ಕೂದಲ ಆರೈಕೆಗೆ ಒಂದಿಷ್ಟು ಸರಳ ಮನೆ ಮದ್ದುಗಳು

By: Anuradha Yogesh
Subscribe to Boldsky

ಈಗೀಗ ಎಲ್ಲರ ತಲೆಯಲ್ಲಿ ಕೂದಲು ಉದರುವ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಬದಲಾಗುತ್ತಿರುವ ಜೀವನಶೈಲಿ, ಅತಿಯಾದ ವಾಯುಮಾಲಿನ್ಯ ಇಂತಹ ಆತಂಕವನ್ನು ತಂದೊಡ್ಡಿದೆ. ತಲೆತುಂಬ ಇದ್ದ ಕೂದಲು ನೋಡನೋಡುತ್ತಿದ್ದಂತೆ ಖಾಲಿಖಾಲಿಯಾಗಿರುತ್ತದೆ. ತಲೆ ಬಾಚುವುದೆಂದರೆ ನಡುಕ ಹುಟ್ಟಲು ಆರಂಭವಾಗುತ್ತದೆ. ಗಾಬರಿಗೊಂಡು ವೈದ್ಯರಲ್ಲೋ ಪಾರ್ಲರಿಗೋ ಓಡಿ ಹೋಗುತ್ತೇವೆ. ಸಾವಿರಾರು ರೂಪಾಯಿಗಳಷ್ಟು ಖರ್ಚು ಮಾಡುತ್ತೇವೆ. ಆದರೆ, ಪರಿಹಾರ ಮಾತ್ರ ಅನೇಕ ಬಾರಿ ಶೂನ್ಯವೇ ಆಗಿರುತ್ತದೆಂದರೆ ಸುಳ್ಳಾಗಲಾರದು. ತಲೆ ಮೇಲೆ ಹೇರಳವಾದ ಕೂದಲಿರಬೇಕು, ನೀಟಾಗಿ ಬಾಚಿಕೊಂಡು ಮೆರೆಯಬೇಕು ಎಂಬುದು ತಲೆ ಮೇಲೆ ಕೂದಲಿದ್ದವರ ಆಸೆಗಳಲ್ಲೊಂದಾಗಿರುತ್ತದೆ.

ಇಂತಹ ಎಣ್ಣೆ ಕೂದಲಿಗೆ ಬಳಸಿ, ಕೂದಲು ಕಪ್ಪಾಗಿ, ಉದ್ದವಾಗಿ ಬೆಳೆಯುತ್ತೆ

ಇದ್ದಕ್ಕಿದ್ದಂತೆ ಬಾಚಣಿಕೆಯಲ್ಲಿ ಜೊಂಪುಜೊಂಪು ಕೂದಲು ಬರಲು ಪ್ರಾರಂಭಿಸಿ, ಇನ್ನೇನು ಕೆಲವೇ ವರ್ಷಗಳಲ್ಲಿ ಬೋಳು ತಲೆಯ ಒಡೆಯರಾಗಿಬಿಡುತ್ತೇವೆ ಎಂದು ಗಾಬರಿಯಾಗಿದೆಯೇ? ಎಲ್ಲಿ ತಲೆ ಬಾಣಲೆಯಾಗಿಬಿಡುತ್ತೇನೋ ಎಂಬ ಆತಂಕ ಶುರುವಾಗಿದೆಯೇ? ಇದಕ್ಕೆ ಪರಿಹಾರ ಇಲ್ಲವೆ ಎಂದು ನಿಮ್ಮ ಯೋಚನೆಯಾಗಿರಬಹುದು, ಆದರೆ ಖಂಡಿತ ಪರಿಹಾರ ಇದೆ. ಕೂದಲಿಗೆ ಬೇಕಾದ ಜೀವಸತ್ವಗಳು, ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಮನೆಯಲ್ಲೇ ಸುಲಭವಾಗಿ ಪಡೆಯಬಹುದು. ಬೋಲ್ಡ್‌ಸ್ಕೈ ನಿಮಗೆ ಮನೆಯಲ್ಲೇ ಮಾಡಬಹುದಾದ ಕೂದಲ ಆರೈಕೆಯ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುವುದು. ಇಲ್ಲಿ ತಿಳಿಸಿರುವ ಚಮತ್ಕಾರಿಕ ವಿಧಾನಗಳಿಂದ ಸೊಂಪಾದ ಕೂದಲಿನ ಒಡೆಯರಾಗಿ ಸಂಭ್ರಮ ಪಡಿ....

ಆಲಿವ್ ಆಯಿಲ್

ಆಲಿವ್ ಆಯಿಲ್

ಆಲಿವ್ ಆಯಿಲ್ ಹೃದಯಕ್ಕೂ ಸನಿಹ ಹಾಗೆಯೇ ಕೂದಲಿನ ಆರೋಗ್ಯ ನಿಭಾಯಿಸುವದರಲ್ಲೂ ರಾಮಬಾಣವಾಗಿದೆ. ಕೂದಲಿನ ಆಳಕ್ಕೆ ಹೋಗಿ ಒಳ್ಳೆಯ ಪರಿಣಾಮವನ್ನುಂಟು ಮಾಡುವದು.

ಬಳಸುವ ವಿಧಾನ

ನಿಮ್ಮ ನೆತ್ತಿಯನ್ನು ಆಲಿವ್ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಹಾಗೆಯೇ ಅದನ್ನು ಬಿಡಿ. ಬೆಳಿಗ್ಗೆ, ಸೌಮ್ಯವಾದ ಶಾಂಪೂ ಬಳಸಿ ಬೆಚ್ಚಗಿನ

ನೀರಿನಿಂದ ಚೆನ್ನಾಗಿ ತೊಳೆಯಿರಿ. ಕೂದಲಿನ ಬೇರುಗಳ ಬಲವನ್ನು ಹೆಚ್ಚಿಸಲು ವಾರದಲ್ಲಿ ಈ ವಿಧಾನವನ್ನು ಕನಿಷ್ಠ ಪಕ್ಷ 2 ರಿಂದ 3 ಬಾರಿ ಪ್ರಯತ್ನಿಸಿ.

ಅವಕಾಡೊ

ಅವಕಾಡೊ

ಅವಕಾಡೊ ಅಂದ ಕೂಡಲೇ ನಮಗೆ ಮೆಕ್ಸಿಕನ್ 'ಗ್ವಾಕಮೊಲೆ'ನೆನಪಾಗುವದಲ್ಲವೇ? ಅವಕಾಡೋದಲ್ಲಿರುವ ಅಮೈನೋ ಆಮ್ಲಗಳು ಮತ್ತು ಪ್ರೊಟೀನ್‌ಗಳು ಕೂದಲ ಬೇರುಗಳನ್ನು ಬೆಳೆಸುವ ಮತ್ತು ಬಲಪಡಿಸುವ ಒಂದು ಅದ್ಭುತ ಶಕ್ತಿ ಹೊಂದಿವೆ.

ಬಳಸುವ ವಿಧಾನ

ಒಂದು ಅವಕಾಡೊವನ್ನು ಚೆನ್ನಾಗಿ ಮ್ಯಾಶ್ ಮಾಡಿ ನಿಮ್ಮ ಕೂದಲಿನ ಬೇರುಗಳಿಗೆ ನಿಧಾನವಾಗಿ ಅನ್ವಯಿಸಿ. ಸುಮಾರು ಒಂದು ಘಂಟೆಯವರೆಗೆ ಅದನ್ನು ಹಾಗೆಯೇ ಬಿಡಿ. ನಂತರ ನಿಧಾನವಾಗಿ ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಉತ್ತಮ ಪರಿಹಾರಕ್ಕಾಗಿ ವಾರಕ್ಕೊಮ್ಮೆ ಈ ಪರಿಹಾರವನ್ನು ಬಳಸಬಹುದು.

ವಿಟಮಿನ್ ಇ ಆಯಿಲ್

ವಿಟಮಿನ್ ಇ ಆಯಿಲ್

ವಿಟಮಿನ್ ಇ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿದೆ, ಅದು ದುರ್ಬಲ ಕೂದಲಿನ ಬೇರುಗಳನ್ನು ಬಲಪಡಿಸುವದಲ್ಲದೆ ಸೀಳುಕೂದಲನ್ನು ತಡೆಯುತ್ತದೆ.

ಬಳಸುವ ವಿಧಾನ

ಮಾರುಕಟ್ಟೆಯಲ್ಲಿ ದೊರೆಯುವ ವಿಟಮಿನ್ ಈ ಕ್ಯಾಪ್ಸೂಲನ್ನು ಖರೀದಿಸಿಕೊಳ್ಳಿ. ಕ್ಯಾಪ್ಸುಲ್ನಿಂದ ತೈಲವನ್ನು ಹೊರತೆಗೆಯಿರಿ. ನಿಮ್ಮ ಕೂದಲಿನ ಬೇರುಗಳಿಗೆ ಬೇರ್ಪಡಿಸಿದ ತೈಲವನ್ನು ಅನ್ವಯಿಸಿ, ಒಂದು ಗಂಟೆಯವರೆಗೆ ಅದನ್ನು ಬಿಡಿ. ಲಘುವಾದ ಶಾಂಪೂ ಬಳಸಿ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ನಿಮ್ಮ ಕೂದಲ ಬೇರುಗಳನ್ನು ಪೋಷಿಸಲು ಒಂದು ವಾರದಲ್ಲಿ ಕನಿಷ್ಟಪಕ್ಷ 2-3 ಬಾರಿಯಾದರೂ ನೀವು ಈ ವಿಧಾನವನ್ನು ಬಳಸಬಹುದು.

ಜೇನುತುಪ್ಪ

ಜೇನುತುಪ್ಪ

ಜೇನುತುಪ್ಪವಿಲ್ಲದ ಪಂಚಾಮೃತ ಮಾಡಲು ಹೇಗೇ ಸಾಧ್ಯವಿಲ್ಲವೋ ಅದೇ ರೀತಿ ಕೂದಲ ಆರೈಕೆಯಲ್ಲೂ ಇದು ಅಷ್ಟೇ ಪ್ರಾಮುಖತೆಯನ್ನು ಪಡೆದಿದೆ. ಜೇನುತುಪ್ಪವು ನಿಮ್ಮ ನೆತ್ತಿಯಲ್ಲಿರುವ ಹೊಟ್ಟಿನಂತಹ ಭಗ್ನಾವಶೇಷವನ್ನು ತೆಗೆದುಹಾಕುವದು.ಇದು ಕೂದಲನ್ನು ಕಾಪಾಡುವ ಒಳ್ಳೆಯ ಜೀವವಿರೋಧಿ ಶಕ್ತಿಯನ್ನು ಹೊಂದಿರುವ ಸಮೃದ್ಧ

ಮೂಲವಾಗಿದೆ.

ಬಳಸುವ ವಿಧಾನ

1 ಚಮಚ ಜೇನುತುಪ್ಪ ಮತ್ತು 1 ಚಮಚ ನಿಂಬೆ ರಸದ ಸಮಮಿಶ್ರಣ ತಯಾರಿಸಿ.

ನಿಮ್ಮ ಕೂದಲ ಬೇರುಗಳಿಗೆ ಚೆನ್ನಾಗಿ ಲೇಪಿಸಿಕೊಳ್ಳಿ. 30-35 ನಿಮಿಷಗಳ ನಂತರ, ಬೆಚ್ಚಗಿನ ನೀರಿನಿಂದ ತೊಳೆಯಿರಿ. ಬಯಸಿದ ಫಲಿತಾಂಶಗಳಿಗಾಗಿ ತಿಂಗಳಿಗೆ ಎರಡು ಬಾರಿಯಾದರೂ ಈ ವಿಧಾನವನ್ನು ಬಳಸಿ.

ಬಾಳೆಹಣ್ಣು

ಬಾಳೆಹಣ್ಣು

ಜೀರ್ಣಕ್ರಿಯೆಗೆ ಹಾಗು ದೊಡ್ಡಕರುಳಿನ ಸರಾಗವಾದ ಕಾರ್ಯಕ್ಕೆ ಬಾಳೆಹಣ್ಣು ಅತ್ಯುಪಕಾರಿ. ಆದರೆ ಕೂದಲಿನ ಆರೈಕೆಗೂ ಇದು ಪರಿಣಾಮಕಾರಿ ಎಂದು ನಿಮಗೆ ಗೊತ್ತಿತ್ತಾ? ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಗಳೊಂದಿಗೆ ಸಮೃದ್ಧವಾಗಿರುವ ಈ ಹಣ್ಣು ಕೂದಲ ಬೇರುಗಳನ್ನು ಬಲಪಡಿಸುವ ಮತ್ತು ಕೂದಲ ಸೀಳುವಿಕೆಯನ್ನು ತಡೆಗಟ್ಟಲು ಅತ್ಯುತ್ತಮ ಪರಿಹಾರವಾಗಿದೆ.

ಬಳಸುವ ವಿಧಾನ

ಸಂಪೂರ್ಣವಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ ಮತ್ತು ನಿಮ್ಮ ಕೂದಲಿನ ಬೇರುಗಳಿಗೆ ಅನ್ವಯಿಸಿ. ನಿಮ್ಮ ಕೂದಲನ್ನು ಶಾಂಪೂ ಮಾಡುವ

ಮೊದಲು ಒಂದು ಗಂಟೆಯವರೆಗೆ ಅದನ್ನು ಹಾಗೆಯೇ ಬಿಡಿ. ಉತ್ತಮ ಪರಿಹಾರಕ್ಕಾಗಿ ವಾರಕ್ಕೊಮ್ಮೆಯಾದರೂ ನೀವು ಈ ವಿಧಾನವನ್ನು ಬಳಸಿ, ಮ್ಯಾಜಿಕ್ ನೋಡಿ.

 ತೆಂಗಿನಕಾಯಿ ಕ್ರೀಮ್

ತೆಂಗಿನಕಾಯಿ ಕ್ರೀಮ್

ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತದೆ ಎಂದು ಹಾಸ್ಯಭರಿತ ಗಾದೆ ಕೇಳಿದ್ದೀರಾ?

ತೆಂಗಿನಕಾಯಿ ಕ್ರೀಮ್ ಒಂದು ಸಾಂಪ್ರದಾಯಿಕ ಪರಿಹಾರವಾಗಿದ್ದು ಅದು ಎಮಲ್ಸಿಫೈಯರ್ ಆಗಿ ಕಾರ್ಯನಿರ್ವಹಿಸುತ್ತದೆ.ನಿಮ್ಮ ಕೂದಲ ಬೇರುಗಳನ್ನು ಪೋಷಿಸುತ್ತದೆ ಹಾಗು ರೆಜುವಿನೇಟ್ ಮಾಡುತ್ತದೆ.

ಬಳಸುವ ವಿಧಾನ

ಕೂದಲ ಬೇರುಗಳಿಗೆ ತೆಂಗಿನಕಾಯಿ ಕ್ರೀಮ್‌ಅನ್ನು ಚೆನ್ನಾಗಿ ಲೇಪಿಸಿಕೊಳ್ಳಿ. 20-25 ನಿಮಿಷಗಳ ಕಾಲ ಹಾಗೆಯೇ ಬಿಟ್ಟುಬಿಡಿ. ಬೆಚ್ಚಗಿನ ನೀರಿನಿಂದ ಶುದ್ಧೀಕರಿಸಿ. ಗಮನಾರ್ಹ ಫಲಿತಾಂಶವನ್ನು ಪಡೆಯಲು ಈ ನಿರ್ದಿಷ್ಟ ವಿಧಾನವನ್ನು ತಿಂಗಳಿಗೆ ಎರಡು ಬಾರಿಯಾದರೂ ಬಳಸಬೇಕು. ಆಗ ನೋಡಿ ಈ ನಮ್ಮ ಕಲ್ಪವೃಕ್ಷ ತೆಂಗಿನ ಕಮಾಲ್!

ಬಾದಾಮಿ ತೈಲ

ಬಾದಾಮಿ ತೈಲ

ಬಾದಾಮಿ ಹೃದಯದ ಆರೋಗ್ಯಕ್ಕೆ ಹೇಗೆ ಮುಖ್ಯವೋ, ಇದರ ಎಣ್ಣೆ ಕೂಡ ಕೂದಲಿನ ಆರೈಕೆಗೆ ಅತ್ಯಂತ ಪರಿಣಾಮಕಾರಿಯಾಗಿದೆ.ಒಮೆಗಾ -3 ಕೊಬ್ಬಿನಾಮ್ಲಗಳು ಬಾದಾಮಿ ತೈಲದಲ್ಲಿ ಹೇರಳವಾಗಿ ಲಭ್ಯವಾಗುತ್ತವೆ. ಇದು ಕೂದಲನ್ನು ರೆಜುವಿನೇಟ್ ಮಾಡಲು ಬಹಳ ಮುಖ್ಯವಾಗಿದೆ.

ಬಳಸುವ ವಿಧಾನ

ನಿಮ್ಮ ಕೂದಲು ಬೇರುಗಳಿಗೆ ಬಾದಾಮಿ ತೈಲವನ್ನು ಅನ್ವಯಿಸಿ, ರಾತ್ರಿಯೆಲ್ಲ ಹಾಗೆಯೇ ಬಿಟ್ಟುಬಿಡಿ. ಬೆಳಿಗ್ಗೆ, ಸೌಮ್ಯವಾದ ಶಾಂಪೂ ಮತ್ತು ಬೆಚ್ಚಗಿನ ನೀರಿನಿಂದ

ತೊಳೆಯಿರಿ. ವಾರಕ್ಕೊಮ್ಮೆ ಈ ವಿಧಾನ ಬಳಸುವದರಿಂದ ನಿಮ್ಮ ಕೂದಲಿನ ಬೇರುಗಳು ಗಟ್ಟಿಮುಟ್ಟಾಗುವವು.

ಮೊಟ್ಟೆಯ ಹಳದಿ ಲೋಳೆ

ಮೊಟ್ಟೆಯ ಹಳದಿ ಲೋಳೆ

ಮೊಟ್ಟೆಯ ಹಳದಿ ಭಾಗಕ್ಕೆ ಪ್ರೋಟೀನ್‌ಗಳ ಒಂದು ಪವರ್ ಹೌಸ್ ಎಂದರೂ ತಪ್ಪಾಗಲಾರದು. ಇದರಲ್ಲಿರುವ ಪ್ರೋಟೀನ್‌ ನಮ್ಮ ಸ್ನಾಯುಗಳನ್ನು ಕೂಡ ಬಲಪಡಿಸುವದಲ್ಲದೆ ಕೂದಲ ಬೇರುಗಳನ್ನು ಕೂಡ ಬಲಪಡಿಸುವದು. ಹಳದಿ ಲೋಳೆ ಸಹ ಒಂದು ಪವಾಡವನ್ನೇ ಮಾಡುತ್ತದೆ. ಇದು ನಿಮ್ಮ ಕೂದಲಿನ ಬೇರುಗಳ ಸ್ಥಿತಿಯನ್ನು ಸುಧಾರಿಸುವದು ಮತ್ತು ಸುಂದರವಾದ ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ.

ಬಳಸುವ ವಿಧಾನ

ಮೊಟ್ಟೆಯ ಹಳದಿ ಲೋಳೆಯನ್ನು 2 ಟೇಬಲ್ ಸ್ಪೂನ್‌ಗಳಷ್ಟು ನಿಂಬೆ ರಸದೊಂದಿಗೆ ಮಿಶ್ರಮಾಡಿ ಮತ್ತು ನಿಮ್ಮ ಕೂದಲಿನ ಬೇರುಗಳಿಗೆ ಚೆನ್ನಾಗಿ ಈ ಮಿಶ್ರಣವನ್ನು

ಅನ್ವಯಿಸಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟುಬಿಡಿ. ಸ್ವಲ್ಪ ದುರ್ವಾಸನೆ ಎನಿಸಿದರು ಉತ್ತಮ ಪರಿಣಾಮವನ್ನು ನೀಡುವದು. ಬೆಚ್ಚಗಿನ ನೀರಿನಿಂದ ಕೂದಲನ್ನು

ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಮ್ಮೆಯಾದರೂ ಈ ವಿಧಾನವನ್ನು ಬಳಸಿಕೊಳ್ಳಿ.ಮೇಲೆ ಹೇಳಿದ ವಿಧಾನಗಳನ್ನು ಪ್ರಯೋಗಿಸಿ, ಉತ್ತಮ ಪರಿಣಾಮ ದೊರೆತ ನಂತರ ಬೋಲ್ಡ್‌ಸ್ಕೈಗೆ ಧನ್ಯವಾದ ಹೇಳುವದನ್ನು ಮರೆಯಬೇಡಿ!!

English summary

Natural Remedies To Nourish Hair Roots

Today, at Boldsky, we’re letting you know about certain incredible home remedies that can nourish and rejuvenate your hair roots naturally. All of the below-stated remedies can easily penetrate the hair shaft on your scalp and treat the hair roots. And, unlike the commercial hair care products, these remedies are inexpensive and safe to use. These remedies are loaded with various hair-benefiting vitamins, nutrients and antioxidants that can treat your hair roots whilst making your locks look voluminous and shiny. Here are the miraculous remedies and the most effective ways of using them, take a look.
Please Wait while comments are loading...
Subscribe Newsletter