For Quick Alerts
ALLOW NOTIFICATIONS  
For Daily Alerts

ಎಣ್ಣೆಯುಕ್ತ ಕೂದಲಿನ ಸಮಸ್ಯೆಗೆ ಮನೆ ಔಷಧಿಯ ಆರೈಕೆ

By Divya Pandith
|

ನಿತ್ಯವೂ ಎಣ್ಣೆಯುಕ್ತ ಕೇಶರಾಶಿಯಿಂದಾಗಿ ಹತಾಶರಾಗಿದ್ದೀರಿ ಅಥವಾ ಜಿಡ್ಡಿನಿಂದ ಕೂಡಿರುವ ಕೇಶರಾಶಿಗೆ ಆರೈಕೆ ಮಾಡುವುದು ಹೇಗೇ? ಎನ್ನುವ ಗೊಂದಲದಲ್ಲಿ ನೀವಿದ್ದೀರಿ ಎಂದಾದರೆ ಇಂದಿನ ಕೇಶರಾಶಿಯ ಆರೈಕೆ ಲೇಖನವು ಅತ್ಯಂತ ಉಪಯೋಗಕಾರಿಯಾಗುವುದು. ಈ ದಿನ ಬೋಲ್ಡ್ ಸ್ಕೈ ಎಣ್ಣೆಯಿಂದ ಕೂಡಿರುವ ಕೂದಲನ್ನು ಹೇಗೆ ಆರೈಕೆ ಮಾಡಬಹುದು? ಎನ್ನುವುದಕ್ಕೆ ಸರಳವಾದ ಉತ್ತಮ ಆರೈಕೆ ವಿಧಾನವನ್ನು ತಿಳಿಸಿಕೊಡುತ್ತಿದೆ.

ಎಷ್ಟೋ ಮಹಿಳೆಯರಿಗೆ ನಿತ್ಯವೂ ಕೆಲಸದ ಓಡಾಟ ಹಾಗೂ ಮನೆಯ ಜವಾಬ್ದಾರಿ ಕೆಲಸಗಳ ನಡುವೆ ತಮ್ಮ ಆರೋಗ್ಯದ ಆರೈಕೆ ಮಾಡಿಕೊಳ್ಳುವುದಕ್ಕೆ ಸಮಯವೇ ಸಿಗುವುದಿಲ್ಲ. ಅದರಲ್ಲೂ ಜಿಡ್ಡಿನಿಂದ ಕೂಡಿರುವ ಕೇಶರಾಶಿಯ ಆರೈಕೆ ಎಂದರೆ ಸ್ವಲ್ಪ ಬಿಡುವನ್ನು ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಅನೇಕರು ಈ ಕುರಿತು ನಿರ್ಲಕ್ಷ್ಯ ತೋರುತ್ತಾರೆ.

ಎಣ್ಣೆಯುಕ್ತ ಕೂದಲಿಗೆ ಮನೆಯಲ್ಲೇ ಶಾಂಪೂ ತಯಾರಿಸಿ

ಒತ್ತಡದ ಕೆಲಸ ಹಾಗೂ ಗಡಿಬಿಡಿಯ ಜೀವನದ ಮಧ್ಯೆಯೂ ಕೊಂಚ ಸಮಯದಲ್ಲೇ ಸರಳವಾಗಿ ಕೇಶರಾಶಿಯ ಆರೈಕೆ ಮಾಡಬಹುದು. ಅದಕ್ಕಾಗಿ ಕೆಲವು ಉತ್ಪನ್ನಗಳ ಬಳಕೆ ಹಾಗೂ ಬಳಸುವ ವಿಧಾನವನ್ನು ನಾವು ಅರಿಯಬೇಕು. ನೈಸರ್ಗಿಕವಾದ ಸರಳ ವಸ್ತುಗಳಿಂದ ಎಣ್ಣೆಯುಕ್ತ ಕೇಶರಾಶಿಗೆ ಯಾವ ಬಗೆಯಲ್ಲಿ ಆರೈಕೆ ಕೈಗೊಳ್ಳಬಹುದು ಎನ್ನುವ ಎಂಟು ವಿಧಾನಗಳ ವಿವರಣೆಯನ್ನು ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾಗಿದೆ....

ವಿಚ್ ಹ್ಯಾಝಲ್ + ಗ್ರೀನ್ ಟೀ

ವಿಚ್ ಹ್ಯಾಝಲ್ + ಗ್ರೀನ್ ಟೀ

-ಒಂದು ಟೀ ಚಮಚ ವಿಚ್ ಹ್ಯಾಝಲ್‍ಗೆ ತಣ್ಣಗಾಗಿರುವ 2 ಟೀ ಚಮಚ ಗ್ರೀನ್ ಟೀ ಸೇರಿಸಿ.

-ಚೆನ್ನಾಗಿ ಮಿಶ್ರಗೊಳಿಸಿ.

-ನೆತ್ತಿ ಭಾಗಕ್ಕೆ ಮತ್ತು ಕೇಶರಾಶಿಗೆ ಅನ್ವಯಿಸಿ, ಮಸಾಜ್ ಮಾಡಿ.

- ಸ್ವಲ್ಪ ಸಮಯದ ಬಳಿಕ ಶ್ಯಾಂಪು ಬಳಸಿಕೊಂಡು ತಣ್ಣೀರಿನಲ್ಲಿ ತೊಳೆಯಿರಿ.

ಹೀಗೆ ವಾರಕ್ಕೊಮ್ಮೆ ಮಾಡುವುದರಿಂದ ಕೇಶರಾಶಿಯು ಸಮೃದ್ಧವಾಗಿ ಬೆಳೆಯುವುದು. ಜೊತೆಗೆ ಹೆಚ್ಚುವರಿ ಜಿಡ್ಡಿನಿಂದ ಬಳಲುವಿಕೆಯನ್ನು ತಡೆಯಬಹುದು.

ಟ್ರೀ ಎಣ್ಣೆ+ ಆಲಿವ್ ಎಣ್ಣೆ

ಟ್ರೀ ಎಣ್ಣೆ+ ಆಲಿವ್ ಎಣ್ಣೆ

4 ರಿಂದ 5 ಹನಿ ಟೀ ಟ್ರೀ ಎಣ್ಣೆ ಮತ್ತು 2 ಟೇಬಲ್ ಚಮಚ ಆಲಿವ್ ಎಣ್ಣೆಯನ್ನು ಬೆರೆಸಿ.

ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ.

20 ನಿಮಿಷಗಳ ಬಳಿಕ ತಣ್ಣೀರಿನಿಂದ ಕೇಶರಾಶಿಯನ್ನು ತೊಳೆಯಿರಿ.

ಹೀಗೆ ಹದಿನೈದು ದಿನಗಳಿಗೆ ಅಥವಾ ತಿಂಗಳಿಗೊಮ್ಮೆ ಮಾಡುವುದರಿಂದ ಎಣ್ಣೆಯುಕ್ತ ಕೂದಲನ್ನು ಆರೈಕೆ ಮಾಡಬಹುದು.

ಮೊಟ್ಟೆಯ ಹಳದಿ ಲೋಳೆ+ ನಿಂಬೆ ರಸ

ಮೊಟ್ಟೆಯ ಹಳದಿ ಲೋಳೆ+ ನಿಂಬೆ ರಸ

ಒಂದು ಮೊಟ್ಟೆಯ ಹಳದಿ ಲೋಳೆಗೆ 3 ಟೇಬಲ್ ಚಮಚ ನಿಂಬೆ ರಸವನ್ನು ಬೆರೆಸಿ.

ಚೆನ್ನಾಗಿ ಕಲಸಿದ ಈ ಮಿಶ್ರಣವನ್ನು ತಲೆಗೆ ಪರಿಣಾಮಕಾರಿಯಾಗಿ ಅನ್ವಯಿಸಿ.

ಒಂದು ಗಂಟೆಯ ಬಳಿಕ ಶ್ಯಾಂಪೂ ಹಾಗೂ ಉತ್ಸಾಹ ಇಲ್ಲದ ನೀರಿನಿಂದ ತೊಳೆಯಿರಿ.

ಅತಿಯಾದ ಜಿಡ್ಡನ್ನು ನಿಯಂತ್ರಿಸಲು ವಾರಕ್ಕೊಮ್ಮೆ ಈ ವಿಧಾನವನ್ನು ಅನ್ವಯಿಸಿದರೆ ಉತ್ತಮ ಪರಿಣಾಮ ಬೀರುವುದು.

 ಪುದೀನ ರಸ + ಜೇನುತುಪ್ಪ

ಪುದೀನ ರಸ + ಜೇನುತುಪ್ಪ

ಒಂದು ಟೇಬಲ್ ಚಮಚ ಪುದೀನ ರಸಕ್ಕೆ 2 ಟೀ ಚಮಚ ಜೇನುತುಪ್ಪವನ್ನು ಬೆರೆಸಿ.

ಮಿಶ್ರಣವನ್ನು ನೆತ್ತಿಯ ಭಾಗ ಹಾಗೂ ಕೇಶರಾಶಿಯ ಉಳಿದ ಭಾಗಕ್ಕೆ ಅನ್ವಯಿಸಿ.

20 ನಿಮಿಷಗಳ ಬಳಿಕ ಉತ್ಸಾಹವಿಲ್ಲದ ನೀರಿನಿಂದ ತೊಳೆಯಿರಿ.

ತಿಂಗಳಿಗೆ ಎರಡು ಬಾರಿ ಈ ಕ್ರಿಯೆಯನ್ನು ಅನ್ವಯಿಸಿದರೆ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು.

 ಬಿಯರ್+ಸೇಬು

ಬಿಯರ್+ಸೇಬು

ಸೇಬು ಹಣ್ಣಿನ ಪೀಸ್‍ಗಳನ್ನು ರುಬ್ಬಿ ಪೇಸ್ಟ್ ಮಾಡಿ.

ಅರ್ಧ ಕಪ್ ಬಿಯರ್‍ಗೆ ಸೇಬು ಹಣ್ಣಿನ ಪೇಸ್ಟ್ ಸೇರಿಸಿ.

ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ, 20 ನಿಮಿಷಗಳ ಕಾಲ ಬಿಡಿ.

ಬಳಿಕ ಶಾಂಪೂವನ್ನು ಬಳಸಿ ತೊಳೆಯಿರಿ.

ತಿಂಗಳಿಗೊಮ್ಮೆ ಈ ಪ್ರಕ್ರಿಯೆಯನ್ನು ಮುಂದುವರಿಸಿದರೆ ಕೇಶರಾಶಿಯಲ್ಲಿ ಸಂಗ್ರಹವಾಗುವ ಎಣ್ಣೆಯಂಶವನ್ನು ತಡೆಯಬಹುದು.

ಆಪಲ್ ಸೈಡರ್ ವಿನೆಗರ್+ತೆಂಗಿನ ಎಣ್ಣೆ

ಆಪಲ್ ಸೈಡರ್ ವಿನೆಗರ್+ತೆಂಗಿನ ಎಣ್ಣೆ

ಒಂದು ಬಟ್ಟಲಿನಲ್ಲಿ 1/2 ಟೀ ಚಮಚ ಸೇಬು ಸೈಡರ್ ವಿನೆಗರ್ ಮತ್ತು 1 ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ.

ಇವುಗಳ ಮಿಶ್ರಣವನ್ನು ನೆತ್ತಿ ಮತ್ತು ತಲೆಯ ಭಾಗಕ್ಕೆ ಅನ್ವಯಿಸಿ.

20 ನಿಮಿಷಗಳ ಬಳಿಕ ಮೃದುವಾದ ನೀರಿನಲ್ಲಿ ತೊಳೆಯಿರಿ.

ಗಣನೀಯವಾಗಿ ಈ ಕ್ರಿಯೆಯನ್ನು ಮುಂದುವರಿಸಿದರೆ ಉತ್ತಮವಾದ ಪರಿಣಾಮವನ್ನು ಪಡೆಯಬಹುದು.

ಓಟ್‍ಮೀಲ್ + ಆಮ್ಲಾ

ಓಟ್‍ಮೀಲ್ + ಆಮ್ಲಾ

ಬೇಯಿಸಿಕೊಂಡ ಓಟ್ ಮೀಲ್ 2 ಟೀ ಚಮಚ ಮತ್ತು 2-3 ಟೇಬಲ್ ಚಮಚ ನೆಲ್ಲಿಕಾಯಿ ರಸವನ್ನು ಸೇರಿಸಿ.

ಚೆನ್ನಾಗಿ ಕಲಸಿದ ಈ ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಭಾಗಕ್ಕೆ ಅನ್ವಯಿಸಿ.

20-25 ನಿಮಿಷಗಳ ಬಳಿಕ ತೊಳೆಯಿರಿ.

ಹೀಗೆ ವಾರಕ್ಕೊಮ್ಮೆ ಮಾಡುವುದರಿಂದ ಎಣ್ಣೆಯುಕ್ತ ಕೇಶರಾಶಿಯ ಸಮಸ್ಯೆಯನ್ನು ತಡೆಯಬಹುದು.

ರೋಸ್ಮೆರಿ ಎಸೆನ್ಸಿಯಲ್ ಎಣ್ಣೆ + ಬಾದಾಮಿ ಎಣ್ಣೆ

ರೋಸ್ಮೆರಿ ಎಸೆನ್ಸಿಯಲ್ ಎಣ್ಣೆ + ಬಾದಾಮಿ ಎಣ್ಣೆ

2 ಟೇಬಲ್ ಚಮಚ ರೋಸ್ಮರಿ ಎಸೆನ್ಸಿಯಲ್ ಎಣ್ಣೆಗೆ 4 ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ.

ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಭಾಗಕ್ಕೆ ಅನ್ವಯಿಸಿ.

20 ರಿಂದ 25 ನಿಮಿಷಗಳ ಕಾಲ ಆರಲು ಬಿಡಿ.

ಬಳಿಕ ಶ್ಯಾಂಪು ಮತ್ತು ನೀರನ್ನು ಬಳಸಿ ಸ್ವಚ್ಛಗೊಳಿಸಿ.

ತಿಂಗಳಿಗೆ ಎರಡು ಬಾರಿ ಹೀಗೆ ಮಾಡುವುದರಿಂದ ಅತ್ಯುತ್ತಮ ಪರಿಣಾಮವನ್ನು ಪಡೆಯಬಹುದು.

English summary

Wonderful 2-Ingredient DIY Masks For Oily Hair

Pamper your oily hair with any of the following recipes to get rid of the greasiness and other related problems that make your tresses appear unsightly. Take a look at them here:
X
Desktop Bottom Promotion