Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕೂದಲು ಉದ್ದ ಹಾಗೂ ದಪ್ಪವಾಗಿ ಬೆಳೆಯಬೇಕೆ? ಆರೈಕೆ ಹೀಗಿರಲಿ...
ಆಧುನಿಕತೆಗೆ ತೆರೆದುಕೊಂಡಂತೆ ನಮ್ಮ ಜೀವನ ಶೈಲಿ ಹಾಗೂ ಉಡುಗೆ ತೊಡುಗೆಯಲ್ಲೂ ಮಹತ್ತರ ಬದಲಾವಣೆಗಳನ್ನು ಕಾಣಬಹುದು. ಅದರಂತೆಯೇ ವಿಪರೀತವಾದ ಕೇಶವಿನ್ಯಾಸ, ಕೇಶದ ಬಣ್ಣದ ಬದಲಾವಣೆ, ಧೂಳು, ಮಾಲಿನ್ಯ ಹಾಗೂ ವಂಶಾವಳಿ ಸೇರಿದಂತೆ ಇನ್ನಿತರ ಕಾರಣಗಳಿಂದ ಕೇಶ ರಾಶಿಯು ಅನಾರೋಗ್ಯಕ್ಕೆ ಒಳಗಾಗುತ್ತದೆ. ಅಕಾಲಿಕವಾಗಿ ಉದುರುವುದು ಮತ್ತು ಬಣ್ಣವನ್ನು ಕಳೆದುಕೊಳ್ಳುವುದು, ಒರಟಾಗುವುದು ಹಾಗೂ ತುಂಡಾಗುವ ಸಮಸ್ಯೆಗಳು ಕಾಡುತ್ತವೆ.
ಇಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಅನೇಕ ಬಗೆಯ ಸುಧಾರಿತ ಚಿಕಿತ್ಸೆಗಳು ಹಾಗೂ ಆರೈಕೆಗಳು ದುಬಾರಿ ಬೆಲೆಗೆ ಸಿಗುತ್ತದೆ. ಆದರೆ ಅವುಗಳಿಂದಲೂ ಕೆಲವು ಹಾನಿಕಾರಕ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಮನೆಯಲ್ಲಿಯೇ ಕೆಲವು ನೈಸರ್ಗಿಕ ಉತ್ಪನ್ನಗಳಿಂದ ಸುಲಭ ಆರೈಕೆಯನ್ನು ಪಡೆಯಬಹುದು. ಇದರಿಂದ ಕೂದಲಿಗೆ ಯಾವುದೇ ಅಡ್ಡ ಪರಿಣಾಮ ಉಂಟಾಗದು. ಬದಲಿಗೆ ಸದೃಢ ಹಾಗೂ ದಪ್ಪವಾದ ಕೂದಲನ್ನು ಪಡೆಯಬಹುದು. ನಿಮಗೆ ಅಥವಾ ನಿಮ್ಮವರಿಗೆ ಕೇಶರಾಶಿಯ ಸಮಸ್ಯೆಯಿದ್ದರೆ ಈ ಕೆಳಗಿನ ನೈಸರ್ಗಿಕ ಆರೈಕೆಯನ್ನು ಪಡೆದುಕೊಳ್ಳಬಹುದು. ನಿಮಗಾಗಿಯೇ ಬೋಲ್ಡ್ ಸ್ಕೈ ಸಂಕ್ಷಿಪ್ತವಾದ ವಿವರಣೆಯನ್ನು ತೆರೆದಿಡುತ್ತಿದೆ..

ಮೊಟ್ಟೆ+ ತೆಂಗಿನ ಎಣ್ಣೆ
ಒಂದು ಪಾತ್ರೆಯಲ್ಲಿ ಮೊಟ್ಟೆಯನ್ನು ಮತ್ತು 2-3 ಟೇಬಲ್ ಚಮಚ ತೆಂಗಿನೆಣ್ಣೆಯನ್ನು ಹಾಕಿ ಬೀಟ್ ಮಾಡಿ.
ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ. ಒಂದು ಗಂಟೆಯ ಬಳಿಕ ಶ್ಯಾಂಪುಗಳ ಬಳಕೆಯಿಂದ ಕೇಶರಾಶಿಯನ್ನು ಸ್ವಚ್ಛಗೊಳಿಸಿ.
ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಬೆಣ್ಣೆ ಹಣ್ಣು/ಆವಕಾಡೊ+ ಗ್ರೀನ್ ಟೀ ಪ್ಯಾಕ್
ಒಂದು ಕಪ್ ಗ್ರೀನ್ ಟೀಗೆ ಬೆಣ್ಣೆಹಣ್ಣಿನ ತಿರುಳನ್ನು ಸೇರಿಸಿ, ಮಿಶ್ರಗೊಳಿಸಿ.
ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ. ಒಂದು ಗಂಟೆಯ ಬಳಿಕ ಶಾಂಪೂಗಳ ಬಳಕೆಯಿಂದ ಕೇಶರಾಶಿಯನ್ನು ಸ್ವಚ್ಛಗೊಳಿಸಿ.
ವಾರದಲ್ಲಿ ಒಮ್ಮೆ ಈ ವಿಧಾನವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಮೇಯನೆಸ್+ ನಿಂಬೆ ರಸ
ಒಂದು ಬೌಲ್‍ನಲ್ಲಿ 2-3 ಟೇಬಲ್ ಚಮಚ ಮೇಯನೆಸ್ ಮತ್ತು 2 ಟೇಬಲ್ ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.
ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ. ಒಂದು ಗಂಟೆಯ ಬಳಿಕ ಶಾಂಪೂಗಳ ಬಳಕೆಯಿಂದ ಕೇಶರಾಶಿಯನ್ನು ಸ್ವಚ್ಛಗೊಳಿಸಿ.
ವಾರದಲ್ಲಿ ಒಮ್ಮೆ ಈ ವಿಧಾನವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಆಲಿವ್ ಎಣ್ಣೆ+ ಬಾಳೆಹಣ್ಣು
ಒಂದು ಬೌಲ್‍ನಲ್ಲಿ 3 ಟೇಬಲ್ ಚಮಚ ಆಲಿವ್ ಎಣ್ಣೆ ಹಾಗೂ 5-6 ಟೇಬಲ್ ಚಮಚ ಕಿವುಚಿದ ಬಾಳೆಹಣ್ಣನ್ನು ಸೇರಿಸಿ, ಮಿಶ್ರಗೊಳಿಸಿ.
ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ. 40 ನಿಮಿಷಗಳ ಬಳಿಕ ಮೃದುವಾದ ಶಾಂಪೂಗಳ ಬಳಕೆಯಿಂದ ಕೇಶರಾಶಿಯನ್ನು ಸ್ವಚ್ಛಗೊಳಿಸಿ.
ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಬಾದಾಮಿ ಎಣ್ಣೆ+ ನೆಲ್ಲಿಕಾಯಿ ರಸ
ಒಂದು ಬೌಲ್‍ನಲ್ಲಿ 2 ಟೇಬಲ್ ಚಮಚ ಬಾದಾಮಿ ಎಣ್ಣೆ ಮತ್ತು 1 ಟೇಬಲ್ ಚಮಚ ನೆಲ್ಲಿಕಾಯಿ ರಸವನ್ನು ಸೇರಿಸಿ, ಮಿಶ್ರಗೊಳಿಸಿ.
ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ. 30 ನಿಮಿಷಗಳ ಬಳಿಕ ಮೃದುವಾದ ಶಾಂಪುಗಳ ಬಳಕೆಯಿಂದ ಕೇಶರಾಶಿಯನ್ನು ಸ್ವಚ್ಛಗೊಳಿಸಿ.
ತಿಂಗಳಲ್ಲಿ ಎರಡು ಬಾರಿ ಈ ವಿಧಾನವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ತೆಂಗಿನ ಹಾಲು+ಮೆಂತೆ ಬೀಜ
ಒಂದು ಬೌಲ್‍ನಲ್ಲಿ 2 ಟೇಬಲ್ ಚಮಚ ತೆಂಗಿನ ಹಾಲು ಹಾಗೂ 1 ಟೀಚಮಚ ಮೆಂತೆ ಬೀಜದ ಪುಡಿಯನ್ನು ಸೇರಿಸಿ ಮಿಶ್ರಗೊಳಿಸಿ.
ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ. 40 ನಿಮಿಷಗಳ ಬಳಿಕ ಮೃದುವಾದ ಶ್ಯಾಂಪುಗಳ ಬಳಕೆಯಿಂದ ಕೇಶರಾಶಿಯನ್ನು ಸ್ವಚ್ಛಗೊಳಿಸಿ.
ಹದಿನೈದು ದಿನಕ್ಕೊಮ್ಮೆ ಈ ವಿಧಾನವನ್ನು ಅನ್ವಯಿಸುವುದರಿಂದ ಉದ್ದ ಹಾಗೂ ದಪ್ಪವಾದ ಕೂದಲನ್ನು ಪಡೆಯಬಹುದು.

ಮೊಸರು+ಜೇನುತುಪ್ಪ
ಒಂದು ಬೌಲ್‍ನಲ್ಲಿ 2 ಟೇಬಲ್ ಚಮಚ ಮೊಸರು ಮತ್ತು 1 ಟೀಚಮಚ ಜೇನುತುಪ್ಪವನ್ನು ಸೇರಿಸಿ, ಮಿಶ್ರಗೊಳಿಸಿ.
ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ. 40 ನಿಮಿಷಗಳ ಬಳಿಕ ಮೃದುವಾದ ಶ್ಯಾಂಪುಗಳ ಬಳಕೆಯಿಂದ ಕೇಶರಾಶಿಯನ್ನು ಸ್ವಚ್ಛಗೊಳಿಸಿ.
ವಾರಕ್ಕೊಮ್ಮೆ ಈ ವಿಧಾನವನ್ನು ಅನ್ವಯಿಸುವುದರಿಂದ ಆರೋಗ್ಯಯುತ ಕೇಶರಾಶಿಯನ್ನು ಪಡೆಯಬಹುದು.

ಹಾಲಿನ ಕೆನೆ+ ಅಲೋವೆರಾ
2 ಟೀ ಚಮಚ ಹಾಲಿನ ಕೆನೆಗೆ 1 ಟೇಬಲ್ ಚಮಚ ಆಲೋವೆರಾ ಜೆಲ್ ಸೇರಿಸಿ, ಮಿಶ್ರಗೊಳಿಸಿ.
ಮಿಶ್ರಣವನ್ನು ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ. 40 ನಿಮಿಷಗಳ ಬಳಿಕ ಮೃದುವಾದ ಶಾಂಪುಗಳ ಬಳಕೆಯಿಂದ ಕೇಶರಾಶಿಯನ್ನು ಸ್ವಚ್ಛಗೊಳಿಸಿ.
ವಾರಕ್ಕೊಮ್ಮೆ ಈ ವಿಧಾನವನ್ನು ಅನ್ವಯಿಸುವುದರಿಂದ ಉದ್ದ ಹಾಗೂ ದಪ್ಪವಾದ ಕೂದಲನ್ನು ಪಡೆಯಬಹುದು.



Click it and Unblock the Notifications











