ನೆಲ್ಲಿಕಾಯಿ: ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು

By: Divya
Subscribe to Boldsky

ಸೌಂದರ್ಯ ಚಿಕಿತ್ಸೆಗೆ ಸಹಾಯ ಮಾಡುವ ಮನೆ ಮದ್ದು ನೆಲ್ಲಿಕಾಯಿ ಎಂದರೆ ತಪ್ಪಾಗಲಾರದು. ಇದರಲ್ಲಿ ವಿಟಮಿನ್-ಸಿ ಸಮೃದ್ಧವಾಗಿರುವುದರಿಂದ ಎಲ್ಲಾ ವಿದಧ ಚರ್ಮ ಹಾಗೂ ಕೂದಲು ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಹಾಗಾಗಿಯೇ ಹೆಚ್ಚಿನ ಮಹಿಳೆಯರು ನೆಲ್ಲಿಕಾಯಿ ನೀರನ್ನು (ಆಮ್ಲಾ ವಾಟರ್) ಸೌಂದರ್ಯ ವರ್ಧಕ ಉತ್ಪನ್ನವಾಗಿ ಉಪಯೋಗಿಸುತ್ತಾರೆ.  

ಅಪ್ಪಟ ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿ, ಆರೋಗ್ಯದ ಕೀಲಿಕೈ

ನೈಸರ್ಗಿಕವಾದ ಉತ್ತಮ ಶಕ್ತಿ ಎಂದು ಕರೆಯಿಸಿಕೊಳ್ಳುವ ನೆಲ್ಲಿಕಾಯಿ, ಕೇವಲ ಸೌಂದರ್ಯವರ್ಧಕ ಗುಣಗಳೊಂದಿಗೆ ಅನೇಕ ಔಷಧೀಯ ಗುಣಗಳನ್ನೂ ಒಳಗೊಂಡಿದೆ. 3-4 ನೆಲ್ಲಿಕಾಯಿಯನ್ನು ಕತ್ತರಿಸಿ, ಒಂದು ಕಪ್ ನೀರನ್ನು ಹಾಕಿ ರುಬ್ಬಿಕೊಂಡು, ಚರ್ಮ ಹಾಗೂ ಕೂದಲ ಆರೈಕೆಗೆ ಬಳಸಬಹುದು. ಇದರಿಂದ ಯಾವೆಲ್ಲಾ ಪ್ರಯಜನಗಳನ್ನು ಪಡೆಯಬಹುದು ಎಂಬುದರ ಸರಳ ವಿವರಣೆ ಇಲ್ಲಿದೆ ನೋಡಿ.... 

ಮೈ ಬಣ್ಣ ಹೆಚ್ಚುವವುದು

ಮೈ ಬಣ್ಣ ಹೆಚ್ಚುವವುದು

ವಾರದಲ್ಲಿ ಕನಿಷ್ಠ 3-4 ಬಾರಿ ನೆಲ್ಲಿಕಾಯಿ ನೀರಿನಿಂದ ತ್ವಚೆಯ ಆರೈಕೆ ಮಾಡಿಕೊಂಡರೆ, ತ್ವಚೆಯ ಬಣ್ಣವು ಹೊಳಪಿನಿಂದ ಕೂಡಿರುತ್ತದೆ. ಚರ್ಮದ ಮೇಲಿರುವ ಸತ್ತ ಚರ್ಮಗಳು ನಾಶವಾಗುವುದು.

ವಯಸ್ಸನ್ನು ಮರೆಮಾಚುವುದು

ವಯಸ್ಸನ್ನು ಮರೆಮಾಚುವುದು

ನೆಲ್ಲಿಕಾಯಿಯಿಂದ ನಿತ್ಯವೂ ಚರ್ಮದ ಆರೈಕೆ ಮಾಡಿಕೊಂಡರೆ, ಚರ್ಮದಲ್ಲಿ ಪೋಷಕಾಂಶ ಗುಣಗಳು ದ್ವಿಗುಣವಾಗಿ, ಸ್ಥಿತಿಸ್ಥಾಪಕತ್ವ ಹೆಚ್ಚುವುದು. ತ್ವಚೆಯ ಸುಕ್ಕುಗಳನ್ನು ಹೋಗಲಾಡಿಸಿ ವಯಸ್ಸಾದ ಚಿಹ್ನೆಯನ್ನು ವಿಳಂಬಗೊಳಿಸುವುದು.

ಸೋಂಕು ನಿವಾರಕ ಉತ್ಪನ್ನ

ಸೋಂಕು ನಿವಾರಕ ಉತ್ಪನ್ನ

ನೆಲ್ಲಿಕಾಯಿ ನೀರು ಸೋಂಕು ನಿವಾರಕ ಉತ್ಪನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ತ್ವಚೆಯ ಮೇಲುಂಟಾದ ಗಾಯ, ಬೊಬ್ಬೆ ಮತ್ತು ತುರಿಕೆಯ ಜಾಗದಲ್ಲಿ ಈ ನೀರನ್ನು ಹಚ್ಚಿದರೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದು.

ವೈಟ್‌ ಹೆಡ್‌ಗಳನ್ನು ನಿವಾರಿಸುವುದು

ವೈಟ್‌ ಹೆಡ್‌ಗಳನ್ನು ನಿವಾರಿಸುವುದು

ನೆಲ್ಲಿಕಾಯಿ ನೀರಿನ ಒಂದು ಪ್ರಯೋಜಕ ಗುಣವೆಂದರೆ ವೈಟ್‌ ಹೆಡ್‌ಗಳನ್ನು ತೆಗೆಯುವುದು. ತ್ವಚೆಯ ರಂಧ್ರದೊಳಗಿರುವ ಕೊಳೆ ಹಾಗೂ ವೈಟ್‌ ಹೆಡ್‌ಗಳನ್ನು ನಿವಾರಿಸಿ, ಕಾಂತಿಯುತವಾಗಿರುವಂತೆ ಮಾಡುತ್ತದೆ.

ವೈಟ್‌ ಹೆಡ್ ಸಮಸ್ಯೆಗೆ ಅಕ್ಕಿ ಹಿಟ್ಟು-ಗುಲಾಬಿ ನೀರಿನ ಫೇಸ್ ಪ್ಯಾಕ್

ತ್ವಚೆಗೆ ಹೊಸ ಜೀವ

ತ್ವಚೆಗೆ ಹೊಸ ಜೀವ

ಯುವಿ ಕಿರಣ, ಕಲುಷಿತ ಗಾಳಿ ಸೇರಿದಂತೆ ಇನ್ನಿತರ ಕಾರಣಗಳಿಂದ ತ್ವಚೆಯ ಆರೋಗ್ಯವೂ ಬಹು ಬೇಗ ಕೆಡುವುದು. ಈ ಸಮಸ್ಯೆಗಳಿಗೆ ನಿತ್ಯವೂ ನೆಲ್ಲಿ ನೀರನ್ನು ಉಪಯೋಗಿಸುವುದರಿಂದ ತ್ವಚೆಯಲ್ಲಿ ತೇವಾಂಶ ಹೆಚ್ಚಾಗಿ, ಹೊಸ ಜೀವ ತುಂಬುವುದು.

ಶುಚಿಯಾಗಿರಿಸುವುದು

ಶುಚಿಯಾಗಿರಿಸುವುದು

ತ್ವಚೆಯ ಸ್ವಚ್ಛತೆಯನ್ನು ಕಾಪಾಡಲು ಮಹಿಳೆಯರು ಅನೇಕ ರಾಸಾಯನಿಕ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತಾರೆ. ಬದಲಿಗೆ ಸೂಕ್ತ ರೀತಿಯಲ್ಲಿ ನೆಲ್ಲಿಕಾಯಿ ನೀರನ್ನು ಅನ್ವಯಿಸಿಕೊಂಡರೆ ಸಾಕು. ತ್ವಚೆಯ ಮೇಲಿರುವ ಜಿಡ್ಡು ಹಾಗೂ ಡೆಡ್ ಸ್ಕಿನ್‍ಗಳನ್ನು ತೆಗೆದು, ಸದಾ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.

ಹೊಟ್ಟು ನಿವಾರಕ

ಹೊಟ್ಟು ನಿವಾರಕ

ತಲೆ ಸ್ನಾನ ಮಾಡುವ ಅರ್ಧ ಗಂಟೆ ಮೊದಲು, ನೆಲ್ಲಿಕಾಯಿ ನೀರನ್ನು ತಲೆಗೆ ಅನ್ವಯಿಸಿಕೊಳ್ಳಬೇಕು. ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ಮತ್ತು ತುರಿಕೆ ಕಡಿಮೆಯಾಗುವುದು.

ಮನೆಮದ್ದು: ಕೂದಲಿನ ಆರೈಕೆಗೆ ಬೆಟ್ಟದ ನೆಲ್ಲಿಕಾಯಿ!

ಕೂದಲ ಬೆಳವಣಿಗೆ

ಕೂದಲ ಬೆಳವಣಿಗೆ

ವಾರಕ್ಕೊಮ್ಮೆ ಕೇಶರಾಶಿಗೆ ಆಮ್ಲ ನೀರಿನ ಲೇಪನ ಮಾಡಿಕೊಳ್ಳಬೇಕು. ಇದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. ಜೊತೆಗೆ ಕೂದಲುದುರುವಿಕೆಯೂ ಕಡಿಮೆಯಾಗುವುದು.

ಎಲೆಲೆ ಬೆಟ್ಟದ ನೆಲ್ಲಿಕಾಯಿಯೇ, ನಿನಗೆ ಸರಿ ಸಾಟಿ ಯಾರಿಲ್ಲಿ?

ಸಂಪೂರ್ಣ ಆರೈಕೆ

ಸಂಪೂರ್ಣ ಆರೈಕೆ

ಅನೇಕರಿಗೆ ತೆಳುವಾದ ಕೇಶರಾಶಿ ಅಥವಾ ಕೂದಲು ಒಡೆಯುವ ಸಮಸ್ಯೆಗಳಿರುತ್ತವೆ. ಅಂತಹವರು ಗಣನೀಯವಾಗಿ ಕೇಶರಾಶಿಗೆ ನೆಲ್ಲಿಕಾಯಿ ನೀರಿನ ಲೇಪನ ಮಾಡಬೇಕು. ಆಗ ಕೇಶ ರಾಶಿಯು ಬಲಿಷ್ಠವಾಗುವುದಲ್ಲದೆ, ದಟ್ಟವಾಗಿ ಬೆಳೆಯುತ್ತದೆ. ಅತಿ ಬೇಗ ಬಿಳಿ ಬಣ್ಣಕ್ಕೆ ತಿರುಗುವುದನ್ನು ತಡೆಯುವುದು.

English summary

Top Benefits Of Using Amla Water For Skin And Hair Care

Presence of high content of vitamin C and other beauty-boosting vitamins and nutrients makes amla water one of the most effective remedies for treating all kinds of skin and hair-related problems. That is why, amla water has been used since ages by women across the globe to enhance their overall beauty quotient.
Subscribe Newsletter