For Quick Alerts
ALLOW NOTIFICATIONS  
For Daily Alerts

ಶ್! ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಸೀಕ್ರೆಟ್ ಮನೆಮದ್ದು!

By Manu
|

ಕೂದಲು ನೆರೆಯುವುದಕ್ಕೆ ಅಥವಾ ಬಿಳಿಯಾಗುವುದಕ್ಕೆ ಇಂತಿಷ್ಟೇ ಎಂಬ ವಯಸ್ಸಿನ ನಿರ್ಬಂಧವಿಲ್ಲ. ಕೆಲವರಿಗೆ ಇಪ್ಪತ್ತರಲ್ಲಿಯೇ ನೆರೆಯಲು ಪ್ರಾರಂಭಿಸಿದರೆ ಕೆಲವರಿಗೆ ಐವತ್ತರ ಬಳಿಕ ಪ್ರಾರಂಭವಾಗಬಹುದು. ಆದರೆ ಯಾವಾಗ ಪ್ರಾರಂಭವಾದರೂ ಇದು ಆತಂಕವನ್ನು ಮಾತ್ರ ತಪ್ಪದೇ ತರುತ್ತದೆ. ಏಕೆಂದರೆ ಕೂದಲು ನೆರೆಯುವುದು ವೃದ್ಧಾಪ್ಯದ ಲಕ್ಷಣ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ.

ಇದನ್ನು ತಡೆಯಲು ಮಾಡದ ಪ್ರಯತ್ನವಿಲ್ಲ, ಅನುಸರಿಸದ ವಿಧಾನವಿಲ್ಲ. ಆದರೂ ಯಾವುದೇ ಪ್ರಯತ್ನ ಶೇಖಡಾ ನೂರರಷ್ಟು ಫಲ ನೀಡುತ್ತಿಲ್ಲ. ಕೂದಲ ನೆರೆಯುವಿಕೆಗೆ ಸ್ಪಷ್ಟವಾದ ಕಾರಣ ಇದುವರೆಗೆ ಗೊತ್ತಾಗಿಲ್ಲ. ಸ್ಥೂಲವಾಗಿ ಹೇಳಬೇಕೆಂದರೆ ತಾಮ್ರದ ಕೊರತೆಯಿಂದ ಕೂದಲಿಗೆ ಬಣ್ಣ ನೀಡುವ ಮೆಲನಿನ್ ಎಂಬ ವರ್ಣದ್ರವ್ಯ ಉತ್ಪತ್ತಿಯಾಗದೇ ಬಣ್ಣ ನೆರೆಯತೊಡಗುತ್ತದೆ. ಕೆಲವು ಊಹಾಪೋಹಗಳ ಪ್ರಕಾರ ಕೇಸರಿ ಬಣ್ಣದ ಬೇಳೆ ತಿನ್ನುವ ಕಾರಣದಿಂದಲೂ ಕೂದಲು ಅಕಾಲಿಕವಾಗಿ ನೆರೆಯುತ್ತದೆಯಂತೆ!, ಅಂತಹ ಕಟ್ಟು ಕಥೆಗಳನ್ನೆಲ್ಲಾ ಪಕ್ಕಕ್ಕಿಟ್ಟು ಕೂದಲು ಬಿಳಿಯಾಗುವ ಸಮಸ್ಯೆಯಿಂದ ಪಾರಾಗಲು ಕೆಲವೊಂದು ಸಿಂಪಲ್ ಮನೆಮದ್ದುಗಳನ್ನು ಪರಿಚಯಿಸುತ್ತಿದ್ದೇವೆ ಮುಂದೆ ಓದಿ....

ನೆಲ್ಲಿಕಾಯಿ

ನೆಲ್ಲಿಕಾಯಿ

ಶೀಘ್ರವಾಗಿ ಬಿಳಿ ಕೂದಲನ್ನು ನಿವಾರಿಸಲು ನೆಲ್ಲಿಕಾಯಿಗಿಂತ ಇನ್ನೊಂದು ಮದ್ದಿಲ್ಲ. ಕೆಲವು ನೆಲ್ಲಿಕಾಯಿಗಳನ್ನು ಕೊಬ್ಬರಿ ಎಣ್ಣೆಯಲ್ಲಿ ನಿಧಾನವಾದ ಉರಿಯಲ್ಲಿ ಕಪ್ಪಗಾಗುವವರೆಗೆ ಕುದಿಸಬೇಕು. ಈ ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ಬಿಳಿಯಾಗಿರುವ ಕೂದಲಿಗೆ ಹಾಗೂ ಮುಖ್ಯವಾಗಿ ಪ್ರತಿ ಕೂದಲ ಬುಡಕ್ಕೆ ನಯವಾಗಿ ಮಾಲಿಷ್ ಮಾಡಬೇಕು. ಇದು ಇತ್ತೀಚೆಗೆ ನೆರೆದಿರುವ ಕೂದಲಿಗೆ ಮತ್ತೆ ನೈಸರ್ಗಿಕ ಕಪ್ಪುಬಣ್ಣವನ್ನು ನೀಡುತ್ತದೆ. ಕೊಬ್ಬರಿ ಎಣ್ಣೆಯಲ್ಲಿ ಕುದಿಸುವ ಬದಲಿಗೆ ನೆಲ್ಲಿಕಾಯಿಯನ್ನು ಅರೆದು ಅಥವಾ ಎಣ್ಣೆ ತೆಗೆದು ಸಹಾ ಬಳಸಬಹುದು. ಶೀಘ್ರ ಪರಿಣಾಮ ಬೀರಲು ನೆಲ್ಲಿಕಾಯಿಯ ಕಷಾಯವನ್ನು ಉಪಯೋಗಿಸಬಹುದು. ಕಷಾಯ ತಯಾರಿಸಲು ಕೆಲವು ನೆಲ್ಲಿಕಾಯಿಗಳನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿದ ಬಳಿಕ ಒಂದು ಚಮಚ ನೀಲಗಿರಿ ಎಣ್ಣೆಯನ್ನು ಹಾಕಿ ಗಾಳಿಯಾಡದ ಗಾಜಿನ ಜಾಡಿಯಲ್ಲಿ ಒಂದು ರಾತ್ರಿ ನೆನೆಸಿಡಬೇಕು. ಬೆಳಿಗ್ಗೆ ಈ ದ್ರಾವಣವನ್ನು ಒಂದು ಮೊಟ್ಟೆ, ಒಂದು ಲಿಂಬೆಯ ರಸ ಹಾಗೂ ಸ್ವಲ್ಪ ಮೊಸರಿನೊಂದಿಗೆ ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಒಂದೆರಡು ಘಂಟೆಗಳ ಬಳಿಕ ಸ್ನಾನ ಮಾಡಬೇಕು.ನೆಲ್ಲಿಕಾಯಿಯ ರಸವನ್ನು ಸೇವಿಸುವುದರಿಂದ ಅಥವಾ ಹಸಿಯಾಗಿ ತಿನ್ನುವುದರಿಂದ ಕೂದಲ ಆರೋಗ್ಯ ಹೆಚ್ಚುವುದು ಹಾಗೂ ದೇಹದ ಇನ್ನೂ ಹಲವು ತೊಂದರೆಗಳಿಗೆ ಪರಿಹಾರ ದೊರಕುತ್ತದೆ

ಈರುಳ್ಳಿ ರಸ

ಈರುಳ್ಳಿ ರಸ

ಒಂದು ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಒಂದು ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ ಕೊಂಚ ನೀರು ಸೇರಿಸಿ. ಈ ನೀರನ್ನು ಚೆನ್ನಾಗಿ ಕುದಿಸಿ. ಈರುಳ್ಳಿ ಬೆಂದು ಮೃದುವಾದ ಬಳಿಕ ಈ ನೀರನ್ನು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರು ತಣಿದು ಉಗುರುಬೆಚ್ಚಗಾದ ಬಳಿಕ ತಲೆಗೂದಲ ಬುಡಕ್ಕೆ ನವಿರಾದ ಮಸಾಜ್ ಮೂಲಕ ಇಡಿಯ ತಲೆಗೆ ಹಚ್ಚಿ. ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತಲೆ ತೊಳೆದುಕೊಳ್ಳಿ. ಈರುಳ್ಳಿಯ ವಾಸನೆ ಪೂರ್ಣವಾಗಿ ಹೋಗಲು ಎರಡು ಅಥವಾ ಮೂರು ಬಾರಿ ತೊಳೆದುಕೊಳ್ಳಬೇಕಾಗಿ ಬರಬಹುದು.

ಕೂದಲಿಗೆ ಈರುಳ್ಳಿ ರಸ-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಯೊಂದಿಗೆ ಬಳಸಿ ಕೂದಲ ಆರೈಕೆಗೆ ಕೊಬ್ಬರಿ ಎಣ್ಣೆ ಅತ್ಯುತ್ತಮ ಆಯ್ಕೆಯಾಗಿದೆ. ಕೂದಲ ಬೆಳವಣಿಗೆಯನ್ನು ಹೆಚ್ಚಿಸಲು ಕೊಂಚ ಈರುಳ್ಳಿ ರಸವನ್ನು ಬಿಸಿಮಾಡಿದ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಬಳಿಕ ತಲೆಗೆ ಹಚ್ಚಿಕೊಳ್ಳಿ. ತಲೆಗೂದಲ ಬುಡದಿಂದ ತುದಿಯವರೆಗೆ ಇದು ಆವರಿಸುವಂತೆ ನೋಡಿಕೊಳ್ಳಿ. ಸುಮಾರು ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಲೋಳೆ ರಸ ಮತ್ತು ಮೊಟ್ಟೆ

ಲೋಳೆ ರಸ ಮತ್ತು ಮೊಟ್ಟೆ

ಅರ್ಧ ಕಪ್ ಲೋಳೆ ರಸ ಜೊತೆಗೆ ಒಂದು ಮೊಟ್ಟೆಯ ಬಿಳಿಭಾಗವನ್ನು ಮಿಶ್ರಣ ಮಾಡಿಕೊಂಡು ಪೇಸ್ಟ್‌ನಂತೆ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ. ಇದನ್ನು 30 ನಿಮಿಷ ಬಿಡಿ, ನಂತರ ತೊಳೆಯಿರಿ. ಈ ಹೇರ್ ಮಾಸ್ಕ್ ನಿಮ್ಮ ಕೂದಲಿಗೆ ಹೊಳಪನ್ನು ನೀಡುವುದರ ಜೊತೆಗೆ, ಬಿಳಿಗೂದಲು ಶೀಘ್ರವೇ ಕಪ್ಪಗಾಗುತ್ತದೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆಯಲ್ಲಿ ವಿಟಮಿನ್‍ಗಳು, ಒಮೆಗಾ-3 ಕೊಬ್ಬಿನ ಆಮ್ಲಗಳು ಇರುತ್ತವೆ. ಈ ಅಂಶಗಳು ಕೂದಲಿನ ಬೆಳವಣಿಗೆಗೆ ಸಹಕರಿಸುತ್ತವೆ.ಇವುಗಳು ಕೂದಲನ್ನು ಸದೃಢಗೊಳಿಸುತ್ತವೆ. ಕೂದಲಿನ ಬೆಳವಣಿಗೆಗೆ ನೆರವಾಗುವ ಅತ್ಯುತ್ತಮ ಮನೆಮದ್ದುಗಳಲ್ಲಿ ಇದು ಸಹ ಒಂದಾಗಿದೆ. ಅಲ್ಲದೆ ಕೂದಲಿನ ತುದಿಗಳು ಒಡೆಯಲು ಪ್ರಮುಖ ಕಾರಣ ಅಗತ್ಯ ಪ್ರಮಾಣದ ಎಣ್ಣೆ ಮತ್ತು ಪೋಷಕಾಂಶ ಇಲ್ಲದಿರುವುದಾಗಿದೆ. ನಿಮ್ಮ ಕೂದಲ ತುದಿಗಳನ್ನು ಮೊಟ್ಟೆ ಬೆರೆಸಿದ ಬಿಸಿ ಸಾಸಿವೆ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಇನ್ನು ಬಿಳಿ ಕೂದಲಿನ ಸಮಸ್ಯೆಗೆ ಎರಡರಿಂದ ಮೂರು ಟೇಬಲ್ ಚಮಚದಷ್ಟು ಸಾಸಿವೆ ಎಣ್ಣೆಗೆ ಸ್ವಲ್ಪ ಮದರಂಗಿ ಎಲೆಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಎಲೆಗಳು ಪೂರ್ಣವಾಗಿ ಕರಗುವವರೆಗೆ ಕುದಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಪ್ರತಿದಿನ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು.

ಸ್ವಲ್ಪ ಕರಿಬೇವು+ 200 ಮಿ.ಗ್ರಾಂ. ಶುದ್ಧ ತೆಂಗಿನ ಎಣ್ಣೆ

ಸ್ವಲ್ಪ ಕರಿಬೇವು+ 200 ಮಿ.ಗ್ರಾಂ. ಶುದ್ಧ ತೆಂಗಿನ ಎಣ್ಣೆ

1.ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನಸಿಡಿ. ನೀರಿನಿಂದ ತೆಗೆದ ಬಳಿಕ ಬಿಸಿಲಿನಲ್ಲಿ ಅದು ಕಂದು ಬಣ್ಣಕ್ಕೆ ಬರುವ ತನಕ ಮತ್ತು ಗರಿಗರಿ ಆಗುವ ತನಕ ಒಣಗಿಸಿ.

2.ಒಣಗಿದ ಎಲೆಗಳನ್ನು ಸರಿಯಾಗಿ ಹುಡಿ ಮಾಡಿಕೊಳ್ಳಿ.

3.ಸಣ್ಣ ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ನಾಲ್ಕು ಚಮಚ ಕರಿಬೇವಿನ ಹುಡಿಯನ್ನು ಹಾಕಿ. ಎಣ್ಣೆ ಸರಿಯಾಗಿ ಕುದಿಯಲಿ. 4.ಎಣ್ಣೆಯನ್ನು ತಣ್ಣಗಾಗಲು ಬಿಡಿ. ಇದನ್ನು ಒಂದು ಬಾಟಲಿಗೆ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿಡಿ. ಇದನ್ನು ಬೇಕಾದಾಗ ತೆಗೆದು ಬಳಸಿಕೊಳ್ಳಿ.

ಬಾದಾಮಿ ಎಣ್ಣೆ ಮಸಾಜ್

ಬಾದಾಮಿ ಎಣ್ಣೆ ಮಸಾಜ್

ತೆಂಗಿನೆಣ್ಣೆಯ ನಂತರ, ನಿಮ್ಮ ಕೂದಲಿಗೆ ಬಳಸಬಹುದಾದ ಉತ್ತಮ ಎಣ್ಣೆ ಎಂದರೆ ಅದು ಬಾದಾಮಿ ಎಣ್ಣೆಯಾಗಿದೆ. ಈ ಎಣ್ಣೆಯನ್ನು ಬಳಸಿ ಕೂದಲಿನ ಬುಡ ಮತ್ತು ಕೂದಲಿನ ತುದಿಗೆ ಚೆನ್ನಾಗಿ ಮಸಾಜ್ ಮಾಡಿ. ಬಾದಾಮಿ ಎಣ್ಣೆಯನ್ನು ಬಿಸಿ ಮಾಡಿ ನಂತರ ಹಚ್ಚಿಕೊಳ್ಳುವುದರಿಂದ ಕೂಡ ಹೆಚ್ಚಿನ ಫಲಿತಾಂಶ ನಿಮಗೆ ದೊರೆಯಲಿದೆ. ವಿಟಮಿನ್ ಇ ಈ ಎಣ್ಣೆಯಲ್ಲಿದ್ದು ಕೂದಲಿನ ಬೆಳವಣಿಗೆಯನ್ನು ಇದು ಮಾಡುವುದರ ಜೊತೆಗೆ ದಪ್ಪನೆಯ ಕಪ್ಪು ಕೂದಲನ್ನು ನೀಡುತ್ತದೆ.

ಆಲೂಗಡ್ಡೆಯ ಮಾಸ್ಕ್

ಆಲೂಗಡ್ಡೆಯ ಮಾಸ್ಕ್

ನಿಮ್ಮ ಬಿಳಿಕೂದಲನ್ನು ಕಪ್ಪಗಾಗಿಸಲು, ಹಸಿ ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ ನಂತರ ಆ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಒಣಗಿದ ನಂತರ ಕೂದಲಿಗೆ ಮೊಸರಿನ ಮಾಸ್ಕ್ ಅನ್ನು ಹಚ್ಚಿಕೊಳ್ಳಿ ಹತ್ತು ನಿಮಿಷಗಳ ನಂತರ ಕೂದಲನ್ನು ತೊಳೆದುಕೊಳ್ಳಿ.

ಹಾಗಲಕಾಯಿ ಮಾಸ್ಕ್

ಹಾಗಲಕಾಯಿ ಮಾಸ್ಕ್

ನಿಮ್ಮ ಬಿಳಿ ಕೂದಲನ್ನು ಕಪ್ಪಗಾಗಿಸಲು ಈ ಸರಳ ಟಿಪ್ಸ್ ಅನ್ನು ನಿಮ್ಮದಾಗಿಸಿ ಕೊಳ್ಳಬಹುದಾಗಿದೆ. ತೆಂಗಿನ ಎಣ್ಣೆಯೊಂದಿಗೆ ಹಾಗಲಕಾಯಿಯನ್ನು ಬೇಯಿಸಿಕೊಳ್ಳಿ ಬೆಂದ ನಂತರ ಅದನ್ನು ಎಣ್ಣೆಯೊಂದಿಗೆ ಹಿಸುಕಿಕೊಳ್ಳಿ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ. ಐದು ಬಾರಿ ಪ್ರಯೋಗ ಮಾಡಿದ ನಂತರ ನೀವು ಅದ್ಭುತ ಪ್ರಯೋಜನವನ್ನು ಪಡೆದುಕೊಳ್ಳುವುದು ಖಂಡಿತ.

English summary

Simple Ways To Get Rid Of White Hair At A Young Age

Greying when you are young is a major problem all men and women face although the pepper look is fashionable! To cover these rich grey or silver hair, using these home remedies is the key. To get started on home remedies to naturally make your hair white, here are some of the ingredients for you to try! How can any youngster get rid of white hair? Are there any home remedies for white hair in young age? Well, there are! And that is what this post is all about! Read on and get to know of the ways in which you can prevent premature hair whitening!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more