ಸೊಂಪಾದ ಕೂದಲು ಬೇಕು ಎಂದಾದರೆ ಸರಿಯಾದ ವಿಧಾನದಲ್ಲಿ ಶಾಂಪೂ ಮಾಡಿ

By: jaya subramanya
Subscribe to Boldsky

ಕೂದಲಿನ ಕಾಳಜಿಯ ಬಗ್ಗೆ ನೀವು ಹೆಚ್ಚು ಆಸಕ್ತರಾಗಿದ್ದೀರಿ ಎಂದಾದಲ್ಲಿ ನೀವು ಕೂದಲಿನ ಆರೈಕೆಯ ಕುರಿತು ಹೆಚ್ಚುವರಿ ಅಸ್ಥೆಯನ್ನು ವಹಿಸಬೇಕಾಗುತ್ತದೆ. ಕೂದಲಿಗೆ ಶಾಂಪೂ ಎಷ್ಟು ಬಾರಿ ಮಾಡಬೇಕು ಎಂಬುದು ಇಂದಿನ ಹೆಚ್ಚಿನ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಹೆಚ್ಚಿನವರು ಕೂದಲಿಗೆ ಶಾಂಪೂ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಊಹಪೋಹಗಳನ್ನು ಹೊಂದಿದ್ದಾರೆ.

ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಮಾಹಿತಿಗಳನ್ನು ನಾವು ನೀಡುತ್ತಿದ್ದು ನಿಮ್ಮ ಕೂದಲಿಗೆ ಎಷ್ಟು ಬಾರಿ ಶಾಂಪೂ ಮಾಡಬೇಕು ಮತ್ತು ಸರಿಯಾದ ವಿಧಾನದಲ್ಲಿ ಕೂದಲನ್ನು ತೊಳೆಯುವುದು ಹೇಗೆ ಮೊದಲಾದ ಮಾಹಿತಿಗಳನ್ನು ನಾವಿಂದು ನೀಡುತ್ತಿದ್ದೇವೆ. ನೀವು ಕೂದಲಿಗೆ ಹೆಚ್ಚು ಶಾಂಪೂ ಮಾಡಿಕೊಳ್ಳುವವರಾಗಿದ್ದಲ್ಲಿ ಅದನ್ನು ಸರಿಯಾದ ವಿಧಾನದಲ್ಲಿ ಮಾಡುವುದು ಹೇಗೆ ಎಂಬುದರ ಮಾಹಿತಿಗಳನ್ನು ಇಲ್ಲಿ ನೀಡುತ್ತಿದ್ದೇವೆ. ನೀವು ಈ ವಿಧಾನಗಳನ್ನು ಅರಿತುಕೊಂಡು ಕೂದಲಿಗೆ ಶಾಂಪೂ ಮಾಡಿಕೊಂಡಿರಿ ಎಂದಾದಲ್ಲಿ ಕೂದಲಿನ ಹಲವು ಸಮಸ್ಯೆಗಳಿಂದ ನೀವು ಸಂರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ.  

ಇದು ಪಕ್ಕಾ ಹರ್ಬಲ್ ಶಾಂಪೂ-ಯಾವುದೇ ಅಡ್ಡಪರಿಣಾಮಗಳಿಲ್ಲ...

 

ಕೂದಲಿನ ಪೋಷಣೆಯಲ್ಲಿ ಕೂದಲನ್ನು ನೀವು ಯಾವ ಬಗೆಯಲ್ಲಿ ತೊಳೆದುಕೊಳ್ಳುತ್ತೀರಿ ಎಂಬ ಅಂಶ ಕೂಡ ಮುಖ್ಯವಾಗಿದೆ. ಬರಿಯ ಶ್ಯಾಂಪೂವೊಂದನ್ನೇ ಮಾಡದೆ ಇನ್ನಿತರ ಕೂದಲಿನ ಪೋಷಣಾ ವಿಧಾನಗಳನ್ನು ನೀವು ಅರಿತುಕೊಳ್ಳಬೇಕಾಗುತ್ತದೆ. ಎಣ್ಣೆ ಹಚ್ಚಿ ಮಸಾಜ್ ಮಾಡುವುದು, ಸೇರಮ್ ಬಳಕೆ, ಹೇರ್ ಪ್ಯಾಕ್ ವಿಧಾನವನ್ನು ಅನುಸರಿಸುವುದು ಇವೇ ಮೊದಲಾದ ಕೂದಲಿನ ಕಾಳಜಿಗಳನ್ನು ನೀವು ಅನುಸರಿಬೇಕಾಗುತ್ತದೆ. ಇಂದಿನ ಲೇಖನದಲ್ಲಿ ಸರಿಯಾದ ವಿಧಾನದಲ್ಲಿ ಕೂದಲಿಗೆ ಶಾಂಪೂಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ...

ನಿಮ್ಮ ತಲೆಬುರುಡೆಯನ್ನು ಅರಿತುಕೊಳ್ಳಿ

ನಿಮ್ಮ ತಲೆಬುರುಡೆಯನ್ನು ಅರಿತುಕೊಳ್ಳಿ

ನಿಮ್ಮ ಕೂದಲಿನ ಬುಡಕ್ಕೆ ನೀವು ಶಾಂಪೂ ಮಾಡಿಕೊಳ್ಳಬೇಕು. ತುದಿಗೆ ಮಾತ್ರವೇ ಶಾಂಪೂ ಮಾಡಿಕೊಳ್ಳಬೇಡಿ. ನಿಮ್ಮ ಬೆರಳುಗಳ ಸಹಾಯದಿಂದ ಬುಡವನ್ನು ತೊಳೆದುಕೊಳ್ಳಿ ಇದರಿಂದ ಶಾಂಪೂ ಅಲ್ಲಿಗೂ ತಲುಪುತ್ತದೆ.

ಸ್ಕ್ರಬ್ ಪಾಲಿಸಿ ಅನುಸರಿಸಿ

ಸ್ಕ್ರಬ್ ಪಾಲಿಸಿ ಅನುಸರಿಸಿ

ನಿಮ್ಮ ಕೂದಲಿಗೆ ಶಾಂಪೂಮಾಡಿಕೊಂಡ ನಂತರ ಅದನ್ನು ಬೆರಳುಗಳ ಸಹಾಯದಿಂದ ತಿಕ್ಕಿ ತೊಳೆದುಕೊಳ್ಳಿ. ಮಸಾಜ್ ಮಾಡಿಕೊಳ್ಳಿ. ನಿಮ್ಮ ಶಾಂಪೂವಿಗೆ ಬೇಕಿಂಗ್ ಸೋಡಾವನ್ನು ಸೇರಿಸಿ ಇದರಿಂದ ಕೂದಲನ್ನು ಮಸಾಜ್ ಮಾಡಿ ಇದರಿಂದ ಕೂದಲಿಗೆ ಪೋಷಣೆ ದೊರೆಯುತ್ತದೆ.

ಉದ್ದ ಕೂದಲಿಗೆ ಪ್ರೀ ಕಂಡೀಷನಿಂಗ್

ಉದ್ದ ಕೂದಲಿಗೆ ಪ್ರೀ ಕಂಡೀಷನಿಂಗ್

ಹೆಚ್ಚಿನವರು ಕೂದಲಿಗೆ ಶಾಂಪೂಹಚ್ಚಿಕೊಂಡ ನಂತರ ಕಂಡೀಷನಿಂಗ್ ಮಾಡುತ್ತಾರೆ. ಆದರೆ ಕಂಡೀಷನಿಂಗ್ ಮಾಡಿಕೊಂಡು ನಂತರ ಶಾಂಪೂಮಾಡಿಕೊಳ್ಳಿ. ಇದು ಕೂದಲಿನ ಪೋಷಣೆಯನ್ನು ಮಾಡುತ್ತದೆ. ಮತ್ತು ಕಂಡೀಷನಿಂಗ್ ದೀರ್ಘ ಕಾಲದವರೆಗೆ ನಿಮ್ಮ ಕೂದಲಿನಲ್ಲಿ ಇರುತ್ತದೆ. ನಂತರ ಕೂದಲಿಗೆ ಟವಲ್ ವ್ರಾಪ್ ಮಾಡಿಕೊಳ್ಳಿ.

ತಲೆಕೂದಲನ್ನು ಬಾಚುವುದು

ತಲೆಕೂದಲನ್ನು ಬಾಚುವುದು

ನಿಮ್ಮ ಕೂದಲಿಗೆ ಶಾಂಪೂ ಮಾಡಿಕೊಂಡು ತೊಳೆದ ನಂತರ ಕೂದಲು ಬಾಚುವ ಕಡೆ ಗಮನ ಹರಿಸಿ. ಸಿಕ್ಕುಗಳನ್ನು ಬಿಡಿಸಿಕೊಂಡು ತಲೆಕೂದಲನ್ನು ಬಾಚಿಕೊಳ್ಳಿ. ಒದ್ದೆಕೂದಲನ್ನು ಮೊದಲಿಗೆ ಬೆರಳುಗಳ ಸಹಾಯದಿಂದ ಬಿಡಿಸಿಕೊಂಡು ಒಣಗಿದ ನಂತರ ಬಾಚಣಿಗೆಯನ್ನು ಬಳಸಿ.

ಟವಲ್ ಬಳಸಬೇಡಿ

ಟವಲ್ ಬಳಸಬೇಡಿ

ಕೂದಲು ತೊಳೆದ ನಂತರ ಟವಲ್ ಬಳಸುವ ಬದಲಿಗೆ ಹಳೆಯ ಟೀ ಶರ್ಟ್ ಬಳಸಿಕೊಂಡು ಕೂದಲನ್ನು ಒಣಗಿಸಿಕೊಳ್ಳಿ. ಇದರಿಂದ ಕೂದಲು ಹಾಳಾಗುವುದಿಲ್ಲ ಮತ್ತು ಗಂಟುಗಳು ಉಂಟಾಗುವುದಿಲ್ಲ. ಏರ್ ಡ್ರೈಯರ್‌ಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ನಿಮ್ಮ ಕೂದಲನ್ನು ನೀವು ಯಾವ ರೀತಿಯಲ್ಲಿ ಒಣಗಿಸಿಕೊಳ್ಳುತ್ತೀರಿ ಎಂಬುದು ಮುಖ್ಯವಾಗಿದೆ.

ಶಾಂಪೂವೊಂದೇ ಕೂದಲಿನ ಸಂರಕ್ಷಣೆಯಲ್ಲಿ ಪಾತ್ರ ವಹಿಸುವುದಿಲ್ಲ

ಶಾಂಪೂವೊಂದೇ ಕೂದಲಿನ ಸಂರಕ್ಷಣೆಯಲ್ಲಿ ಪಾತ್ರ ವಹಿಸುವುದಿಲ್ಲ

ನಿಮ್ಮ ಕೂದಲಿಗೆ ಬರಿಯ ಶ್ಯಾಂಪೂವೊಂದೇ ಪರಿಹಾರ ಎಂಬುದಾಗಿ ಪರಿಗಣಿಸಬೇಡಿ. ಇದರ ಜೊತೆಗೆ ಎಣ್ಣೆ ಮಸಾಜ್, ಸೇರಮ್, ವಾಲ್ಯೂಮೈಜರ್, ಕಂಡೀಷನರ್ ಮೊದಲಾದ ವಿಧಾನಗಳನ್ನು ನೀವು ಅನುಸರಿಬೇಕು. ಕೂದಲಿನ ಸಮಸ್ಯೆಗಳಿಗೆ ಶಾಂಪೂವೊಂದೇ ಪರಿಹಾರ ಎಂದು ಆಲೋಚಿಸಬೇಡಿ.

English summary

Tips For Shampooing Your Hair In The Right Way

Shampooing the hair should be done by both men and women, following the right methods and tips. Before wondering on what are the best ways to shampoo your hair or where you are going wrong; take a look at this list of tips and methods for shampooing your hair right that would help answer all the myths.
Story first published: Tuesday, October 3, 2017, 23:22 [IST]
Subscribe Newsletter