ಸುಕ್ಕಾದ ತ್ವಚೆಯೇ? ಚಿಂತೆ ಬೇಡ, ಇಲ್ಲಿದೆ ನೋಡಿ ’ಹೋಮ್ ಮೇಡ್ ಸ್ಕಿನ್ ಪ್ಯಾಕ್'

By: Anuradha Yogesh
Subscribe to Boldsky

ವಯಸ್ಸು 40 ದಾಟುತ್ತಿದ್ದಂತೆಯೇ ಎಲ್ಲರನ್ನೂ ಕಾಡುವ ಸಮಸ್ಯೆಯೆಂದರೆ ತ್ವಚೆಯ ಮೇಲಿನ ಸುಕ್ಕುಗಳು, ಮುಖದ ಕಾಂತಿ ಇಂಗಿದಂತಾಗುವದು. ನಮ್ಮೆಲ್ಲರಿಗೂ ಮಾಧುರಿ ದೀಕ್ಷಿತ್, ಶ್ರೀದೇವಿಯರ ತರಹ ಯಾವತ್ತೂ ಯೌವ್ವನದಿಂದ ಕಂಗೊಳಿಸುವ ಆಸೆಯಲ್ಲವೆ? ತಪ್ಪೇನಿಲ್ಲ! ಆದರೆ ಅದಕ್ಕೆ ಸ್ವಲ್ಪ ಪ್ರಯತ್ನವೂ ಬೇಕು.

Skin Tightening Pack Recipes

ಸ್ವಲ್ಪ ವಯಸ್ಸಾದಂತೆ ಕಂಡರೂ ಸಾಕು ತುಂಬ ನಿರುತ್ಸಾಹ ಮೂಡುತ್ತದೆ. ಪದೇ ಪದೇ ಬ್ಯೂಟಿ ಪಾರ್ಲರ್‌ಗೆ ಹೋಗಿ ಆ ಕೆಟ್ಟ ರಾಸಾಯನಿಕಗಳ ಮೇಲೆ ದುಡ್ಡು ಸುರಿಯುವದಕ್ಕೆ ಹೊಟ್ಟೆ ಉರಿಯುತ್ತದೆಯಲ್ಲವೆ? ಚಿಂತೆ ಬೇಡ. ಮನೆಯಲ್ಲೇ ನೀವು ಸುಲಭವಾಗಿ ಸ್ಕಿನ್ ಪ್ಯಾಕ್ ಮಾಡಿ ಸೌಂದರ್ಯ ಮತ್ತು ಯೌವ್ವನವನ್ನು ಕಾಪಾಡಿಕೊಳ್ಳಬಹುದು. ನಂಬಲಾಗುತ್ತಿಲ್ಲವೆ? ಮುಂದೆ ಓದಿ ನೋಡಿ.

ಸ್ಕಿನ್ ಪ್ಯಾಕ್ ರೆಸಿಪಿ

ನೀವು ಈಗಾಗಲೆ ಉಪಯೋಗಿಸುವ ಸ್ಕಿನ್ ಪ್ಯಾಕ್‌ನಿಂದ ನಿಮಗೆ ಲಾಭವಾಗುತ್ತಿದ್ದರೆ, ಅದನ್ನು ಮುಂದುವರೆಸಿ. ಅದರ ಜೊತೆಗೆ ಈ ಕೆಳಗೆ ಹೇಳಿರುವ ಸ್ಕಿನ್ ಪ್ಯಾಕ್ ರೆಸಿಪಿ ಪ್ರಯತ್ನಿಸಿ ನೋಡಿ. ನೀವು ಮಾಯಿಶ್ಚರೈಸರ್ ಹಚ್ಚುವದರ ಜೊತೆಗೆ ಆಗಾಗ ಸ್ಕಿನ್ ಟೋನ್ ಮಾಡಿಕೊಳ್ಳುತ್ತಿದ್ದರೆ ಸಾಕು, ಹನ್ನೆರಡು ತಿಂಗಳೂ ಯೌವ್ವನದಿಂದ ಕಂಗೊಳಿಸುತ್ತೀರ.

Skin Tightening Pack Recipes

ಬೇಕಾದ ಸಾಮಗ್ರಿಗಳು:

1/2 ಕಪ್ ಬ್ಲೂಬೆರಿ

1/2 ಕಪ್ ಸ್ಟ್ರಾಬೆರಿ

ಸುಲಿದು ಸಣ್ಣದಾಗಿ ಕತ್ತರಿಸಿದ ಕಿವಿ ಹಣ್ಣು.

1/2 ಕಪ್ ದಾಳಿಂಬೆ ಬೀಜಗಳು.

1/2 ಕಪ್ ಕಿತ್ತಳೆ ಹಣ್ಣಿನ ರಸ

1/2ಟೇಬಲ್ ಸ್ಪೂನ್‌ನಷ್ಟು ವಾಲ್‌ನಟ್(ಅಕ್ರೋಟುಕಾಯಿ) ಪುಡಿ.

Skin Tightening Pack Recipes

ವಿಧಾನ

1. ಮೊದಲಿಗೆ ಮಿಕ್ಸರ್‌ನಲ್ಲಿ ಬ್ಲೂಬೆರಿ, ಸ್ಟ್ರಾಬೆರಿ, ಕಿವಿ ಮತ್ತು ದಾಳಿಂಬೆ ಬೀಜಗಳನ್ನು ಹಾಕಿ ಸಣ್ಣಗೆ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ.

2. ಇದನ್ನು ಒಂದು ಬಟ್ಟಲಿನಲ್ಲಿ ಶೇಖರಣೆ ಮಾಡಿಕೊಳ್ಳಿ.

3. ಬೇಕಾದಷ್ಟು ಮಾತ್ರ ಕಿತ್ತಳೆ ರಸ ಹಾಕಿ ಪೇಸ್ಟನ್ನು ತೆಳು ಮಾಡಿಕೊಳ್ಳಿ.

Skin Tightening Pack Recipes

4. ಸ್ವಲ್ಪ ವಾಲ್‌ನಟ್ ಪುಡಿಯನ್ನು ಬೆರೆಸಿದರೆ ಸಾಕು ನಿಮ್ಮ 'ಹೋಮ್ ಮೇಡ್ ಸ್ಕಿನ್ ಪ್ಯಾಕ್' ರೆಡಿ! ಮುಖದ ತ್ವಚೆಗೆ ನಿಧಾನಕ್ಕೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಹದಿನೈದು ದಿನಕ್ಕೊಮ್ಮೆ ಇಷ್ಟು ಮಾಡಿಕೊಂದರೆ ಸಾಕು ನಿಮ್ಮ ಯೌವ್ವನ ಇಮ್ಮಡಿಸುವದರಲ್ಲಿ ಸಂಶಯವೇ ಇಲ್ಲ, ಅಷ್ಟೇ ಅಲ್ಲ, ನಿಮ್ಮ ಹಣದ ಉಳಿತಾಯವೂ ಆಗುತ್ತದೆ.

English summary

Homemade Skin Tightening Pack Recipes For Those With Ageing Skin

Ageing skin first shows signs like fine lines, wrinkles and then it slowly starts to sag. This entire process of skin ageing demoralizes men and women. They do not want to continue this skin texture change on their body. To ensure that men and women, despite ageing, maintain a tight and firm skin texture, it is important to do the right skin care to-dos at the right time.
Story first published: Thursday, October 5, 2017, 23:20 [IST]
Subscribe Newsletter