ಹೊಸ ಟ್ರಿಕ್ಸ್: ಕೂದಲಿನ ಆರೈಕೆ ಕ್ಲಾರಿಫೈಯಿಂಗ್ ಶಾಂಪೂ!

Posted By: Jaya subramanya
Subscribe to Boldsky

ಇಂದಿನ ದಿನಗಳಲ್ಲಿ ತ್ವಚೆ ಮತ್ತು ಕೂದಲು ಕಲುಷಿತ ವಾತಾವರಣಕ್ಕೆ ಹೆಚ್ಚು ಹೆಚ್ಚು ಒಳಗಾಗುತ್ತಿವೆ. ತ್ವಚೆಯ ಸಮಸ್ಯೆಗಳು ಅಂತೆಯೇ ಕೂದಲಿನ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ನೈಸರ್ಗಿಕ ಉತ್ಪನ್ನಗಳೂ ಕೆಲವೊಮ್ಮೆ ಪ್ರಯೋಜನಕ್ಕೆ ಬಾರದ ಸ್ಥಿತಿಯನ್ನು ತಲುಪಿವೆ. ಅದಾಗ್ಯೂ ರಾಸಾಯನಿಕಗಳ ಬಳಕೆಯನ್ನು ಜಾಸ್ತಿ ಮಾಡಿದಷ್ಟೂ ಇನ್ನಷ್ಟು ಕೆಟ್ಟ ಪರಿಣಾಮಗಳನ್ನು ಅನುಭವಿಸುವಂತಹ ಸ್ಥಿತಿ ಬಂದೊದಗಿದೆ. ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಪೋಷಣೆ ಮಾಡುವುದರ ಜೊತೆಗೆ ಒಮ್ಮೊಮ್ಮೆ ಕೆಲವೊಂದು ಉತ್ತಮ ರೀತಿಯ ಕಾಳಜಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ತ್ವಚೆಯ ವಿಷಯದಲ್ಲೂ ಇಂತಹುದೇ ವಿಧಾನಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಕೂದಲಿನ ವಿಷಯಕ್ಕೆ ಬಂದಾಗ ನಿಮ್ಮ ನಿಯಮಿತ ಶಾಂಪೂ ಬಳಸಿದ ಮೇಲೂ ವಾರಕ್ಕೊಮ್ಮೆ ಕ್ಲಾರಿಫೈಯಿಂಗ್ ಶಾಂಪೂವನ್ನು ನೀವು ಬಳಸಬೇಕು. ಕ್ಲಾರಿಫೈಯಿಂಗ್ ಶಾಂಪೂ ಎಂದರೇನು ಎಂಬುದನ್ನು ನಾವು ಇಲ್ಲಿ ತಿಳಿಸುತ್ತಿದ್ದು ಇದು ನಿಮ್ಮ ಕೂದಲಿನ ಮೇಲೆ ಚಮತ್ಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. 

ಕೂದಲಿಗೆ ಶಾಂಪೂ ಹಾಕುವಾಗ, ಗಡಿಬಿಡಿ ಮಾಡಿಕೊಳ್ಳಬೇಡಿ!

ಕ್ಲೆನ್ಸಿಂಗ್ ಅಥವಾ ಡಿಟಕ್ಸಿಫೈಯಿಂಗ್ ಶಾಂಪೂ ಎಂಬುದಾಗಿ ಕೂಡ ಇದನ್ನು ಕರೆಯಲಾಗುತ್ತದೆ. ಕೂದಲಿನಲ್ಲಿರುವ ಕೊಳೆ, ಧೂಳು, ತಲೆಬುರುಡೆಯಲ್ಲಿರುವ ಹೊಟ್ಟು ನಿವಾರಿಸಲು ಈ ಶಾಂಪೂ ನೆರವಾಗಲಿದೆ. ಇತರ ಶಾಂಪೂ ಮತ್ತು ಕಂಡೀಷನರ್‌ಗಳಿಗೆ ಹೋಲಿಸಿದಾಗ ಇದು ದಪ್ಪವಿದೆ ಅಂತೆಯೇ ತಲೆಬುರುಡೆಯಲ್ಲಿರುವ ವ್ಯಾಕ್ಸ್, ಸಿಲಿಕಾನ್ ಇತರ ಹಾನಿಕಾರಕ ರಾಸಾಯನಿಕಗಳನ್ನು ನಿವಾರಿಸಲಿದೆ. ಮುಂದೆ ಓದಿ...

ತಲೆಬುರುಡೆಯಲ್ಲಿರುವ ರಾಸಾಯನಿಕವನ್ನು ನಿವಾರಿಸುತ್ತದೆ

ತಲೆಬುರುಡೆಯಲ್ಲಿರುವ ರಾಸಾಯನಿಕವನ್ನು ನಿವಾರಿಸುತ್ತದೆ

ನಿಮ್ಮ ತಲೆಬುರುಡೆಯಲ್ಲಿ ನಿರ್ಮಾಣವಾಗಿರುವ ರಾಸಾಯನಿಕಗಳನ್ನು ಇದು ನಿವಾರಿಸಲಿದೆ. ಸಿಲಿಕಾನ್‌ಯುಕ್ತ ಕಂಡೀಷನರ್‌ನಿಂದ ತಲೆಬುರುಡೆಯಲ್ಲಿ ನಿರ್ಮಾಣವಾಗಿರುವ ವಿಷ ಪದಾರ್ಥವನ್ನು ಇದು ನಿವಾರಣೆ ಮಾಡಲು ಸಹಾಯ ಮಾಡಲಿದೆ. ನಿಮ್ಮ ಕೂದಲಿನಲ್ಲಿ ನೀವು ಹಲವಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದೀರಿ ಎಂದಾದಲ್ಲಿ ಈ ವಿಧದ ಶಾಂಪೂ ಉತ್ತಮವಾದುದು.

ನೇರ ಕೂದಲಿಗಾಗಿ ಉತ್ತಮ ಪೋಷಣೆ

ನೇರ ಕೂದಲಿಗಾಗಿ ಉತ್ತಮ ಪೋಷಣೆ

ನೇರವಾದ ಕೂದಲು ಹೊಂದಿರುವವರು ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಮುಖದ ಮುಂಭಾಗದಲ್ಲಿಯೇ ಹೆಚ್ಚಿನ ಸಮಯ ಇವರಿಗೆ ಕೂದಲು ಬೀಳುತ್ತಿರುತ್ತದೆ. ಇದರಿಂದ ಮುಖದಲ್ಲಿ ಜಿಡ್ಡು ಆವರಿಸಿಕೊಂಡು ಬಿಡುತ್ತದೆ. ಕ್ಲಾರಿಫೈಯಿಂಗ್ ಶ್ಯಾಂಪೂವನ್ನು ಬಳಸಿಕೊಂಡು ನಿಮ್ಮ ಕೂದಲನ್ನು ನೀವು ಕೇಳುವ ರೀತಿಯಲ್ಲಿ ಹೊಂದಿಸಿಕೊಳ್ಳಬಹುದಾಗಿದೆ.

ಜಿಡ್ಡಿನ ತಲೆಬುರುಡೆಯನ್ನು ಉಪಚರಿಸುತ್ತದೆ

ಜಿಡ್ಡಿನ ತಲೆಬುರುಡೆಯನ್ನು ಉಪಚರಿಸುತ್ತದೆ

ನಿಮ್ಮ ತಲೆಬುರುಡೆಯ ಪದರವು ಜಿಡ್ಡಿನಿಂದ ಆವೃತವಾಗಿದೆ ಎಂದಾದಲ್ಲಿ ಈ ಬಗೆಯ ಶ್ಯಾಂಪೂವನ್ನು ಬಳಸಿಕೊಂಡು ಸೂಕ್ತ ಕಾಳಜಿಯನ್ನು ಪಡೆದುಕೊಳ್ಳಬಹುದಾಗಿದೆ. ಪರ್ಯಾಯ ದಿನಗಳಂದು ಕ್ಲಾರಿಫೈಯಿಂಗ್ ಶ್ಯಾಂಪೂನಿಂದ ಕೂದಲನ್ನು ತೊಳೆದುಕೊಳ್ಳಿ. ನಿಮ್ಮ ತಲೆಬುರುಡೆಗೆ ಇದು ಕಡಿಮೆ ಹಾನಿಯನ್ನು ಮಾಡಲಿದೆ. ಅಂತೆಯೇ ನಿಮ್ಮ ದೈನಂದಿನ ಶ್ಯಾಂಪೂವಿನೊಂದಿಗೆ ಇದನ್ನು ಬಳಸಬೇಡಿ ಇದರಿಂದ ಕೂದಲಿನ ಬಣ್ಣ ಮಸುಕಾಗಬಹುದು.

ಹೇರ್‌ ಮಾಸ್ಕ್‌ನಂತೆ ಕೂಡ ಬಳಸಬಹುದು

ಹೇರ್‌ ಮಾಸ್ಕ್‌ನಂತೆ ಕೂಡ ಬಳಸಬಹುದು

ನಿಮಗೆ ಮಾಯಿಶ್ಚರೈಸ್‌ನಿಂದ ಕೂಡಿದ ಆರೋಗ್ಯಪೂರ್ಣ ಕೂದಲು ಬೇಕು ಎಂದಾದಲ್ಲಿ ಹೇರ್ ಮಾಸ್ಕ್‌ನಂತೆ ಈ ಶ್ಯಾಂಪೂವನ್ನು ಬಳಸಬಹುದು. ಪೂರ್ವ ತೊಳೆಯುವಿಕೆ ಮಾಸ್ಕ್‌ನಂತೆ ಇದನ್ನು ಬಳಸಿ. ಇದು ಕೊಳೆಯೊಂದಿಗೆ ಹೋರಾಡಿ ಅರೋಗ್ಯಪೂರ್ಣ ಕೂದಲನ್ನು ನೀಡುತ್ತದೆ.ಕ್ಲಾರಿಫೈಯಿಂಗ್ ಮಾಸ್ಕ್ ಅನ್ನು ಹಚ್ಚಿಕೊಂಡು ಹದಿನೈದು ನಿಮಿಷ ಕಾಯಿರಿ. ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಈ ಮಾಸ್ಕ್ ಅನ್ನು ತೆಗೆದನಂತರ ದೈನಂದಿನ ಶ್ಯಾಂಪೂವಿನಿಂದ ಕೂದಲು ತೊಳೆಯಿರಿ.

ಕ್ಲೋರಿನ್‌ನಿಂದ ಕೂದಲಿನ ಹಾನಿಯನ್ನು ತಡೆಗಟ್ಟುತ್ತದೆ

ಕ್ಲೋರಿನ್‌ನಿಂದ ಕೂದಲಿನ ಹಾನಿಯನ್ನು ತಡೆಗಟ್ಟುತ್ತದೆ

ನೀರಿನಲ್ಲಿ ಈಜುವವರಿಗೆ ಕ್ಲೋರಿನ್‌ ಪರಿಣಾಮ ಕೂದಲಿನ ಮೇಲೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಮುಕ್ತವಾಗಲು ಕ್ಲಾರಿಫೈಯಿಂಗ್ ಶ್ಯಾಂಪೂವಿನ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ ಸ್ವಿಮ್ಮಿಂಗ್ ಪೂಲ್‌ನಿಂದ ಹೊರಬಂದ ಒಡನೆಯೇ ಈ ಶಾಂಪೂ ಬಳಸಿಕೊಂಡು ಕೂದಲನ್ನು ತೊಳೆದುಕೊಳ್ಳಿ.

ಹೇರ್ ಕಲರಿಂಗ್ ಚಿಕಿತ್ಸೆಗಾಗಿ ಕೂದಲನ್ನು ಸಿದ್ಧಪಡಿಸಲು

ಹೇರ್ ಕಲರಿಂಗ್ ಚಿಕಿತ್ಸೆಗಾಗಿ ಕೂದಲನ್ನು ಸಿದ್ಧಪಡಿಸಲು

ಕೂದಲಿಗೆ ಬಣ್ಣವನ್ನು ಹಚ್ಚಿಕೊಳ್ಳುವ ಮೊದಲು ನೀವು ಕ್ಲಾರಿಫೈಯಿಂಗ್ ಶಾಂಪೂನಿಂದ ಕೂದಲನ್ನು ತೊಳೆದುಕೊಳ್ಳಬೇಕು ಎಂಬುದಾಗಿ ಪರಿಣಿತರು ಹೇಳುತ್ತಾರೆ. ಈ ಶಾಂಪೂ ತಲೆಬುರುಡೆಯಲ್ಲಿರುವ ಯಾವುದೇ ರಾಸಾಯನಿಕ ಅಂಶವನ್ನು ನಿವಾರಿಸುತ್ತದೆ. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವ ಮೊದಲು ಒಂದು ಅಥವಾ ಎರಡು ಬಾರಿ ಈ ಶಾಂಪೂವನ್ನು ಬಳಸಿ.

For Quick Alerts
ALLOW NOTIFICATIONS
For Daily Alerts

    English summary

    Why Should We Use A Clarifying Shampoo? Know The Benefits Here!

    Most of the clarifying shampoos are generally formulated to cleanse your scalp gently but do not contain moisturising agents as compared to other shampoos or conditioners. So, if you dream about getting soft and silky hair, this is not possible by using a clarifying shampoo, as it does not contain any moisturising ingredient in it. Well, here we mention to you some of the reasons on why you should use a clarifying shampoo. Read on to know about the benefits of using a clarifying shampoo.
    Story first published: Sunday, June 25, 2017, 23:41 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more