ಶಾಂಪೂ ಪಕ್ಕಕ್ಕೆ ಸರಿಸಿ 'ಅಂಟುವಾಳಕಾಯಿ' ಪ್ರಯತ್ನಿಸಿ ನೋಡಿ!

By: Arshad
Subscribe to Boldsky

ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಆಧಾರಿತ ಉತ್ಪನ್ನಗಳಿಂದ ತಕ್ಷಣಕ್ಕೆ ಉತ್ತಮ ಪರಿಣಾಮ ಪಡೆದಂತೆ ಅನ್ನಿಸಿದರೂ ದೀರ್ಘಕಾಲದ ಬಳಕೆಯಿಂದ ಹಾನಿಯೇ ಹೆಚ್ಚು. ಆದ್ದರಿಂದ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸುವುದರಿಂದ ಕೊಂಚ ನಿಧಾನವಾಗಿಯಾದರೂ ಸರಿ, ಉತ್ತಮ ಹಾಗೂ ಸುರಕ್ಷಿತ ಆರೈಕೆಯನ್ನು ಪಡೆಯಬಹುದು.  ಮನೆಯ ಸ್ವಚ್ಛತೆ- ಮೋಡಿ ಮಾಡುವ ಅಂಟುವಾಳ ಕಾಯಿ!

ಅಂಟುವಾಳ ಕಾಯಿಯೂ ಇಂತಹ ಒಂದು ಸಾಮಾಗ್ರಿಯಾಗಿದ್ದು ನಿಮ್ಮ ನಿತ್ಯದ ಶಾಂಪೂ ಬದಲಿಗೆ ಬಳಸಲು ಸೂಕ್ತವಾಗಿದೆ. ಇದರ ಗುಣವನ್ನು ಕಂಡುಕೊಂಡ ಹಲವು ಸಂಸ್ಥೆಗಳು ಅಂಟುವಾಳದ ಎಣ್ಣೆ ಮತ್ತು ಪುಡಿಯನ್ನು ಈಗ ತಮ್ಮ ಉತ್ಪನ್ನಗಳಲ್ಲಿ ಬಳಸಲು ಪ್ರಾರಂಭಿಸಿದ್ದಾರೆ. ಬನ್ನಿ, ಈ ಅದ್ಭುತವಾದ ಸಾಮಾಗ್ರಿ ನಿಮ್ಮ ಕೂದಲಿಗೆ ಯಾವ ರೀತಿ ಉಪಕಾರಿಯಾಗಿದೆ ಎಂಬುದನ್ನು ನೋಡೋಣ...  

ನೈಸಗಿಕ ಶಾಂಪೂ ರೂಪದಲ್ಲಿ

ನೈಸಗಿಕ ಶಾಂಪೂ ರೂಪದಲ್ಲಿ

ಕೃತಕ ರಾಸಾಯನಿಕ ಶಾಂಪೂ ಬದಲಿಗೆ ಈಗ ಅಂಟುವಾಳ ಕಾಯಿಯನ್ನು ಶಾಂಪೂ ರೂಪದಲ್ಲಿ ಬಳಸಿ. ಇದಕ್ಕಾಗಿ ಕೆಲವು ಅಂಟುವಾಳ ಕಾಯಿಗಳನ್ನು ಒಂದು ಬಾಟಲಿಯಲ್ಲಿ ನೀರು ತುಂಬಿಸಿ ಇಡಿಯ ರಾತ್ರಿ ಮುಚ್ಚಳ ಮುಚ್ಚಿ ನೆನೆಸಿಡಿ. ಮರುದಿನ ಈ ನೀರನ್ನು ಶಾಂಪೂ ರೂಪದಲ್ಲಿ ಬಳಸಿ.

ನೈಸರ್ಗಿಕ ಕಂಡೀಶನರ್ ರೂಪದಲ್ಲಿ (ಮದರಂಗಿಯೊಡನೆ)

ನೈಸರ್ಗಿಕ ಕಂಡೀಶನರ್ ರೂಪದಲ್ಲಿ (ಮದರಂಗಿಯೊಡನೆ)

ಅಂಟುವಾಳದ ಪುಡಿ ಮತ್ತು ಮದರಂಗಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಉಗುರುಬೆಚ್ಚನೆಯ ನೀರಿನೊಂದಿಗೆ ಮಿಶ್ರಣ ಮಾಡಿ.ಈ ಲೇಪನವನ್ನು ತಲೆಗೆ ದಪ್ಪನಾಗಿ ಹಚ್ಚಿ ಕಂಡೀಶನಿಂಗ್ ಮಾಡಿಕೊಳ್ಳಿ

ಎಣ್ಣೆಗೂದಲಿನ ಜಿಡ್ಡನ್ನು ನಿವಾರಿಸಲು

ಎಣ್ಣೆಗೂದಲಿನ ಜಿಡ್ಡನ್ನು ನಿವಾರಿಸಲು

ತಲೆಯ ಚರ್ಮದ ಎಣ್ಣೆಯ ಸ್ರಾವ ಹೆಚ್ಚಿದ್ದವರ ಕೂದಲು ಸದಾ ಎಣ್ಣೆ ಪಸೆಯಿಂದ ಕೂಡಿದ್ದು

ಸಿಕ್ಕುಸಿಕ್ಕಾಗಿರುತ್ತದೆ. ಇದಕ್ಕಾಗಿ ಅಂಟುವಾಳದ ನೀರಿನ ಶಾಂಪೂ ಬಳಸಿ ತಲೆಯನ್ನು ತೊಳೆದುಕೊಳ್ಳಿ.

ಎಣ್ಣೆಗೂದಲಿನ ಜಿಡ್ಡನ್ನು ನಿವಾರಿಸಲು

ಎಣ್ಣೆಗೂದಲಿನ ಜಿಡ್ಡನ್ನು ನಿವಾರಿಸಲು

ಇದರಿಂದ ತಲೆಯ ಚರ್ಮದಿಂದ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಮಾತ್ರವೇ ಎಣ್ಣೆ ಸ್ರವಿಸಿ ಕೂದಲ ಸೊಂಪು ಹೆಚ್ಚುತ್ತದೆ.

ತಲೆಹೊಟ್ಟಿನಿಂದ ರಕ್ಷಣೆ ಪಡೆಯಲು

ತಲೆಹೊಟ್ಟಿನಿಂದ ರಕ್ಷಣೆ ಪಡೆಯಲು

ಅಂಟುವಾಳದ ಪುಡಿಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಹಚ್ಚುವ ಮೂಲಕ ತಲೆಯ ಚರ್ಮದಲ್ಲಿ ಒಣದಿದ ಪಕಳೆಗಳು ಸಡಿಲಗೊಂಡು ಸುಲಭವಾಗಿ ಹೊರಬರುತ್ತವೆ. ತಲೆಯ ಕೂದಲಿಗೆ ಅಂಟುವಾಳದ ಅತ್ಯುತ್ತಮ ಆರೈಕೆ ಇದಾಗಿದೆ.ಬರೀ ಒಂದೇ ವಾರದಲ್ಲಿ 'ತಲೆಹೊಟ್ಟು ಸಮಸ್ಯೆ' ಮಂಗಮಾಯ!

ಕೂದಲ ಗಾಢವರ್ಣ ಹೆಚ್ಚಿಸಲು

ಕೂದಲ ಗಾಢವರ್ಣ ಹೆಚ್ಚಿಸಲು

ಅಂಟುವಾಳದ ಪುಡಿ ಮತ್ತು ಮದರಂಗಿ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ವಾರಕ್ಕೊಮ್ಮೆ ತಲೆಗೂದಲಿಗೆ ಹಚ್ಚಿಕೊಂಡು ತೊಳೆದುಕೊಳ್ಳುವ ಮೂಲಕ ಕೂದಲ ಬಣ್ಣ ಗಾಢವಾಗುತ್ತಾ ಹೋಗುತ್ತದೆ. ಇವೆರಡೂ ನಿಸರ್ಗದ ಅತ್ಯುತ್ತಮ ಬಣ್ಣನೀಡುವ ಸಾಮಾಗ್ರಿಗಳಾಗಿದ್ದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅಪಾಯಕಾರಿ ರಾಸಾಯನಿಕ ಆಧಾರಿತ ಬಣ್ಣಗಳಿಗಿಂತ ಮಿಗಿಲಾಗಿವೆ.

ಕೂದಲು ಉದುರುವುದನ್ನು ತಪ್ಪಿಸಲು...

ಕೂದಲು ಉದುರುವುದನ್ನು ತಪ್ಪಿಸಲು...

ಅಂಟುವಾಳದ ಶಾಂಪೂ ಅಥವಾ ಅಂಟುವಾಳದ ಪುಡಿಯನ್ನು ನೀರಿನೊಂದಿಗೆ ಬೆರೆಸಿ ದಪ್ಪನಾಗಿ ಹಚ್ಚಿಕೊಂಡು ತೊಳೆದುಕೊಳ್ಳುವ ಮೂಲಕ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು.

ಕೂದಲು ಉದುರುವುದನ್ನು ತಪ್ಪಿಸಲು...

ಕೂದಲು ಉದುರುವುದನ್ನು ತಪ್ಪಿಸಲು...

ಇದರ ಶಿಲೀಂಧ್ರ ನಿವಾರಕ ಗುಣ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳು ಕೂದಲ ಬುಡದಲ್ಲಿ ಸೋಂಕಾಗದಂತೆ ರಕ್ಷಣೆ ನೀಡುವ ಮೂಲಕ ಕೂದಲ ಬುಡ ದೃಢಗೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಕೂದಲು ಉದುರುವುದು ಹೆಚ್ಚೂ ಕಡಿಮೆ ನಿಂತೇ ಹೋಗುತ್ತದೆ.

 
English summary

Top Benefits Of Using soapnut For Your Hair

Indian women are blessed to have so many amazing Ayurvedic and natural options to turn to for beauty. Here are all the benefits of using reetha on your hair! Read on.
Subscribe Newsletter