Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಂತಿಯುತ ಹಾಗೂ ಸದೃಢವಾದ ಕೂದಲಿಗೆ 'ಅಲೋವೆರಾ ಶಾಂಪೂ' ಪ್ರಯತ್ನಿಸಿ
ಕೂದಲು ಉದುರುವಿಕೆ, ತುಂಡಾಗುವುದು, ಒಡೆದ ತುದಿಗಳು ಇತ್ಯಾದಿ ಸಮಸ್ಯೆಗಳು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಧೂಳು, ಕೊಳೆ ಹಾಗೂ ಕಲ್ಮಷದಿಂದಾಗಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಪ್ರತಿನಿತ್ಯ ನಾವು ಹೊರಗಡೆ ಹೋಗುವ ಸಮಯದಲ್ಲಿ ಕೂದಲು ಇವುಗಳನ್ನು ಸಹಿಸಿಕೊಳ್ಳಬೇಕು. ಇದರಿಂದಾಗಿ ನಿಸ್ತೇಜವಾಗುವ ಕೂದಲಿಗೆ ನಾವು ವಿವಿಧ ರೀತಿಯ ಶಾಂಪೂ ಹಾಗೂ ಕಂಡೀಷನರ್ ಗಳನ್ನು ಬಳಸಿಕೊಳ್ಳುತ್ತೇವೆ. ಕೂದಲಿಗೆ ಪೋಷಣೆ ನೀಡಲು ನೈಸರ್ಗಿಕವಾಗಿ ಏನು ಮಾಡಬಹುದು ಎಂದು ತಿಳಿಯಬೇಕು.

ಯಾಕೆಂದರೆ ಶಾಂಪೂ, ಕಂಡೀಷನರ್ ಗಳನ್ನು ನೀವು ದೂರವಿಟ್ಟು ಕೆಲವೊಂದು ನೈಸರ್ಗಿಕವಾಗಿರುವ ಸಾಮಗ್ರಿಗಳನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಿಕೊಂಡರೆ ಅದರಿಂದ ತುಂಬಾ ಲಾಭವಾಗಲಿದೆ. ಮನೆಯಲ್ಲೇ ನೀವು ಶಾಂಪೂ ಹಾಗೂ ಕಂಡೀಷನರ್ ತಯಾರಿಸಿಕೊಳ್ಳಬಹುದು. ಇದಕ್ಕಾಗಿ ನಿಮಗೆ ಹೆಚ್ಚು ಸಾಮಗ್ರಿಗಳು ಕೂಡ ಬೇಕೆಂದಿಲ್ಲ. ಈ ಲೇಖನದಲ್ಲಿ ಅಲೋವೆರಾವನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಿಕೊಳ್ಳುವುದು ಹೇಗೆ ಎಂದು ನಿಮಗೆ ತಿಳಿಸಿಕೊಡಲಿದ್ದೇವೆ. ಅಲೋವೆರಾವು ಕೇವಲ ಚರ್ಮಕ್ಕೆ ಮಾತ್ರವಲ್ಲದೆ ಕೂದಲಿಗೂ ಹಲವಾರು ರೀತಿಯ ಲಾಭಗಳನ್ನು ನೀಡಲಿದೆ.

ಅಲೋವೆರಾವು ಕೂದಲಿಗೆ ಯಾವ ರೀತಿಯಲ್ಲಿ ನೆರವಾಗುವುದು?
ಅಲೋವೆರಾದಲ್ಲಿ ಇರುವಂತಹ ಹಲವಾರು ರೀತಿಯ ಔಷಧೀಯ ಗುಣಗಳಿಂದಾಗಿ ಇದು ಕೂದಲಿಗೆ ಹಲವಾರು ರೀತಿಯಿಂದ ನೆರವಾಗುವುದು. ಅದು ಯಾವುದೆಂದು ತಿಳಿಯಿರಿ.
•ಇದು ಒಣ ಹಾಗೂ ಹಾನಿಗೀಡಾದ ಕೂದಲನ್ನು ಸರಿಪಡಿಸುವುದು.
•ಪ್ರೋಟಿಯೋಲಿಟಿಕ್ ಕಿಣ್ವಗಳು ಕೂದಲಿನ ಬೆಳವಣಿಗೆ ಉತ್ತೇಜಿಸುವುದು.
•ಕೂದಲು ಉದುರುವಿಕೆ ತಡೆಯುವುದು
•ಕೂದಲು ತುಂಡಾಗುವುದು ಮತ್ತು ತುದಿ ಒಡೆಯುವುದು ತಡೆಯುವುದು.
•ತುರಿಕೆ ಹಾಗೂ ಕಿರಿಕಿರಿ ಉಂಟು ಮಾಡುವ ತಲೆಬುರುಡೆಗೆ ಶಮನ ನೀಡುವುದು.
•ಶಿಲೀಂಧ್ರ ವಿರೋಧಿ ಗುಣಗಳು ಇರುವ ಕಾರಣದಿಂದಾಗಿ ತಲೆಹೊಟ್ಟು ನಿವಾರಣೆಯಾಗುವುದು.
•ತಲೆಬುರುಡೆಯು ಪೋಷಣೆ ಹಾಗೂ ತೇವಾಂಶದಿಂದ ಇರುವುದು.
•ತಲೆಬುರುಡೆಯ ಪಿಎಚ್ ಸಮತೋಲನ ಕಾಪಾಡುವುದು ಮತ್ತು ಅದನ್ನು ಆರೋಗ್ಯವಾಗಿಡುವುದು. ಇದರಿಂದ ಕೂದಲು ಬುಡದಿಂದಲೇ ಬಲಿಷ್ಠವಾಗುವುದು.

ಮನೆಯಲ್ಲೇ ಅಲೋವೆರಾ ಶಾಂಪೂ ತಯಾರಿಸಿಕೊಳ್ಳುವುದು ಯಾಕೆ?
ಬೇಕಾಗುವ ಸಾಮಗ್ರಿಗಳು
- ¼ ಕಪ್ ತಾಜಾ ಅಲೋವೆರಾದ ಲೋಳೆ
- ¼ ಕಪ್ ಕ್ಯಾಸ್ಟೈಲ್ ಸೋಪ್
- ¼ ಕಪ್ ಡಿಸ್ಟಿಲ್ಡ್ ವಾಟರ್
- 1 ಚಮಚ ಗ್ಲಿಸರಿನ್
- 1 ಚಮಚ ಜೊಜೊಬಾ ಎಣ್ಣೆ

ವಿಧಾನ
•ಸಣ್ಣ ಪಿಂಗಾಣಿಯಲ್ಲಿ ಅಲೋವೆರಾದ ತಾಜಾ ಲೋಳೆ ಹಾಕಿಕೊಳ್ಳಿ.
•ಇದರ ಬಳಿಕ ಡಿಸ್ಟಿಲ್ಡ್ ವಾಟರ್ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಈಗ ಇದಕ್ಕೆ ಗ್ಲಿಸರಿನ್ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಮುಂದಿನ ಭಾಗದಲ್ಲಿ ಕ್ಯಾಸ್ಟೈಲ್ ಸೋಪ್ ಹಾಕಿ ಮತ್ತು ಮಿಶ್ರಣ ಮಾಡಿ. ಎಲ್ಲವನ್ನು ಸರಿಯಾಗಿ ಕಲಸಿಕೊಳ್ಳಿ.
•ಅಂತಿಮವಾಗಿ ಜೊಜೊಬಾ ಎಣ್ಣೆ ಹಾಕಿಕೊಂಡು ಮಿಶ್ರಣ ಮಾಡಿ ಮತ್ತು ಎಲ್ಲವನ್ನು ಜತೆ ಸೇರಿಸಿಕೊಳ್ಳಿ.
•ಇದನ್ನು ಈಗ ಫ್ಲಿಪ್ ಕ್ಯಾಪ್ ಬಾಟಲಿ ಅಥವಾ ಫಾಮಿಂಗ್ ಬಾಟಲಿಗೆ ಹಾಕಿ ಮತ್ತು ನೀವು ಬಳಸುವ ಶಾಂಪೂಗೆ ಬದಲು ಇದನ್ನು ಬಳಸಿಕೊಳ್ಳಿ. ಇದರೊಂದಿಗೆ ನಿಮ್ಮ ಕೂದಲಿಗೆ ಹೊಂದಿಕೊಳ್ಳುವ ಕಂಡೀಷನರ್ ಹಾಕಿ.
•ಉತ್ತಮ ಫಲಿತಾಂಶಕ್ಕಾಗಿ ನೀವು ವಾರದಲ್ಲಿ ಮೂರು ಸಲ ಇದನ್ನು ಬಳಸಿ.

ಸೂಚನೆ:
ಈ ಮಿಶ್ರಣವನ್ನು ತಲೆಗೆ ಬಳಸುವ ಮೊದಲು ಹಾಗೂ ಬಳಿಕ ಸರಿಯಾಗಿ ಅಲುಗಾಡಿಸಿಕೊಳ್ಳಿ. ಸಂಪೂರ್ಣವಾಗಿ ತೊಳೆಯುವ ಮೊದಲು ಒಂದು ನಿಮಿಷ ಕೂದಲಿನಲ್ಲಿ ಹಾಗೆ ಇರಲಿ ಮತ್ತು ಇದರ ಬಳಿಕ ಕಂಡೀಷನರ್ ಬಳಸಿ.



Click it and Unblock the Notifications
