಟ್ಟಿನ ಸಮಸ್ಯೆಯಿದ್ದರೆ ಈ ಮನೆಮದ್ದನ್ನು ಪ್ರಯತ್ನಿಸಿ.ಇದಕ್ಕಾಗಿ ನಿಮಗೆ 2 ಚಮಚ ಬ್ರೌನ್ ಶುಗರ್ ಮತ್ತು ಸ್ವಲ್ಪ ಆಲಿವ್ ತೈಲ ಬೇಕಾಗಿದೆ. 2 ಚಮಚ ಆಲಿವ್ ತೈಲವನ್ನು ಸ್ವಲ್ಪ ಬಿಸಿ ಮಾಡಿ. ಇದಕ್ಕೆ ಸಕ್ಕರೆ ಹಾಕಿ, ಎರಡನ್ನು ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವು ಕೋಣೆಯ ತಾಪಮಾನಕ್ಕೆ ಬರಲಿ ಮತ್ತು ಇದನ್ನು ತಲೆಬುರುಡೆಗೆ ಮಸಾಜ್ ಮಾಡಿ. 30-45 ನಿಮಿಷ ಕಾಲ ಹಾಗೆ ಬಿಡಿ. ಸಾಮಾನ್ಯ ನೀರಿನಿಂದ ತೊಳೆಯಿರಿ.

English summary

Can Sugar Help In Treating Dandruff?

Accumulation of dead skin cells on the scalp can lead to dandruff and flaky scalp. Another reason for dandruff is the excess oil production on the scalp. Dandruff can also lead to other scalp issues like itching and bleeding of the scalp.Therefore this issue needs to be dealt with at the right time, to avoid any serious issues. The key step in removing dandruff is exfoliation. Removing the dead skin cells from the scalp regularly can help you get rid of dandruff.
X
Desktop Bottom Promotion