For Quick Alerts
ALLOW NOTIFICATIONS  
For Daily Alerts

ಪುರಾತನ ಕಾಲದ ಆಯುರ್ವೇದ ಔಷಧಿಗಳು-ಕೂದಲಿನ ಸರ್ವ ಸಮಸ್ಯೆಗೂ ಪರಿಹಾರ

|

ಮಹಿಳೆಯರು, ಯಾವಾಗಲೂ ತಮ್ಮ ಕೂದಲ ಬೆಳವಣಿಗೆ ಹೆಚ್ಚಿಸುವ, ಸೊಂಪಾಗಿಸುವ ಹಾಗೂ ದಟ್ಟವಾಗಿಸುವ ವಿಧಾನಗಳ ಬಗ್ಗೆ ಸದಾ ಹುಡುಕಾಟದಲ್ಲಿರುತ್ತಾರೆ. ಆದರೆ ಮಹಿಳೆಯರಿಗೆ ಎದುರಾಗುವ ಕೂದಲುದುರುವ ಸಮಸ್ಯೆ ಹೆಚ್ಚಿನವರ ಸಮಾನವಾದ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಹಲವಾರಿವೆ. ಮಾನಸಿಕ ಒತ್ತಡ, ಅನುವಂಶಿಕ ಕಾರಣಗಳು, ರಾಸಾಯನಿಕಗಳ ಅತಿಯಾದ ಬಳಕೆ, ಕೂದಲಿಗೆ ಹಚ್ಚಿಕೊಳ್ಳುವ ಬಣ್ಣ ಹಾಗೂ ಇತರ ಪ್ರಸಾಧನಗಳೂ ಕೂದಲ ಆರೋಗ್ಯ ಕುಂದಿಸಬಹುದು. ಕೂದಲು ಉದುರುವ ಸಮಸ್ಯೆಯೇ ಅತಿ ದೊಡ್ಡ ಸಮಸ್ಯೆಯಾಗಿದೆ. ಚಿಕ್ಕ ವಯಸ್ಸಿನಲ್ಲಿ ಕೂದಲು ನೆರೆಯುವುದು ಇನ್ನೊಂದು ತೊಂದರೆಯಾಗಿದ್ದು ಮಹಿಳೆಯರ ನಿದ್ದೆ ಕೆಡಿಸುತ್ತದೆ.

ಈ ತೊಂದರೆಯ ಮೂಲಕ್ಕೆ ಬರೋಣ. ಮೊದಲು ಆಯುರ್ವೇದೀಯ ಉತ್ಪನ್ನಗಳನ್ನು ಬಳಸಲಾಗುತ್ತಿತ್ತು. ನಂತರ ರಾಸಾಯನಿಕ ಆಧಾರಿತ ಪ್ರಸಾಧನಗಳ ಬಳಕೆ ಹೆಚ್ಚಿತು. ಆದರೆ ಇವು ತಕ್ಷಣದ ಪರಿಣಾಮ ನೀಡಿದರೂ ದೀರ್ಘಕಾಲದಲ್ಲಿ ಕೆಟ್ಟದ್ದೇ ಮಾಡುವ ಕಾರಣ ಇವುಗಳ ಬಳಕೆ ಕಡಿಮೆಯಾಗಿ ಈಗ ಮತ್ತೊಮ್ಮೆ ಆಯುರ್ವೇದ ಉತ್ಪನ್ನಗಳ ಬಳಕೆ ಹೆಚ್ಚಿದೆ. ನಮ್ಮ ಅಜ್ಜಿಯರು ತನ್ನ ಜೀವಮಾನದಲ್ಲೆಂದೂ ಶಾಂಪೂ ಬಳಸಿರಲಿಲ್ಲ. ಅವರಿಗೀಗ ಎಪ್ಪತ್ತೈದು ವರ್ಷ ವಯಸ್ಸು ಹಾಗೂ ಇಂದಿಗೂ ಅವರ ಕೂದಲು ಸೊಂಪಾಗಿದೆ. ಅವರು ಎಂದಿಗೂ ತಮ್ಮ ಕೂದಲಿಗೆ ಬಣ್ಣ ಹಚ್ಚಿಕೊಂಡಿರಲಿಲ್ಲ.

ಆಯುರ್ವೇದ ಉತ್ಪನ್ನಗಳ ಬಳಕೆಯ ಪರಿಣಾಮ ಕೊಂಚ ನಿಧಾನ, ಆದರೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕಾರಣ ಇವು ಸುರಕ್ಷಿತವಾಗಿವೆ. ಇವು ಶೇಖಡಾ ನೂರರಷ್ಟು ನೈಸರ್ಗಿಕವಾಗಿವೆ ಹಾಗೂ ಅತ್ಯುತ್ತಮ ಪರಿಣಾಮ ಒದಗಿಸುತ್ತವೆ. ಇಂದು ಕೂದಲ ಆರೈಕೆಗೆ ಅತ್ಯುತ್ತಮವಾದ ಹತ್ತು ಆಯುರ್ವೇದೀಯ ಮೂಲಿಕೆಗಳ ಬಗ್ಗೆ ವಿವರಗಳನ್ನು ನೀಡಲಾಗಿದ್ದು ಇದರ ನಿಯಮಿತ ಪ್ರಯೋಗದಿಂದ ಆರೋಗ್ಯಕರ, ನೀಳ ಹಾಗೂ ದೃಢವಾದ ಕೂದಲನ್ನು ಪಡೆಯಬಹುದು. ಒಮ್ಮೆ ಇವುಗಳ ಪ್ರಯೋಜನಗಳ ಬಗ್ಗೆ ಅರಿವು ಮೂಡಿದರೆ ಸಾಕು, ನೀವೆಂದೂ ಈ ಉತ್ಪನ್ನಗಳನ್ನು ನಿತ್ಯ ಬಳಕೆಯ ಪ್ರಸಾಧನಗಳಾಗಿಸುವುದು ಖಂಡಿತ....

ಸೀಗೆಕಾಯಿ

ಸೀಗೆಕಾಯಿ

ಕೂದಲ ಹಣ್ಣು ಎಂದೂ ಇದನ್ನು ಕರೆಯುತ್ತಾರೆ. ಈ ಪುಡಿಯಿಂದ ಆಯುರ್ವೇದೀಯ ಶಾಂಪೂ ತಯಾರಿಸಲಾಗುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಎ, ಸಿ, ಡಿ ಮತ್ತು ಕೆ ಇವೆ. ಚೆನ್ನಾಗಿ ಒಣಗಿದ ಸೀಗೇಕಾಯಿ (ಇದೇ ಕಾರಣಕ್ಕೆ ಕೃಶ ಶರೀರಿಗಳಿಗೆ ಒಣಗಿ ಸೀಗೇಕಾಯಿಯಾದೆ ಎಂದೂ ಉಲ್ಲೇಖಿಸುತ್ತಾರೆ) ಯನ್ನು ಕುಟ್ಟಿ ಪುಡಿಮಾಡಿ ಇದರೊಂದಿಗೆ ಕೊಂಚ ಅಂಟುವಾಳ ಕಾಯಿ, ನೆಲ್ಲಿಕಾಯಿ ಪುಡಿ ಮತ್ತು ನೀರನ್ನು ಬೆರೆಸಿ ಶಾಂಪೂ ತಯಾರಿಸಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಮೂರು ಬಾರಿ ಉಪಯೋಗಿಸಿ.

ಕೂದಲಿನ ಆರೈಕೆಗೆ ಹಳ್ಳಿಗಾಡಿನ ಸೀಗೆಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿ

ಒಣಗಿದ ನೆಲ್ಲಿಕಾಯಿಯ ಪುಡಿಯನ್ನು ಮದರಂಗಿ ಪುಡಿಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿಕೊಂಡಾಗ ಇದು ಕೂದಲಿಗೆ ಗಾಢ ಕಂದು ಬಣ್ಣವನ್ನು ನೀಡುತ್ತದೆ. ಅಲ್ಲದೇ ಕೂದಲನ್ನು ದಟ್ಟ ಹಾಗೂ ದೃಢವಾಗಿಸುತ್ತದೆ. ಇದು ನೈಸರ್ಗಿಕ ಹಾಗೂ ಯಾವುದೇ ರಾಸಾಯನಿಕವಿಲ್ಲದ ಕಾರಣ ಈ ಪುಡಿಯನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸತತವಾಗಿ ಆರು ತಿಂಗಳವರೆಗೆ ಉಪಯೋಸುವುದರಿಂದ ಈ ಬಣ್ಣ ಶಾಶ್ವತವಾಗುತ್ತದೆ. ಈ ಮಿಶ್ರಣದೊಂದಿಗೆ ಕೊಂಚ ನೆಲ್ಲಿಕಾಯಿಯ ರಸ ಮತ್ತು ಕೊಬ್ಬರಿ ಎಣ್ಣೆಯನ್ನೂ ಬೆರೆಸಿ ತಲೆಗೂದಲ ಬುಡಕ್ಕೆ ಮಸಾಜ್ ಮಾಡುವ ಮೂಲಕ ತಲೆಹೊಟ್ಟು ಇಲ್ಲವಾಗುತ್ತದೆ ಹಾಗೂ ತಲೆಗೂದಲು ಇನ್ನಷ್ಟು ದೃಢವಾಗುತ್ತದೆ.

ಮನೆಮದ್ದು: ಕೂದಲಿನ ಆರೈಕೆಗೆ ಬೆಟ್ಟದ ನೆಲ್ಲಿಕಾಯಿ!

ಬೇವು

ಬೇವು

ಈ ಎಲೆಗಳನ್ನು ಭಾರತದಲ್ಲಿ ಸಾವಿರಾರು ವರ್ಷಗಳಿಂದ ಕೂದಲು ಹಾಗೂ ಚರ್ಮದ ತೊಂದರೆಗಾಗಿ ಬಳಸಲಾಗುತ್ತಾ ಬರಲಾಗಿದೆ. ಚೆನ್ನಾಗಿ ಒಣಗಿದ ಬೇವಿನ ಪುಡಿಯನ್ನು ಅಥವಾ ತಾಜಾ ಎಲೆಗಳನ್ನೂ ಬಳಸಬಹುದು. ವಿಧಾನ ಯಾವುದೇ ಆದರೂ ಇದರ ಶಿಲೀಂಧ್ರ ನಿವಾರಕ ಗುಣ ಹಾಗೂ ರಕ್ತಶುದ್ದೀಕರಣ ಗುಣಗಳು ಕಡಿಮೆಯಾಗುವುದಿಲ್ಲ. ವಿಶೇಷವಾಗಿ ತಲೆಯಲ್ಲಿ ಹೇನುಗಳ ಕಾಣವಿದ್ದರೆ ಹಾಗೂ ತಲೆಹೊಟ್ಟು ಇದ್ದರೆ ಈ ಎಲೆಗಳನ್ನು ಕುದಿಸಿ ಸೋಸಿದ ನೀರಿನಿಂದ ತಲೆ ತೊಳೆದುಕೊಳ್ಳುವ ಮೂಲಕ ಈ ತೊಂದರೆ ನಿವಾರಣೆಯಾಗುತ್ತದೆ.

ಬೇವು-ಮೊಸರಿನ ಪ್ಯಾಕ್- ಕಡಿಮೆ ಖರ್ಚು, ಅಧಿಕ ಲಾಭ!

ಅಂಟುವಾಳ ಕಾಯಿ

ಅಂಟುವಾಳ ಕಾಯಿ

ಸೋಪಿನ ಬೀಜ ಎಂದೂ ಕರೆಯಲ್ಪಡುವ ಅಂಟುವಾಳಕಾಯಿ ಒಂದು ನೈಸರ್ಗಿಕ ಕಂಡೀಶನರ್ ಆಗಿದೆ ಹಾಗೂ ಸಾಮಾನ್ಯವಾಗಿ ಸೀಗೆಪುಡಿಯೊಂದಿಗೆ ಬೆರೆಸಿ ಉಪಯೋಗಿಸಲಾಗುತ್ತದೆ. ಇದು ನೀರಿನೊಂದಿಗೆ ಬೆರೆತಾಗ ಸೋಪಿನಂತಗ ನೊರೆಯನ್ನು ಸೃಷ್ಟಿಸುತ್ತದೆ ಹಾಗೂ ಪ್ರತಿ ಕೂದಲಿಗೂ ಅತ್ಯುತ್ತಮ ಪೋಷಣೆ ಒದಗಿಸುತ್ತದೆ. ಅಲ್ಲದೇ ಕೂದಲು ಉದುರುವುದನ್ನು ನಿಲ್ಲಿಸುತ್ತದೆ ಹಾಗೂ ಕೂದಲ ಕಾಂತಿ ಹೆಚ್ಚಿಸುತ್ತದೆ ಹಾಗೂ ಸೊಂಪಾಗಿಸಲು ನೆರವಾಗುತ್ತದೆ.

ಬ್ರಾಹ್ಮಿ

ಬ್ರಾಹ್ಮಿ

ಈ ಆಯುರ್ವೇದೀಯ ಮೂಲಿಕೆ ಕೂದಲನ್ನು ರಕ್ಷಿಸಲು ಮತ್ತು ಕೂದಲ ಬೆಳವಣಿಗೆಯನ್ನು ಹೆಚ್ಚಿಸಲು ಅತ್ಯುತ್ತಮವಾಗಿದೆ. ಇದು ಕೂದಲ ಬುಡಕ್ಕೆ ಪೋಷಣೆ ಒದಗಿಸುವ ಮೂಲಕ ಕೂದಲ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಬ್ರಾಹ್ಮಿಯನ್ನು ಹೆಚ್ಚಿನ ಆರ್ಯುವೇದೀಯ ಕೂದಲ ಪ್ರಸಾದನಗಳಲ್ಲಿ ಬಳಸಲಾಗುತ್ತದೆ. ಬ್ರಾಹ್ಮಿ ಎಲೆಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಲಾಗುತ್ತದೆ. ಈ ಪುಡಿ ಗ್ರಂಥಿಗೆ ಅಂಗಡಿಗಳಲ್ಲಿ ಸಿದ್ದರೂಪದಲ್ಲಿಯೂ ಸಿಗುತ್ತದೆ. ಈ ಪುಡಿಯನ್ನು ಮೊಸರು, ಜೇನಿನೊಂದಿಗೆ ಬೆರೆಸಿ ಮನೆಯಲ್ಲಿಯೇ ತಯಾರಿಸಿದ ಕೂದಲ ಪ್ರಸಾದನವನ್ನು ನಿತ್ಯವೂ ಬಳಸಿ.

ಲೋಳೆಸರ

ಲೋಳೆಸರ

ತಾಜಾ ಲೋಳೆಸರ ಕೋಡುಗಳ ತಿರುಳಿನಲ್ಲಿ ತ್ವಚೆಯ ಸತ್ತ ಜೀವಕೋಶಗಳನ್ನು ಕರಗಿಸಿಕೊಳ್ಳುವ ಶಕ್ತಿ ಇದೆ. ಇದನ್ನು ನಿಮ್ಮ ನೆತ್ತಿಯ ಚರ್ಮದ ಮೇಲೆ ಹೆಚ್ಚಿಕೊಳ್ಳುವ ಮೂಲಕ ತಲೆಹೊಟ್ಟು ಇಲ್ಲವಾಗುತ್ತದೆ ಹಾಗೂ ತ್ವಚೆಯ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ಅಲ್ಲದೇ ಕೂದಲನ್ನು ಮೃದುವಾಗಿಸುತ್ತದೆ ಹಾಗೂ ಕಂಡೀಶನ್ ಪರಿಣಾಮವನ್ನೂ ನೀಡುತ್ತದೆ. ಪ್ರತಿಬಾರಿ ತಲೆಸ್ನಾನ ಮಾಡುವಾಗಲೂ ಈ ತಿರುಗಳನ್ನು ಕೊಂಚವಾಗಿ ತಲೆಗೆ ಹಚ್ಚಿಕೊಳ್ಳಿ.

ಅಶ್ವಗಂಧ

ಅಶ್ವಗಂಧ

ಈ ಮೂಲಿಕೆಯಲ್ಲಿ ಟೈರೋಸಿನ್ ಎಂಬ ಪೋಷಕಾಂಶವಿದೆ. ಇದೊಂದು ಅವಶ್ಯಕ ಅಮೈನೋ ಆಮ್ಲವಾಗಿದೆ ಹಾಗೂ ಕೂದಲ ಆರೋಗ್ಯಕ್ಕೆ ಅತ್ಯಂತ ಉತ್ತಮವಾಗಿದೆ. ಇದು ಕೂದಲ ಅಕಾಲಿಕ ನೆರೆಯುವಿಕೆಯನ್ನು ತಡೆಯುತ್ತದೆ ಹಾಗೂ ಕೂದಲ ಬೆಳವಣಿಗೆಯನ್ನೂ ಹೆಚ್ಚಿಸುತ್ತದೆ. ಈ ಮೂಲಿಕೆಯೂ ಪುಡಿಯ ರೂಪದಲ್ಲಿ ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ.

ಮೆಂತೆ ಕಾಳುಗಳು

ಮೆಂತೆ ಕಾಳುಗಳು

ಕೊಂಚ ಮೆಂತೆಕಾಳುಗಳನ್ನು ಅವು ಮುಳುಗುವಷ್ಟು ನೀರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಟ್ಟು ಮರುದಿನ ಬೆಳಿಗ್ಗೆ ಇದನ್ನು ಅದೇ ನೀರಿನೊಂದಿಗೆ ಅರೆಯಿರಿ. ಇದನ್ನು ಸಮಪ್ರಮಾಣದ ಮೊಸರಿನೊಂದಿಗೆ ಬೆರೆಸಿ ನೆತ್ತಿಗೆ ಹಚ್ಚಿಕೊಳ್ಳಿ. ಸುಮಾರು ಅರ್ಧ ಘಂಟೆ ಬಿಟ್ಟು ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿ ಈ ವಿಧಾನದಿಂದ ಕೂದಲ ಬೆಳವಣಿಗೆ ಅತ್ಯುತ್ತಮವಾಗುತ್ತದೆ.

ರೋಸ್ಮರಿ

ರೋಸ್ಮರಿ

ಈ ಪಟ್ಟಿಯಲ್ಲಿರುವ ಇತರ ಸಾಮಾಗ್ರಿಗಳಿಗಿಂತಲೂ ಈ ಸಾಮಾಗ್ರಿ ಕೊಂಚ ದುಬಾರಿಯಾಗಿದೆ ಆದರೆ ಅತ್ಯುತ್ತಮ ಫಲಿತಾಂಶವನ್ನು ಒದಗಿಸುತ್ತದೆ. ಕೆಲವು ಹನಿ ರೋಸ್ಮರಿ ಎಣ್ಣೆಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ ಹಾಗೂ ಕೂದಲ ಬುಡವನ್ನು ನಯವಾಗಿ ಮಸಾಜ್ ಮಾಡಿ. ರಾತ್ರಿಯಿಡೀ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿ.

ದಾಸವಾಳ

ದಾಸವಾಳ

ಈ ಸಾಮಾನ್ಯ ಹೂವಿನಲ್ಲಿಯೂ ವಿಟಮಿನ್ನುಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿವೆ. ಕೆಲವು ದಾಸವಾಳದ ತಾಜಾ ಹೂವುಗಳನ್ನು ಕೊಂಚ ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ತಣಿಸಿ. ಈ ಎಣ್ಣೆಯನ್ನು ತಲೆಗೆ ಕೊಂಚ ಮಸಾಜ್ ಮೂಲಕ ಹಚ್ಚಿಕೊಂಡು ಸುಮಾರು ಎರಡು ಗಂಟೆಗಳ ಬಳಿಕ ಸ್ನಾನ ಮಾಡಿ. ಇದು ಕೂದಲ ಕಾಂತಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಕೂದಲ ದೃಢತೆಯನ್ನೂ ಹೆಚ್ಚಿಸುತ್ತದೆ.

ಕೂದಲಿನ ಅಂದ-ಚಂದಕ್ಕೆ ಮನೆಯಂಗಳದ 'ದಾಸವಾಳ ಹೂವು'

English summary

10 Best Ayurvedic Herbs For Healthy Hair

We women are always looking for something that would help us enhance hair growth, make it thicker, and lustrous. However, one of the most challenging issues a woman faces is a receding hairline. The causes are many - stress, genetics, excessive use of chemicals, dyeing of hair, and many more. Hair fall in itself is stressful. Early whitening of hair is also a major issue women face very early in their life. So, here are 10 best ayurvedic herbs to make your hair healthy, stronger and thick. We bet you would reach out to these often once you find their beneficial effects working on you with regular use.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more