'ಮೊಟ್ಟೆಯ ಹೇರ್ ಮಾಸ್ಕ್' ಕೂದಲಿನ ಸರ್ವ ಸಮಸ್ಯೆಗೂ ತ್ವರಿತ ಪರಿಹಾರ!

By: Hemanth
Subscribe to Boldsky

ಕೂದಲು ಉದುರುವುದು, ತುಂಡಾಗುವುದು ಅಥವಾ ತಲೆಹೊಟ್ಟು ಇಂದಿನ ದಿನಗಳಲ್ಲಿ ಸಾಮಾನ್ಯವೆನ್ನುವ ಸಮಸ್ಯೆ. ಇಂತಹ ಸಮಸ್ಯೆ ಹೋಗಲಾಡಿಸಲು ಹಲವಾರು ರೀತಿಯ ಶಾಂಪೂ ಹಾಗೂ ಕಂಡೀಷನರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದು ಎಷ್ಟು ಪರಿಣಾಮಕಾರಿ ಎನ್ನುವುದು ಬಳಸಿರುವ ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇದರ ಬಳಿಕ ಕೂದಲಿನ ನೈಸರ್ಗಿಕ ಆರೈಕೆ ನೀಡಿದರೆ ತುಂಬಾ ಒಳ್ಳೆಯದು. ಅದರಲ್ಲೂ ಮೊಟ್ಟೆಯಿಂದ ಕೂದಲನ್ನು ಒಳ್ಳೆಯ ರೀತಿಯಿಂದ ಆರೈಕೆ ಮಾಡಬಹುದು.

Egg Hair pack

ಮೊಟ್ಟೆಯಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಇತರ ಕೆಲವೊಂದು ಪೋಷಕಾಂಶಗಳು ಇವೆ. ಈ ಪೋಷಕಾಂಶಗಳು ಕೂದಲನ್ನು ಆರೋಗ್ಯವಾಗಿಟ್ಟು, ರೇಷ್ಮೆಯಂತೆ ಹೊಳೆಯುವಂತೆ ಮಾಡುವುದು. ಮೊಟ್ಟೆಯಲ್ಲಿ ಇರುವಂತಹ ಆಮ್ಲವು ತಲೆಹೊಟ್ಟು ತಡೆದು ಒಣ ಹಾಗೂ ಹಾನಿಗೀಡಾದ ಕೂದಲನ್ನು ರಕ್ಷಿಸುವುದು. ಮೊಟ್ಟೆಯಲ್ಲಿ ಇರುವಂತಹ ವಿಟಿನ್ ಡಿ, ಎ ಮತ್ತು ಇ ಕೂದಲು ಉದುರುವುದರಿಂದ ರಕ್ಷಿಸಿ, ಯುವಿ ಕಿರಣ ಹಾಗೂ ಕಲ್ಮಶದಿಂದ ಕೂದಲಿಗೆ ಹಾನಿಯಾಗದಂತೆ ಕಾಪಾಡುವುದು.

ಕೂದಲಿನ ಸರ್ವ ಸಮಸ್ಯೆಗೂ-ಮೊಟ್ಟೆಯ ಹೇರ್ ಮಾಸ್ಕ್

1 . ಕೂದಲಿಗೆ ಅತ್ಯಂತ ಸರಳ ರೀತಿಯಲ್ಲಿ ಮೊಟ್ಟೆಯಿಂದ ಆರೈಕೆ ಮಾಡುವ ವಿಧಾನವೆಂದರೆ ಎರಡು ಮೊಟ್ಟೆಯ ಲೋಳೆ ತೆಗೆದು ಅದಕ್ಕೆ ಒಂದು ಚಮಚ ಹರಳೆಣ್ಣೆ, ಜೇನುತುಪ್ಪ ಮತ್ತು ಕೆಲವು ಹನಿ ನೀರು ಬೆರೆಸಿ. ಕೂದಲಿನ ಬುಡದಿಂದ ತುದಿಯ ತನಕ ಇದನ್ನು ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಮಸಾಜ್ ಮಾಡಿ. ತಲೆಹೊಟ್ಟು ಇದ್ದರೆ ಕೆಲವು ಹನಿ ನಿಂಬೆರಸ ಇದಕ್ಕೆ ಸೇರಿಸಿಕೊಳ್ಳಿ....

2. ಮೊಟ್ಟೆಯ ಲೋಳೆಗೆ ಬಾದಾಮಿ ಎಣ್ಣೆ ಮಿಶ್ರಣ ಮಾಡಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ.

Egg hair mask

3. ಕೂದಲಿಗೆ ಮೊಟ್ಟೆಯ ಮಾಸ್ಕ್ ಮಾಡಿಕೊಳ್ಳಲು ಒಂದು ಮೊಟ್ಟೆಯ ಲೋಳೆಗೆ ಒಂದು ಚಮಚ ನೀರು ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಕೂದಲಿನ ಬುಡದಿಂದ ತುದಿಯ ತನಕ ಹಚ್ಚಿ. 10-25 ನಿಮಿಷ ಕಾಲ ಹಾಗೆ ಬಿಡಿ. ಶಾಂಪೂವಿನಿಂದ ಕೂದಲು ತೊಳೆಯಿರಿ. ಇದು ಕೂದಲಿಗೆ ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುವುದು.

4. ಎರಡು ಮೊಟ್ಟೆಯ ಲೋಳೆಯನ್ನು ಕೂದಲಿಗೆ ಹಾಕಿಕೊಳ್ಳಿ. ಮೂರು ನಿಮಿಷ ಕಾಲ ಸರಿಯಾಗಿ ಮಸಾಜ್ ಮಾಡಿ ಮತ್ತು ಒಣಗಲು ಬಿಡಿ. ಕೂದಲಿಗೆ ಶಾಂಪೂ ಹಾಕಿ. ವಿನೇಗರ್ ಮತ್ತು ನೀರು ಮಿಶ್ರಣ ಹಾಕಿದರೆ ನಯ ಹಾಗೂ ರೇಷ್ಮೆಯಂತಹ ಕೂದಲು ನಿಮ್ಮದಾಗುವುದು.

5. ಮೊಟ್ಟೆಯ ಲೋಳೆಗೆ ಮೊಸರು ಮತ್ತು ಲಿಂಬೆಯ ಸಿಪ್ಪೆ ಹಾಕಿಕೊಳ್ಳಿ. ಈ ಮಿಶ್ರಣ ಕೂದಲಿಗೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ತಣ್ಣೀರಿನಿಂದ ಕೂದಲು ತೊಳೆಯಿರಿ.  

Egg mask applying for hair

6. ಒಂದು ಮೊಟ್ಟೆಯ ಲೋಳೆಗೆ ಕೆಲವು ಹನಿ ನಿಂಬೆ ರಸ ಹಾಕಿಕೊಳ್ಳಿ. ಸರಿಯಾಗಿ ಇದನ್ನು ಮಿಶ್ರಣ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಮೊಟ್ಟೆಯು ನಿಸ್ತೇಜ ಕೂದಲಿಗೆ ಕಾಂತಿ ತರುವುದು ಮತ್ತು ತಲೆಹೊಟ್ಟು ನಿವಾರಣೆ ಮಾಡುವುದು. ಕೂದಲಿನ ಆರೈಕೆಗೆ ಮೊಟ್ಟೆಯು ತುಂಬಾ ನೈಸರ್ಗಿಕ ಸಾಮಗ್ರಿ. ಕೂದಲು ಉದುರುವುದು,ಕೂದಲು ತುಂಬಾಗುವುದು, ನಿಸ್ತೇಜ ಕೂದಲು ಇತ್ಯಾದಿ ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು. ಮೊಟ್ಟೆಯು ಕೂದಲಿಗೆ ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುವುದು. ಕೂದಲು ತೊಳೆಯುವಾಗ ಕೂದಲಿಗೆ ಅಂಟಿಕೊಂಡಿರುವ ಮೊಟ್ಟೆಯ ಲೋಳೆ ಸರಿಯಾಗಿ ತೆಗೆಯಿರಿ. ಮೊಟ್ಟೆಯ ವಾಸನೆ ಬರದಂತೆ ಒಳ್ಳೆಯ ಶಾಂಪೂ ಬಳಸಿಕೊಳ್ಳಿ. 

ನೈಸರ್ಗಿಕ ಹೇರ್ ಪ್ಯಾಕ್-ಕೂದಲಿಗೆ ಯಾವುದೇ ಸಮಸ್ಯೆ ಬರಲ್ಲ...

English summary

Use Egg For Natural Hair Care

If you want to nourish your hair naturally and make it look shiny and strong then there are natural hair care products like egg to condition the hair. An egg is rich source of proteins, vitamins and nutrients which fulfills the protein and nutrients requirements of the hair and help keep them shiny and healthy. The fat acid in the egg prevents dandruff and cures dry and damaged hair. Eggs are also rich in Vitamin D, A and E which prevents hair loss and also protect the hair from UV rays and pollution which may damage the hair quality. Here are tips to use egg for hair care:
Subscribe Newsletter