For Quick Alerts
ALLOW NOTIFICATIONS  
For Daily Alerts

ಕೂದಲು ಸುಂದರವಾಗಿ ಕಾಣಬೇಕೇ? ಈ ಟಿಪ್ಸ್ ಓದಿ ನೋಡಿ...

By Anuradha Yogesh
|

ಸುಂದರ ಕೇಶರಾಶಿ ಇರುವ ಮಹಿಳೆ ನೋಡಿದ ಕೂಡಲೆ ಯಾವ ಹಾಡು ನೆನಪಾಗುತ್ತದೆ ಹೇಳಿ? ರಾಜೇಶಖನ್ನಾರವರ 'ಯೇ ರೇಶಮಿ ಝುಲ್ಫೆ, ಯೇ ಶರ್ಬತಿ ಆಂಖೆ...' ಅಲ್ಲವೆ? ಸುಂದರ ಕೇಶರಾಶಿ ಇರುವ ಹೆಂಗಳೆಯರನ್ನು ತಿರುಗಿ ತಿರುಗಿ ನೋಡದೆ ಇರಲು ಸಾಧ್ಯವೇ ಇಲ್ಲ. ಈಗೀನ ಕಾಲದಲ್ಲಿ ಕೇಶರಾಶಿ ಅಷ್ಟು ಅಪರೂಪವಾಗಿದೆಯಲ್ಲ ಏನು ಮಾಡುವದು ಹೇಳಿ.

ಯಾರನ್ನ ಕೇಳಿದರೂ ಒಂದೇ ಗೋಳು, 'ಅಯ್ಯೋ ತುಂಬ ಕೂದಲು ಉದುರುತ್ತದೆ ಏನು ಮಾಡೋದು ಗೊತ್ತಾಗ್ತಾ ಇಲ್ವಲ್ಲ'. ಯಾವ್ಯಾವದೋ ಬ್ಯುಟಿ ಪಾರ್ಲರುಗಳಿಗೆ ಹೋಗಿ ಸಾವಿರಾರು ರೂಪಾಯಿಗಳಷ್ಟು ಖರ್ಚು ಮಾಡಿ ಪ್ರೊಟೀನ್ ಟ್ರೀಟ್‌ಮೆಂಟ್, ಆಯಿಲ್ ಮಸಾಜ್ ಅಂತ ಮಾಡಿಸಿಕೊಂಡರೂ ಫಲ ಸಿಗುವದು ಅಷ್ಟರಲ್ಲೇ ಇದೆ.


ಕೂದಲು ತೊಳೆದ ಬಳಿಕ, ಆರೈಕೆ ಹೀಗಿರಲಿ.. ಯಾವ ಸಮಸ್ಯೆಯೂ ಬಾರದು!

ನಮ್ಮ ಈಗೀನ 'ಫಾಸ್ಟ್ ಪೇಸ್ಡ್' ಜೀವನ ಶೈಲಿ, ಅನಾರೋಗ್ಯಕರ ಆಹಾರ ಸೇವನೆ, ವಿಷಪೂರಿತ ಕೀಟನಾಶಕಗಳಿಂದ ಭರಿತ ತರಕಾರಿ, ಹಣ್ಣುಗಳ ಸೇವನೆಗಳೇ ಕೂದಲು ಉದುರುವದಕ್ಕೆ ಕಾರಣ. ನಮ್ಮ ಅಜ್ಜಿ ತಾತಂದಿರನ್ನು ನೋಡಿ ಇನ್ನೂ ಸೊಂಪಾಗಿರುವ ಕೂದಲೇ ಕಾಣುತ್ತದೆ. ಬೊಕ್ಕ ತಲೆಯ ಮಗ ಕೇಶಭರಿತ ತಲೆಯಿರುವ ತಂದೆಯ ಜೊತೆ ವಾಯುವಿಹಾರಕ್ಕೆ ಬಂದಾಗ ನಗುವದೊ, ಅಳುವದೊ ತಿಳಿಯುವದಿಲ್ಲ. ಅದೆಲ್ಲ ಇರಲಿ, ಇಂಥ ಪರಿಸ್ಥಿತಿಯಲ್ಲಿ ನಾವು ಕೈಚೆಲ್ಲಿ ಕೂಡುವದಂತು ಸಾಧ್ಯವಿಲ್ಲವಲ್ಲವೆ, ಇಲ್ಲಿ ತಿಳಿಸಿರುವ ಕೆಲವು ಸುಲಭವಾದ ಕೇಶಸಂರಕ್ಷಣೆಯ ವಿಧಾನಗಳನ್ನು ಅನುಸರಿಸಿ ಒಳ್ಳೆಯ ಪರಿಣಾಮಗಳನ್ನು ಪಡೆದುಕೊಳ್ಳಿ....

ಮೊಟ್ಟೆಯ ಬಿಳಿಯ ಭಾಗ

ಮೊಟ್ಟೆಯ ಬಿಳಿಯ ಭಾಗ

ನಮಗೆಲ್ಲ ತಿಳಿದಿರುವಂತೆ ಮೊಟ್ಟೆ ಪ್ರೊಟೀನಿನ ಪ್ರಮುಖ ಮೂಲವಾಗಿದೆ. ಕೂದಲಿನ ಬೆಳವಣಿಗೆಗೆ ಪ್ರೊಟೀನ್ ಅತಿ ಮುಖ್ಯವಾದ ಅಂಶ. ದಿನನಿತ್ಯ ಮೊಟ್ಟೆ ಸೇವಿಸುವದಂತೂ ಒಳ್ಳೆಯದೇ, ಜೊತೆಗೆ ಕೂದಲಿಗೆ ಹಚ್ಚುವದರಿಂದ ಇನ್ನೂ ಹೆಚ್ಚಿನ ಒಳ್ಳೆಯ ಪರಿಣಾಮ ದೊರೆಯುತ್ತದೆ. ಹಳದಿ ಭಾಗ ಹಚ್ಚುವದು ಬೇಡ, ಅದರಿಂದ ನಿಮ್ಮ ಕೂದಲು ಕೆಟ್ಟ ವಾಸನೆ ಬರುವ ಸಾಧ್ಯತೆ ಇರುತ್ತದೆ. ಮೊಟ್ಟೆಯ ಬಿಳಿಯ ಭಾಗವನ್ನು ಬೇರ್ಪಡಿಸಿ, ಕೂದಲಿಗೆ ನಿಧನವಾಗಿ ಮಸಾಜ್ ಮಾಡಿ.

ಷವರ್ ಕ್ಯಾಪ್ ಹಾಕಿ 40 ರಿಂದ 50 ನಿಮಿಷಗಳವರೆಗೆ ಹಾಗೆಯೇ ಬಿಟ್ಟುಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಒಳ್ಳೆಯ ಶ್ಯಾಂಪೂವಿನಿಂದ ತೊಳೆಯಿರಿ. ಹೊಳೆಯುವ ಕೇಶರಾಶಿ ನಿಮ್ಮದಾಗುತ್ತದೆ.

ಅವಕಾಡೊ(ಬಟರ್ ಫ್ರೂಟ್)

ಅವಕಾಡೊ(ಬಟರ್ ಫ್ರೂಟ್)

ಅವಕಾಡೊ ಸಲಾಡ್ ಮತ್ತು ಸ್ಯಾಂಡ್‌ವಿಚ್‌ನಲ್ಲಿ ತಿಂದು ಗೊತ್ತು, ನೀವೇನು ಕೂದಲಿಗೆ ಹಚ್ಚಲು ಹೇಳುತ್ತೀರ ಎಂದು ಹುಬ್ಬೇರಿಸಬೇಡಿ. ಅವಕಾಡೊನಲ್ಲಿರುವ ಮುಖವಾದ ಅಂಶವೆಂದರೆ ಪ್ರೊಟೀನ್. ಸಂಪೂರ್ಣವಾಗಿ ಹಣ್ಣಾಗಿರುವ ಅವಕಾಡೊ ಹಣ್ಣಿನ ತಿರುಳನ್ನು ಒಂದು ಚಮಚದಿಂದ ಪೂರ್ತಿಯಾಗಿ ತೆಗೆದುಕೊಳ್ಳಿ. ಒಂದು ಚಮಚ ರೋಸ್ ವಾಟರ್‌ಜೊತೆಗೆ ಚೆನ್ನಾಗಿ ಕಲೆಸಿಕೊಳ್ಳಿ. ಈ ಮಿಶ್ರಣವನ್ನು ಕೊದಲು ಮತ್ತು ನೆತ್ತಿಗೆ ಚೆನ್ನಾಗಿ ಲೇಪಿಸಿಕೊಳ್ಳಿ. ಒಂದು ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ವಾರಕೊಮ್ಮೆ ಅವಕಾಡೊ ಉಪಯೋಗಿಸಿ ಹೇರಳ ಕೇಶರಾಶಿ ಪಡೆದುಕೊಳ್ಳಿ.

ಹರಳೆಣ್ಣೆ

ಹರಳೆಣ್ಣೆ

ಹರಳೆಣ್ಣೆ ಎಂದ ಕೂಡಲೆ ಮುಖ ಸಿಂಡರಿಸಬೇಡಿ, ಅದರ ವಾಸನೆ ಎಷ್ಟು ಕೆಟ್ಟದ್ದೊ, ಕೂದಲಿಗೆ ಅಷ್ಟೇ ಒಳ್ಳೆಯದು. ಒಂದು ಚಮಚ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿಕೊಂಡು ಒಂದು ಗಂಟೆ ಬಿಟ್ಟುಬಿಡಿ. ನಂತರ ಬೆಚ್ಚಗಿನ ನೀರಿನಿಂದ ಒಳ್ಳೆಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಇದು ನೆತ್ತಿಯನ್ನು ತಂಪುಗೊಳಿಸುವದಲ್ಲದೆ, ಸೊಂಪಾದ ಕೂದಲನ್ನೂ ಕೂಡ ಬೆಳೆಯುವಂತೆ ಮಾಡುತ್ತದೆ.

ಮೆಂತೆ ಕಾಳು

ಮೆಂತೆ ಕಾಳು

ಮನೆಯಲ್ಲಿರುವ ನಿಮ್ಮ ಅಜ್ಜಿ ಅಥವ ಅಮ್ಮಂದಿರನ್ನ ಕೇಳಿ ನೋಡಿ, ಅವರು ಒಮ್ಮೆಯಾದರೂ ಕೂದಲಿಗೆ ಮೆಂತೆ ಕಾಳನ್ನು ಬಳಸಿಯೇ ಇರುತ್ತಾರೆ. ಮೆಂತೆ ಕಾಳು ಹೇರಳವಾದ ಆಂಟಿಆಕ್ಸಿಡಂಟ್ಸ್ ಇರುತ್ತವೆ. ಕಾಳುಗಳನ್ನು ನೀರಿನಲ್ಲಿ 6 ರಿಂದ 7 ಗಂಟೆಗಳ ಕಾಲ ನೆನೆಸಿಡಿ.ನಂತರ ಚೆನ್ನಾಗಿ ಮಿಕ್ಸರಿನಲ್ಲಿ ರುಬ್ಬಿಕೊಳ್ಳಿ. ಕೂದಲು ಮತ್ತು ನೆತ್ತಿಗೆ ಚೆನ್ನಾಗಿ ಹಚ್ಚಿಕೊಳ್ಳಿ. 1 ರಿಂದ 2 ಗಂಟೆಗಳ ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ಹೊಳೆಯುವ ಹೇರಳವಾದ ಕೇಶರಾಶಿ ನಿಮ್ಮದಾಗುವದರಲ್ಲಿ ಸಂಶಯವೇ ಇಲ್ಲ.

ಆಮ್ಲಾ ರಸ(ನೆಲ್ಲಿಕಾಯಿ ರಸ)

ಆಮ್ಲಾ ರಸ(ನೆಲ್ಲಿಕಾಯಿ ರಸ)

ನಾವು ಅನೇಕ ಶಾಂಪೂಗಳ ಜಾಹಿರಾತುಗಳಲ್ಲಿ ಆಮ್ಲಾ ರಸ ಇರುವದು ನೋಡಿಯೇ ಇರುತ್ತೇವೆ. ನೆಲ್ಲಿಕಾಯಿಯ ರಸವನ್ನು ಚೆನ್ನಾಗಿ ಹಿಂಡಿಕೊಂಡು ಕೂದಲು ಮತ್ತು ನೆತ್ತಿಗೆ ಒಂದೇ ಸಮನಾಗಿ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನ ಅನುಸರಿಸಿ ನೋಡಿ, ಕೂದಲಿಗೆ ಹೊಳಪು ಬರುವದಲ್ಲದೆ ದಟ್ಟವಾಗಿ ಕೂಡ ಬೆಳೆಯುತ್ತವೆ.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ಕುಡಿಯುವದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ಮಾತಂತೂ ಸುಳ್ಳಲ್ಲ. ಅದರ ಜೊತೆಗೆ ನಿಮ್ಮ ಕೇಶರಾಶಿ ಕೂಡ ಇಮ್ಮಡಿಗೊಳ್ಳುವದೆಂದರೆ ನಂಬುವಿರಾ? ಗ್ರೀನ್ ಟೀಯನ್ನು ಸರಿಯಾದ ವಿಧಾನದಿಂದ ತಯಾರಿಸಿ, ತಣ್ಣಗಾಗಲು ಬಿಟ್ಟುಬಿಡಿ. ನಂತರ ನಿಧಾನವಾಗಿ ನಿಮ್ಮ ಕೂದಲಿಗೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತು ಹಾಗೇ ಬಿಟ್ಟುಬಿಡಿ. ನಂತರ ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನಿಮಗೇ ನಂಬಲಾಗದಷ್ಟು ಹೊಳಪಿನಿಂದ ಕೂಡಿರುತ್ತವೆ ನಿಮ್ಮ ಕೂದಲು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆಯಲ್ಲಿ ಹೇರಳವಾದ ಆಂಟಿಆಕ್ಸಿಡಂಟ್ಸ್ ಇರುತ್ತವೆ. ಆಲಿವ್ ಎಣ್ಣೆ ಹಚ್ಚುವದರಿಂದ ಕೂದಲಿಗೆ ಒಳ್ಳೆಯ ಶಕ್ತಿ ಬರುವದು, ಇದರಿಂದ ಉದರುವದು ಕೂಡ ಕಡಿಮೆಯಾಗುತ್ತದೆ. ವಾರಕ್ಕೆ ಒಂದೆರಡು ಬಾರಿ ಆಲಿವ್ ಎಣ್ಣೆಯನ್ನು ಕೂದಲಿಗೆ ಹಚ್ಚಿ ಒಂದು ರಾತ್ರಿ ಬಿಟ್ಟು ಮರುದಿನ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಕೂದಲು ಉದರುವದು ಕಡಿಮೆಯಾಗಿ, ಸೊಂಪಾದ ಕೇಶರಾಶಿ ನಿಮ್ಮದಾಗುತ್ತದೆ.

ಈರುಳ್ಳಿ ರಸ

ಈರುಳ್ಳಿ ರಸ

ಈರುಳ್ಳಿ ತಿಂದು ಗೊತ್ತು ಇದೇನು ಕೂದಲಿಗೆ ಹಚ್ಚು ಎನ್ನುತ್ತೀರ ಎಂದು ಆಶ್ಚರ್ಯವಾಯಿತೆ? ಈರುಳ್ಳಿಯಲ್ಲಿನ ಪ್ರೊಟೀನ್ ಕೂದಲಿಗೆ ಬಹಳ ಒಳ್ಳೆಯದು. ರಸವನ್ನು ಹಿಂಡಿ ತೆಗೆದು, ಚೆನ್ನಾಗಿ ಕೂದಲಿಗೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತಿನ ನಂತರ ಚೆನ್ನಾಗಿ ಬೆಚ್ಚಗಿನ ನೀರಿನಲ್ಲಿ ಒಳ್ಳೆಯ ಶಾಂಪೂ ಹಾಕಿ ತೊಳೆದುಕೊಳ್ಳಿ. ಹದಿನೈದು ದಿನಕ್ಕೊಮ್ಮೆಯಾದರೂ ಈ ವಿಧಾನ ಅನುಸರಿಸುವದರಿಂದ ಸೊಂಪಾದ ಕೂದಲು ನಿಮ್ಮದಾಗುತ್ತವೆ.

ಅಲೊವೇರ ಜೆಲ್

ಅಲೊವೇರ ಜೆಲ್

ಅಲೊವೇರ ನಿಮ್ಮ ಗಾರ್ಡನ್‌ದಲ್ಲಿ ಸುಲಭವಾಗಿ ಬೆಳೆಯಬಹುದು. ಇದರ ಕಾಂಡದಲ್ಲಿರುವ ಲೋಳೆಯಂತಹ ಪದಾರ್ಥವನ್ನು ಸಂಗ್ರಹಿಸಿಟ್ಟುಕೊಳ್ಳಿ. ನಿಮ್ಮ ಕೂದಲು ಮತ್ತು ನೆತ್ತಿಗೆ ಚೆನ್ನಾಗಿ ಲೇಪಿಸಿಕೊಳ್ಳಿ. ಅರ್ಧ ಗಂಟೆ ಬಿಟ್ಟುಬಿಡಿ. ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ವಾರಕೊಮ್ಮೆ ಈ ವಿಧಾನ ಅನುಸರಿಸಲು ಪ್ರಯತ್ನಿಸಿ. ಮೇಲೆ ಹೇಳಿರುವ ಯಾವದಾದರೂ ಒಂದು ವಿಧಾನ ಅನುಸರಿಸಿದರೂ ಸಾಕು ಸೊಂಪಾದ, ಹೊಳಪಿನ ಕೂದಲು ನಿಮ್ಮದಾಗುವದರಲ್ಲಿ ಸಂಶಯವೇ ಇಲ್ಲ!!

English summary

Useful Remedies To Make Your Hair Appear 10x Thicker

Hair thinning has become far too common these days and there are various factors that attribute to this unsightly issue. Some of these factors are, vitamin deficiency, lack of proper hair care, over-usage of heat styling tools, exposure to polluted air, etc.
X
Desktop Bottom Promotion