For Quick Alerts
ALLOW NOTIFICATIONS  
For Daily Alerts

ಕೂದಲಿನ ಸಮಸ್ಯೆಗೆ ಶೀಘ್ರ ಪರಿಹಾರ: ಕಡಿಮೆ ಖರ್ಚು-ಅಧಿಕ ಲಾಭ!

By Hemanth
|

ಕಲುಷಿತ ವಾತಾವರಣ ಹಾಗೂ ಅನಾರೋಗ್ಯಕರ ಆಹಾರ ಶೈಲಿಯಿಂದಾಗಿ ಇಂದಿನ ದಿನಗಳಲ್ಲಿ ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಕೂದಲು ಉದುರುವುದರೊಂದಿಗೆ ಕೂದಲು ತುಂಡಾಗುವುದು ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವುದು. ಇದನ್ನು ನಿವಾರಣೆ ಮಾಡಲು ಹಲವಾರು ರೀತಿಯ ಪ್ರಯೋಗಗಳನ್ನು ಮಹಿಳೆಯರು ಖಂಡಿತವಾಗಿಯೂ ಮಾಡುತ್ತಾರೆ.

ಕೆಲವರಿಗೆ ಸಮಯದ ಅಭಾವದಿಂದ ಕೂದಲಿನ ಆರೈಕೆ ಮಾಡುವುದು ಕಷ್ಟವಾಗುತ್ತದೆ. ಆದರೆ ಇದನ್ನು ನಿವಾರಣೆ ಮಾಡಲು ಹಲವಾರು ರೀತಿಯ ಮನೆಮದ್ದುಗಳು ಲಭ್ಯವಿದೆ. ಕೂದಲು ಉದುರುವಿಕೆ ತಡೆಯಬೇಕಾದರೆ ಕೆಲವೊಂದು ಹೇರ್ ಮಾಸ್ಕ್ ಗಳನ್ನು ಬಳಸಬೇಕು. ಇದನ್ನು ತಯಾರಿಸಲು ಸ್ವಲ್ಪ ಸಮಯ ಬೇಕಾದರೂ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಿಮ್ಮ ಸಮಸ್ಯೆಯನ್ನು ನಿವಾರಣೆ ಮಾಡಲಿದೆ.

ಕೂದಲಿನ ಎಲ್ಲಾ ಸಮಸ್ಯೆಗಳಿಗೆ-ನೈಸರ್ಗಿಕವಾದ ಸ್ಪೆಷಲ್ ಹೇರ್ ಪ್ಯಾಕ್

1. ಕೂದಲಿಗೆ ಮೊಟ್ಟೆಯ ಮಾಸ್ಕ್

ಬೇಕಾಗುವ ಸಾಮಗ್ರಿಗಳು
*1 ಮೊಟ್ಟೆ
*ಒಂದು ಕಪ್ ಹಾಲು
*ಎರಡು ಚಮಚ ಲಿಂಬೆರಸ
*2 ಚಮಚ ಆಲಿವ್ ತೈಲ

*ಎಲ್ಲಾ ಸಾಮಗ್ರಿಗಳನ್ನು ಜತೆಯಾಗಿ ಸೇರಿಸಿ ಕಲಸಿಕೊಳ್ಳಿ.
*ಈ ಮಿಶ್ರಣವನ್ನು ಕೂದಲು ಮತ್ತು ತಲೆಬುರುಡೆಗೆ ಹಾಕಿಕೊಳ್ಳಿ.
*ಇನ್ನು ತಲೆಗೆ ಶಾವರ್ ಕ್ಯಾಪ್ ಬಳಸಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ.
*ತಣ್ಣಗಿನ ನೀರಿನಿಂದ ಕೂದಲು ತೊಳೆಯಿರಿ.

Egg Hair mask

ಕೇವಲ ಮೊಟ್ಟೆ ಬಳಸಿ ಈ ಮಾಸ್ಕ್ ಅನ್ನು ತಯಾರಿಸುವ ವಿಧಾನ

*ಕೆಲವು ಮೊಟ್ಟೆಯನ್ನು ಒಡೆದು ಅದರ ಬಿಳಿ ಹಾಗೂ ಹಳದಿ ಭಾಗವು ಸರಿಯಾಗಿ ಮಿಶ್ರಣವಾಗುವ ತನಕ ಕಲಸಿಕೊಳ್ಳಿ.
*ಇದನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ.
*15-20 ನಿಮಿಷ ಕಾಲ ಹಾಗೆ ಇರಲಿ.
*ಉಗುರುಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ.

2. ಕೂದಲಿಗೆ ಮೊಸರಿನ ಹೇರ್ ಮಾಸ್ಕ್

ಬೇಕಾಗುವ ಸಾಮಗ್ರಿಗಳು
*1 ಕಪ್ ಮೊಸರು
*1 ಚಮಚ ಆ್ಯಪಲ್ ಸೀಡರ್ ವಿನೇಗರ್
*1 ಚಮಚ ಜೇನುತುಪ್ಪ

ವಿಧಾನ
*ಎಲ್ಲಾ ಸಾಮಗ್ರಿಗಳನ್ನು ಒಂದು ಪಾತ್ರೆಗೆ ಹಾಕಿಕೊಂಡು ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಿ.
*15 ನಿಮಿಷ ಕಾಲ ಹಾಗೆ ಬಿಟ್ಟು ತಂಪಾದ ನೀರಿನಿಂದ ತೊಳೆಯಿರಿ.

3. ಕೂದಲಿಗೆ ಕರಿಬೇವು ಮತ್ತು ತೆಂಗಿನ ಎಣ್ಣೆಯ ಮಾಸ್ಕ್

ಬೇಕಾಗುವ ಸಾಮಗ್ರಿಗಳು
*10-12 ತಾಜಾ ಕರಿಬೇವಿನ ಎಲೆಗಳು
*2 ಚಮಚ ತೆಂಗಿನ ಎಣ್ಣೆ

ಚೆಲುವೆಯ ಅಂದದ ಜಡೆಗೆ ಕರಿಬೇವು+ಮೆಂತೆಯ ಕಮಾಲ್...

ವಿಧಾನ
*ಕರಿಬೇವು ಒಡೆದುಹೋಗುವ ತನಕ ತೆಂಗಿನ ಎಣ್ಣೆಯಲ್ಲಿ ಬಿಸಿ ಮಾಡಿ.
*ಎಣ್ಣೆಯು ಕೋಣೆಯ ತಾಪಮಾನಕ್ಕೆ ಹೊಂದಿಕೊಳ್ಳಲಿ. ಕೂದಲು ಮತ್ತು ತಲೆಬುರುಡೆಗೆ ಇದನ್ನು ಹಚ್ಚಿಕೊಳ್ಳಿ.
*20 ನಿಮಿಷ ಕಾಲ ಹಾಗೆ ಬಿಟ್ಟು ಕೂದಲಿಗೆ ಶಾಂಪೂ ಹಾಕಿ ತೊಳೆಯಿರಿ.

4. ಕೂದಲಿಗೆ ಗ್ರೀನ್ ಟೀ ಹೇರ್ ಮಾಸ್ಕ್

ಬೇಕಾಗುವ ಸಾಮಗ್ರಿಗಳು
1 ಮೊಟ್ಟೆಯ ಲೋಳೆ
2 ಚಮಚ ಗ್ರೀನ್ ಟೀ

ವಿಧಾನ
*ಎಲ್ಲಾ ಸಾಮಗ್ರಿಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಕ್ರೀಮ್ ರೂಪಕ್ಕೆ ಬರಲಿ.
*ಒಂದು ಬ್ರಷ್ ಬಳಸಿಕೊಂಡು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ.
*15-20 ನಿಮಿಷ ಕಾಲ ಹಾಗೆ ಇರಲಿ.
*ಶಾಂಪೂ ಹಾಕುವ ಮೊದಲು ತಣ್ಣೀರಿನಿಂದ ತೊಳೆಯಿರಿ.

English summary

Natural Hair Care Tips & Home Remedies for Healthy Hair

Spending too much on expensive shampoos, but not getting the desired results that you see in TV ads? It is mostly possible and very common, because we see overly exaggerated results on TV, since these ads are designed to attract customers. Follow these easy and simple beauty tips for hair to give that luster and shine, and flaunt your hair like the models do...
X
Desktop Bottom Promotion