ಕಾಂತಿಯುತ, ರೇಷ್ಮೆಯಂತಹ ಕೂದಲಿಗೆ ಮೊಟ್ಟೆಯ ಹೇರ್ ಮಾಸ್ಕ್

Posted By: Hemanth
Subscribe to Boldsky

ಸುಂದರ, ಕಾಂತಿಯುತ, ರೇಷ್ಮೆಯಂತೆ ಹೊಳೆಯುವ ಕೂದಲು ಪ್ರತಿಯೊಬ್ಬ ಮಹಿಳೆಯ ಆಶಯವಾಗಿರುವುದು. ತನ್ನ ಕೂದಲನ್ನು ಪ್ರತಿಯೊಬ್ಬರೂ ನೋಡುತ್ತಿರಬೇಕು ಮತ್ತು ಅದರ ಅಂದದ ಬಗ್ಗೆ ಗುಣಗಾನ ಮಾಡುತ್ತಿರಬೇಕೆಂಬ ಆಸೆ ಮಹಿಳೆಯರಲ್ಲಿ ಇರುವುದು. ಆದರೆ ಕೆಲವೊಂದು ಸಲ ಕೂದಲಿಗೆ ಹವಾಮಾನ, ವಾತಾವರಣದಲ್ಲಿನ ಕಲ್ಮಶ ಇತ್ಯಾದಿಗಳಿಂದ ಹಾನಿಯಾಗುವುದು. ಕೂದಲು ನಿಸ್ತೇಜವಾಗಿ ಉದುರುವುದು, ತುಂಡಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇಂತಹದ್ದಕ್ಕೆ ಕೆಲವೊಂದು ಮನೆಮದ್ದನ್ನು ಬಳಸಿಕೊಳ್ಳಬೇಕು. ಕೂದಲಿಗೆ ಮೊಟ್ಟೆಯ ಬಳಕೆ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ ಇದನ್ನು ಸರಿಯಾಗಿ ಬಳಸಿಕೊಳ್ಳದೆ ಇರುವ ಕಾರಣದಿಂದ ಅದರ ಲಾಭ ಮಾತ್ರ ಸಿಗುತ್ತಿಲ್ಲ.

ಕೂದಲಿನ ಸರ್ವ ಸಮಸ್ಯೆಗೂ-ಮೊಟ್ಟೆಯ ಹೇರ್ ಮಾಸ್ಕ್

ಮೊಟ್ಟೆಯಲ್ಲಿ ಪ್ರೋಟೀನ್ ಉನ್ನತ ಮಟ್ಟದಲ್ಲಿದೆ. ಮೊಟ್ಟೆಯಲ್ಲಿ ಇರುವಂತಹ ಪ್ರೋಟೀನ್ ಕೂದಲನ್ನು ಬಲಗೊಳಿಸುವುದು ಮತ್ತು ಅದರ ಬೆಳವಣಿಗೆಗೆ ನೆರವಾಗುವುದು. ಕೂದಲಿನಲ್ಲಿ ನೈಸರ್ಗಿಕ ಎಣ್ಣೆಯು ಉಳಿಯುವಂತೆ ಮಾಡಲು ಮೊಟ್ಟೆ ನೆರವಾಗುವುದು. ಇದರಿಂದ ಕೂದಲಿನ ರೇಷ್ಮೆಯಂತಹ ಕಾಂತಿಯು ಉಳಿಯುವುದು.ಸಲೂನ್‌ಗೆ ಹೋಗುವ ಬದಲು ಮನೆಯಲ್ಲಿ ಪ್ರೋಟೀನ್ ನ ಹೇರ್ ಕಂಡೀಷನ್ ಚಿಕಿತ್ಸೆ ಮಾಡಿಕೊಳ್ಳಬಹುದು. ಮನೆಯಲ್ಲೇ ತಯಾರಿಸಬಹುದಾದ ಪ್ರೋಟೀನ್ ಹೇರ್ ಮಾಸ್ಕ್ ಗಳ ಬಗ್ಗೆ ತಿಳಿಯಿರಿ....

ಮೊಟ್ಟೆಯ ಲೋಳೆ ಮತ್ತು ಆಲಿವ್ ತೈಲದ ಕಂಡೀಷನರ್

ಮೊಟ್ಟೆಯ ಲೋಳೆ ಮತ್ತು ಆಲಿವ್ ತೈಲದ ಕಂಡೀಷನರ್

ಮೊಟ್ಟೆ ಮತ್ತು ಆಲಿವ್ ತೈಲವು ತೇವಾಂಶ ನೀಡಲು ನೆರವಾಗುವುದು ಮತ್ತು ಇದರಿಂದ ಕೂದಲು ನಯ ಮತ್ತು ನಿರ್ವಹಣೆಗೆ ಸುಲಭವಾಗುವುದು. ಎರಡು ಮೊಟ್ಟೆಯ ಲೋಳೆಯನ್ನು ಒಂದು ಪಿಂಗಾಣಿಗೆ ಹಾಕಿ. ಇದಕ್ಕೆ ಎರಡು ಚಮಚ ಆಲಿವ್ ತೈಲ ಹಾಕಿ ಇದಕ್ಕೆ ಮಿಶ್ರಣ ಮಾಡಿ. ಬಳಸಲು ಸುಲಭವಾಗಲು ಇದಕ್ಕೆ ನೀರು ಹಾಕಬಹುದು. ಕೂದಲನ್ನು ಎರಡು ಭಾಗಗಳನ್ನಾಗಿ ಮಾಡಿಕೊಂಡು ಬ್ರಷ್ ನಿಂದ ಕೂದಲಿಗೆ ಇದನ್ನು ಹಚ್ಚಿಕೊಳ್ಳಿ. 1-2 ಗಂಟೆಗಳ ಕಾಲ ಈ ಮಿಶ್ರಣವನ್ನು ಹಾಗೆ ಬಿಡಿ ಮತ್ತು ಬಳಿಕ ಶಾಂಪೂ ಅಥವಾ ಕಂಡೀಷನರ್ ಬಳಸಿ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ಮಯೋನಿಸ್ ಮತ್ತು ಮೊಟ್ಟೆಯ ಕಂಡೀಷನರ್

ಮಯೋನಿಸ್ ಮತ್ತು ಮೊಟ್ಟೆಯ ಕಂಡೀಷನರ್

ಮಯೋನಿಸ್ ನಲ್ಲಿ ಇರುವಂತಹ ಅಂಶಗಳು ಕೂದಲಿಗೆ ಕಂಡೀಷನ್ ಮಾಡಲು ನೆರವಾಗುವುದು. ಎರಡು ಮೊಟ್ಟೆಯ ಲೋಳೆಗೆ ನಾಲ್ಕು ಚಮಚ ಮಯೋನಿಸ್ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ನಯವಾದ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದು ಚಮಚ ಆಲಿವ್ ತೈಲ ಹಾಕಿ ಮಿಶ್ರಣ ಮಾಡಿ. ಇದನ್ನು ಕೂದಲಿನ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಸಲ್ಫೇಟ್ ಇಲ್ಲದೆ ಇರುವ ಶಾಂಪೂ ಬಳಸಿ. ಈ ಕಂಡೀಷನರ್ ನ್ನು ವಾರದಲ್ಲಿ ಒಂದು ಸಲ ಬಳಸಿ.

ಮೊಟ್ಟೆ ಮತ್ತು ಜೇನುತುಪ್ಪದ ಕಂಡೀಷನರ್

ಮೊಟ್ಟೆ ಮತ್ತು ಜೇನುತುಪ್ಪದ ಕಂಡೀಷನರ್

ಒಂದು ಮೊಟ್ಟೆಯ ಲೋಳೆಗೆ ಎರಡು ಚಮಚ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಂಡು ಶಾವರ್ ಕ್ಯಾಪ್ ಹಾಕಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಜೇನುತುಪ್ಪವು ಕೂದಲಿನ ಕೋಶಗಳನ್ನು ಬಲಗೊಳಿಸುವುದು. ಇದರಿಂದ ಕೂದಲು ಬೆಳವಣಿಗೆಯಾಗುವುದು. ವಾರದಲ್ಲಿ ಒಂದು ದಿನ ಇದನ್ನು ಕೆಲವು ವಾರಗಳ ಕಾಲ ಬಳಸಿ ನೋಡಿ.

ಮೊಸರು ಮತ್ತು ಮೊಟ್ಟೆಯ ಕಂಡೀಷನರ್

ಮೊಸರು ಮತ್ತು ಮೊಟ್ಟೆಯ ಕಂಡೀಷನರ್

1/4 ಕಪ್ ಮೊಸರಿಗೆ ಒಂದು ಮೊಟ್ಟೆಯ ಲೋಳೆ ಹಾಕಿ ಪಿಂಗಾಣಿಯಲ್ಲಿ ಮಿಶ್ರಣ ಮಾಡಿ. ಸಾಮಾನ್ಯ ನೀರಿನಲ್ಲಿ ಶಾಂಪೂ ಹಾಕಿಕೊಂಡ ಬಳಿಕ ಇದನ್ನು ನಿಯಮಿತ ಕಂಡೀಷನರ್ ಹಾಕಿ ಬಳಸಿ. ಐದು ನಿಮಿಷ ಕಾಲ ಕೂದಲಿನಲ್ಲಿ ಇದನ್ನು ಹಾಗೆ ಬಿಡಿ. ಬಳಿಕ ತೊಳೆಯಿರಿ. ನಿಯಮಿತವಾಗಿ ಶಾಂಪೂ ಹಾಕಿಕೊಳ್ಳುವಾಗ ಹೀಗೆ ಮಾಡಿ.

ಮೊಟ್ಟೆ ಮತ್ತು ತೆಂಗಿನೆಣ್ಣೆ ಕಂಡೀಷನರ್

ಮೊಟ್ಟೆ ಮತ್ತು ತೆಂಗಿನೆಣ್ಣೆ ಕಂಡೀಷನರ್

ಒಂದು ಪಿಂಗಾಣಿಗೆ ಒಂದು ಮೊಟ್ಟೆಯ ಲೋಳೆ ಹಾಕಿ ಕಲಸಿ. ನಿಧಾನವಾಗಿ ಇದಕ್ಕೆ ರಡು ಚಮಚ ತೆಂಗಿನೆಣ್ಣೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ(ಬೇಕಿದ್ದರೆ) ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಾಕಿ ತಲೆಬುರುಡೆ ಮತ್ತು ಕೂದಲಿಗೆ ಮಸಾಜ್ ಮಾಡಿ. 20 ನಿಮಿಷ ಕಾಲ ಹಾಗೆ ಬಿಡಿ ಬಳಿಕ ತೊಳೆಯಿರಿ. ಕೂದಲು ಎಣ್ಣೆಯಿಂದ ಕೂಡಿದ್ದರೆ ಶಾಂಪೂ ಹಾಕಿ ತೊಳೆಯಿರಿ.

ವಿನೇಗರ್ ಮತ್ತು ಮೊಟ್ಟೆಯ ಕಂಡೀಷನರ್

ವಿನೇಗರ್ ಮತ್ತು ಮೊಟ್ಟೆಯ ಕಂಡೀಷನರ್

ಎರಡು ಮೊಟ್ಟೆಯ ಲೋಳೆ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ನಾಲ್ಕು ಚಮಚ ವಿನೇಗರ್, 2 ಚಮಚ ಲಿಂಬೆರಸ ಮತ್ತು 2 ಚಮಚ ಆಲಿವ್ ತೈಲ ಹಾಕಿ ಮಿಶ್ರಣ ಮಾಡಿ. ಇವುಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. ಸುಲಭವಾಗಿ ಹಚ್ಚಿಕೊಳ್ಳಲು ಸಾಧ್ಯವಾಗುವಂತೆ ಮಿಶ್ರಣ ಮಾಡಿ. ವಾರದಲ್ಲಿ ಒಂದು ಸಲ ಹೀಗೆ ಮಾಡಿ. ಕೂದಲು ನಯ ಹಾಗೂ ಕಾಂತಿಯುತವಾಗಿ ಹೊಳೆಯುವುದು.

English summary

6 DIY Egg Conditioners For Hair Growth

The best natural remedy in order to gain protein are eggs. Eggs contain all the essential proteins that help in strengthening the hair and in increasing hair growth. Eggs also help in retaining the natural oils of the hair and in maintaining a smooth texture on your hair. easily do a complete protein hair-conditioning treatment at home using this magical ingredient. Here are some amazing DIY egg conditioners that you can try sitting at home. After all, pampering is all your hair needs!