ಶಾಂಪೂ-ಸೋಪ್ ಪಕ್ಕಕ್ಕೆ ಸರಿಸಿ-ಇಂತಹ ಸರಳ ಟಿಪ್ಸ್ ಅನುಸರಿಸಿ

By: Hemanth
Subscribe to Boldsky

ಕಂಪನಿಗಳು ಜನರನ್ನು ಸೆಳೆಯಲು ಮಾಡುವಂತಹ ಜಾಹೀರಾತುಗಳಿಗೆ ಮಾರುಹೋಗದ ಜನ ತುಂಬಾ ಕಡಿಮೆ ಎನ್ನಬಹುದು. ಅದರಲ್ಲೂ ಸೌಂದರ್ಯವರ್ಧಕ ಉತ್ಪನ್ನಗಳಿಗೆ ಸಿಗುವಂತಹ ಪ್ರತಿಕ್ರಿಯೆಯು ಬೇರೆ ಯಾವುದೇ ಉತ್ಪನಗಳಿಗೆ ಸಿಗುವುದಿಲ್ಲ. ಪ್ರತಿಯೊಬ್ಬರಿಗೂ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಆದರೆ ಟಿವಿಯಲ್ಲಿ ತೋರಿಸಿದ ಮಾತ್ರಕ್ಕೆ ಆ ಉತ್ಪನ್ನಗಳು ಒಳ್ಳೆಯದು ಎನ್ನುವ ಅರ್ಥವಲ್ಲ.

ಕೂದಲಿನ ಆರೈಕೆಯಲ್ಲಿ ಪಾಲಿಸಬಹುದಾದ 10 ವಿಧಾನಗಳು

ಇಂತಹ ಉತ್ಪನ್ನಗಳಿಂದ ನಮಗೆ ಸಿಗುವಂತಹ ಲಾಭಗಳು ತುಂಬಾ ಕಡಿಮೆ. ಇದರ ಬದಲಿಗೆ ನೈಸರ್ಗಿಕವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಂಡು ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು, ಬನ್ನಿ ಅನಾವಶ್ಯಕ ಹಣ ಖರ್ಚು ಮಾಡುವುದಕ್ಕಿಂತ ಸರಳವಾಗಿ ಸಿಗುವಂತಹ ಸಾಮಾಗ್ರಿಗಳಿಂದಲೇ ರೇಷ್ಮೆಯಂತಹ ಕೂದಲು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ನೋಡೋಣ.... 

ಮೊಟ್ಟೆಯ ಚಿಕಿತ್ಸೆ

ಮೊಟ್ಟೆಯ ಚಿಕಿತ್ಸೆ

ಕೂದಲಿಗೆ ಕಂಡೀಷನಿಂಗ್ ಮಾಡಲು ಒಂದು ಮೊಟ್ಟೆ ಬಳಸಿ. ಒಣ ಹಾಗೂ ಬಿಡಿ ಕೂದಲು ನಿಮ್ಮದಾಗಿದ್ದರೆ ಮೊಟ್ಟೆಯ ಬಿಳಿ ಲೋಳೆಯನ್ನು ಮಾಯಿಶ್ಚರೈಸ್ ಮಾಡಲು ಬಳಸಿ. ½ ಕಪ್ ಮೊಟ್ಟೆಯ ಬಿಳಿ ಲೋಳೆ ತೆಗೆದುಕೊಂಡು ಅದನ್ನು ಸ್ವಚ್ಛವಾಗಿರುವ ಕೂದಲಿಗೆ ಹಾಕಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತಂಪು ನೀರಿನಿಂದ ತೊಳೆಯಿರಿ. ಇದು ಕೂದಲಿಗೆ ತುಂಬಾ ಪರಿಣಾಮಕಾರಿ ಮತ್ತು ಬೇಗನೆ ಫಲಿತಾಂಶ ಕಾಣಬಹುದು.

ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!

ಸ್ವಚ್ಛತೆ ಮುಖ್ಯ

ಸ್ವಚ್ಛತೆ ಮುಖ್ಯ

ಕೂದಲು ಉದುರಲು ಪ್ರಮುಖ ಕಾರಣವೆಂದರೆ ತಲೆಹೊಟ್ಟು ಮತ್ತು ತುರಿಕೆ ಉಂಟು ಮಾಡುವ ತಲೆಬುರುಡೆ. ಸುಂದರ ಹಾಗೂ ಆರೋಗ್ಯವಂತ ಕೂದಲಿಗೆ ಸ್ವಚ್ಛತೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.

ಕಿರಿಕಿರಿಯನ್ನು೦ಟು ಮಾಡುವ ತಲೆಹೊಟ್ಟು ಸಮಸ್ಯೆಗೆ ಪರಿಹಾರವೇನು?

ಬಿಸಿ ನೀರು ಕಡೆಗಣಿಸಿ

ಬಿಸಿ ನೀರು ಕಡೆಗಣಿಸಿ

ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ನಿಲ್ಲಿಸಿ. ಬಿಸಿ ನೀರಿನಿಂದ ಸ್ನಾನ ಮಾಡಿದರೆ ಕೂದಲಿಗೆ ಬರುವ ಎಣ್ಣೆಯಂಶವನ್ನು ಇದು ತೆಗೆದುಹಾಕಿ ಒಣಕೂದಲು ನಿಮ್ಮದಾಗುತ್ತದೆ ಎಂದು ಸೌಂದರ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ದೇಹದ ತಾಪಮಾನಕ್ಕಿಂತ ಸ್ವಲ್ಪ ಬಿಸಿಯಾಗಿರುವ ನೀರನ್ನು ಬಳಸಿಕೊಳ್ಳಿ ಎನ್ನುತ್ತಾರೆ ಅವರು.

ಸೋರೆಕಾಯಿಯ ಚಿಕಿತ್ಸೆ

ಸೋರೆಕಾಯಿಯ ಚಿಕಿತ್ಸೆ

ಸೋರೆಕಾಯಿಯ ಜ್ಯೂಸ್ ತೆಗೆದು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಅರ್ಧಗಂಟೆ ಕಾಲ ಇದು ಹಾಗೆ ಇರಲಿ. ಬಳಿಕ ನೀರಿನಿಂದ ತೊಳೆಯಿರಿ. ಇದು ಕೂದಲಿಗೆ ಅತೀ ಸರಳ ಹಾಗೂ ಪರಿಣಾಮಕಾರಿ ಚಿಕಿತ್ಸೆ.

ಕಾಂತಿ ಹಾಗೂ ನಯವಾದ ಕೂದಲಿಗೆ

ಕಾಂತಿ ಹಾಗೂ ನಯವಾದ ಕೂದಲಿಗೆ

ದಿನಾಲೂ ಬಳಸುವಂತಹ ಕಂಡೀಷನರ್ ಒಂದು ಕಪ್ ಮತ್ತು 2-3 ಚಮಚ ಜೇನುತುಪ್ಪ ಮಿಶ್ರಣ ಮಾಡಿ. ಒದ್ದೆ ಕೂದಲಿಗೆ ಇದನ್ನು ಹಚ್ಚಿಕೊಂಡು 30 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಇದು ಕೂದಲಿನ ಹೊರಪೊರೆಯನ್ನು ಮುಚ್ಚಿ ಕೂದಲಿಗೆ ಹೆಚ್ಚಿನ ಕಾಂತಿ ನೀಡುವುದು.

ಅಡುಗೆ ಸೋಡಾದ ಥೆರಪಿ

ಅಡುಗೆ ಸೋಡಾದ ಥೆರಪಿ

ಕೂದಲಿಗೆ ಅಡುಗೆ ಸೋಡಾದ ಥೆರಪಿ ತುಂಬಾ ಪರಿಣಾಮಕಾರಿಯಾಗಲಿದೆ. ಮೂರು ಚಮಚ ಅಡುಗೆ ಸೋಡಾ ಮತ್ತು ಸ್ವಲ್ಪ ನೀರು ಹಾಕಿಕೊಳ್ಳಿ. ಕೂದಲಿಗೆ ಶಾಂಪೂ ಹಾಕಿಕೊಂಡ ಬಳಿಕ ಈ ಮಿಶ್ರಣದಿಂದ ಕೂದಲು ತೊಳೆಯಿರಿ. ಐದು ನಿಮಿಷ ಬಿಟ್ಟು ಕೂದಲು ತೊಳೆಯಿರಿ. ಈ ಥೆರಪಿಯು ಕೂದಲಿನಲ್ಲಿರುವ ಹೆಚ್ಚಿನ ಶಾಂಪೂವನ್ನು ತೆಗೆದುಹಾಕುವುದು.

ಪುಟಿದೇಳುವ ಕೂದಲಿಗೆ

ಪುಟಿದೇಳುವ ಕೂದಲಿಗೆ

ಬಿಸಿ ನೀರು ಮತ್ತು ಆ್ಯಪಲ್ ಸೀಡರ್ ವಿನೇಗರ್ ನ ಮಿಶ್ರಣ ಮಾಡಿಕೊಂಡು ಕೂದಲಿಗೆ ಹಚ್ಚಿ. ಐದು ನಿಮಿಷ ಬಿಟ್ಟು ಕೂದಲು ತೊಳೆಯಿರಿ. ಇದರಿಂದ ಆ್ಯಪಲ್ ಸೀಡರ್ ನ ವಾಸನೆ ಕಡಿಮೆಯಾಗುವುದು.

ಪದೇ ಪದೇ ಕೂದಲು ತೊಳೆಯಬೇಡಿ

ಪದೇ ಪದೇ ಕೂದಲು ತೊಳೆಯಬೇಡಿ

ಪ್ರತೀ 2-3 ಮೂರು ದಿನಕ್ಕೊಮ್ಮೆ ಕೂದಲು ತೊಳೆಯಿರಿ. ಇದರಿಂದ ಕೂದಲಿನ ನೈಸರ್ಗಿಕ ತೈಲವು ಸರಿಯಾದ ಪ್ರಮಾಣದಲ್ಲಿರುವುದು. ಪ್ರತೀ ದಿನ ಕೂದಲು ತೊಳೆಯುತ್ತಾ ಇದ್ದರೆ ನೈಸರ್ಗಿಕ ತೈಲ ಕಡಿಮೆಯಾಗಿ ಕೂದಲಿನ ಕಾಂತಿ ಕಡಿಮೆಯಾಗುವುದು.

English summary

Top Natural ways for great hair

Spending too much on expensive shampoos, but not getting the desired results that you see in TV ads? It is mostly possible and very common, because we see overly exaggerated results on. Follow these easy and simple beauty tips for hair to give that luster and shine, and flaunt your hair like the models do...
Subscribe Newsletter