Just In
Don't Miss
- Technology
ವಾಟ್ಸಪ್ ಸ್ಟೇಟಸ್ಗಳನ್ನು ಸುಲಭವಾಗಿ ಸೇವ್ ಮಾಡುವುದು ಹೇಗೆ ಗೊತ್ತಾ?
- News
ಸಿದ್ದರಾಮಯ್ಯ ಅನಾರೋಗ್ಯ, ವಾಟಾಳ್ ನಾಗರಾಜ ಏನಂದ್ರು?
- Automobiles
ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್ಟಿಆರ್ 1200 ಬೈಕ್
- Finance
ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳಬಹುದಾದ ಉಳಿತಾಯ ಖಾತೆಗಳು
- Sports
ಕರ್ನಾಟಕ vs ತಮಿಳುನಾಡು ರಣಜಿ; ಟೀಮ್ ಇಂಡಿಯಾ ಆಟಗಾರರ ಮಧ್ಯೆ ಕಿತ್ತಾಟ
- Movies
ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ ಗಾಯಕಿ ರಾನು ಮೊಂಡಲ್
- Travel
ವನ್ಯಜೀವಿ ಫೋಟೋಗ್ರಫಿ ಗೆ ಮಹಾರಾಷ್ಟ್ರದಲ್ಲಿರುವ ಈ ಪಕ್ಷಿಧಾಮಗಳೇ ಬೆಸ್ಟ್
- Education
ಯುಪಿಎಸ್ಸಿ ಎನ್ಡಿಎ ಮತ್ತು ಎನ್ಎ II ಪರೀಕ್ಷಾ ಫಲಿತಾಂಶ ಪ್ರಕಟ
ಕೂದಲುದುರುವುದು ತಡೆಯಬೇಕಾ? ಹಾಗಿದ್ದರೆ ಸೀಬೆ ಎಲೆಯನ್ನು ಬಳಸಿ
ಕೂದಲು ಚಿಕ್ಕದಾಗಿರಲಿ ಅಥವಾ ಉದ್ದವಾಗಿರಲಿ ಸೊಂಪಾದ ಕೇಶರಾಶಿ ಇರಬೇಕೆಂದು ಪ್ರತಿಯೊಬ್ಬ ಮಹಿಳೆ ಬಯಸುತ್ತಾಳೆ. ವಯಸ್ಸಾದಂತೆ ಕೂದಲು ಉದುರುವುದು, ಬಣ್ಣ ಕಳೆದುಕೊಳ್ಳುವುದು ಹಾಗೂ ಒರಟಾದ ಕೂದಲು ಹುಟ್ಟುವುದು ಸಹಜ. ಹಾಗಂತ ಅವುಗಳ ಆರೈಕೆ ಮಾಡದೇ ಇರಲು ಸಾಧ್ಯವಿಲ್ಲ. ಸೌಂದರ್ಯಕ್ಕೆ ಮೆರಗು ನೀಡುವ ಕೇಶಗಳ ರಕ್ಷಣೆಗೆ ಅನೇಕ ಔಷಧಿ ಹಾಗೂ ತೈಲಗಳಿವೆ. ಇವು ಕೂದಲುಗಳನ್ನು ಸಂರಕ್ಷಿಸುತ್ತವೆಯಾದರೂ ಅಡ್ಡ ಪರಿಣಾಮಗಳೇ ಹೆಚ್ಚು.
ಆರೋಗ್ಯ ವರ್ಧಿಸುವ ಸೀಬೆಹಣ್ಣು ಎಲೆಗಳ ಅದ್ಭುತ ಚಿಕಿತ್ಸಾ ಗುಣಗಳು
ಕೇಶರಾಶಿಗೆ ಆರೈಕೆ ನೀಡುವ ಒಂದು ಉತ್ತಮ ಮನೆ ಔಷಧ ಎಂದರೆ ಸೀಬೆ ಎಲೆಗಳ ಲೇಪನ. ನೈಸರ್ಗಿಕವಾಗಿಯೇ ಹೆಚ್ಚು ಪೋಷಕಾಂಶ ಹೊಂದಿರುವ ಸೀಬೆ ಎಲೆ ಕೇಶರಾಶಿಯನ್ನು ಸಂರಕ್ಷಿಸುತ್ತದೆ. ಕೆಲವು ಸಂಶೋಧನೆಯ ಪ್ರಕಾರ ಉರಿಯೂತ, ಕೂದಲುದುರುವುದು, ಕೇಶಗಳ ಉದುರುವಿಕೆಯನ್ನು ತಡೆಯುತ್ತದೆ.
ಹೌದಾ! ಹಾಗಿದ್ದರೆ ಇನ್ಯಾವ ಉಪಯೋಗಗಳನ್ನು ಪಡೆಯಬಹುದು? ಕೇಶಗಳ ರಕ್ಷಣೆಯಲ್ಲಿ ಸೀಬೆ ಎಲೆಗಳ ಪಾತ್ರವೇನು ಎಂಬುದನ್ನು ಈ ಮುಂದೆ ವಿವರಿಸಲಾಗಿದೆ... ಕೂದಲುದುರುವಿಕೆಯನ್ನು ತಡೆದು ಅಧಿಕ ಪ್ರಮಾಣದಲ್ಲಿ ಕೂದಲು ಹುಟ್ಟಲು ಸಹಾಯ ಮಾಡುತ್ತದೆ ಸೀಬೆ ಎಲೆ. ಮನೆಯಲ್ಲಿಯೇ ಇದರ ಔಷಧ ತಯಾರಿಸುವುದು ಹೇಗೆ? ಎನ್ನುವ ವಿವರಣೆ ಇಲ್ಲಿದೆ ನೋಡಿ...

ತಯಾರಿಸಲು ಬೇಕಾಗುವ ಸಾಮಾಗ್ರಿಗಳು
* ಒಂದು ಮುಷ್ಟಿ ಸೀಬೆ ಎಲೆಗಳು
* ಒಂದು ಲೀಟರ್ ನೀರು
* ಕುದಿಸಲೊಂದು ಪಾತ್ರೆ
* ಜರಡಿ

ಮಾಡುವ ವಿಧಾನ
* ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಲು ಇರಿಸಿ.
* ನೀರು ಕುದಿಯಲಾರಂಬಿಸಿದ ನಂತರ ಸೀಬೆ ಎಲೆಯನ್ನು ಆ ಪಾತ್ರೆಗೆ ಹಾಕಿ.
* ಹಾಗೆಯೇ 20 ನಿಮಿಷಗಳ ಕಾಲ ನೀರು ಕುದಿಯುವುದನ್ನು ಮುಂದುವರಿಸಿ.
* ನಂತರ ನೀರು ಮತ್ತು ಎಲೆಯ ಮಿಶ್ರಣವನ್ನು ತಣ್ಣಗಾಗಲು ಬಿಡಿ.

ಬಳಸುವುದು ಹೇಗೆ?
1. ಕೂದಲಿಗೆ ಕಂಡೀಷನರ್ ಬಳಸದೆಯೇ ಶಾಂಪೂ ಬಳಸಿ ಸ್ವಚ್ಛಗೊಳಿಸಿ.
2. ಕೇಶಗಳು ಸ್ವಲ್ಪ ಒಣಗಿದೆ ಎನ್ನುವಾಗ ತಯಾರಿಸಿಕೊಂಡ ಮಿಶ್ರಣವನ್ನು ಅನ್ವಯಿಸಿ.
3. ನೆತ್ತಿಯ ಮೇಲೆ ಮತ್ತು ಕೂದಲುಗಳ ಬುಡಕ್ಕೆ ಮಿಶ್ರಣವನ್ನು ಲೇಪಿಸಿ ಮಸಾಜ್ ಮಾಡಿ.
4. ನಂತರ 2 ಗಂಟೆಗಳ ಕಾಲ ಹಾಗೇ ಇರಲು ಬಿಡಿ
5. ಬಳಿಕ ತಣ್ಣೀರಿನಲ್ಲಿ ಕೂದಲನ್ನು ತೊಳೆಯಿರಿ.

ಎಷ್ಟು ಬಾರಿ ಅನ್ವಯಿಸಬೇಕು?
ಕೂದಲು ತುಂಬಾ ಉದುರುತ್ತಿದ್ದರೆ ಸೀಬೆ ಎಲೆಯ ಮಿಶ್ರಣವನ್ನು ವಾರದಲ್ಲಿ ಮೂರು ಬಾರಿ ಬಳಸಿ. ಕೇವಲ ಕೂದಲುಗಳ ಬೆಳವಣಿಗೆ ಅಥವಾ ಹೊಳೆಯುವಿಕೆಯ ಉದ್ದೇಶವಾಗಿದ್ದರೆ ವಾರದಲ್ಲಿ ಎರಡುಬಾರಿ ಬಳಸಿ.
ಸೀಬೆ ಎಲೆಯಲ್ಲಿದೆ ಸೀಮಾತೀತ ಆರೋಗ್ಯ ಗುಣಗಳು

ಮುನ್ನೆಚ್ಚರಿಕೆ
* ಮಿಶ್ರಣವನ್ನು ಅನ್ವಯಿಸುವ ಮುಂಚೆ ತಣ್ಣಗಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
* ಬಿಸಿ ನೀರಿನಿಂದ ಕೂದಲನ್ನು ತೊಳೆಯಬಾರದು. ಇದು ನೆತ್ತಿ ಮತ್ತು ಕೂದಲನ್ನು ಒಣಗಿಸುತ್ತದೆ.

ಇತರ ಉಪಯೋಗಗಳು
1. ಇದರಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುವುದರಿಂದ ಕೂದಲು ವೇಗವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ.
2. ರೋಗ ನಿರೋಧಕ ಶಕ್ತಿ ಹೆಚ್ಚಿದೆ.
3. ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ರಕ್ಷಣೆ ನೀಡುತ್ತದೆ.
4. ಇದರ ಮಸಾಜ್ ಮಾಡುವುದರಿಂದ ರಕ್ತದೊತ್ತಡವು ಸುಧಾರಿಸುತ್ತದೆ.
5. ಕೂದಲನ್ನು ಮೃದು ಹಾಗೂ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.