ಆರೋಗ್ಯ ಪೂರ್ಣ ಕೂದಲಿಗೆ ಬಾಳೆ ಹಣ್ಣಿನ ಉಪಚಾರ

By: Divya Pandith
Subscribe to Boldsky

ಕೇಶರಾಶಿಗಳ ಆರೈಕೆಗಾಗಿ ಬಳಸಬಹುದಾದ ಆರೋಗ್ಯ ಪೂರ್ಣ ಹಣ್ಣು ಬಾಳೆಹಣ್ಣು. ಇದರಲ್ಲಿ ಲಾಭದಾಯಕವಾದ ಜೀವಸತ್ವಗಳು, ಪೋಷಕಾಂಶಗಳು ಮತ್ತು ಆಮ್ಲಗಳು ಇರುವುದರಿಂದ ಕೂದಲಿಗೆ ಹೆಚ್ಚು ಪರಿಣಾಮಕಾರಿಯಾಗಿ ಆರೈಕೆ ಮಾಡುವುದು. ಮೃದುವಾದ ಹಾಗೂ ಸುಲಭವಾಗಿ ತಿನ್ನಬಹುದಾದ ಬಾಳೆಹಣ್ಣಿನ ಸೇವನೆಯೂ ಅಧಿಕ ಪ್ರಮಾಣದ ಪೋಷಕಾಂಶವನ್ನು ಒದಗಿಸುತ್ತದೆ. ದೇಹವನ್ನು ಹೆಚ್ಚು ಕ್ರಿಯಾಶೀಲವಾಗಿ ಇರಿಸುತ್ತದೆ.

ನಿತ್ಯವೂ ನಾವು ಸುಂದರವಾಗಿ ಕಾಣಲು ವಿವಿಧ ಬಗೆಯ ಕೇಶವಿನ್ಯಾಸವನ್ನು ಅನುಸರಿಸುತ್ತೇವೆ. ಆ ಸಮಯದಲ್ಲಿ ಕೂದಲಿಗೆ ಕಿರಿಕಿರಿ ಉಂಟಾಗುವುದು. ಹಾಗೆಯೇ ಧೂಳು, ಮಾಲಿನ್ಯ ಹಾಗೂ ಬಿಸಿಲಿನಿಂದಾಗಿ ಕೂದಲು ಒಡೆಯುವುದು, ಒರಟಾಗುವುದು ಹಾಗೂ ಉದುರುವುದು ಹೀಗೆ ಅನೇಕ ಸಮಸ್ಯೆಗಳಿಗೆ ಒಳಗಾಗುತ್ತವೆ. ಈ ರೀತಿ ಮಂಕಾದ ಕೇಶರಾಶಿಗಳಿಗೆ ಅನುಕೂಲಕರವಾದ ಚಿಕಿತ್ಸೆ ಹಾಗೂ ಆರೈಕೆಯನ್ನು ನೀಡುವ ಅತ್ಯುತ್ತಮ ನೈಸರ್ಗಿಕ ಉತ್ಪನ್ನ ಬಾಳೆಹಣ್ಣು.

ಎಲ್ಲಾ ಸಮಯದಲ್ಲೂ ಹೆಚ್ಚು ಕಾಂತಿಯುತವಾಗಿ ಹಾಗೂ ಸದೃಢವಾಗಿ ಇರಬೇಕೆಂದು ಅನೇಕರು ವಿವಿಧ ಬಗೆಯ ದುಬಾರಿ ಬೆಲೆಯ ಕೂದಲ ಆರೈಕೆಮಾಡಿಕೊಳ್ಳುತ್ತಾರೆ. ವಾಣಿಜ್ಯ ಉತ್ಪನ್ನಗಳಲ್ಲಿ ತತ್‍ಕ್ಷಣಕ್ಕೆ ಉತ್ತಮ ಫಲಿತಾಂಶ ತೋರಬಹುದು. ಆದರೆ ಅದರಿಂದ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚಿರುತ್ತದೆ. ಅದೇ ನೈಸರ್ಗಿಕ ಆರೈಕೆಯಲ್ಲಿ ಒಂದಾದ ಬಾಳೆ ಹಣ್ಣಿನ ಆರೈಕೆಯು ಕೂದಲನ್ನು ಸದಾ ಆರೋಗ್ಯವಾಗಿರುವಂತೆ ಮಾಡುತ್ತದೆ. ಅದರೊಂದಿಗೆ ಇನ್ನಿತರ ನೈಸರ್ಗಿಕ ಉತ್ಪನ್ನಗಳನ್ನು ಸೇರಿಸಿದರೆ ಆರೈಕೆಯ ದ್ವಿಗುಣವಾಗುತ್ತದೆ.

ಬಾಳೆ ಹಣ್ಣು + ನಿಂಬೆ ರಸ

ಬಾಳೆ ಹಣ್ಣು + ನಿಂಬೆ ರಸ

ಒಂದು ಚೆನ್ನಾಗಿ ಹಣ್ಣಾದ ಒಂದು ಬಾಳೆ ಹಣ್ಣನ್ನು ಕಿವುಚಿ. ಅದಕ್ಕೆ 1 ಟೇಬಲ್ ಚಮಚ ನಿಂಬೆ ರಸ ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ನೆತ್ತಿ ಹಾಗೂ ಕೂದಲಿನ ಇತರ ಭಾಗಗಳಲ್ಲಿ ಅನ್ವಯಿಸಿ, ಒಂದು ಗಂಟೆಗಳ ಕಾಲ ಆರಲು ಬಿಡಿ.

ಶುಷ್ಕ ನೀರು ಹಾಗೂ ಶ್ಯಾಂಪುವಿನ ಸಹಾಯದಿಂದ ಕೂದಲನ್ನು ಸ್ವಚ್ಛಗೊಳಿಸಿ.

ಹೀಗೆ ವಾರಕ್ಕೊಮ್ಮೆ ಮಾಡುವುದರಿಂದ ಕೇಶವು ಅಧಿಕ ಹೊಳಪು ಹಾಗೂ ಗಟ್ಟಿಯಾಗಿರುವುದು.

ಬಾಳೆ ಹಣ್ಣು + ನಿಂಬೆ ರಸ

ಬಾಳೆ ಹಣ್ಣು + ನಿಂಬೆ ರಸ

ಬಾಳೆ ಹಣ್ಣನ್ನು ಕಿವುಚಿ, ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಇತರೆಡೆ ಅನ್ವಯಿಸಿ. ಅವುಗಳನ್ನು ಕೂದಲು ಹೀರಿಕೊಳ್ಳಲು 40-45 ನಿಮಿಷಗಳ ಕಾಲ ಬಿಡಿ.

ಬೆಚ್ಚಗಿನ ನೀರು ಮತ್ತು ಶ್ಯಾಂಪುವಿನ ಸಹಾಯದಿಂದ ತೊಳೆಯಿರಿ.

ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನ್ವಯಿಸಿದರೆ ಕೂದಲು ಹೆಚ್ಚು ಆರೋಗ್ಯಪೂರ್ಣವಾಗಿ ಇರುವುದು.

ಬಾಳೆ ಹಣ್ಣು + ಆಲಿವ್ ಎಣ್ಣೆ

ಬಾಳೆ ಹಣ್ಣು + ಆಲಿವ್ ಎಣ್ಣೆ

ಒಂದು ಬಾಳೆ ಹಣ್ಣನ್ನು ಕಿವುಚಿ, ಅದಕ್ಕೆ 1 ಟೇಬಲ್ ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ.

ಮಿಶ್ರಣವನ್ನು ನೆತ್ತಿ ಹಾಗೂ ತೆಲೆಗೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ

30-35 ನಿಮಿಷಗಳ ಕಾಲ ಹೀರಲು ಬಿಟ್ಟು, ನಂತರ ಶುಷ್ಕ ನೀರು ಹಾಗೂ ಶಾಂಪುವಿನ ಸಹಾಯದಿಂದ ತೊಳೆಯಿರಿ.

ತಿಂಗಳಿಗೆ ಎರಡು ಬಾರಿ ಹೀಗೆ ಮಾಡುವುದರಿಂದ ಕೂದಲ ಆರೋಗ್ಯ ಹೆಚ್ಚುವುದು.

 ಬಾಳೆ ಹಣ್ಣು + ಅಲೋವೆರಾ

ಬಾಳೆ ಹಣ್ಣು + ಅಲೋವೆರಾ

ಒಂದು ಬೌಲ್‍ನಲ್ಲಿ ಕಿವುಚಿದ ಬಾಳೆ ಹಣ್ಣು ಮತ್ತು 2 ಟೀ ಚಮಚ ಅಲೋವೆರಾ ಲೋಳೆಯನ್ನು ಸೇರಿಸಿ, ಮಿಶ್ರಗೊಳಿಸಿ.

ನೆತ್ತಿ ಹಾಗೂ ಕೂದಲಿಗೆ ಅನ್ವಯಿಸಿ, ಒಂದು ಗಂಟೆ ಹೀರಿಕೊಳ್ಳಲು ಬಿಡಿ.

ನಂತರ ಶುಷ್ಕ ನೀರು ಮತ್ತು ಶ್ಯಾಂಪುವಿನ ಸಹಾಯದಿಂದ ಸ್ವಚ್ಛಗೊಳಿಸಿ.

ವಾರಕ್ಕೊಮ್ಮೆ ಈ ವಿಧಾನವನ್ನು ಅನ್ವಯಿಸುವುದರಿಂದ ಕೂದಲು ದಪ್ಪ ಹಾಗೂ ಉದ್ದವಾಗಿ ಬೆಳೆಯುತ್ತದೆ.

ಬಾಳೆ ಹಣ್ಣು + ನೆಲ್ಲಿಕಾಯಿ ಎಣ್ಣೆ

ಬಾಳೆ ಹಣ್ಣು + ನೆಲ್ಲಿಕಾಯಿ ಎಣ್ಣೆ

ಒಂದು ಬೌಲ್‍ನಲ್ಲಿ ಕಿವುಚಿದ ಬಾಳೆ ಹಣ್ಣು ಮತ್ತು 3-4 ಟೇಬಲ್ ಚಮಚ ನೆಲ್ಲಿಕಾಯಿ ಎಣ್ಣೆಯನ್ನು ಸೇರಿಸಿ.

ಮಿಶ್ರಣವನ್ನು ನೆತ್ತಿ ಹಾಗೂ ಕೂದಲ ಬುಡದಲ್ಲಿ ಅನ್ವಯಿಸಿ. ಒಂದು ಗಂಟೆ ಆರಲು ಬಿಡಿ.

ಶ್ಯಾಂಪು ಮತ್ತು ಶುಷ್ಕ ನೀರಿನಿಂದ ಸ್ವಚ್ಛಗೊಳಿಸಿ.

ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಅನ್ವಯಿಸುವುದರಿಂದ ಕೂದಲು ಕಪ್ಪು ಹಾಗೂ ಆರೋಗ್ಯವಾಗಿ ಬೆಳೆಯುವುದು.

ಬಾಳೆ ಹಣ್ಣು+ ಜೇನುತುಪ್ಪ+ ಆಪಲ್ ಸೈಡರ್ ವಿನೆಗರ್

ಬಾಳೆ ಹಣ್ಣು+ ಜೇನುತುಪ್ಪ+ ಆಪಲ್ ಸೈಡರ್ ವಿನೆಗರ್

ಒಂದು ಬೌಲ್‍ನಲ್ಲಿ 3-4 ಟೇಬಲ್ ಚಮಚ ಕಿವುಚಿದ ಬಾಳೆಹಣ್ಣು, 2 ಟೀ ಚಮಚ ಜೇನುತುಪ್ಪ ಮತ್ತು 1/2 ಟೀ ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ, ಮಿಶ್ರಗೊಳಿಸಿ.

ನೆತ್ತಿಯ ಭಾಗ ಮತ್ತು ಕೂದಲ ಬುಡಕ್ಕೆ ಅನ್ವಯಿಸಿ. ಒಂದು ಗಂಟೆ ಆರಲು ಬಿಡಿ.

ಬೆಚ್ಚಗಿನ ನೀರು ಮತ್ತು ಶ್ಯಾಂಪುವಿನ ಸಹಾಯದಿಂದ ಕೇಶವನ್ನು ಸ್ವಚ್ಛಗೊಳಿಸಿ.

ವಾರಕ್ಕೊಮ್ಮೆ ಇದನ್ನು ಬಳಸುವುದರಿಂದ ಕೂದಲು ನೈಸರ್ಗಿಕವಾಗಿ ಕಾಂತಿಯಿಂದ ಕೂಡಿರುತ್ತದೆ.

 ಬಾಳೆಹಣ್ಣು+ ಅವಕಾಡೊ+ ಗುಲಾಬಿ ನೀರು

ಬಾಳೆಹಣ್ಣು+ ಅವಕಾಡೊ+ ಗುಲಾಬಿ ನೀರು

ಒಂದು ಬೌಲ್‍ನಲ್ಲಿ ಕಿವುಚಿದ ಬಾಳೆ ಹಣ್ಣು, ಅವಕಾಡೊ ಮತ್ತು 3-4 ಟೇಬಲ್ ಚಮಚ ಗುಲಾಬಿ ನೀರನ್ನು ಸೇರಿಸಿ ಮಿಶ್ರಗೊಳಿಸಿ.

ನೆತ್ತಿಯ ಭಾಗಕ್ಕೆ ಮತ್ತು ಕೇಶರಾಶಿಗೆ ಮಿಶ್ರಣವನ್ನು ಅನ್ವಯಿಸಿ, ಒಂದು ಗಂಟೆ ಆರಲು ಬಿಡಿ.

ನಂತರ ಶ್ಯಾಂಪು ಮತ್ತು ನೀರಿನಿಂದ ಸ್ವಚ್ಛಗೊಳಿಸಿ.

ತಿಂಗಳಿಗೊಮ್ಮೆ ಹೀಗೆ ಮಾಡುವುದರಿಂದ ಕೇಶರಾಶಿಯ ಆರೈಕೆ ಮಾಡಬಹುದು.

ಬಾಳೆ ಹಣ್ಣು+ ತೆಂಗಿನ ಎಣ್ಣೆ

ಬಾಳೆ ಹಣ್ಣು+ ತೆಂಗಿನ ಎಣ್ಣೆ

ಮೈಕ್ರೋವೇವ್‍ನಲ್ಲಿ 2 ಟೇಬಲ್ ಚಮಚ ತೆಂಗಿನೆಣ್ಣೆಯನ್ನು ಬಿಸಿಮಾಡಿ. ನಂತರ ಕಿವುಚಿಕೊಂಡ ಬಾಳೆ ಹಣ್ಣಿಗೆ ಸೇರಿಸಿ.

ನಂತರ ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ.

ನಂತರ ಬೆಚ್ಚಗಿನ ನೀರು ಮತ್ತು ಶ್ಯಾಂಪುವಿನ ಸಹಾಯದಿಂದ ಸ್ವಚ್ಛಗೊಳಿಸಿ.

ವಾರಕ್ಕೆ ಎರಡು ಬಾರಿ ಅನ್ವಯಿಸುವುದರಿಂದ ಸದೃಢ ಕೇಶರಾಶಿಯನ್ನು ಹೊಂದಬಹುದು.

English summary

Super Easy DIY Banana Packs For Shiny And Strong Hair

Banana is one of those rare fruits that is often used for hair care purposes. It is considered to be highly beneficial for the hair, as it is replete with hair-benefiting vitamins, nutrients and acids. In today's post, we're letting you know about a few super easy and incredibly effective DIY banana-based hair packs that can help you get strong and shiny tresses. Forgo of the pricey hair products and make use of the following packs to get the kind of hair you yearn for. Take a look at them here:
Please Wait while comments are loading...
Subscribe Newsletter