For Quick Alerts
ALLOW NOTIFICATIONS  
For Daily Alerts

ಕೂದಲುದುರುವುದು ತಡೆಯಬೇಕಾ? ಹಾಗಿದ್ದರೆ ಸೀಬೆ ಎಲೆಯನ್ನು ಬಳಸಿ

|

ಸೊಂಪಾದ ಕೂದಲಿನ ಬಯಕೆ ಯಾರಿಗಿರುವುದಿಲ್ಲ ಹೇಳಿ. ಇಳಿಬಿದ್ದ ಜಲಪಾತದಂತಿರುವ ದಟ್ಟ ಕಪ್ಪು ಕೇಶರಾಶಿಯ ಸೊಬಗಿಗೆ ಬೆರಗಾಗದವರು ಈ ಭೂಮಿಯಲ್ಲಿ ಯಾರೂ ಇರಲಿಕ್ಕಿಲ್ಲ. ಯಕ್ಷ ಗಂಧರ್ವರ ಕಾಲದಿಂದಲೂ ದಟ್ಟ ಕಾರ್ಮೋಡದಂತಿರುವ ತಲೆಗೂದಲು ತನ್ನದೇ ಪ್ರಾಶಸ್ತ್ಯವನ್ನು ಹೊಂದಿದೆ. ಚಿತ್ರಗಳಲ್ಲಿಯೂ ನೀಳಕೇಶರಾಶಿಯುಳ್ಳ ಹೆಂಗಳೆಯರ ಚಿತ್ರವನ್ನೇ ಹೆಚ್ಚು ಬಿಡಿಸಿರುವುದನ್ನು ನೀವು ಗಮನಿಸಿರಬಹುದು. ಅಂದವಾದ ಕೂದಲು ಮಹಿಳೆಗೆ ಆಭರಣಗಳಿಗಿಂತಲೂ ಹೆಚ್ಚು ಮಹತ್ವಪೂರ್ಣವಾಗಿತ್ತು ಎಂಬುದು ಇದರಿಂದ ತಿಳಿದುಕೊಳ್ಳಬಹುದು.

ನೈಸರ್ಗಿಕ ವಿಧಾನಗಳಿಂದಲೇ ಅಂದಿನ ಕಾಲದ ಹೆಂಗಳೆಯರು ತಮ್ಮ ನೀಳ್ಗೂದಲನ್ನು ಪೋಷಿಸುತ್ತಿದ್ದರು. ತಲೆತೊಳೆಯಲು ಸೀಗೆಕಾಯಿ, ಸೊಪ್ಪುಗಳ ಕಂಡೀಶನರ್ ವಿಧಾನವನ್ನು ಇವರು ಹೆಚ್ಚು ಆಯ್ದುಕೊಳ್ಳುತ್ತಿದ್ದರು. ಕೂದಲು ತೊಳೆದುಕೊಂಡ ನಂತರ ಬಿಸಿಲಿನಲ್ಲಿ ಪ್ರಾಕೃತಿಕವಾಗಿ ಒಣಗಿಸಿಕೊಳ್ಳುತ್ತಿದ್ದರು. ತಲೆಗೂದಲಿಗೆ ಹಚ್ಚಿಕೊಳ್ಳುವ ಎಣ್ಣೆ ತಯಾರಿಯಲ್ಲೂ ವಿಶೇಷ ಅಸ್ಥೆಯನ್ನು ಇವರು ವಹಿಸುತ್ತಿದ್ದರು.

ಆದರೆ ಈಗ ತಲೆಗೂದಲಿನ ಆರೈಕೆಗೆ ಸಮಯದ ಅಭಾವವಾಗಿದೆ. ಎಣ್ಣೆ ತಯಾರಿಸುವುದನ್ನು ಬಿಟ್ಟು ನೆತ್ತಿಗೆ ಎಣ್ಣೆಯಿಟ್ಟು ಮಾಡುವ ತಲೆಸ್ನಾನ ಕೂಡ ಎರಡು ವಾರಕ್ಕೊಮ್ಮೆ ಅದೂ ಅಮ್ಮ ನೆನಪಿಸಿದಾಗ ಎಂಬಂತಾಗಿದೆ. ದೈನಂದಿನ ಬಿಡುವಿಲ್ಲದ ಬದುಕಿನಲ್ಲಿ ಎಣ್ಣೆ ಹಚ್ಚಿ ತಲೆಸ್ನಾನಗೈಯುವುದು, ಕೂದಲಿಗೆ ವಿಶೇಷ ಆರೈಕೆಯನ್ನು ಮಾಡಲು ಸಮಯವೇ ನಮ್ಮಲ್ಲಿ ಇಲ್ಲ ಎಂಬಂತಹ ಸ್ಥಿತಿ ಬಂದೊದಗಿದೆ. ಆದರೂ ನೀಳವಾದ ದಟ್ಟ ಕೂದಲನ್ನು ನೋಡಿದಾಗ ನಮ್ಮಲ್ಲೂ ಇಂತಹ ಕೂದಲು ನಮಗೂ ಬೇಕು ಎಂಬ ಭಾವನೆ ಮೂಡುವುದು ಸಹಜ. ಹಾಗಿದ್ದರೆ ನೀವು ಸ್ವಲ್ಪ ಸಮಯವನ್ನು ಹೊಂದಿಸಿಕೊಳ್ಳಲೇಬೇಕು.

ಹತ್ತಾರು ಕಾಯಿಲೆಗಳನ್ನು ಗುಣಪಡಿಸುವ ಪವರ್ ಸೀಬೆ ಎಲೆಗಳಲ್ಲಿದೆ

ನೈಸರ್ಗಿಕ ಪರಿಹಾರಗಳಿಂದ ಕೂದಲಿನ ರಿಪೇರಿ ಮಾಡುವುದು ಶಾಶ್ವತ ಫಲವನ್ನು ನೀಡುತ್ತದೆ. ನಿಯಮಿತ ಎಣ್ಣೆಯ ಬಳಕೆ, ಮೈಲ್ಡ್ ಶಾಂಪೂವನ್ನು ಉಪಯೋಗಿಸುವುದು, ಮೊಸರು, ಲಿಂಬೆ, ಮೊಟ್ಟೆಯ ಹೇರ್‌ಪ್ಯಾಕ್‌ನೊಂದಿಗೆಯೇ ಅತಿ ವಿಶೇಷಾಗಿರುವ ಸೀಬೆ ಎಲೆಯ ಮಹತ್ವವನ್ನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ.

ತಯಾರಿಸಲು ಬೇಕಾಗುವ ಸಾಮಾಗ್ರಿಗಳು

ತಯಾರಿಸಲು ಬೇಕಾಗುವ ಸಾಮಾಗ್ರಿಗಳು

* ಒಂದು ಮುಷ್ಟಿ ಸೀಬೆ ಎಲೆಗಳು

* ಒಂದು ಲೀಟರ್ ನೀರು

* ಕುದಿಸಲೊಂದು ಪಾತ್ರೆ

* ಜರಡಿ

ಮಾಡುವ ವಿಧಾನ

ಮಾಡುವ ವಿಧಾನ

* ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಲು ಇರಿಸಿ.

* ನೀರು ಕುದಿಯಲಾರಂಬಿಸಿದ ನಂತರ ಸೀಬೆ ಎಲೆಯನ್ನು ಆ ಪಾತ್ರೆಗೆ ಹಾಕಿ.

* ಹಾಗೆಯೇ 20 ನಿಮಿಷಗಳ ಕಾಲ ನೀರು ಕುದಿಯುವುದನ್ನು ಮುಂದುವರಿಸಿ.

* ನಂತರ ನೀರು ಮತ್ತು ಎಲೆಯ ಮಿಶ್ರಣವನ್ನು ತಣ್ಣಗಾಗಲು ಬಿಡಿ.

ಬಳಸುವುದು ಹೇಗೆ?

ಬಳಸುವುದು ಹೇಗೆ?

1. ಕೂದಲಿಗೆ ಕಂಡೀಷನರ್ ಬಳಸದೆಯೇ ಶಾಂಪೂ ಬಳಸಿ ಸ್ವಚ್ಛಗೊಳಿಸಿ.

2. ಕೇಶಗಳು ಸ್ವಲ್ಪ ಒಣಗಿದೆ ಎನ್ನುವಾಗ ತಯಾರಿಸಿಕೊಂಡ ಮಿಶ್ರಣವನ್ನು ಅನ್ವಯಿಸಿ.

3. ನೆತ್ತಿಯ ಮೇಲೆ ಮತ್ತು ಕೂದಲುಗಳ ಬುಡಕ್ಕೆ ಮಿಶ್ರಣವನ್ನು ಲೇಪಿಸಿ ಮಸಾಜ್ ಮಾಡಿ.

4. ನಂತರ 2 ಗಂಟೆಗಳ ಕಾಲ ಹಾಗೇ ಇರಲು ಬಿಡಿ

5. ಬಳಿಕ ತಣ್ಣೀರಿನಲ್ಲಿ ಕೂದಲನ್ನು ತೊಳೆಯಿರಿ.

ಎಷ್ಟು ಬಾರಿ ಅನ್ವಯಿಸಬೇಕು?

ಎಷ್ಟು ಬಾರಿ ಅನ್ವಯಿಸಬೇಕು?

ಕೂದಲು ತುಂಬಾ ಉದುರುತ್ತಿದ್ದರೆ ಸೀಬೆ ಎಲೆಯ ಮಿಶ್ರಣವನ್ನು ವಾರದಲ್ಲಿ ಮೂರು ಬಾರಿ ಬಳಸಿ. ಕೇವಲ ಕೂದಲುಗಳ ಬೆಳವಣಿಗೆ ಅಥವಾ ಹೊಳೆಯುವಿಕೆಯ ಉದ್ದೇಶವಾಗಿದ್ದರೆ ವಾರದಲ್ಲಿ ಎರಡುಬಾರಿ ಬಳಸಿ.

ಮುನ್ನೆಚ್ಚರಿಕೆ

* ಮಿಶ್ರಣವನ್ನು ಅನ್ವಯಿಸುವ ಮುಂಚೆ ತಣ್ಣಗಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.

* ಬಿಸಿ ನೀರಿನಿಂದ ಕೂದಲನ್ನು ತೊಳೆಯಬಾರದು. ಇದು ನೆತ್ತಿ ಮತ್ತು ಕೂದಲನ್ನು ಒಣಗಿಸುತ್ತದೆ.

 ಇತರ ಉಪಯೋಗಗಳು

ಇತರ ಉಪಯೋಗಗಳು

1. ಇದರಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುವುದರಿಂದ ಕೂದಲು ವೇಗವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ.

2. ರೋಗ ನಿರೋಧಕ ಶಕ್ತಿ ಹೆಚ್ಚಿದೆ.

3. ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ರಕ್ಷಣೆ ನೀಡುತ್ತದೆ.

4. ಇದರ ಮಸಾಜ್ ಮಾಡುವುದರಿಂದ ರಕ್ತದೊತ್ತಡವು ಸುಧಾರಿಸುತ್ತದೆ.

5. ಕೂದಲನ್ನು ಮೃದು ಹಾಗೂ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ಪೇರಳೆ ಎಲೆಗಳು ಮತ್ತು ತೆಂಗಿನೆಣ್ಣೆ ಮಂಕಾದ ಕೂದಲಿಗೆ

ಪೇರಳೆ ಎಲೆಗಳು ಮತ್ತು ತೆಂಗಿನೆಣ್ಣೆ ಮಂಕಾದ ಕೂದಲಿಗೆ

2 ಚಮಚಗಳಷ್ಟು ಪೇರಳೆ ಎಲೆಯ ಹುಡಿಯನ್ನು 3 ಚಮಚ ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿಕೊಳ್ಳಿ

ಇದನ್ನು 30 ನಿಮಿಷ ಹಾಗೆಯೇ ಬಿಟ್ಟು ನಂತರ ಕೂದಲನ್ನು ತೊಳೆದುಕೊಳ್ಳಿ

ಮಂಕಾಗಿರುವ ನಿಸ್ತೇಜ ಕೂದಲಿನ ಆರೈಕೆಯನ್ನು ಈ ರೀತಿ ಮಾಡಬಹುದಾಗಿದೆ

ಪೇರಳೆ ಎಲೆ ಮತ್ತು ಅವೊಕಾಡೊ ಹಾನಿಗೊಂಡ ಕೂದಲಿಗೆ

ಪೇರಳೆ ಎಲೆ ಮತ್ತು ಅವೊಕಾಡೊ ಹಾನಿಗೊಂಡ ಕೂದಲಿಗೆ

ಹಿಡಿಯಷ್ಟು ಪೇರಳೆ ಎಲೆಯನ್ನು ಪ್ಯಾನ್‌ನಲ್ಲಿ ಕುದಿಸಿಕೊಳ್ಳಿ 10-15 ನಿಮಿಷ ಕುದಿಸಿ ಇದನ್ನು ತಣಿಸಿಕೊಳ್ಳಿ

ಅವೊಕಾಡೊವನ್ನು ಹಿಸುಕಿಕೊಂಡು ಇದನ್ನು ದ್ರಾವಣದೊಂದಿಗೆ ಮಿಶ್ರ ಮಾಡಿಕೊಳ್ಳಿ

20-25 ನಿಮಿಷ ಇದನ್ನು ಕೂದಲಿನಲ್ಲಿ ಹಾಗೆಯೇ ಬಿಡಿ

ವಾರಕ್ಕೊಮ್ಮೆ ಈ ಮನೆ ಔಷಧವನ್ನು ಬಳಸಿ ನೋಡಿ

ಪೇರಳೆ ಎಲೆ ಮತ್ತು ಮೊಟ್ಟೆಯ ಬಿಳಿ ಭಾಗ - ಬಿಳಿ ಕೂದಲಿಗೆ

ಪೇರಳೆ ಎಲೆ ಮತ್ತು ಮೊಟ್ಟೆಯ ಬಿಳಿ ಭಾಗ - ಬಿಳಿ ಕೂದಲಿಗೆ

ಪೇರಳೆ ಎಲೆಯ ಹುಡಿಯನ್ನು ಮೊಟ್ಟೆಯ ಬಿಳಿ ಭಾಗದೊಂದಿಗೆ ಮಿಶ್ರ ಮಾಡಿಕೊಳ್ಳಿ

ಚೆನ್ನಾಗಿ ಮಸಾಜ್ ಮಾಡಿಕೊಂಡು ನಿಮ್ಮ ಕೂದಲಿನಲ್ಲಿ ಇದನ್ನು 40 ನಿಮಿಷ ಹಾಗೆಯೇ ಬಿಡಿ

ಮೃದುವಾದ ಶ್ಯಾಂಪೂನಿಂದ ಕೂದಲನ್ನು ತೊಳೆದುಕೊಳ್ಳಿ

ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ

ಪೇರಳೆ ಎಲೆ ಮತ್ತು ಆಲೀವ್ ಆಯಿಲ್

ಪೇರಳೆ ಎಲೆ ಮತ್ತು ಆಲೀವ್ ಆಯಿಲ್

5-6 ಎಲೆಗಳನ್ನು ನೀರಿನಲ್ಲಿ ಕುದಿಸಿಕೊಳ್ಳಿ.10 ನಿಮಿಷ ಈ ಮಿಶ್ರಣ ತಣ್ಣಗಾಗಲಿ

ನಂತರ ಇದನ್ನು ಆಲೀವ್ ಎಣ್ಣೆಯೊಂದಿಗೆ ಮಿಶ್ರ ಮಾಡಿಕೊಳ್ಳಿ.

ಕೂದಲಿಗೆ ಹಚ್ಚಿ 30 ನಿಮಿಷ ಹಾಗೆಯೇ ಬಿಡಿ

ನಂತರ ಶಾಂಪೂ ಮಾಡಿಕೊಳ್ಳಿ

ವಾರಕ್ಕೊಮ್ಮೆ ಈ ವಿಧಾನವನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಿ

ಪೇರಳೆ ಎಲೆ ಮತ್ತು ಬಾದಾಮಿ ಎಣ್ಣೆ

ಪೇರಳೆ ಎಲೆ ಮತ್ತು ಬಾದಾಮಿ ಎಣ್ಣೆ

ಪೇರಳೆ ಎಲೆಯ ಹುಡಿ ಮತ್ತು ಬಾದಾಮಿ ಎಣ್ಣೆಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಿ

ಇದನ್ನು ನಿಮ್ಮ ತಲೆಬುರುಡೆಗೆ ಹಚ್ಚಿ ಮಸಾಜ್ ಮಾಡಿ ಮತ್ತು 30 ನಿಮಿಷ ಹಾಗೆಯೇ ಬಿಡಿ

ದೈನಂದಿನ ಶ್ಯಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆದುಕೊಳ್ಳಿ

ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ

ಪೇರಳೆ ಎಲೆ ಮತ್ತು ಆಪಲ್ ಸೀಡರ್ ವಿನೇಗರ್

ಪೇರಳೆ ಎಲೆ ಮತ್ತು ಆಪಲ್ ಸೀಡರ್ ವಿನೇಗರ್

1 ಚಮಚ ಪೇರಳೆ ಎಲೆಯ ಹುಡಿಯನ್ನು 1/2 ಚಮಚ ಆಪಲ್ ಸೀಡರ್ ವಿನೇಗರ್‌ನೊಂದಿಗೆ ಮಿಶ್ರಮಾಡಿಕೊಳ್ಳಿ ಇದಕ್ಕೆ 3 ಚಮಚ ರೋಸ್ ವಾಟರ್ ಸೇರಿಸಿ

ನಿಮ್ಮ ತಲೆಬುರುಡೆಗೆ ಈ ಮಿಶ್ರಣವನ್ನು ಹಚ್ಚಿ ಮತ್ತು ಕೂದಲಿನ ತುದಿಗೂ ಈ ಮಿಶ್ರಣ ಹಚ್ಚಿಕೊಳ್ಳಿ

ಇದನ್ನು 30 ನಿಮಿಷ ಹಾಗೆಯೇ ಬಿಟ್ಟು ನಂತರ ಕೂದಲನ್ನು ತೊಳೆದುಕೊಳ್ಳಿ

ನೆರೆಗೂದಲನ್ನು ಹೋಗಲಾಡಿಸಲು ಪೇರಳೆ ಎಲೆ ಮತ್ತು ಕರಿಬೇವಿನೆಸಳು

ನೆರೆಗೂದಲನ್ನು ಹೋಗಲಾಡಿಸಲು ಪೇರಳೆ ಎಲೆ ಮತ್ತು ಕರಿಬೇವಿನೆಸಳು

ಮುಷ್ಟಿಯಷ್ಟು ಪೇರಳೆ ಎಲೆಯನ್ನು ಮತ್ತು ಕರಿಬೇವನ್ನು ನೀರಿನಲ್ಲಿ ಕುದಿಸಿಕೊಳ್ಳಿ

10-15 ನಿಮಿಷಗಳ ಕಾಲ ಇದನ್ನು ಹಾಗೆಯೇ ಕುದಿಯಲು ಬಿಡಿ

ನಂತರ ಇದನ್ನು ತಣ್ಣಗಾಗಿಸಿಕೊಳ್ಳಿ

ಇದರಿಂದ ನಿಮ್ಮ ಕೂದಲನ್ನು ತೊಳೆದುಕೊಳ್ಳಿ 5 ನಿಮಿಷ ಹಾಗೆಯೇ ಕೂದಲಿನಲ್ಲಿ ಬಿಡಿ

ನಿರಂತರವಾಗಿ ಇದನ್ನು ಕೂದಲಿಗೆ ಬಳಸುವುದು ನೆರೆಗೂದಲನ್ನು ಹೋಗಲಾಡಿಸುತ್ತದೆ

ಸೀಬೆಯ ಎಲೆಗಳಲ್ಲಿರುವ ಇತರೆ ಅಂಶಗಳು

ಸೀಬೆಯ ಎಲೆಗಳಲ್ಲಿರುವ ಇತರೆ ಅಂಶಗಳು

ವಿಟಮಿನ್ ಬಿ ನಿಮ್ಮ ಕೂದಲಿನ ಅಭಿವೃದ್ಧಿಗೆ ಸಹಕಾರಿಯಾದಲ್ಲಿ ಬಿ3, ಬಿ5 ಮತ್ತು ಬಿ6 ನಿಮ್ಮ ತ್ವಚೆಯನ್ನು ಕಾಂತಿಯುಕ್ತಗೊಳಿಸುತ್ತದೆ. ವಿಟಮಿನ್ ಬಿ ಕೂದಲಿನ ಪದರಗಳನ್ನು ಬುಡವನ್ನು ರಿಪೇರಿ ಮಾಡುತ್ತದೆ. ಆದ್ದರಿಂದಲೇ ಹೆಚ್ಚಿನ ಸೌಂದರ್ಯ ಉತ್ಪನ್ನಗಳು ಮತ್ತು ಕೂದಲಿನ ಉತ್ಪನ್ನಗಳಲ್ಲಿ ಸೀಬೆಯ ಅಂಶಗಳನ್ನು ಬಳಸುತ್ತಾರೆ. ಅಷ್ಟೇ ಅಲ್ಲದೆ ಮುಖದ ಮೇಲಿನ ನೆರಿಗೆ, ಮೊಡವೆ, ಕಂದುಕಲೆ, ಅಲರ್ಜಿ ಅಥವಾ ಕಪ್ಪುಕಲೆಗಳು ಬಿದಿದ್ದರೆ ಕೂಡ ಸೀಬೆ ಎಲೆಗಳು ಅದ್ಭುತವನ್ನೇ ಮಾಡಲಿದೆ...

ಸೀಬೆಹಣ್ಣಿನ ಎಲೆಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳು ಅಧಿಕವಾಗಿದೆ

ಸೀಬೆಹಣ್ಣಿನ ಎಲೆಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳು ಅಧಿಕವಾಗಿದೆ

ಅಧ್ಯಯನಗಳ ಪ್ರಕಾರ ಇದರ ಎಲೆಗಳಲ್ಲಿ ಹಣ್ಣಿಗಿಂತ ಹೆಚ್ಚು ಸ್ವತಂತ್ರ ರಾಡಿಕಲ್ ಶೇಖರಿಸುವ ಗುಣವಿದೆ. ಇದರಿಂದ ಇದು ನೆರಿಗೆಯನ್ನು ದೂರವಿಡಲು ನೆರವಾಗುತ್ತದೆ. ಇದನ್ನು ಹೊರತುಪಡಿಸಿ ಎಲೆಗಳಲ್ಲಿ ಚರ್ಮದ ಕಾಂತಿಯನ್ನು ಹೆಚ್ಚಿಸುವ ಗುಣಗಳಿವೆ ಮತ್ತು ಇದು ನೆರಿಗೆ ಬೀಳುವುದನ್ನು ತಡೆಯುತ್ತದೆ.

 ಅಧ್ಯಯನದ ಪ್ರಕಾರ...

ಅಧ್ಯಯನದ ಪ್ರಕಾರ...

ಅಮೆರಿಕನ್ ಜರ್ನಲ್ ನ ಚೈನೀಸ್ ಮೆಡಿಸಿನ್ ನಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ ಸೀಬೆಹಣ್ಣಿನ ಎಲೆಗಳಲ್ಲಿ ಆ್ಯಂಟಿಬ್ಯಾಕ್ಟೀರಿಯಾ ಗುಣಗಳು ಅತಿಯಾಗಿದೆ ಮತ್ತು ಇದು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ತುಂಬಾ ಪರಿಣಾಮಕಾರಿ. ಈ ಅಧ್ಯಯನವನ್ನು ಹೊರತುಪಡಿಸಿ ಸೀಬೆಕಾಯಿ ಎಲೆಗಳಲ್ಲಿ ಉರಿಯೂತ ವಿರೋಧಿ ಗುಣಗಳಿದ್ದು, ಇದು ತ್ವಚೆಯನ್ನು ತಂಪಾಗಿರಿಸಿ ಮೊಡವೆಗಳು ಮೂಡದಂತೆ ನೋಡಿಕೊಳ್ಳುತ್ತದೆ.

ಬಳಸುವುದು ಹೇಗೆ?

ಬಳಸುವುದು ಹೇಗೆ?

ಸೀಬೆಕಾಯಿಯ ಕೆಲವು ಎಲೆಗಳನ್ನು ತೆಗೆದುಕೊಳ್ಳಿ.ಎಟೊಪಿಕ್ ಡರ್ಮಟೈಟಿಸ್‌ಗೆ ಚಿಕಿತ್ಸೆ ನೀಡಲು ಇದನ್ನು ಬಳಸುವುದಾದರೆ ಒಣಗಿದ ಎಲೆಗಳನ್ನು ಬಳಸಿ. ಇದನ್ನು ಹುಡಿ ಮಾಡಿ ಬಿಸಿ ನೀರಿನ ಒಂದು ಪಾತ್ರೆಗೆ ಹಾಕಿ. ನೀರನ್ನು ಸರಿಯಾಗಿ ಕುದಿಸಿ ಮತ್ತು ನೀರು ಕಂದು ಬಣ್ಣಕ್ಕೆ ತಿರುಗುವ ತನಕ ಅದು ಕುದಿಯುತ್ತಾ ಇರಲಿ. ಇದನ್ನು ತಂಪಾಗಲು ಬಿಡಿ ಮತ್ತು ಹತ್ತಿಯ ಉಂಡೆ ಮಾಡಿ ಅದನ್ನು ಈ ನೀರಿನಲ್ಲಿ ಮುಳುಗಿಸಿ ನಿಮ್ಮ ಮುಖ ಅಥವಾ ಯಾವ ಭಾಗಕ್ಕೆ ಚಿಕಿತ್ಸೆ ನೀಡಲು ಬಯಸುತ್ತೀರೋ ಅಲ್ಲಿಗೆ ಹಚ್ಚಿ. ನಿಮ್ಮ ಮುಖಕ್ಕೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಹಾಗೆ ಇರಲಿ. ಇದರ ಬಳಿಕ ತಂಪಾದ ನೀರಿನಲ್ಲಿ ಮುಖ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡುವುದರಿಂದ ಫಲಿತಾಂಶ ಪಡೆಯಬಹುದು.

English summary

How To Stop Hair Loss with Guava Leaves at Home in 20 Minutes ...

Guava leaves have taken the internet by storm with claims of it being a miracle solution for hair loss. It is also gaining popularity as a hair thickening ingredient that promotes rapid hair growth. But how exactly are guava leaves beneficial for your hair? Guava leaves have analgesic, anti-inflammatory, antimicrobial, and antioxidant properties that have made it a popular ingredient for maintaining scalp health
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more