ನೀಳ ಕೇಶರಾಶಿ ಚೆಲುವೆಗೆ, ಒಂದಿಷ್ಟು ನೈಸರ್ಗಿಕ ಟಿಪ್ಸ್

By: manu
Subscribe to Boldsky

ಪ್ರತಿಯೊಬ್ಬ ಮಹಿಳೆಗೂ ತನ್ನ ಕೂದಲು ಉದ್ದಗೆ ರೇಷ್ಮೆಯಂತೆ ಹೊಳೆಯುತ್ತಿರಬೇಕೆಂಬ ಕನಸು ಇದ್ದೇ ಇರುತ್ತದೆ. ಆದರೆ ಸರಿಯಾದ ಪೋಷಕಾಂಶಗಳು ಸಿಗದೆ ಇರುವ ಕಾರಣದಿಂದ ಕೂದಲಿನ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಉದ್ದನೆಯ ಕೂದಲಿಗೆ ಕರಿಬೇವಿನ ಹೇರ್ ಪ್ಯಾಕ್

ಇದರಿಂದ ಕೂದಲಿನ ಹಲವಾರು ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ. ಸುಂದರವಾಗಿ ಕಾಣಿಸಿಕೊಳ್ಳಬೇಕೆಂದರೆ ಕೂದಲು ಕೂಡ ಸುಂದರವಾಗಿರಬೇಕು. ಕೂದಲಿನ ಆರೈಕೆ ಮಾಡದಿದ್ದರೆ ಅದರಿಂದ ಕೂದಲಿಗೆ ಮುಂದೆ ಸಮಸ್ಯೆಯಾಗಬಹುದು. ಕೂದಲಿನ ಬೆಳವಣಿಗೆಯನ್ನು ನೈಸರ್ಗಿಕವಾಗಿ ಮಾಡಲು ಬಗ್ಗೆ ಬೋಲ್ಡ್ ಸ್ಕೈ ನಿಮಗಿಂದು ಹೇಳಿಕೊಡಲಿದೆ.....  

ಬಿಸಿ ಎಣ್ಣೆಯ ಮಸಾಜ್

ಬಿಸಿ ಎಣ್ಣೆಯ ಮಸಾಜ್

ಒತ್ತಡದ ಜೀವನದಲ್ಲಿ ಕೂದಲಿನ ಆರೈಕೆಗೆ ಸಮಯವಿರುವುದು ತುಂಬಾ ಕಡಿಮೆ. ಆದರೆ ವಾರಕ್ಕೊಮ್ಮೆ ಬಿಸಿ ನೀರಿನಿಂದ ಕೂದಲಿಗೆ ಮಸಾಜ್ ಮಾಡಿದರೆ ನಿಮ್ಮ ಒತ್ತಡವೂ ಕಡಿಮೆಯಾಗಿ ಕೂದಲು ಆರೋಗ್ಯವಂತವಾಗುವುದು. ತೆಂಗಿನೆಣ್ಣೆ ಅಥವಾ ಲ್ಯಾವೆಂಡರ್ ಎಣ್ಣೆಯನ್ನು ಬಿಸಿ ಮಾಡಿಕೊಂಡು ಕೂದಲಿಗೆ ಮಸಾಜ್ ಮಾಡಿ. ಇದು ಕೂದಲಿನ ಬೆಳವಣಿಗೆಗೆ ಕಾರಣವಾಗುವುದು ಮಾತ್ರವಲ್ಲದೆ ರೇಷ್ಮೆಯಂತಹ ಕೂದಲನ್ನು ನಿಮಗೆ ನೀಡುವುದು.ಕೂದಲಿಗೆ ಬಿಸಿ ಎಣ್ಣೆ ಮಸಾಜ್ ನಿಂದ 7 ಲಾಭ

ಪ್ರತೀ ರಾತ್ರಿ ಕೂದಲು ಬಾಚುವುದು

ಪ್ರತೀ ರಾತ್ರಿ ಕೂದಲು ಬಾಚುವುದು

ಅತಿಯಾಗಿ ಕೂದಲು ಬಾಚುವುದರಿಂದ ಕೂದಲಿಗೆ ಹಾನಿಯಾಗುತ್ತದೆ ಎನ್ನುವ ಮಾತಿದೆ. ಆದರೆ ಕೂದಲು ಬಾಚಲು ನೀವು ಯಾವ ರೀತಿಯ ಬಾಚಣಿಗೆ ಬಳಸುತ್ತಾ ಇದ್ದೀರಿ ಎನ್ನುವುದು ಮುಖ್ಯವಾಗಿರುತ್ತದೆ. ಸಿಂಥೆಟಿಕ್ ಬಾಚಣಿಗೆಯಿಂದ ಕೂದಲಿಗೆ ಹಾನಿಯಾಗಬಹುದು. ಇದರ ಬದಲು ಬೋರ್ ಬ್ರಿಸ್ಟಲ್ ನಂತಹ ಬಾಚಣಿಗೆ ಬಳಸಿದರೆ ತಲೆಯಲ್ಲಿ ರಕ್ತಸಂಚಾರ ಸುಗಮವಾಗಿ ಆಗುವುದು. ರಾತ್ರಿ ಮಲಗುವ ಮೊದಲು ಸುಮಾರು 50 ಬಾರಿ ಕೂದಲನ್ನು ಬಾಚಿಕೊಳ್ಳಿ. ಬಾಚಿಕೊಳ್ಳುವುದರಿಂದ ಕೂದಲಿನ ಬುಡ ಬಲಿಷ್ಠವಾಗಿ ಕೂದಲು ವೇಗವಾಗಿ ಬೆಳೆಯುವುದು.

ಒದ್ದೆ ಕೂದಲನ್ನು ಟವೆಲ್ ನಿಂದ ಸುತ್ತಬೇಡಿ

ಒದ್ದೆ ಕೂದಲನ್ನು ಟವೆಲ್ ನಿಂದ ಸುತ್ತಬೇಡಿ

ಶಾಂಪೂ ಹಾಕಿಕೊಂಡು ಕೂದಲು ತೊಳೆದ ಬಳಿಕ ನೀರು ಹರಿಯಬಾರದೆಂದು ಕೂದಲಿಗೆ ಟವೆಲ್ ಕಟ್ಟಿಕೊಳ್ಳುವುದು ಹೆಚ್ಚಿನ ಮಹಿಳೆಯರ ಅಭ್ಯಾಸವಾಗಿದೆ. ಒದ್ದೆ ಕೂದಲು ಬೇಗನೆ ಉದುರಿ ಬೀಳುತ್ತದೆ. ಟವೆಲ್ ಕಟ್ಟಿಕೊಳ್ಳುವುದರಿಂದ ಕೂದಲು ಉದುರುವಿಕೆ ಹೆಚ್ಚಾಗಬಹುದು.

ಮೊಟ್ಟೆಯ ಮಾಸ್ಕ್

ಮೊಟ್ಟೆಯ ಮಾಸ್ಕ್

ಮೊಟ್ಟೆಯ ಮಾಸ್ಕ್ ಬಳಸುವುದರಿಂದ ಕೂದಲಿಗೆ ಹೆಚ್ಚಿನ ಪೋಷಕಾಂಶಗಳನ್ನು ನೀಡಬಹುದಾಗಿದೆ. ಪ್ರೋಟೀನ್ ನಿಂದ ಸಮೃದ್ಧವಾಗಿರುವ ಮೊಟ್ಟೆಯು ಕೂದಲಿಗೆ ಪೋಷಕಾಂಶವನ್ನು ಒದಗಿಸುವುದು ಮಾತ್ರವಲ್ಲದೆ ಹೊಸ ಕೂದಲು ಬೆಳೆಯಲು ನೆರವಾಗುವುದು. ಒಂದು ಚಮಚ ಎಣ್ಣೆಗೆ ಒಂದು ಮೊಟ್ಟೆಯ ಬಿಳಿ ಲೋಳೆ ಹಾಕಿ ಮತ್ತು ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಶಾಂಪೂ ಹಾಕಿ ತೊಳೆಯಿರಿ. ತಿಂಗಳಿಗೆ ಒಂದು ಸಲ ಹೀಗೆ ಮಾಡಿ ಮತ್ತು ಫಲಿತಾಂಶ ನಿಮ್ಮ ಮುಂದಿರುತ್ತದೆ.ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!

 
English summary

Natural ways to make your hair grow faster

Who doesn't yearn for long lustrous hair? But often due to inadequate nourishment and damage, our natural hair growth is hindered. So what can we do so as to increase the pace of our hair growth? Just follow these simple tips and see the astounding results on your own.
Please Wait while comments are loading...
Subscribe Newsletter