For Quick Alerts
ALLOW NOTIFICATIONS  
For Daily Alerts

ಕೂದಲು ಸೊಂಪಾಗಿ ಬೆಳೆಯಲು 'ಪವರ್ ಫುಲ್-ಎಣ್ಣೆಗಳು'- ಪ್ರಯತ್ನಿಸಿ ನೋಡಿ

By Hemanth
|

ಕೂದಲು ಉದುರುವಿಕೆ ಸಮಸ್ಯೆಯು ಮಹಿಳೆಯರ ಸಹಿತ ಪುರುಷರನ್ನು ಕೂಡ ಇಂದಿನ ದಿನಗಳಲ್ಲಿ ಕಾಡುತ್ತಲಿರುವುದು. ಜೀವನಶೈಲಿ ಬದಲಾವಣೆ ಮತ್ತು ಕಲುಷಿತ ವಾತಾವರಣದಿಂದಾಗಿ ಕೂದಲು ಉದುರುವಿಕೆ ಎನ್ನುವುದು ಸಾಮಾನ್ಯವಾಗಿ ಹೋಗಿದೆ. ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಲು ಹಲವಾರು ರೀತಿಯ ಶಾಂಪೂ ಹಾಗೂ ಕಂಡೀಷನರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಬಳಸಿದರೆ ಕೂದಲು ಉದುರುವಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬಹುದು.

Hair Oil Remedies For Faster Hair Growth

ಆದರೆ ಶಾಶ್ವತ ಪರಿಹಾರ ಬೇಕಾದರೆ ಆಗ ಕೆಲವೊಂದು ನೈಸರ್ಗಿಕ ಔಷಧಿಗಳು ಮಾತ್ರ ಪರಿಹಾರ ನೀಡಬಲ್ಲದು. ಈ ಲೇಖನದಲ್ಲಿ ನಾವು ನಿಮಗೆ ನೈಸರ್ಗಿಕವಾಗಿ ಕೂದಲಿನ ಸಮಸ್ಯೆ ನಿವಾರಣೆ ಮಾಡುವುದು ಹೇಗೆ ಎಂದು ತಿಳಿಸಲಿದ್ದೇವೆ. ಇದನ್ನು ಶತಮಾನಗಳಿಂದಲೂ ಬಳಸಿಕೊಂಡು ಬರಲಾಗುತ್ತಾ ಇದೆ. ಕೆಲವೊಂದು ತೈಲಗಳನ್ನು ಬಳಸಿಕೊಂಡು ಕೂದಲು ಉದುರುವಿಕೆ ತಡೆಗಟ್ಟಬಹುದು. ಇದು ಕೇವಲ ಕೂದಲು ಉದುರುವಿಕೆ ನಿಲ್ಲಿಸುವುದು ಮಾತ್ರವಲ್ಲದೆ, ಕೂದಲಿನ ಬೆಳವಣಿಗೆ ಕೂಡ ವೃದ್ಧಿಸುವುದು. ಕೆಳಗೆ ಹೇಳಲಾಗಿರುವಂತಹ ಕೆಲವೊಂದು ತೈಲಗಳು ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಿಕೊಂಡು ನಿಮ್ಮ ಕೂದಲು ಬೆಳೆಯಲು ನೆರವಾಗುವುದು. ಇದನ್ನು ನಿಯಮಿತವಾಗಿ ಬಳಸಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

ಕರ್ಪೂರದ ಎಣ್ಣೆ, ಆಲಿವ್ ತೈಲ ಮತ್ತು ಹರಳೆಣ್ಣೆ

ಕರ್ಪೂರದ ಎಣ್ಣೆ, ಆಲಿವ್ ತೈಲ ಮತ್ತು ಹರಳೆಣ್ಣೆ

ಕರ್ಪೂರವು ಆಂಟಿಆಕ್ಸಿಡೆಂಟ್ ಮತ್ತು ನಂಜುನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದು ಕೂದಲ ಬುಡವನ್ನು ಬಲಪಡಿಸಿಕೊಂಡು ಕೂದ ದಪ್ಪವಾಗಿ ಬೆಳೆಯಲು ನೆರವಾಗುವುದು. ಕರ್ಪೂರವು ಕೂದಲು ಉದುರುವಿಕೆ ನಿಲ್ಲಿಸುವ ಜತೆಗೆ ತಲೆಹೊಟ್ಟು ನಿವಾರಣೆ ಮಾಡುವುದು.

ಕೂದಲು ಸೊಂಪಾಗಿ ಬೆಳೆಯಬೇಕೇ? ಈರುಳ್ಳಿ ರಸ ಹಚ್ಚಿ...

ಬೇಕಾಗುವ ಸಾಮಗ್ರಿಗಳು

  • 1 ಚಮಚ ಕರ್ಪೂರದ ಎಣ್ಣೆ
  • 1 ಚಮಚ ಆಲಿವ್ ತೈಲ
  • 1 ಚಮಚ ಹರಳೆಣ್ಣೆ
  • ತಯಾರಿಸುವ ವಿಧಾನ

    ಕರ್ಪೂರ ತೈಲ, ಆಲಿವ್ ತೈಲ ಮತ್ತು ಹರಳೆಣ್ಣೆಯನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಕೈಬೆರಳಿನಿಂದ ಹಚ್ಚಿಕೊಂಡು ಮಸಾಜ್ ಮಾಡಿ. ಕೂದಲಿನ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಿ. ಒಂದು ಗಂಟೆ ಹಾಗೆ ಬಿಟ್ಟ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

    ಬೇವು ಮತ್ತು ಬಾದಾಮಿ ಎಣ್ಣೆ

    ಬೇವು ಮತ್ತು ಬಾದಾಮಿ ಎಣ್ಣೆ

    ಆ್ಯಂಟಿಆಕ್ಸಿಡೆಂಟ್, ಶಿಲೀಂಧ್ರ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಬೇವಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲ ಕೂಡ ಇದ್ದು, ತಲೆಹೊಟ್ಟು ನಿವಾರಣೆ ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು.

    ಬೇಕಾಗುವ ಸಾಮಗ್ರಿಗಳು

    • ಒಂದು ಹಿಡಿ ಬೇವಿನ ಎಲೆಗಳು
    • 100 ಮಿ.ಲೀ. ಬಾದಾಮಿ ಎಣ್ಣೆ
    • ತಯಾರಿಸುವುದು ಹೇಗೆ

      ಒಂದು ಹಿಡಿ ಬೇವಿನ ಎಲೆಗಳನ್ನು ಎರಡು ದಿನಗಳ ಒಣಗಿಸಿ. ಇದರ ಬಳಿಕ ಬಾದಾಮಿ ಎಣ್ಣೆಯಲ್ಲಿ ಒಣಗಿಸಿದ ಬೇವಿನ ಎಲೆಗಳನ್ನು ಬೇಯಿಸಿ. ಇದರ ಬಳಿಕ ಎಲೆಗಳು ಒಂದು ವಾರ ಕಾಲ ಹಾಗೆ ಇರಲಿ. ಈ ಎಣ್ಣೆಯಿಂದ ಕೂದಲಿಗೆ ಮತ್ತು ತಲೆಬುರುಡೆಗೆ ಮಸಾಜ್ ಮಾಡಿ.

      ನೆಲ್ಲಕಾಯಿ ಮತ್ತು ಆಲಿವ್ ತೈಲ

      ನೆಲ್ಲಕಾಯಿ ಮತ್ತು ಆಲಿವ್ ತೈಲ

      ವಿಟಮಿನ್ ಸಿ ಹೊಂದಿರುವ ನೆಲ್ಲಿಕಾಯಿಯು ಕೂದಲಿನ ಕೋಶಗಳನ್ನು ಬಲಪಡಿಸಿ, ಕೂದಲಿನ ಬೆಳವಣಿಗೆಗೆ ತುಂಬಾ ಪರಿಣಾಮಕಾರಿಯಾಗಿ ನೆರವಾಗುವುದು.

      ಬೇಕಾಗುವ ಸಾಮಗ್ರಿಗಳು

      • 5-6 ತುಂಡು ಒಣಗಿಸಿರುವ ನೆಲ್ಲಿಕಾಯಿ
      • ಆಲಿವ್ ತೈಲ
      • ತಯಾರಿಸುವ ವಿಧಾನ

        ಒಣಗಿಸಿರುವ 5-6 ಆರು ತುಂಡು ನೆಲ್ಲಿಕಾಯಿಯನ್ನು ಆಲಿವ್ ತೈಲಕ್ಕೆ ಹಾಕಿ. ಇದನ್ನು ಕೆಲವು ಕಾಲ ಕುದಿಸಿ ಮತ್ತು ಒಂದು ಸ್ಪ್ರೇ ಬಾಟಲಿಗೆ ಹಾಕಿಡಿ. ಈ ಮಿಶ್ರಣವು ಒಂದು ವಾರ ಕಾಲ ಹಾಗೆ ಇರಲಿ ಮತ್ತು ನಿಮಗೆ ಬೇಕಾದಾಗ ಕೂದಲಿಗೆ ಹಚ್ಚಿಕೊಂಡು ಮಸಾಜ್ ಮಾಡಿ.

        ಕರಿಬೇವಿನ ಎಲೆ ಮತ್ತು ತೆಂಗಿನೆಣ್ಣೆ

        ಕರಿಬೇವಿನ ಎಲೆ ಮತ್ತು ತೆಂಗಿನೆಣ್ಣೆ

        ಕರಿಬೇವಿನ ಎಲೆಗಳನ್ನು ಭಾರತೀಯರು ಆಹಾರದಲ್ಲಿ ಹೆಚ್ಚಾಗಿ ಬಳಸಿಕೊಳ್ಳುವರು. ಈ ಎಲೆಯಲ್ಲಿ ಆ್ಯಂಟಿಆಕ್ಸಿಡೆಂಟ್, ಅಮಿನೋ ಆಮ್ಲ ಮತ್ತು ಇತರ ಕೆಲವೊಂದು ಪೋಷಕಾಂಶಗಳು ಕೂದಲು ಉದುರುವಿಕೆಗೆ ನೆರವಾಗುವುದು ಮತ್ತು ಕೂದಲಿನ ಬೆಳವಣಿಗೆ ಸುಧಾರಿಸುವುದು. ಇದರಲ್ಲಿ ಕೆಲವೊಂದು ಪ್ರೋಟೀನ್ ಗಳು ಮತ್ತು ಬೆಟಾ ಕ್ಯಾರೋಟಿನ್ ಇದ್ದು, ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಲಿದೆ.

        ಬೇಕಾಗುವ ಸಾಮಗ್ರಿಗಳು

        • ಕರಿಬೇವಿನ ಎಲೆಗಳು
        • 100 ಮಿ.ಲೀ. ತೆಂಗಿನೆಣ್ಣೆ
        • ತಯಾರಿಸುವುದು ಹೇಗೆ

          ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಇದನ್ನು ಎರಡು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿ. ಇದರ ಬಳಿಕ ಆಲಿವ್ ತೈಲದಲ್ಲಿ ಕುದಿಸಿ ಮತ್ತು ಅದು ನೆನೆಯಲು ಬಿಡಿ. ಇದನ್ನು ಬಿಗಿಯಾದ ಮುಚ್ಚಳವಿರುವ ಡಬ್ಬದಲ್ಲಿ ಹಾಕಿಡಿ. ಇದನ್ನು ನಿಧಾನವಾಗಿ ತಲೆಬುರುಡೆಗೆ ಮಸಾಜ್ ಮಾಡಿ ಮತ್ತು 30 ನಿಮಿಷದಿಂದ ಗಂಟೆಗಳ ಕಾಲ ಹಾಗೆ ಬಿಡಿ. ಇದರ ಬಳಿಕ ಶಾಂಪೂ ಹಾಕಿಕೊಂಡು ಕೂದಲು ತೊಳೆಯಿರಿ.

          ಕಾಲೋಂಜಿ ಬೀಜಗಳು ಮತ್ತು ತೆಂಗಿನೆಣ್ಣೆ

          ಕಾಲೋಂಜಿ ಬೀಜಗಳು ಮತ್ತು ತೆಂಗಿನೆಣ್ಣೆ

          ಕಾಲೋಂಜಿ ಬೀಜಗಳು ಕೂದಲಿನ ಬೆಳವಣಿಗೆಗೆ ನೆರವಾಗುವ ಮತ್ತೊಂದು ನೈಸರ್ಗಿಕ ಸಾಮಗ್ರಿ. ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಯೊಂದಿಗೆ ಇತರ ಕೆಲವೊಂದು ಕೊಬ್ಬಿನಾಮ್ಲಗಳು ಇವೆ. ಇದು ಕೂದಲು ಆರೋಗ್ಯಕರ ಹಾಗೂ ಕಾಂತಿಯುತವಾಗಿ ಬೆಳೆಯಲು ನೆರವಾಗುವುದು.

          ಬೇಕಾಗುವ ಸಾಮಗ್ರಿಗಳು

          • 1 ಚಮಚ ಕಾಲೋಂಜಿ ಬೀಜಗಳು
          • 100 ಮಿ.ಲೀ ತೆಂಗಿನೆಣ್ಣೆ
          • ತಯಾರಿಸುವ ವಿಧಾನ

            ಕಾಲೋಂಜಿ ಬೀಜಗಳನ್ನು ರುಬ್ಬಿಕೊಂಡು ಅದರ ಹುಡಿ ಮಾಡಿಕೊಳ್ಳಿ. ತೆಂಗಿನೆಣ್ಣೆಗೆ ಇದನ್ನು ಬೆರೆಸಿಕೊಂಡು, 2-3 ದಿನಗಳ ಕಾಲ ಹಾಗೆ ಇಡಿ. ಕೂದಲು ಮತ್ತು ತಲೆಬುರುಡೆಗೆ ಮಸಾಜ್ ಮಾಡುವ ಮೊದಲು ಈ ಎಣ್ಣೆಯನ್ನು ಬಿಸಿ ಮಾಡಿ. ಸಲ್ಫರ್ ಮುಕ್ತ ಶಾಂಪೂ ಬಳಸಿ ಕೂದಲು ತೊಳೆಯಿರಿ.

            ಸೋಪು-ಶಾಂಪೂ ಪಕ್ಕಕ್ಕಿಡಿ, ಇಂತಹ 'ಹೇರ್ ಪ್ಯಾಕ್' ಪ್ರಯತ್ನಿಸಿ

English summary

Best Hair Oils For Faster Hair Growth That Actually Work!

Hair fall is one of the common problems that we are struggling to deal with today. With the increase in environmental pollution and other lifestyle factors, most of us would be facing hair loss. In order to solve this, we tend to experiment with several hair care products that claim to give 100% results like improved hair growth and hair volume. But most of the time, these products fail to give the desired results.
X
Desktop Bottom Promotion