ಕೂದಲಿಗೆ ಮನೆಯಲ್ಲೇ ತಯಾರಿಸಿ ನೈಸರ್ಗಿಕ 'ಶಾಂಪೂ'

By: Arshad
Subscribe to Boldsky

ಒಂದು ವೇಳೆ ನೀವು 100% ನೈಸರ್ಗಿಕ ಉತ್ಪನ್ನಗಳನ್ನು ಉಪಯೋಗಿಸುವ ಒಲವುಳ್ಳವರಾಗಿದ್ದರೆ ಹಾಗೂ ಈ ಉತ್ಪನ್ನಗಳನ್ನು ನೀವೇ ಸ್ವತಃ ತಯಾರಿಸಿಕೊಳ್ಳಬಯಸುವಿರಾದರೆ ಈ ಲೇಖನ ನಿಮಗಾಗಿಯೇ ಇದೆ. ಮಾರುಕಟ್ಟೆಯಲ್ಲಿ ಪರಿಪೂರ್ಣವಾದ ನೈಸರ್ಗಿಕ ಶಾಂಪೂವನ್ನು ಪಡೆಯಲು ಸಾಧ್ಯವೇ ಇಲ್ಲ.

ಏಕೆಂದರೆ ಕೆಡದಿರುವಂತೆ ಸೇರಿಸಿರುವ ಸಂರಕ್ಷಕಗಳೇ ಇದರ ಕ್ಷಮತೆಯನ್ನೂ ಕಡಿಮೆ ಮಾಡುತ್ತವೆ. ಈ ರಾಸಾಯನಿಕಗಳಿಂದ ಕೂಡಿರುವ ಶಾಂಪೂ ಬದಲಿಗೆ ಸುಲಭ ಮತ್ತು ಅಗ್ಗವಾಗಿ ನೀವೇ ಸ್ವತಃ ಮನೆಯಲ್ಲಿ ತಯಾರಿಸಿಕೊಳ್ಳಬಹುದಾದ ಈ ಶಾಂಪೂ ಕೇವಲ ಆರೋಗ್ಯಕರ ಮಾತ್ರವಲ್ಲ, ಹೊಸ ಕೂದಲು ಹುಟ್ಟಿ ಹುಲುಸಾಗಿ ಬೆಳೆಯಲೂ ನೆರವಾಗುತ್ತದೆ.

shampooing for hair

ಹೊಸಕೂದಲು ಬೆಳೆಯಲು ಕೂದಲ ಬುಡಕ್ಕೆ ಕೊಂಚ ಪ್ರಚೋದನೆ ನೀಡುವುದು ಅಗತ್ಯ. ಈ ಕೆಲಸವನ್ನು ಅಡುಗೆ ಸೋಡಾ ನಿರ್ವಹಿಸುತ್ತದೆ. ಇದು ಶಾಂಪೂ ಅಥವಾ ಕಂಡೀಶನರ್ ಉಪಯೋಗಿಸಿದ ಬಳಿಕ ಉಳಿದಿರುವ ಹಾನಿಕಾರಕ ಕಣಗಳನ್ನು ನಿವಾರಿಸಲು ನೆರವಾಗುತ್ತದೆ ಹಾಗೂ ಕೆಲವೇ ಪ್ರಯತ್ನಗಳ ಮೂಲಕ ಕೂದಲಿಗೆ ಉತ್ತಮ ಹೊಳಪು ಬರುವಂತೆ ಮಾಡುತ್ತದೆ. 

ಕೂದಲನ್ನು ಸಮೃದ್ಧಿಗೊಳಿಸುವ ಹಳ್ಳಿಗಾಡಿನ ಶಾಂಪೂ!

ಈ ಶಾಂಪೂವನ್ನು ನಿಮ್ಮ ನಿತ್ಯದ ಶಾಂಪೂವಿಗೆ ಬದಲಾಗಿಯೂ ಉಪಯೋಗಿಸಬಹುದು. ಇದರ ಪರಿಣಾಮಗಳನ್ನು ಕೆಲವೇ ದಿನಗಳಲ್ಲಿ ನೋಡಿ ಅಚ್ಚರಿ ಪಡುತ್ತೀರಿ. ಪ್ರಾರಂಭದಲ್ಲಿ ಈ ಶಾಂಪೂವಿನ ಪ್ರಯೋಗದಿಂದ ಮಾಮೂಲಿಗಿಂತಲೂ ಕಡಿಮೆ ನೊರೆ ಬರುತ್ತದೆ, ಆದರೆ ನಿರಾತಂಕರಾಗಿರಿ. ಕೆಲವು ಬಳಕೆಗಳ ಬಳಿಕ ಇದು ಅಭ್ಯಾಸವಾಗುತ್ತದೆ. ಆದರೆ ಅಂತಿಮ ಫಲಿತಾಂಶ ಮಾತ್ರ ನಿಮ್ಮ ನಿರೀಕ್ಷೆಗೂ ಮೀರಿ ಅಚ್ಚರಿ ತರುತ್ತದೆ.

shampoo for hair

ವಿಧಾನ

ಒಂದು ಭಾಗ ಅಡುಗೆ ಸೋಡಾಕ್ಕೆ ಮೂರು ಭಾಗ ನೀರು ಸೇರಿಸಿ ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ. ಒಂದು ವೇಳೆ ನಿಮ್ಮ ಕೂದಲು ಭುಜದವರೆಗೆ ಇದ್ದರೆ ಅಡುಗೆ ಸೋಡಾ ಎರಡರಿಂದ ಮೂರು ದೊಡ್ಡ ಚಮಚ ಸಾಕು. ಇದಕ್ಕೆ ಮೂರು ಪಟ್ಟು ನೀರು ಬೆರೆಸಬೇಕು. ಕೂದಲ ಉದ್ದ ಹೆಚ್ಚಿದ್ದರೆ ಆ ಪ್ರಕಾರ ಕೊಂಚ ಪ್ರಮಾಣವನ್ನು ಹೆಚ್ಚಿಸಬಹುದು. ಈ ದ್ರಾವಣವನ್ನು ನಿಮ್ಮ ಕೂದಲು ಒಣಗಿದ್ದಾಗ ಪೂರ್ಣವಾಗಿ ತೇವಗೊಳಿಸಿ ಬುಡದಿಂದ ತುದಿಯವರೆಗೆ ತಗಲುವಂತೆ ಹಚ್ಚಿಕೊಳ್ಳಬೇಕು.

ಕೇವಲ ಮೂರು ನಿಮಿಷ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಬಳಿಕ ನಿಮ್ಮ ನಿತ್ಯದ ಶಾಂಪೂ ಬಳಸಿ ತೊಳೆದುಕೊಳ್ಳಿ. ಆದರೆ ಮೊದಲು ಬಂದಷ್ಟು ನೊರೆ ಬರುವುದಿಲ್ಲ. ಕೂದಲನ್ನು ತೊಳೆದುಕೊಂಡ ಬಳಿಕ ಸೇಬಿನ ಶಿರ್ಕಾದ ಕೂದಲ ದ್ರಾವಣ (Apple Cider Vinegar Hair Rinse) ಬಳಸಬೇಕು.

baking soda

ಒಂದು ಭಾಗ ಈ ದ್ರಾವಣವನ್ನು ನಾಲ್ಕು ಪಟ್ಟು ನೀರಿನಲ್ಲಿ ಬೆರೆಸಿ ಇದಕ್ಕೆ ನಿಮ್ಮ ಆಯ್ಕೆಯ ಯಾವುದೇ ಸುವಾಸಿತ ಅವಶ್ಯಕ ತೈಲದ ಕೆಲವು ಹನಿಗಳನ್ನು ಬೆರೆಸಿ. ಈ ಮಿಶ್ರಣವನ್ನು ತಲೆಯನ್ನು ಹಿಂದಕ್ಕೆ ವಾಲಿಸಿ ಕೂದಲ ಬುಡದಿಂದ ತುದಿಗೆ ಇಳಿಯುವಂತೆ ಹಚ್ಚಿ. ಈ ದ್ರಾವಣ ಒಣಗಿದ ಬಳಿಕ ಕೂದಲು ಆರೋಗ್ಯಕರ ಹಾಗೂ ಹೊಳಪುಳ್ಳದ್ದಾಗಿರುವುದನ್ನು ನೋಡಿ ಅಚ್ಚರಿ ಪಡೆಯಿರಿ. 

ಸೋಪು-ಶಾಂಪೂ ಪಕ್ಕಕ್ಕಿಡಿ ಇಂತಹ 'ಹೇರ್ ಮಾಸ್ಕ್' ಮಾತ್ರ ಬಳಸಿ!

English summary

This Natural Shampoo Will Make Your Hair Grow Like Crazy!

Baking soda can be used to improve your hair quality and clean it thoroughly from any conditioner or shampoo remains, giving it a healthy shine just after a few treatments. You can use it instead of your regular shampoo and you’ll be amazed by the results. At the beginning it may be difficult to wash your hair without the foam the shampoos usually make, but after a few washes you’ll get used to it. And the final results will amaze you.
Subscribe Newsletter