For Quick Alerts
ALLOW NOTIFICATIONS  
For Daily Alerts

  ಈರುಳ್ಳಿ ಕಣ್ಣಲ್ಲಿ ನೀರು ತರಿಸಿದರೂ ತಲೆ ತುಂಬಾ ಕೂದಲು ಬೆಳೆಯಲು ಸಹಾಯ ಮಾಡುವುದು!

  By Divya
  |

  ಧೂಳಿನ ಸಮಸ್ಯೆ, ಪೋಷಕಾಂಶ ರಹಿತವಾದ ಆಹಾರ, ಆನುವಂಶಿಕವಾದ ಕಾರಣ, ಎಸಿ ರೂಮ್‍ಗಳಲ್ಲಿ ದೀರ್ಘಕಾಲ ಕುಳಿತಿರುವುದು. ಹೀಗೆ ಅನೇಕ ಕಾರಣಗಳಿಂದ ಅಕಾಲಿಕವಾದ ಕೂದಲುದುರುವಿಕೆಯನ್ನು ಕಾಣಬಹುದು. ಹಿಂದಿನ ಕಾಲದಲ್ಲಿ ಕೂದಲುದುರುವಿಕೆ ಹಾಗೂ ಬಣ್ಣಗಳ ಬದಲಾವಣೆಯಾಗುವುದು ಎಂದರೆ ವಯಸ್ಸಾದ ಸಂಕೇತವಾಗಿತ್ತು. ವಯಸ್ಸಾದಂತೆ ಕೂದಲಿನ ಬಣ್ಣ ಬಿಳಿಯಾಗುವುದು, ಕೂದಲು ಉದುರಿ ಬೋಳು ತಲೆಯಾಗುತ್ತಿತ್ತು. ಆದರೀಗ ಚಿಕ್ಕ ವಯಸ್ಸಿನಲ್ಲೇ ವಿಪರೀತವಾದ ಕೂದಲುದುರುವಿಕೆ, ಬೊಕ್ಕು ತಲೆಯ ಸಮಸ್ಯೆಯನ್ನು ಎದುರಿಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ.

  ಈ ಸಮಸ್ಯೆಗೆ ಕೂದಲಿನ ಕಸಿಮಾಡುವದು ಹಾಗೂ ವಿಶೇಷ ಬಗೆಯ ಚಿಕಿತ್ಸಾ ಕ್ರಮಗಳು ಚಾಲ್ತಿಯಲ್ಲಿವೆ. ಆದರೆ ಅವು ಕೈಗೆಟುಕದಷ್ಟು ದುಬಾರಿ ಬೆಲೆಯಲ್ಲಿವೆ. ಅದೆಷ್ಟೇ ಚಿಕಿತ್ಸೆ ಅಥವಾ ಔಷಧಗಳ ಸೇವನೆ ಮಾಡಿದರೂ ನೈಸರ್ಗಿಕವಾಗಿ ಇರುವ ಕೇಶರಾಶಿಯಷ್ಟು ಸುಂದರ ಅಥವಾ ಗುಣಮಟ್ಟವಿರುವುದಿಲ್ಲ. ಹಾಗಾಗಿ ಆದಷ್ಟು ಆಯುರ್ವೇದದ ರೀತಿಯಲ್ಲಿಯೇ ಕೇಶಗಳ ಆರೈಕೆ ಮಾಡಬೇಕು. ಇಲ್ಲವಾದರೆ ಕೆಲವು ಅಡ್ಡ ಪರಿಣಾಮಗಳು ಬೀರುವ ಸಾಧ್ಯತೆಗಳಿರುತ್ತವೆ.

  ನೀವು ಅಥವಾ ನಿಮ್ಮ ಹತ್ತಿದವರು ಈ ಸಮಸ್ಯೆಗಳಿಂದಲೇ ಬೇಸತ್ತಿದ್ದಾರೆ ಎಂದಾದರೆ ಈರುಳ್ಳಿಯಿಂದ ಆರೈಕೆ ಮಾಡಿಕೊಳ್ಳಿ. ಈರುಳ್ಳಿಯಲ್ಲಿ ಬ್ಯಾಕ್ಟೀರಿಯಾದ ಗುಣಲಕ್ಷಣಗಳು ಅಧಿಕವಾಗಿರುವುದು. ಇದು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ತಲೆಯಲ್ಲಿ ಹೆಚ್ಚು ಎಣ್ಣೆ ಶ್ರವಿಸುವಿಕೆ, ತಲೆ ಹೊಟ್ಟುಗಳನ್ನು ನಿವಾರಿಸುತ್ತದೆ. ಶೀಘ್ರದಲ್ಲಿ ಕೇಶಗಳ ಬೆಳವಣಿಗೆ ಹಾಗೂ ಹುಟ್ಟನ್ನು ಪಡೆದುಕೊಳ್ಳುವಂತೆ ಮಾಡುವುದು. ಈರುಳ್ಳಿಯ ರಸವನ್ನು ಹೇಗೆ ಬಳಸುವುದು ಎನ್ನುವ ಗೊಂದಲವಿದ್ದರೆ ಲೇಖನದ ಮುಂದಿನ ಭಾಗವನ್ನು ಓದಿ... ಪರಿಹಾರವನ್ನು ತಿಳಿದುಕೊಳ್ಳಿ...

  ಹಂತ-1

  ಹಂತ-1

  ಒಂದು ಈರುಳ್ಳಿಯನ್ನು ನೀರಿನಲ್ಲಿ ನೆನೆಸಿಡಿ. ನಂತರ ಸಿಪ್ಪೆಯನ್ನು ನುಣಚಿ ತೆಗೆಯಿರಿ. ನಂತರ ಮಿಕ್ಸರ್/ಬೆಂಡರ್‍ನಲ್ಲಿ ರುಬ್ಬಿಕೊಳ್ಳಿ. ಒಂದು ಜರಡಿಯಲ್ಲಿ ಹಾಕಿ ಆದಷ್ಟು ರಸವನ್ನು ಬೇರ್ಪಡಿಸಿ. ಪಡೆದುಕೊಂಡ ರಸವನ್ನು ಒಂದು ಬೌಲ್‍ನಲ್ಲಿ ಹಾಕಿ ಪಕ್ಕಕ್ಕೆ ಇಡಿ.

  ಹಂತ-2

  ಹಂತ-2

  ಟೇಬಲ್ ತೆಂಗಿನ ಎಣ್ಣೆಯನ್ನು ಬೌಲ್‍ನಲ್ಲಿ ತೆಗೆದುಕೊಳ್ಳಿ. ತೆಂಗಿನೆಣ್ಣೆಯಲ್ಲಿರುವ ಲೂರಿಕ್ ಆಸಿಡ್ ಹಾನಿಗೊಳಗಾದ ಕೇಶಗಳ ಕೋಶವನ್ನು ದುರಸ್ಥಿ ಮಾಡುತ್ತದೆ. ಅಲ್ಲದೆ ಹೊಸ ಕೂದಲಿನ ಹುಟ್ಟಿಗೂ ಸಹಕರಿಸುತ್ತದೆ.

  ಹಂತ -3

  ಹಂತ -3

  ತೆಂಗಿನೆಣ್ಣೆಯ ಬೌಲ್‍ಗೆ 1 ಟೇಬಲ್ ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಎರಡು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬಿಸಿಮಾಡಿ. ಬಿಸಿಯಾದ ಎಣ್ಣೆ ಮಿಶ್ರಣ ತಣ್ಣಗಾಗಲು ಬಿಡಿ. ಇದರಲ್ಲಿರುವ ಮಾಯಿಶ್ಚರೈಸ್ ಅಂಶವು ಕೇಶರಾಶಿಯನ್ನು ಆರೋಗ್ಯ ಪೂರ್ಣವಾಗಿರುವಂತೆ ಮಾಡುತ್ತದೆ.

  ಹಂತ-4

  ಹಂತ-4

  ತಣ್ಣಗಾದ ಎಣ್ಣೆ ಮಿಶ್ರಣಕ್ಕೆ ಈರುಳ್ಳಿ ರಸವನ್ನು ಸೇರಿಸಿ. ಈರುಳ್ಳಿ ರಸದ ವಾಸನೆಯನ್ನು ತಡೆಗಟ್ಟಲು ತಕ್ಷಣವೇ 3 ಹನಿ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣದಲ್ಲಿ ವಿಟಮಿನ್ ಸಿ ದ್ವಿಗುಣವಾಗಿ ಇರುತ್ತದೆ. ಇದು ನಿಮ್ಮ ಕೂದಲಿಗೆ ಹೊಳಪನ್ನು ನೀಡಿ ಆರೈಕೆ ಮಾಡುತ್ತವೆ.

  ಹಂತ-5

  ಹಂತ-5

  ವಿಶಾಲವಾದ ಹಲ್ಲುಗಳ ಬಾಚಣಿಕೆ/ಜಡಕು ಬಿಡಿಸುವ ಬಾಚಣಿಕೆಯನ್ನು ಬಳಸಿಕೊಂಡು ಕೂದಲು ರಾಶಿಯಲ್ಲಿರುವ ಗಂಟು ಅಥವಾ ಸುಕ್ಕನ್ನು ಬಿಡಿಸಿಕೊಳ್ಳಬೇಕು. ನಂತರ ನೆತ್ತಿಯ ಮಧ್ಯ ಭಾಗದಿಂದ ಕೆಳಭಾಗದವರೆಗೆ ಒಂದು ರೇಖೆಯನ್ನು ಹಾಕುವಂತೆ ಮಾಡಿ, ಕೇಶರಾಶಿಯ ಎರಡು ಭಾಗವನ್ನು ಮಾಡಿ. ನಂತರ ತುದಿಯಿಂದ ಪುನಃ ಬಾಚಿಕೊಳ್ಳಿ.

  ಹಂತ-6

  ಹಂತ-6

  ಈಗ ತಯಾರಿಸಿಕೊಂಡ ಮಿಶ್ರಣವನ್ನು ನೆತ್ತಿ ಹಾಗೂ ಕೂದಲಿನ ಬುಡಭಾಗದಲ್ಲಿ ಅನ್ವಯಿಸಿ. ಐದು ನಿಮಿಷಗಳಕಾಲ ನೆತ್ತಿಯಿಂದ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ರಕ್ತ ಸಂಚಾರದ ಹರಿವನ್ನು ಉತ್ತೇಜಿಸುವುದು. ಜೊತೆಗೆ ಮಿಶ್ರಣವು ಸರಿಯಾಗಿ ಹೀರಿಕೊಳ್ಳುವಂತೆ ಮಾಡಲಾಗುವುದು.

  ಹಂತ-7

  ಹಂತ-7

  ನಂತರ 45 ನಿಮಿಷಗಳ ಕಾಲ ಬಿಡಬೇಕು. ಬಳಿಕ ಸಾವಯವ ಶಾಂಪೂಗಳನ್ನು ಬಳಸಿ ಕೇಶರಾಶಿಯನ್ನು ತೊಳೆಯಿರಿ. ಎಣ್ಣೆಯ ಪ್ರಮಾಣ ಹೆಚ್ಚಿರುವುದರಿಂದ ಕಂಡೀಷನರ್ ಬಳಸಿ ತೊಳೆಯುವ ಅಗತ್ಯ ಇರುವುದಿಲ್ಲ.

  ಹಂತ-8

  ಹಂತ-8

  ನಿಮ್ಮ ಕೇಶರಾಶಿಯನ್ನು ಅತಿಯಾಗಿ ಉಜ್ಜುವ ಪ್ರಕ್ರಿಯೆಗೆ ಒಳಗಾಗುವಂತೆ ಮಾಡದಿರಿ. ಎರಡು ಹನಿ ತೆಂಗಿನ ಎಣ್ಣೆಯನ್ನು ಅಂಗೈಯಲ್ಲಿ ಹಾಕಿಕೊಂಡು, ಕೂದಲ ಬುಡದಿಂದ ತುದಿಯವರೆಗೂ ಸವರಿಕೊಳ್ಳಿ. ಎಣ್ಣೆಯನ್ನು ಅತಿಯಾಗಿ ಬಳಸಬಾರದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಹಾಗೊಮ್ಮೆ ಮಾಡಿದರೆ ಕೇಶರಾಶಿಯು ಜಿಡ್ಡಿನಿಂದ ಕೂಡಿರುತ್ತವೆ.

  ಎಚ್ಚರಿಕೆ

  ಎಚ್ಚರಿಕೆ

  ಈರುಳ್ಳಿ ಹಾಗೂ ಅದಕ್ಕೆ ಬಳಸಿದ ಉತ್ಪನ್ನಗಳು ನಿಮಗೆ ಅಲರ್ಜಿ ಇರುವುದೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ನಂತರ ಅನ್ವಯಕ್ಕೆ ಮುಂದಾಗಿ.

  ಫಲಿತಾಂಶ

  ಫಲಿತಾಂಶ

  ಈ ಪ್ರಕ್ರಿಯೆಯನ್ನು ನಿಯಮಿತವಾಗಿ ಮುಂದುವರಿಸಿದರೆ 2 ತಿಂಗಳೊಳಗೆ ಬೋಳಾದ ತಲೆಯ ಭಾಗದಲ್ಲಿ ಕೂದಲು ಹುಟ್ಟುವುದು. ಕೂದಲು ದಟ್ಟವಾಗಿ ಬೆಳೆದು ಆರೋಗ್ಯ ಪೂರ್ಣವಾಗಿರುವಂತೆ ಮಾಡುತ್ತದೆ

  English summary

  Onion Juice Hair Mask To Fill In The Bald Spot!

  Onion also has antibacterial properties as well that break down the yeast buildup in scalp, remove flaky dandruff, control excess oil secretion and kill infection-causing bacteria. Further more, onion packs a powerful punch of antioxidants that reverse the signs of grey hair and add an irresistible shine to your locks. To boil it all down, onion juice hair mask can transform the way your hair looks and feels. Here is a step-by-step guide on how to fill in the bald spot naturally using onion.
  Story first published: Tuesday, November 7, 2017, 17:30 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more