ನೀವು ಬಳಸುವ ತೈಲದಿಂದಲೇ ಕೂದಲಿನ ಗುಣಮಟ್ಟ ಅರಿವಿಗೆ ಬರುವುದು!

Subscribe to Boldsky

ಸಾಮಾನ್ಯವಾಗಿ ಕೇಶರಾಶಿಯ ಸಮಸ್ಯೆಯಿಂದ ಅನೇಕ ಮಹಿಳೆಯರು ಬಳಲುತ್ತಿರುತ್ತಾರೆ. ಧೂಳು, ಕಲುಷಿತ ವಾತಾವರಣ, ಅನುಚಿತ ಆಹಾರ ಕ್ರಮ, ಹಾರ್ಮೋನ್ ಬದಲಾವಣೆ ಹಾಗೂ ಆನುವಂಶಿಕ ಸಮಸ್ಯೆಯಿಂದ ಕೂದಲ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಕುರಿತು ಹೇಗೆ ಕಾಳಜಿ ವಹಿಸುತ್ತೇವೆಯೋ ಹಾಗೆಯೇ ಕೇಶರಾಶಿಯ ಆರೋಗ್ಯದ ಕುರಿತು ಒಂದಿಷ್ಟು ಆರೈಕೆಯನ್ನು ಮಾಡಬೇಕಾಗುತ್ತದೆ. ಇಲ್ಲವಾದರೆ ಬಹುಬೇಗ ಉದುರುವಿಕೆ ಹಾಗೂ ಬಣ್ಣವನ್ನು ಕಳೆದುಕೊಳ್ಳುತ್ತವೆ.

ಇತ್ತೀಚಿನ ದಿನದಲ್ಲಿ ಕೇಶರಾಶಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶಕ್ಕಾಗಿ ವಿವಿಧ ಬಗೆಯ ಶಾಂಪೂ, ಸಾಬೂನು, ಔಷಧಗಳು ದೊರೆಯುತ್ತವೆ. ಆದರೆ ಅವು ನಮ್ಮ ಕೂದಲನ್ನು ಇನ್ನಷ್ಟು ಹಾಳುಮಾಡುವ ಸಾಧ್ಯತೆಗಳಿವೆ. ಅಲ್ಲದೆ ಯಾವ ಬಗೆಯ ಕೇಶವನ್ನು ನಾವು ಹೊಂದಿದ್ದೇವೆ? ಅದರ ಸಮಸ್ಯೆ ಏನು ಎನ್ನುವುದನ್ನು ಅರಿಯದೆ ಸಾಮೂಹಿಕವಾಗಿ ಆರೈಕೆಯನ್ನು ಮಾಡಲು ಮುಂದಾಗುತ್ತೇವೆ. ಇದರ ಪರಿಣಾಮವಾಗಿಯೂ ಕೂದಲು ಬಹು ಬೇಗ ಹಾಳಾಗುವ ಅಥವಾ ಆರೋಗ್ಯ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಮೊದಲು ನಮ್ಮ ಕೇಶರಾಶಿಯು ಯಾವ ಪರಿಯದ್ದು? ಎನ್ನುವುದನ್ನು ಗುರುತಿಸಿ, ಸೂಕ್ತ ರೀತಿಯ ಎಣ್ಣೆಯ ಆರೈಕೆ ಮಾಡಬೇಕಾಗುವುದು. ನೈಸರ್ಗಿಕವಾಗಿ ಉತ್ಪಾದಿಸಲಾಗುವ ತೆಂಗಿನೆಣ್ಣೆ, ಬಾದಾಮಿ ಎಣ್ಣೆ ಸೇರಿದಂತೆ ಇನ್ನಿತರ ಎಣ್ಣೆಗಳು ಅತ್ಯುತ್ತಮ ಪೋಷಕಾಂಶ ಹಾಗೂ ವಿಟಮಿನ್‍ಗಳಿಂದ ಕೂಡಿರುತ್ತವೆ. ಇವುಗಳಿಂದ ಆರೈಕೆ ಮಾಡುವುದರಿಂದ ಕೇಶರಾಶಿಯು ಉತ್ತಮ ಹೊಳಪಿನಿಂದ ಕೂಡಿರುತ್ತವೆ. ಈ ಕುರಿತು ಇನ್ನಷ್ಟು ವಿವರಣೆಯನ್ನು ಈ ಮುಂದೆ ವಿವರಿಸಲಾಗಿದೆ...

ಶುಷ್ಕ ಕೂದಲು

ಶುಷ್ಕ ಕೂದಲು

ಶುಷ್ಕ ಕೂದಲಿಗಾಗಿ ಆರ್ಗನ್ ಎಣ್ಣೆಯನ್ನು ಬಳಸುವುದು ಸೂಕ್ತ. ಆರ್ಗನ್ ಎಣ್ಣೆಯು ಅತ್ಯುತ್ತಮ ಮಾಯಿಶ್ಚರೈಸಿಂಗ್ ಗುಣವನ್ನು ಹೊಂದಿರುತ್ತವೆ. ಅವುಗಳ ಬಳಕೆಯಿಂದ ಕೂದಲು ಬಹುಬೇಗ ತೇವಾಂಶದಿಂದ ಕೂಡಿರುವಂತೆ ಆಗುವುದು.

ಬಳಕೆಯ ವಿಧಾನ:

ಹಿಸುಕಿದ ಬಾಳೆ ಹಣ್ಣಿಗೆ ಆರ್ಗನ್ ಎಣ್ಣೆಯನ್ನು ಸೇರಿಸಿ ಮಿಶ್ರಗೊಳಿಸಿ.

ನೆತ್ತಿ ಹಾಗೂ ಕೇಶರಾಶಿಗೆ ಸೂಕ್ತ ರೀತಿಯಲ್ಲಿ ಅನ್ವಯಸಿ.

40-45 ನಿಮಿಷಗಳ ಬಳಿಕ ಶಾಂಪೂ ಮತ್ತು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ತಿಂಗಳಿಗೆ ಎರಡು ಬಾರಿ ಈ ಕ್ರಮ ಅನ್ವಯಿಸುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.

ಜಿಡ್ಡಿನಿಂದ ಕೂಡಿದ ಕೇಶರಾಶಿ

ಜಿಡ್ಡಿನಿಂದ ಕೂಡಿದ ಕೇಶರಾಶಿ

ಈ ಬಗೆಯ ಕೇಶರಾಶಿಯವರಿಗೆ ಬಾದಾಮಿ ಎಣ್ಣೆ ಅತ್ಯುತ್ತಮ ಆರೈಕೆ ಮಾಡುತ್ತದೆ. ಇದರಲ್ಲಿ ಒಮೆಗಾ -3 ಕೊಬ್ಬಿನ ಆಮ್ಲ ಹೇರಳವಾಗಿರುವುದರಿಂದ ಕೇಶರಾಶಿಯ ಸಂರಕ್ಷಣೆಯನ್ನು ಉತ್ತಮವಾಗಿ ನಿರ್ವಹಿಸುತ್ತದೆ.

ಬಳಕೆಯ ವಿಧಾನ:

ಮೊಟ್ಟೆಯ ಬಿಳಿ ಭಾಗಕ್ಕೆ ಎಣ್ಣೆಯನ್ನು ಬೆರೆಸಿ ಮಿಶ್ರಗೊಳಿಸಿ.

ನೆತ್ತಿ ಹಾಗೂ ಕೇಶರಾಶಿಗೆ ಸೂಕ್ತ ರೀತಿಯಲ್ಲಿ ಅನ್ವಯಸಿ.

ಸ್ವಲ್ಪ ಸಮಯದ ಬಳಿಕ ಶಾಂಪೂ ಮತ್ತು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ವಾರಕ್ಕೆ 2 ಬಾರಿ ಈ ಕ್ರಮ ಅನ್ವಯಿಸುವುದರಿಂದ ಕೇಶರಾಶಿಯನ್ನು ಎಣ್ಣೆ ಮುಕ್ತಗೊಳಿಸಬಹುದು.

ದಟ್ಟವಾದ ಕೇಶರಾಶಿ

ದಟ್ಟವಾದ ಕೇಶರಾಶಿ

ವಿಟಮಿನ್‍ಗಳಿಂದ ಕೂಡಿರುವ ಹರಳೆಣ್ಣೆ ದಟ್ಟವಾದ ಕೂದಲುಗಳಿಗೆ ಅತ್ಯುತ್ತಮ ಆರೈಕೆ ಮಾಡುತ್ತದೆ.

ಬಳಕೆಯ ವಿಧಾನ:

ಅಲೋವೆರಾ ಜೊತೆಗೆ ಹರಳೆಣ್ಣೆ ಸೇರಿಸಿ, ಮಿಶ್ರಗೊಳಿಸಿ.

ನೆತ್ತಿ ಹಾಗೂ ಕೇಶರಾಶಿಗೆ ಸೂಕ್ತ ರೀತಿಯಲ್ಲಿ ಅನ್ವಯಸಿ. ಮೃದುವಾಗಿ ಮಸಾಜ್ ಮಾಡಿ.

ಸ್ವಲ್ಪ ಸಮಯದ ಬಳಿಕ ಶಾಂಪೂ ಮತ್ತು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ತಿಂಗಳಿಗೆ ಎರಡು ಬಾರಿ ಈ ಕ್ರಮ ಅನ್ವಯಿಸುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.

ಮಂಕಾದ ಕೂದಲು

ಮಂಕಾದ ಕೂದಲು

ವಿಟಮಿನ್ ಇ ಹೊಂದಿರುವ ಎಣ್ಣೆಯು ಅತ್ಯುತ್ತಮ ಆರೈಕೆಯಿಂದ ಕೇಶರಾಶಿಗೆ ಜೀವ ತುಂಬುವುದು.

ಬಳಕೆಯ ವಿಧಾನ:

ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ತೆಗೆಯಿರಿ

ರಾತ್ರಿ ಮಲಗುವಾಗ ನೆತ್ತಿ ಹಾಗೂ ಕೇಶರಾಶಿಗೆ ಸೂಕ್ತ ರೀತಿಯಲ್ಲಿ ಅನ್ವಯಸಿ.

ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಉತ್ತಮ ಪರಿಣಾಮವನ್ನು ಪಡೆಯಲು ವಾರದ ಅನ್ವಯದಲ್ಲಿ ಬಳಸಿ.

ಹಾನಿಗೊಳಗಾದ ಕೂದಲು

ಹಾನಿಗೊಳಗಾದ ಕೂದಲು

ತೆಂಗಿನ ಎಣ್ಣೆಯು ವೈವಿಧ್ಯಮಯವಾದ ನೈಸರ್ಗಿಕ ಎಣ್ಣೆಯಾಗಿದೆ. ಇದು ಕೂದಲಿಗೆ ಪುನರುಜ್ಜೀವನ ನೀಡುತ್ತದೆ. ವಿಟಮಿನ್ ಹಾಗೂ ಉತ್ತಮ ಪೋಷಕಾಂಶಗಳಿಂದ ಕೂಡಿರುವುದರಿಂದ ಹಾನಿಗೊಳಗಾದ ಕೂದಲು ಉತ್ತಮ ಪೋಷಣೆಯನ್ನು ಪಡೆದುಕೊಳ್ಳುವುದು.

ಬಳಕೆಯ ವಿಧಾನ

ಒಂದು ಟೇಬಲ್ ಚಮಚ ತೆಂಗಿನೆಣ್ಣೆಯನ್ನು ಬೆಚ್ಚಗಾಗಿಸಿ.

ಅದನ್ನು ನೆತ್ತಿ ಹಾಗೂ ಕೇಶರಾಶಿಗೆ ಸೂಕ್ತ ರೀತಿಯಲ್ಲಿ ಅನ್ವಯಸಿ.

ಮೃದುವಾಗಿ ಮಸಾಜ್ ಮಾಡಿ.

ವಾರದಲ್ಲಿ ಕನಿಷ್ಠ 2-3 ಬಾರಿ ಈ ಕ್ರಮವನ್ನು ಅನ್ವಯಿಸುವುದರಿಂದ ಅತ್ಯುತ್ತಮ ಪರಿಣಾಮವನ್ನು ಪಡೆದುಕೊಳ್ಳಬಹುದು.

ಗುಂಗುರು ಕೂದಲು

ಗುಂಗುರು ಕೂದಲು

ಆಲಿವ್ ಎಣ್ಣೆಯು ಇಂತಹ ಕೇಶರಾಶಿಗೆ ಅತ್ಯುತ್ತಮ ಆರೈಕೆ ಮಾಡುವುದು. ವಿಟಮಿನ್ ಹಾಗೂ ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿರುವ ಈ ಎಣ್ಣೆ ಅತ್ಯುತ್ತಮ ಪೋಷಣೆಯನ್ನು ನೀಡುವುದು.

ಬಳಕೆಯ ವಿಧಾನ:

ಆಲಿವ್ ಎಣ್ಣೆಯನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ.

ರಾತ್ರಿ ಮಲಗುವ ಮುನ್ನ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.

ಮುಂಜಾನೆ ಶಾಂಪೂ ಹಾಗೂ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಅತ್ಯುತ್ತಮ ಪರಿಣಾಮವನ್ನು ಪಡೆಯಬಹುದು.

ಹೊಟ್ಟು ಭರಿತ ಕೇಶರಾಶಿ

ಹೊಟ್ಟು ಭರಿತ ಕೇಶರಾಶಿ

ಹೊಟ್ಟಿನಿಂದ ಕೂಡಿರುವ ಕೇಶರಾಶಿಗೆ ಅತ್ಯುತ್ತಮ ಆರೈಕೆಯಿಂದ ಟೀ ಟ್ರೀ ಆಯಿಲ್ ಪೋಷಣೆಗೆ ಒಳಗಾಗಬಹುದು.

ಬಳಕೆಯ ವಿಧಾನ:

ಟೀ ಟ್ರೀ ಎಣ್ಣೆಗೆ ಒಂದಿಷ್ಟು ಕ್ಯಾರಿಯಲ್ ಎಣ್ಣೆಯನ್ನು ಸೇರಿಸಿ.

ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ.

ವಾರಕ್ಕೊಮ್ಮೆ ಈ ಕ್ರಮವನ್ನು ಅನ್ವಯಿಸುವುದರಿಂದ ಅತ್ಯುತ್ತಮ ಪರಿಹಾರವನ್ನು ಕಾಣಬಹುದು.

ವಯಸ್ಸಾದ ಕೂದಲು

ವಯಸ್ಸಾದ ಕೂದಲು

ಗೂಸ್ ಬೆರ್ರಿ ಎಣ್ಣೆಯು ಅತ್ಯುತ್ತಮ ಗುಣಗಳನ್ನು ಒಳಗೊಂಡಿರುವ ನೈಸರ್ಗಿಕ ಎಣ್ಣೆ. ಇದು ವಯಸ್ಸಾದ ಕೂದಲಿಗೆ ಅಥವಾ ಬೂದು ಬಣ್ಣದ ಕೂದಲಿಗೆ ಅತ್ಯುತ್ತಮ ರಕ್ಷಣೆ ನೀಡಬಲ್ಲವು.

ಬಳಕೆಯ ವಿಧಾನ:

ಈ ಎಣ್ಣೆಯನ್ನು ಮೆಂತೆ ಬೀಜದ ಪೇಸ್ಟ್ ನೊಂದಿಗೆ ಬೆರೆಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ.

ಒಂದು ಗಂಟೆಯ ಬಳಿಕ ಶಾಂಪೂ ಮತ್ತು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ನಿಯಮಿತವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಅತ್ಯುತ್ತಮ ಪರಿಣಾಮವನ್ನು ಪಡೆಯಬಹುದು.

For Quick Alerts
ALLOW NOTIFICATIONS
For Daily Alerts

    English summary

    Best Hair Oils For Different Hair Types

    Nowadays, hair-related problems like dryness, dandruff, etc., have become exceedingly common and though there are a myriad of hair care products available in the stores that can treat these unsightly problems, there are very few that work as effectively as natural oils do. However, since one size does not fit all, not all oils can work effectively on different problems and hair types. That is why, it is essential to use the oil that caters to your particular hair care problem.
    Story first published: Saturday, February 3, 2018, 7:02 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more