ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಸರಳ ಸೂತ್ರಗಳು

Posted By: Deepak M
Subscribe to Boldsky

ಮಳೆಗಾಲ ಅಥವಾ ಮಾನ್ಸೂನ್ ಸಮಯದಲ್ಲಿ ದೇಶದ ಹವಾಮಾನ ಪರಿಸ್ಥಿತಿಯಲ್ಲಿ ಅನಿರೀಕ್ಷಿತವಾಗಿ ಆಗುವ ಬದಲಾವಣೆಯನ್ನು ಅಕ್ಷರಶಃ ಊಹಿಸಲು ಸಾಧ್ಯವಿಲ್ಲ. ಅಲ್ಲದೆ ಯಾವ ಸಂದರ್ಭದಲ್ಲಿ ಮಳೆ ಬರುತ್ತದೆ ಎಂಬುದನ್ನು ಸಹ ಹೇಳಲು ಸಾಧ್ಯವಿಲ್ಲ. ಮೊದಲು ಸಹಜವಾಗಿ ಮಳೆಗಾಲವನ್ನು ಊಹೆ ಮಾಡಬಹುದಿತ್ತು.

ಅದರೆ ಈಗ ಅದು ವರ್ಷವಿಡೀ ಇರುವ ಕಾಲವಾಗಿದೆ. ಮಳೆಗಾಲವು (ಮಾನ್ಸೂನ್) ನಾವು ಹೊರಗೆ ಹೋಗಲು ಬಯಸದೇ ಇರುವ ಸಮಯವಾದರೂ, ಕೆಲವೊಮ್ಮೆ ನಾವು ಹೊರಗೆ ಹೋಗುವ ಸಂದರ್ಭ ಬಂದರೆ ಮಳೆಯಲ್ಲಿ ನೆನೆಯುವ ಸಂದರ್ಭ ಬರಬಹುದು ಅಥವಾ ಹವಾಮಾನವೇ ನಮ್ಮ ದೇಹದಲ್ಲಿ ಖಂಡಿತವಾಗಿ ಅನೇಕ ಬದಲಾವಣೆಯನ್ನು ತರುತ್ತದೆ. 

ಮಳೆಗಾಲದಲ್ಲಿ ಕೂದಲಿನ ಕಾಳಜಿಗೆ ಟಿಪ್ಸ್

ಮಾನ್ಸೂನ್ ಸಮಯದಲ್ಲಿ ಅಗುವ ಒಂದು ಗಮನಾರ್ಹ ಮತ್ತು ಪ್ರಮುಖ ಬದಲಾವಣೆಯೆಂದರೆ ಅದು ನಮ್ಮ ಕೂದಲಿನ ಗುಣಮಟ್ಟ ಮತ್ತು ಅದರ ವಿನ್ಯಾಸದಲ್ಲಿ ಆಗುವ ಬದಲಾವಣೆಯನ್ನು ತರುತ್ತದೆ. ಏಕೆಂದರೆ ಈ ಸಮಯದಲ್ಲಿ ಗಾಳಿಯಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿರುತ್ತದೆ. ಆಗಾಗಿ ಇದು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ನೀವು ಮಳೆಯ ನೀರಿನಲ್ಲಿ ನೆನೆಯುವುದನ್ನು ತಪ್ಪಿಸುವ ಪ್ರಯತ್ನ ಮಾಡಲಾಗದಿದ್ದರೆ ಆಗ ಕೂದಲಿಗೆ ಎದುರಾಗುವ ಯಾವುದೇ ಅನಾರೋಗ್ಯದ ಪರಿಣಾಮವನ್ನು ಯಾವುದರಿಂದಲೂ ತಡೆಯಲಾಗುವುದಿಲ್ಲ.

ಆದ್ದರಿಂದ ಮಾನ್ಸೂನ್ ನಿಮ್ಮ ಕೂದಲಿನ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿದಾಗ ನೀವು ಅದಕ್ಕೆ ಸರಿಯಾದ ಪರಿಹಾರಗಳನ್ನು ತಿಳಿಯುವುದು ಅಗತ್ಯವಾಗಿರುತ್ತದೆ. ಆದ್ದರಿಂದ ಮಾನ್ಸೂನ್ ಸಮಯದಲ್ಲಿ ಕೂದಲಿನ ಹಾರೈಕೆಗೆ ನೀವು ಅಗತ್ಯವಾಗಿ ಅನುಸರಿಸಲೇಬೇಕಾದ ಕೆಲವು ಮೂಲಭೂತ ಬದಲಾವಣೆಗಳನ್ನು ಮತ್ತು ಸಲಹೆಯಗಳನ್ನು ಇಲ್ಲಿ ನೀಡಲಾಗಿದೆ. ಅದನ್ನು ಒಂದೊಂದಾಗಿ ನೋಡೋಣ ಬನ್ನಿ..

ಮಾನ್ಸೂನ್‌ಗೆ ಹೊಂದಿಕೊಳ್ಳಿ

ಮಾನ್ಸೂನ್‌ಗೆ ಹೊಂದಿಕೊಳ್ಳಿ

ಇಲ್ಲಿ ದಯವಿಟ್ಟು ಗಮನಿಸಬೇಕಾದ ಅಂಶವೆಂದರೆ ಮಾನ್ಸೂನ್ ಸಮಯದಲ್ಲಿ ಕೂದಲಿನ ಆರೈಕೆಗೆ ವಿಶೇಷ ಕಾಳಜಿ ವಹಿಸಲು ಕಡ್ಡಾಯವಾಗಿ ಪ್ರಯತ್ನಿಸಬೇಕು. ಒಂದು ದಿನ ನಿಮ್ಮ ಕೂದಲು ಒದ್ದೆಯಾಗಿ ಅದರ ಕುರಿತು ನೀವು ಕಾಳಜಿ ವಹಿಸಿ, ನಂತರ ಮತ್ತೆ ಕೂದಲನ್ನು ಕಾಳಜಿ ಮಾಡದೆ ಬಿಡುವುದನ್ನು ಮಾಡಬಾರದು. ಮಾನ್ಸೂನ್ ಎಂಬುದು ಒಂದು ಹವಾಮಾನ ಬದಲಾವಣೆಯಾಗಿದ್ದು, ಅದಕ್ಕೆ ಹೊಂದಿಕೊಂಡು ನಿಮ್ಮ ಕೂದಲ ರಕ್ಷಣೆಯ ಕ್ರಮವನ್ನು ಬದಲಾಯಿಸಿಕೊಳ್ಳಬೇಕು.

ಕೂದಲನ್ನು ತೇವವಿರದಂತೆ ಒಣಗಿಸಿಟ್ಟುಕೊಳ್ಳಿ

ಕೂದಲನ್ನು ತೇವವಿರದಂತೆ ಒಣಗಿಸಿಟ್ಟುಕೊಳ್ಳಿ

ಮಳೆಯ ನೀರಿನಲ್ಲಿ ನಿಮ್ಮ ಕೂದಲು ನೆನೆಯುವುದನ್ನು ಎಷ್ಟು ಸಾಧ್ಯವೋ ಅಷ್ಟು ತಪ್ಪಿಸಬೇಕು. ಒಂದು ವೇಳೆ ನೆನೆದದ್ದೆ ಆದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಅದನ್ನು ಒಣಗಿಸಬೇಕು. ಏಕೆಂದರೆ ಈ ಕ್ಷಾರೀಯ ನೀರು (ಅಲ್ಕಲೈನ್ ವಾಟರ್) ಕೂದಲಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದನ್ನು ಇನ್ನಷ್ಟು ಹಾಳು ಮಾಡುತ್ತದೆ. ಆದ್ದರಿಂದ ನಿಮ್ಮ ಕೂದಲಿನ ಒದ್ದೆಯನ್ನು ತ್ವರಿತಗತಿಯಲ್ಲಿ ಒಣಗಿಸಲು ನಿಮ್ಮ ಹಳೆಯ ಟಿ ಶರ್ಟನ್ನು ಉಪಯೋಗಿಸಬಹುದು ಅಥವಾ ಫ್ಯಾನ್ ಮೂಲಕ ಒಣಗಿಸುವ ವಿಧಾನವನ್ನು ಬಳಸಬಬಹುದು. ನಿಮ್ಮ ಬಳಿ ಹೇರ್ ಡ್ರೈಯರ್ ಇದ್ದಲ್ಲಿ ಅದನ್ನು ಬಳಸುವುದು ಉತ್ತಮ.

ನಿಮ್ಮ ಕೂದಲನ್ನು ತೊಳೆಯುವವಿಧಾನವನ್ನು ಬದಲಿಸಿ

ನಿಮ್ಮ ಕೂದಲನ್ನು ತೊಳೆಯುವವಿಧಾನವನ್ನು ಬದಲಿಸಿ

ನಿಮ್ಮ ಕೂದಲನ್ನು ತೊಳೆಯುವ ಸಾಮಾನ್ಯ ವೇಳಾಪಟ್ಟಿಯು ಒಂದು ಮೃದುವಾದ ಶ್ಯಾಂಪೂವಿನೊಂದಿಗೆ ಆರಂಭವಾಗುತ್ತದೆ. ನಂತರ ಕಂಡೀಷನಿಂಗ್. ಅದರೆ ಅದೂ ಮಾನ್ಸೂನ್ ಋತುವಾದಲ್ಲಿ ನಿಮ್ಮ ಕೂದಲಿಗೆ ಮೊದಲು ಕಂಡೀಷನಿಂಗ್‌ನಿಂದ ಆರಂಭಿಸಿ ನಂತರ ಶ್ಯಾಂಪೂ ಅನಂತರ ಮತ್ತೆ ಕಂಡೀಷನಿಂಗ್ ಬಳಸಿ. ಡಬಲ್ ಕಂಡೀಷನಿಂಗ್ ನಿಮ್ಮ ಕೂದಲು ಹೆಚ್ಚು ತೇವಾಂಶವನ್ನು ಅಥವಾ ಮೃದುತ್ವವನ್ನು ಹಾಗು ತನ್ಮೂಲಕ ಹೈಡ್ರೇಟೆಡ್ ಪಡೆಯಲು ಸಾಧ್ಯವಾಗುತ್ತದೆ.

ಕೂದಲನ್ನು ತೊಳೆಯುವುದನ್ನು ಆಗಾಗ್ಗೆ ಮಾಡುತ್ತಿರಬೇಕು

ಕೂದಲನ್ನು ತೊಳೆಯುವುದನ್ನು ಆಗಾಗ್ಗೆ ಮಾಡುತ್ತಿರಬೇಕು

ಮಾನ್ಸೂನ್ ಕಾಲದಲ್ಲಿ ಕೂದಲು ಬಹಳ ಬೇಗ ಸುಲಭವಾಗಿ ಕೊಳಕು ಮತ್ತು ಜಿಗುಟಾದ ಸ್ಥಿತಿಗೆ ಬರುತ್ತದೆ. ಆಗಾಗಿ ಈ ಸಮಯದಲ್ಲಿ ಆಗಿಂದಾಗ್ಗೆ ತಲೆ ಕೂದಲನ್ನು ತೊಳೆದು ಶುದ್ಧವಾಗಿಟ್ಟುಕೊಳ್ಳಬೇಕು.ಸಾಮಾನ್ಯವಾಗಿ ನೀವು ನಿಮ್ಮ ತಲೆ ಕೂದಲನ್ನು ವಾರಕ್ಕೆ ಎರಡು ಬಾರಿ ತೊಳೆಯುತ್ತಿದ್ದರೆ ಮಾನ್ಸೂನ್ ಸಮಯದಲ್ಲಿ ಅದನ್ನು ಮೂರು ಬಾರಿಗೆ ಹೆಚ್ಚಿಸಿಕೊಳ್ಳಿ.

ನೆತ್ತಿಯ ಭಾಗದ ನವೆಗೆ (ಇಚಿಸ್ಕಲ್‌ಗೆ) ಪರಿಹಾರ

ನೆತ್ತಿಯ ಭಾಗದ ನವೆಗೆ (ಇಚಿಸ್ಕಲ್‌ಗೆ) ಪರಿಹಾರ

ಮಾನ್ಸೂನ್ ಸಮಯದಲ್ಲಿ ಸಾಮಾನ್ಯವಾಗಿ ಕಾಡುವ ಕೂದಲಿನ ಸಮಸ್ಯೆಯೆಂದರೆ ಇಚಿ ಸ್ಕಲ್‌ ಅಂದರೆ ನೆತ್ತಿಯ ಭಾಗದಲ್ಲಿ ಆಗುವ ನವೆ ಅಥವಾ ತುರಿಕೆ. ಇಲ್ಲಿ ಕೂದಲಿಗೆ ಹಚ್ಚುವ ತೈಲವು ಪ್ರಮುಖ ಪಾತ್ರವಾಗುತ್ತದೆ. ಮಾನ್ಸೂನ್ ಸಮಯದಲ್ಲಿ ನೀವು ನಿಮ್ಮ ಹೇರ್ ವಾಶ್ ಮಾಡುವುದನ್ನು ಎಷ್ಟು ಬಾರಿ ಹೆಚ್ಚಿಸುವಿರೋ ಅಷ್ಟು ಬಾರಿ ಕೂದಲಿಗೆ ತೈಲವನ್ನು ಹಚ್ಚಬೇಕು. ಇದು ಕೂದಲನ್ನು ಚೆನ್ನಾಗಿ ಬೆಳೆಯಲು ಮತ್ತು ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ. ನೆತ್ತಿಯ ಭಾಗದ ನೆವೆ ಅಥವಾ ತುರಿಕೆಯ ತ್ವರಿತ ಪರಿಹಾರಕ್ಕೆ ನೀವು ಬೇವಿನ ಎಣ್ಣೆಯನ್ನು ಬಳಸಬಹುದು.

ಮಾನ್ಸೂನ್ ಸಮಯದಲ್ಲಿ ಕೂದಲ ಬೆಳೆವಣಿಗೆಯನ್ನು ಖಾತರಿಪಡಿಸಿಕೊಳ್ಳುವುದು

ಮಾನ್ಸೂನ್ ಸಮಯದಲ್ಲಿ ಕೂದಲ ಬೆಳೆವಣಿಗೆಯನ್ನು ಖಾತರಿಪಡಿಸಿಕೊಳ್ಳುವುದು

ವರ್ಷದ ಯಾವುದೇ ಸಮಯದಲ್ಲಾದರೂ ನಿಮ್ಮ ನೆತ್ತಿಯ ಮೇಲೆ ಹೊಸ ಕೂದಲು ಬೆಳೆಯುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಮಾನ್ಸೂನ್ ಸಮಯದಲ್ಲಿ ನಿಮ್ಮ ನೆತ್ತಿಯಲ್ಲಿ ಹೊಸ ಕೂದಲು ಬೆಳೆಯುತ್ತಿದೆಯೆಂದು ಖಚಿತಪಡಿಸಿಕೊಳ್ಳಲು ಅಲೋ ವೆರಾ ಜೆಲ್ ಅನ್ನು ಬಳಸಿ. ಹೇರ್ ವಾಶ್ ಮಾಡುವ ಮೊದಲು ತಾಜಾ ಆದ ಅಲೋವೆರಾ ಜೆಲ್‌ನಿಂದ ಮೃದುವಾಗಿ ಮಸಾಜ್ ಮಾಡಿದರೆ ನೆತ್ತಿಯು ಸ್ವಚ್ಚವಾಗುತ್ತದೆ. ಅಲ್ಲದೆ ನಿಮ್ಮ ನೆತ್ತಿಯ ಮೇಲೆ ಹೊಸ ಕೂದಲು ಬೆಳೆಯಲು ಅವಕಾಶ ನೀಡುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Simple & Healthy Hair Care Tips For The Monsoon Season

    One of the significant changes in monsoon is seen in the quality and texture of our hair. This is because the moisture content in the air is more, which affects the hair. In case you managed to get drenched in rain water, then none can stop your hair from facing the ill effects. Therefore, on one hand, when you learn that monsoon is going to affect your hair quality, you need to know about the remedies as well.
    Story first published: Friday, June 30, 2017, 8:33 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more