For Quick Alerts
ALLOW NOTIFICATIONS  
For Daily Alerts

ಕೂದಲು ಸೊಂಪಾಗಿ ಬೆಳೆಯಬೇಕೇ? ಈರುಳ್ಳಿ ರಸ ಹಚ್ಚಿ...

By
|

ಈರುಳ್ಳಿ ಘಾಟು ಹೆಚ್ಚಿನವರಿಗೆ ಆಗಿಬರುವುದಿಲ್ಲ. ಇದರಿಂದ ಆದಷ್ಟು ದೂರ ಹೋಗಲು ಪ್ರತಿಯೊಬ್ಬರು ಪ್ರಯತ್ನಿಸುವರು. ಆದರೆ ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿಗೂ ತುಂಬಾ ಉಪಯೋಗಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕೂದಲಿನ ಆರೈಕೆಯಲ್ಲಿ ಈರುಳ್ಳಿ ಬಳಸುವುದು ಹೇಗೆ ಎಂದು ಹೆಚ್ಚಿನವರಿಗೆ ಅಚ್ಚರಿಯಾಗಬಹುದು.

ಕೂದಲಿಗೆ ಇದರ ರಸ ಹಾಕಿದರೆ ವಾಸನೆಯಿಂದ ಹತ್ತಿರವಿರುವವರು ದೂರ ಓಡಬಹುದು ಎಂದು ನೀವು ಭಾವಿಸಬಹುದು. ಇದು ಮೂಗಿಗೆ ತುಂಬಾ ವಾಸನೆಯಾದರೂ ಇದರಿಂದ ಹಲವಾರು ರೀತಿಯ ಲಾಭಗಳು ಕೂದಲಿಗೆ ಆಗಲಿದೆ. ಕೂದಲು ಉದುರುವ ಸಮಸ್ಯೆಯಿದ್ದರೆ ಈರುಳ್ಳಿ ಬಳಸಿಕೊಳ್ಳಲು ಮರೆಯಬೇಡಿ. ತುಂಬಾ ದುಬಾರಿಯಾಗಿರುವ ಕೆಲವು ಚಿಕಿತ್ಸೆ ಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಕೂದಲಿಗೆ ಚಿಕಿತ್ಸೆ ನೀಡಿದರೆ ತುಂಬಾ ಒಳ್ಳೆಯದು. ಕೂದಲು ಉದುರುವ ಸಮಸ್ಯೆಗೆ ಈರುಳ್ಳಿ ಬಳಸಿಕೊಳ್ಳುವುದು ಹೇಗೆ ಎಂದು ನೀವು ತಿಳಿಯಿರಿ.

Onion Juice

ಈರುಳ್ಳಿ ರಸ
ಈರುಳ್ಳಿ ರಸ ಪಡೆಯುವುದು ತುಂಬಾ ಕಷ್ಟಕರ ಕೆಲಸವೆಂದು ನಿಮಗೆ ಅನಿಸುತ್ತಿರಬಹುದು. ಆದರೆ ಈರುಳ್ಳಿ ರಸ ತೆಗೆಯುವುದು ತುಂಬಾ ಸುಲಭ. ಈರುಳ್ಳಿಯನ್ನು ಮಿಕ್ಸಿಗೆ ಹಾಕಿ ಸರಿಯಾಗಿ ರುಬ್ಬಿಕೊಳ್ಳಬೇಕು. ಈರುಳ್ಳಿಯನ್ನು ಸರಿಯಾಗಿ ಕತ್ತರಿಸಿಕೊಂಡರೆ ಅದರಿಂದ ಹೆಚ್ಚಿನ ರಸ ಸಿಗುವುದು. ತಲೆಬುರುಡೆಯ ರಂಧ್ರಗಳನ್ನು ತೆರೆಯಲು ಬಿಸಿಎಣ್ಣೆ ಬಳಸುವುದು ಸಾಮಾನ್ಯ. ಆದರೆ ಈರುಳ್ಳಿ ರಸವನ್ನು ಬಿಸಿ ಮಾಡುವ ಅಗತ್ಯವಿಲ್ಲ. ಈರುಳ್ಳಿ ರಸ ಹಚ್ಚಿಕೊಳ್ಳುವ ಅರ್ಧ ಗಂಟೆಗೆ ಮೊದಲು ಬಿಸಿ ಟವೆಲ್ ನ್ನು ತಲೆಗೆ ಕಟ್ಟಿಕೊಂಡರೆ ರಸವು ಚೆನ್ನಾಗಿ ಹೀರಲ್ಪಡುವುದು.

ಈರುಳ್ಳಿ ಮತ್ತು ಜೇನುತುಪ್ಪ
ಈರುಳ್ಳಿ ರಸವನ್ನು ಸುಮಾರು 15 ನಿಮಿಷ ಕಾಲ ತಲೆಯಲ್ಲಿ ಹಾಗೆ ಬಿಡುವುದು ಅತೀ ಅಗತ್ಯ. ಇದರ ಬಳಿಕ ಶಾಂಪೂ ಹಾಕಿಕೊಂಡು ತೊಳೆಯಿರಿ. ಇದು ಸ್ವಲ್ಪ ಮಟ್ಟಿಗೆ ನಿಮಗೆ ತ್ರಾಸ ನೀಡುತ್ತಿದ್ದರೆ ಬೇರೆ ವಿಧಾನ ಬಳಸಿಕೊಳ್ಳಬಹುದು. ಸ್ವಲ್ಪ ಈರುಳ್ಳಿ ರಸಕ್ಕೆ ಜೇನುತುಪ್ಪ ಹಾಕಿಕೊಂಡು ಸರಿಯಾದ ಜೆಲ್ ಮಾಡಿಕೊಳ್ಳಿ. ಇದರಿಂದ ವಾಸನೆ ಕೂಡ ಕಡಿಮೆಯಾಗುವುದು ಮಾತ್ರವಲ್ಲದೆ ಇದು ಕೂದಲಿಗೆ ತುಂಬಾ ಒಳ್ಳೆಯದು.

ಹಾಗಲಕಾಯಿ-ಈರುಳ್ಳಿ ಮಿಶ್ರಿತ ಜ್ಯೂಸ್‌ನಲ್ಲಿದೆ ಆರೋಗ್ಯದ ಪವರ್

ಈರುಳ್ಳಿ ಮತ್ತು ಬಿಯರ್ ಹೇರ್ ಪ್ಯಾಕ್
ಕೂದಲು ಉದುರುವ ಸಮಸ್ಯೆಯೊಂದಿಗೆ ಕೂದಲಿನ ಕಾಂತಿ ಹೆಚ್ಚಿಸುವಂತಹ ಹೇರ್ ಪ್ಯಾಕ್ ಇದ್ದರೆ ತುಂಬಾ ಒಳ್ಳೆಯದು. ದಪ್ಪ ಕೂಡಲು ರೇಷ್ಮೆಯಂತೆ ಹೊಳೆಯುತ್ತಿದ್ದರೆ ಅದು ನೋಡಲು ಚಂದ. ಇಂತಹ ಕೂದಲು ಪಡೆಯಲು ನೀವು ಹೇರ್ ಪ್ಯಾಕ್ ನ್ನು ಯಾವಾಗಲಾದರೂ ಬಳಸಿಕೊಳ್ಳಬೇಕು. ಈರುಳ್ಳಿ ರಸ ತೆಗೆದ ಬಳಿಕ ಅದರ ತಿರುಳು ಹಾಗೆ ಉಳಿದಿರುವುದು. ಇದನ್ನ ತೆಂಗಿನ ಎಣ್ಣೆ ಜತೆ ಸೇರಿಸಿ ಪೇಸ್ಟ್ ಮಾಡಿ. ಈಗ ಇದಕ್ಕೆ ಬಿಯರ್ ಹಾಕಿ. ಬಿಯರ್ ನೊಂದಿಗೆ ಈರುಳ್ಳಿಯು ಕೂದಲಿಗೆ ನೈಸರ್ಗಿಕ ಕಾಂತಿ ನೀಡುವುದು. ತೆಂಗಿನೆಣ್ಣೆಯು ಕೂದಲಿನ ಬುಡಕ್ಕೆ ಪೋಷಣೆ ನೀಡುವುದು.

ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ
ನಿಮಗೆ ತಿಳಿದಿರುವ ಹಾಗೆ ತೆಂಗಿನ ಎಣ್ಣೆಯು ಸಾಮಾನ್ಯವಾಗಿ ಕೇಶಕ್ಕೆ ಹಚ್ಚುವ ಎಣ್ಣೆಯಾಗಿದ್ದು, ಕೂದಲುದುರುವ ಸಮಸ್ಯೆಗೆ ನೆರವಾಗುತ್ತದೆ. ಈ ಎಣ್ಣೆಯನ್ನು ಈರುಳ್ಳಿ ರಸದ ಜೊತೆಗೆ ಬಳಸಿದರೆ ಈ ಸಮಸ್ಯೆಯನ್ನು ಇನ್ನೂ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದಾಗಿದ್ದು, ಕೂದಲ ಬೆಳವಣಿಗೆಯನ್ನು ಉತ್ತೇಜಿಸಲಿದೆ. 2 ಚಮಚ ತೆಂಗಿನ ಎಣ್ಣೆಯನ್ನು 1 ಚಮಚ ಈರುಳ್ಳಿಯ ರಸದೊಂದಿಗೆ ಬೆರೆಸಿ ಕೇಶಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.

ಈರುಳ್ಳಿ ರಸ ಮತ್ತು ಬಿಸಿ ನೀರು
ಕೇಶದ ಸಮಸ್ಯೆಗೆ ಈರುಳ್ಳಿ ರಸವನ್ನು ಬಿಸಿ ನೀರಿನೊಂದಿಗೂ ಸಹ ಬಳಸಬಹುದು. ಅಗತ್ಯದಷ್ಟು ಬಿಸಿ ನೀರಿನೊಂದಿಗೆ ಈರುಳ್ಳಿ ರಸವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಶ್ಯಾಂಪೂ ಬಳಸಿದ ಮೇಲೆ ಸ್ನಾನದ ಕೊನೆಯ ಹಂತದಲ್ಲಿ ಬಳಸಿ. ಒಂದೇ ತಿಂಗಳಲ್ಲಿ ಅದರ ವ್ಯತ್ಯಾಸ ನಿಮಗೇ ತಿಳಿಯುತ್ತದೆ.

ಕೂದಲುದುರುವ ಸಮಸ್ಯೆಗೆ-ಈರುಳ್ಳಿಯೇ ಸಮರ್ಥ ಮನೆಮದ್ದು

English summary

How To Use Onion Juice For Hair Growth

The very thought of hair smelling of onions will put people off. But there is no gain without a bit of sacrifice. Beauty recipes using onion for hair are in one word 'effective'. Do they smell foul? Yes, they do but you can work around it. If you have been having trouble with hair fall, then these recipes are one of the best remedies for hair loss. Instead of going for expensive hair treatments at dubious spas, care for hair at home. That way you can sure you are doing the best you can. Here some of the beauty recipes that use onion for hair fall treatment.
X
Desktop Bottom Promotion