For Quick Alerts
ALLOW NOTIFICATIONS  
For Daily Alerts

  ಕೂದಲು ಕಪ್ಪಾಗಿ, ಉದ್ದವಾಗಿ ಬೆಳೆಯಬೇಕೆ? ಈ ಎಣ್ಣೆಗಳನ್ನು ಬಳಸಿ ನೋಡಿ...

  By Deepu
  |

  ಪ್ರತಿಯೊಬ್ಬರಿಗೂ ಸೌಂದರ್ಯವೆನ್ನುವುದು ದೇವರು ಕೊಟ್ಟಿರುವ ವರ. ಎಲ್ಲರಲ್ಲೂ ಒಂದೇ ರೀತಿಯ ಸೌಂದರ್ಯವಿರುವುದಿಲ್ಲ. ದೇಹದ ಪ್ರತಿಯೊಂದು ಅಂಗವು ಎಲ್ಲಾ ರೀತಿಯ ಗುಣಮಟ್ಟವನ್ನು ಹೊಂದಿದ್ದರೆ ಅದನ್ನು ಸೌಂದರ್ಯವೆನ್ನಬಹುದು. ಸುಂದರವಾಗಿ ಕಾಣಲು ಎಲ್ಲರೂ ಬಯಸುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಇದು ಸಾಧ್ಯವಾಗಲ್ಲ. ಯಾಕೆಂದರೆ ಇದಕ್ಕೆ ಕಠಿಣ ಶ್ರಮ ಬೇಕಾಗುವುದು.

  ಸೌಂದರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಕೇಶರಾಶಿಯ ಆರೈಕೆ ಮಾಡಲು ಕಷ್ಟವಾಗುತ್ತಿರುವ ಕಾರಣದಿಂದಲೇ ಇಂದಿನ ದಿನಗಳಲ್ಲಿ ಹೆಚ್ಚಿನವರು ಕೂದಲನ್ನು ಕತ್ತರಿಸಿಕೊಂಡು ಚಿಕ್ಕದಾಗಿಸಿಕೊಳ್ಳುತ್ತಾ ಇದ್ದಾರೆ. ಸುಂದರವಾಗಿರುವ ಉದ್ದಗಿನ ಕೂದಲು ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವುದು. ಸುಂದರವಾಗಿರುವ ಕೂದಲು ಬೇಕಾದರೆ ಅದಕ್ಕೆ ಪರಿಶ್ರಮ ಬೇಕಾಗುತ್ತದೆ. 

  ಕೂದಲಿನ ಸಮಸ್ಯೆಗೆ ಶೀಘ್ರ ಪರಿಹಾರ: ಕಡಿಮೆ ಖರ್ಚು-ಅಧಿಕ ಲಾಭ!

  ಅದೇ ರೀತಿ ಒಳ್ಳೆಯ ಆರೈಕೆಯೂ ಬೇಕಾಗುವುದು. ಹೊರಗಿನ ಕಲುಷಿತ ವಾತಾವರಣದಿಂದ ಕೂದಲನ್ನು ರಕ್ಷಿಸಿಕೊಳ್ಳುವುದು ಕೂಡ ಅತೀ ಅಗತ್ಯವಾಗಿದೆ. ಧೂಳು ಹಾಗೂ ಕಲುಷಿತ ವಾತಾವರಣದಿಂದಾಗಿ ಕೂದಲು ಅಕಾಲಿಕವಾಗಿ ಬಿಳಿಯಾಗುವುದು, ನಿಸ್ತೇಜವಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಕೂದಲಿನ ಆರೈಕೆಯಲ್ಲಿ ಸರಿಯಾದ ತೈಲವನ್ನು ಆಯ್ಕೆ ಮಾಡುವುದು ಪ್ರಮುಖವಾಗಿದೆ. ಮನೆಯಲ್ಲೇ ತಯಾರಿಸಿದ ಎಣ್ಣೆಯನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಬಹುದು. ಇದರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ವಿವರವಾಗಿ ಹೇಳಿಕೊಡಲಿದೆ, ಮುಂದೆ ಓದಿ...  

  ಎಳ್ಳೆಣ್ಣೆ

  ಎಳ್ಳೆಣ್ಣೆ

  ನೀರಿನಂತೆ ತೆಳ್ಳಗಿರುವ ಎಳ್ಳೆಣ್ಣೆ ವಿವಿಧ ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರ ಜಾರುವಿಕೆಯ ಗುಣದ ಕಾರಣ ಹಿಂದಿನ ಕಾಲದಿಂದಲೂ ಕೀಲುಗಳಿಗೆ ಜಾರುಕವಾಗಿ ಬಳಸಲ್ಪಡುತ್ತಾ ಬರಲಾಗಿದೆ. ಗಾಯಗಳನ್ನು ಶೀಘ್ರವಾಗಿ ಮಾಗಿಸುವ ಗುಣದ ಕಾರಣ ಇದನ್ನು ಗಾಯಗಳಿಗೆ

  ಹಚ್ಚಲು ಉಪಯೋಗಿಸಲಾಗುತ್ತದೆ. ಇದರ ಬಳಕೆ ಕೂದಲ ಆರೈಕೆಗೂ ಉಪಯುಕ್ತ ಎಂಬುದನ್ನುಸಂಶೋಧನೆಗಳು ಸಾಬೀತುಪಡಿಸಿವೆ. ಇದರಲ್ಲಿ ಉತ್ತಮ

  ಪ್ರಮಾಣದಲ್ಲಿರುವ ವಿಟಮಿನ್ ಇ. ಬಿ.ಕಾಂಪ್ಲೆಕ್ಸ್, ಕ್ಯಾಲ್ಸಿಯಂ, ಮೆಗ್ನೀಶಿಯಂ, ಗಂಧಕ ಮೊದಲಾದ ವಿವಿಧ ಖನಿಜಗಳು ಹಾಗೂ ಪ್ರೋಟೀನು ಸಹಾ ಇದೆ. ಕೂದಲ ಬುಡದಿಂದ ಪೋಷಣೆ ನೀಡುವ ಮೂಲಕ ಕೂದಲಿಗೆ ದೃಢತೆ ಮತ್ತು ಕಾಂತಿ ನೀಡುವ ಈ ಎಳ್ಳೆಣ್ಣೆ ಅದ್ಭುತಗಳನ್ನೇ ಸಾಧಿಸುತ್ತದೆ. ದಿನಾ ಎಳ್ಳೆಣ್ಣೆಯ ಬಳಕೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುವ ಮೂಲಕ ಕೂದಲ ಉದುರುವಿಕೆ ಬಹುವಾಗಿ ಕಡಿಮೆಯಾಗುತ್ತದೆ. ಎಳ್ಳೆಣ್ಣೆಯಿಂದ ನಯವಾಗಿ ತಲೆಯನ್ನು ಮಸಾಜ್ ಮಾಡುವ ಮೂಲಕ ಒತ್ತಡ ಬಿಡುಗಡೆಯಾಗಲು ಮತ್ತು ಸುಖವಾದ ಮತ್ತು ತಡೆರಹಿತವಾದ ನಿದ್ದೆ ಪಡೆಯಲೂ ಸಾಧ್ಯವಾಗುತ್ತದೆ.

  ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಎಳ್ಳೆಣ್ಣೆ ಬಹಳ ಒಳ್ಳೆಯದು.

  ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಎಳ್ಳೆಣ್ಣೆ ಬಹಳ ಒಳ್ಳೆಯದು.

  ತಲೆಯಲ್ಲಿ ಹೇನು ಮತ್ತು ಸೀರುಗಳಾಗಿದ್ದರೆ ಇದರ ಉಪಟಳ ಅನುಭವಿಸಿದವರಿಗೇ ಗೊತ್ತು. ಮಾರುಕಟ್ಟೆಯಲ್ಲಿ ದೊರಕುವ ಹೇನು ನಿವಾರಕ ದ್ರಾವಣಗಳು ಹೇನು ನಿವಾರಿಸಿದರೂ ತಲೆಯ ಚರ್ಮ ಮತ್ತು ಕೂದಲಿಗೆ ಹಾನಿಯುಂಟುಮಾಡಬಹುದು. ಬದಲಿಗೆ ಎಳ್ಳೆಣ್ಣೆ ಮತ್ತು ಇತರ ಅವಶ್ಯಕ ತೈಲದ ಮಿಶ್ರಣ ಬಳಸಿದರೆ ಹೇನು ಮತ್ತು ಸೀರುಗಳು ನಾಶವಾಗುತ್ತವೆ. ಎಳ್ಳೆಣ್ಣೆಯ ಬ್ಯಾಕ್ಟೀರಿಯಾ ನಿವಾರಕಾ ಗುಣ ಮತ್ತು ಶಿಲೀಂಧ್ರ ನಿವಾರಕ ಗುಣ ಹೇನು ಸೀರುಗಳನ್ನು ತೊಡೆಯಲು ಸಮರ್ಥವಾಗಿವೆ. ಇದಕ್ಕಾಗಿ ಸಹಿಸಲು ಸಾಧ್ಯವಾಗುವಷ್ಟು ಎಳ್ಳೆಣ್ಣೆಯನ್ನು ಬಿಸಿಮಾಡಿ ತಲೆಗೂದಲಿಗೆ ಹೆಚ್ಚಿನ ಪ್ರಮಾಣದಲ್ಲಿ ಹಚ್ಚಬೇಕು, ಅಂದರೆ ಹೆಚ್ಚಾಗಿ ಕೆಳಗೆ ಸುರಿಯುವಷ್ಟು. ಸುಮಾರು ಅರ್ಧ ಘಂಟೆ ಬಿಟ್ಟು ಬಿಸಿನೀರಿನಿಂದ ಮತ್ತು ಶಾಂಪೂ ಬಳಸಿ ತೊಳೆದುಕೊಂದು ಚಿಕ್ಕ ಬಾಚಣಿಗೆ ಬಳಸಿ ಬಾಚಿಕೊಳ್ಳಿ. ಹೇನು ಸೀರುಗಳಷ್ಟೂ ಸತ್ತು ನಿವಾರಣೆಯಾಗುತ್ತವೆ.

  ಕರಿಬೇವಿನ ಎಲೆಗಳ ಎಣ್ಣೆ

  ಕರಿಬೇವಿನ ಎಲೆಗಳ ಎಣ್ಣೆ

  ಕರಿಬೇವಿನ ಎಲೆಗಳು ಭಾರತೀಯರು ಪ್ರತಿನಿತ್ಯವೂ ತಮ್ಮ ಅಡುಗೆಗಳಲ್ಲಿ ಕರಿಬೇವಿನ ಎಲೆಗಳನ್ನು ಬಳಸಿಕೊಳ್ಳುವುದು ಸಾಮಾನ್ಯ. ಆದರೆ ಇದು ತುಂಬಾ ಪರಿಣಾಮಕಾರಿ ಕೂದಲಿನ ಆರೈಕೆಯ ಸಾಮಗ್ರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

  1. ಒಂದು ಬಾಣಲೆಗೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆ ಹಾಕಿ. ಅದಕ್ಕೆ ಒಂದಷ್ಟು ಕರಿಬೇವಿನ ಎಲೆಗಳನ್ನು ಹಾಕಿಕೊಳ್ಳಿ. ಇದನ್ನು ಗ್ಯಾಸ್ಮೇಲಿಟ್ಟು ಕಡಿಮೆ ಬೆಂಕಿಯಲ್ಲಿ ಕಾಯಿಸಿರಿ. ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿದಾಗ ಎಣ್ಣೆಯನ್ನು ಗ್ಯಾಸ್ ನಿಂದ ಕೆಳಗಿಳಿಸಿ.

  2. ಇದನ್ನು ತಣ್ಣಗಾಗಲು ಬಿಡಿ.

  3. ಸೋಸಿಕೊಂಡ ಬಳಿಕ ಬಾಟಲಿಗೆ ಹಾಕಿ.

  4. ತೆಂಗಿನೆಣ್ಣೆಯನ್ನು ಪ್ರತಿನಿತ್ಯ ಬಳಸಬಹುದು. ಅದೇ ಸಾಸಿವೆ ಎಣ್ಣೆಯನ್ನು ಕೂದಲು ತೊಳೆಯುವ ಮೊದಲು ಬಳಸಿ. ದಿನನಿತ್ಯ ಬಳಸುವುದಾದರೆ ಸ್ವಲ್ಪ ಪ್ರಮಾಣದಲ್ಲಿ ಬಳಸಿ. ಯಾಕೆಂದರೆ ಇದರ ಘಾಟು ಹೆಚ್ಚಿರುತ್ತದೆ.

  5. ಕೂದಲು ತೊಳೆಯುವ ಮೊದಲು ಈ ಎಣ್ಣೆಯು ತಲೆಯಲ್ಲಿ ಸುಮಾರು 30ರಿಂದ ಒಂದು ಗಂಟೆ ಕಾಲ ಹೀರಿಕೊಳ್ಳಲು ಬಿಡಿ. ನಿಯಮಿತವಾಗಿ ಇದನ್ನು

  ಬಳಸಿಕೊಳ್ಳುವುದರಿಂದ ಕೂದಲು ಕಪ್ಪಾಗುವುದು ಮಾತ್ರವಲ್ಲದೆ ಒಳ್ಳೆಯ ರೀತಿಯಲ್ಲಿ ಬೆಳೆಯುವುದು.

  ಕಪ್ಪು ಕೂದಲಿನ ಆರೈಕೆಗೆ ಸಾಸಿವೆ ಎಣ್ಣೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ

  ಕಪ್ಪು ಕೂದಲಿನ ಆರೈಕೆಗೆ ಸಾಸಿವೆ ಎಣ್ಣೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ

  1. ಸಾಸಿವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದನ್ನು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿದರೆ ಅದರಿಂದ ಕೂದಲಿನ ಬುಡಗಳಿಗೆ ಶಕ್ತಿ ಸಿಗುವುದು.

  2. ಇದರ ಬಳಿಕ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಳ್ಳಿ.

  3. ಕೂದಲನ್ನು ಕಟ್ಟಿಕೊಳ್ಳಿ ಮತ್ತು ಸುಮಾರು ಅರ್ಧದಿಂದ ಒಂದು ಗಂಟೆ ಕಾಲ ತಲೆಬುರುಡೆಯು ಎಣ್ಣೆಯನ್ನು ಹೀರಿಕೊಳ್ಳಲು ಬಿಡಿ. ಇದರ ಬಳಿಕ ಕೂದಲನ್ನು ಶಿಖಾಕಾಯಿ ಅಥವಾ ಶಾಂಪೂವಿನಿಂದ ತೊಳೆಯಿರಿ.

  4. ಕೂದಲನ್ನು ತೊಳೆಯುವ ವೇಳೆ ವಾರದಲ್ಲಿ ಎರಡು ಅಥವಾ ಮೂರು ಸಲ ಈ ಕ್ರಮವನ್ನು ಪಾಲಿಸಿಕೊಂಡು ಹೋಗಿ.

  5. ಸಾಸಿವೆ ಎಣ್ಣೆಯನ್ನು ಬಿಸಿ ಮಾಡುವಾಗ ಅದಕ್ಕೆ ಕೆಲವು ಕರಿಮೆಣಸಿನ ಕಾಳುಗಳನ್ನು ಹಾಕಿಕೊಂಡರೆ ಅದರಿಂದ ಕೂದಲು ದೀರ್ಘ ಕಾಲದವರೆಗೆ ಎಣ್ಣೆಯನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ ಇದು ಶೀತಕ್ಕೂ ಒಳ್ಳೆಯದು. ಮೈಗ್ರೇನ್, ಅಸ್ತಮಾ ಮತ್ತು ಸಾಮಾನ್ಯ ಶೀತ ಇತ್ಯಾದಿಗಳಿಂದ ಬಳಲುವವರು ದೀರ್ಘ ಕಾಲದವರೆಗೆ ಎಣ್ಣೆಯನ್ನು ತಲೆಯಲ್ಲಿ ಇಟ್ಟುಕೊಳ್ಳಬಾರದು. ಹೊಳೆಯುವ ಕಪ್ಪಗಿನ ಕೂದಲಿಗೆ ಇದು ಅತ್ಯುತ್ತಮವಾಗಿರುವ ನೈಸರ್ಗಿಕ ಆರೈಕೆಯಾಗಿದೆ. ಇದು ದೇಹಕ್ಕೂ ತಂಪು ನೀಡುವುದು.

  ತೆಂಗಿನೆಣ್ಣೆ + ದಾಸವಾಳದ ಹೂವು

  ತೆಂಗಿನೆಣ್ಣೆ + ದಾಸವಾಳದ ಹೂವು

  ಒಂದು ಲೀಟರ್ ತೆಂಗಿನೆಣ್ಣೆಗೆ 10ರಷ್ಟು ದಾಸವಾಳದ ಎಲೆಗಳು ಹಾಗೂ ಹೂಗಳನ್ನು ಹಾಕಿಕೊಳ್ಳಿ. ಹೂಗಳು ಸಂಪೂರ್ಣವಾಗಿ ಸಂಕೋಚನಗೊಳ್ಳುವ ತನಕ ಇದನ್ನು ಬಿಸಿಲಿನಲ್ಲಿ ಇಡಿ. ಇದರ ಬಳಿಕ ಒಂದು ತವಾದಲ್ಲಿ ಎಣ್ಣೆ ಬಿಸಿ ಮಾಡಿ. ತಂಪು ಮಾಡಿಕೊಂಡ ಬಳಿಕ ಎರಡು ದಿನಕ್ಕೊಮ್ಮೆ ಇದನ್ನು ಬಳಸಿಕೊಳ್ಳಿ. ಈ ಎಣ್ಣೆಯು ಕೂದಲಿನ ಬಣ್ಣ ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು.

  ನೆಲ್ಲಿಕಾಯಿ ಬಳಸಿ ಮಾಡಿದ ಎಣ್ಣೆ

  ನೆಲ್ಲಿಕಾಯಿ ಬಳಸಿ ಮಾಡಿದ ಎಣ್ಣೆ

  ಸುಮಾರು ಹತ್ತರಷ್ಟು ನೆಲ್ಲಿಕಾಯಿಯನ್ನು ಒಂದು ಲೀಟರ್ ತೆಂಗಿನೆಣ್ಣೆಯಲ್ಲಿ ರಾತ್ರಿಯಿಡಿ ನೆನೆಸಿಡಿ. ಇದನ್ನು ಮರುದಿನ ಬಿಸಿ ಮಾಡಿ ಮತ್ತು ತಣ್ಣಗಾಗಲು ಬಿಡಿ. ವಾರದಲ್ಲಿ ಮೂರು ಸಲ ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. ನೆಲ್ಲಿಕಾಯಿಯು ಒಳ್ಳೆಯ ಶುದ್ಧೀಕರಣ ಮಾಡುವುದು ಮಾತ್ರವಲ್ಲದೆ ಕೂದಲಿಗೆ ಬಣ್ಣ ನೀಡುವುದು. ಇದು ಕೂದಲಿನ ಗುಣಮಟ್ಟ ಹೆಚ್ಚಿಸುವುದು.

  ದಾಸವಾಳದ ಹೂ, ಮೆಹಂದಿ ಎಲೆಗಳು, ಕರಿಬೇವಿನ ಎಲೆ

  ದಾಸವಾಳದ ಹೂ, ಮೆಹಂದಿ ಎಲೆಗಳು, ಕರಿಬೇವಿನ ಎಲೆ

  ದಾಸವಾಳದ ಹೂ, ಮೆಹಂದಿ ಎಲೆಗಳು, ಕರಿಬೇವಿನ ಎಲೆ, ನೀರಿನಲ್ಲಿ ನೆನೆಸಿಟ್ಟ ಗಸೆಗಸೆ, ಬೇವಿನ ಎಲೆಗಳು, ಮೆಂತೆ ಕಾಳುಗಳು. ಕೋಣೆಯ ವಾತಾವರಣದಲ್ಲಿ ಎಲ್ಲವೂ ಸರಿಯಾಗಿ ಒಣಗಿಸಿ. ಎಲ್ಲವನ್ನು ರುಬ್ಬಿಕೊಂಡು ಒಂದು ಮಾತ್ರೆಯಂತೆ ಮಾಡಿ. ಇದನ್ನು ತೆಂಗಿನೆಣ್ಣೆ ಮತ್ತು ಎಳ್ಳೆಣ್ಣೆಯ ಮಿಶ್ರಣದಲ್ಲಿ ನೆನೆಸಿ. ಇದು ಕೂದಲನ್ನು ಕಲ್ಮಶದಿಂದ ರಕ್ಷಿಸುವುದು. ಇದರಿಂದ ಕೂದಲು ಆರೋಗ್ಯವಾಗುವುದು.

  ಬಾದಾಮಿ ಎಣ್ಣೆ

  ಬಾದಾಮಿ ಎಣ್ಣೆ

  ಬಾದಾಮಿ ಎಣ್ಣೆಯನ್ನು ನೇರವಾಗಿ ಕೂದಲಿಗೆ ಹಚ್ಚಿಕೊಳ್ಳಬಹುದು. ಈ ಎಣ್ಣೆಯಲ್ಲಿ ಒಮೆಗಾ-6 ಕೊಬ್ಬಿನ ಆಮ್ಲವಿದೆ. ಈ ಆಮ್ಲ ತಲೆಯ ಚರ್ಮವನ್ನು ಪ್ರಚೋದಿಸಿ ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ಕೂದಲ ಬುಡದಿಂದ ಆರೋಗ್ಯಕರ ಕೂದಲು ಬೆಳೆಯಲು ನೆರವಾಗುತ್ತದೆ. ಜೊತೆಗೇ ಕೂದಲನ್ನು ಬುಡದಿಂದ ಬಲಪಡಿಸುವ ಕಾರಣ ತುದಿಯವರೆಗೂ ಕೂದಲು ಉತ್ತಮ ಪೋಷಣೆ ಪಡೆದು ಹೊಳಪು ಮತ್ತು ಬೆಳವಣಿಗೆ ಪಡೆಯುತ್ತದೆ. ಕೂದಲ ಬುಡಕ್ಕೆ ಹೆಚ್ಚಿನ ಪೋಷಕಾಂಶಗಳು ದೊರಕುವುದರಿಂದ ಉದುರುವುದು ಕಡಿಮೆಯಾಗಿ ಕೂದಲು ದಟ್ಟವಾಗಿ ಬೆಳೆಯಲು ನೆರವಾಗುತ್ತದೆ.

  ಹರಳೆಣ್ಣೆ

  ಹರಳೆಣ್ಣೆ

  ಹರಳೆಣ್ಣೆ ಮಸಾಜ್ ನಿಂದ ರಕ್ತ ಸಂಚಲನ ಹೆಚ್ಚಾಗಿ ಕೂದಲು ಗಟ್ಟಿಗೊಳ್ಳುತ್ತದೆ. ಆದರೆ ಈ ಎಣ್ಣೆಯನ್ನು ಸ್ವಲ್ಪವೇ ಬಳಸಬೇಕು. ಒಂದು ಚಮಚದಷ್ಟು ಹಚ್ಚಿಕೊಂಡರೆ ಸಾಕು. ಯಾಕಂದ್ರೆ ಇದು ಅತೀ ಹೆಚ್ಚು ಜಿಡ್ಡಿನಾಂಶ ಹೊಂದಿರುವ ಎಣ್ಣೆ.

  ಪುದೀನಾ ಎಣ್ಣೆ

  ಪುದೀನಾ ಎಣ್ಣೆ

  ಕೂದಲಿನ ಬೆಳವಣಿಗೆಗೆ ಮಾತ್ರ ಸಹಕಾರಿಯಾಗಿರದೇ ಕೂದಲಿನ ಬೆಳವಣಿಗೆಗೆ ಬೇಕಾದ ಅಂಶವಾಗಿರುವ ಆಲ್ಕಾಲೈನ್ ಫೋಸ್ಫಟೇಸ್ ಎಂಜೀಮ್‎ನ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಪುದೀನಾ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವುದು ಕೂದಲನ್ನು ದಪ್ಪವಾಗಿಸುವುದು ಮಾತ್ರವಲ್ಲದೆ ಕೂದಲ ಕೋಶಗಳ ಸಂಖ್ಯೆಯನ್ನು ವೃದ್ಧಿಸಿ ಕೂದಲಿನ ಕೋಶದ ಆಳವನ್ನು ಅಭಿವೃದ್ಧಿಪಡಿಸುತ್ತದೆ ಇದರಿಂದ ಕೂದಲಿನ ಬೆಳವಣಿಗೆ ನಡೆಯುತ್ತದೆ. ನಾಲ್ಕು ವಾರಗಳ ನಂತರ ಪಿಇಒ 92% ದಷ್ಟು ಕೂದಲಿನ ಬೆಳವಣಿಗೆಯನ್ನು ತೋರಿಸುತ್ತದೆ ಇದನ್ನು ಮಿನಾಕ್ಸಿಡಿಲ್‎ಗೆ ಹೋಲಿಸಿದಾಗ (ಆಂಡ್ರಾಜೆನೆಟಿಕ್ ಅಲೊಪೇಸಿಯಾ (ಬೊಕ್ಕತಲೆ) ಚಿಕಿತ್ಸಿಸಿಸಲು ಹೆಚ್ಚು ಬಳಸುವ ಔಷಧ) ಇದು ಗಮನಾರ್ಹ ಪರಿಣಾಮವನ್ನು ಬೀರುವುದಂತೂ ಖಂಡಿತ. ಪಿಇಒ ಕೂದಲಿನ ಬೆಳವಣಿಗೆಯನ್ನು ಮಾಡುವುದರ ಜೊತೆಗೆ ಬಲಯುತಗೊಳಿಸುತ್ತದೆ ತ್ವಚೆಯ ಮೇಲ್ಭಾಗದ ಹೊದಿಕೆ ಎಪಿಡರ್ಮಿಸ್‎ನಿಂದ ಕೂದಲಿನ ಕಿರುಚೀಲಗಳನ್ನು ಉತ್ತೇಜಿಸಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

  ಪುದೀನಾ ಎಣ್ಣೆಯನ್ನು ನೀವು ಹೇಗೆ ಬಳಸಬೇಕು?

  ಪುದೀನಾ ಎಣ್ಣೆಯನ್ನು ನೀವು ಹೇಗೆ ಬಳಸಬೇಕು?

  ಅಪರಿಮಿತ ಕೂದಲುದುರುವಿಕೆ ಮತ್ತು ಬೋಳು ತೇಪೆಗಳ ಸಮಸ್ಯೆಗಳನ್ನು ಪರಿಹರಿಸಲು ಪುದೀನಾ ಎಣ್ಣೆಯನ್ನು ತೆಂಗಿನೆಣ್ಣೆಯೊಂದಿಗೆ ತೆಳು ಮಾಡಿ ಮತ್ತು ಅದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. ಈ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಲು ಮರೆಯದಿರಿ ಏಕೆಂದರೆ ರಕ್ತ ಪರಿಚಲನೆಯನ್ನು ಸುಧಾರಿಸಲು ಮತ್ತು ಕೂದಲು ಬೆಳೆಯಲು ತಲೆಬುರುಡೆಯನ್ನು ಉತ್ತೇಜಿಸುವ ಅಂಶ ಮಸಾಜ್‎ನಿಂದ ದೊರೆಯುತ್ತದೆ. ಶಾಂಪೂ ಅಥವಾ ಕಂಡೀಷನರ್‎ನೊಂದಿಗೆ ಇದನ್ನು ಬಳಸಿಕೊಂಡು ಕೂದಲನ್ನು ಕೂಡ ತೊಳೆಯಬಹುದಾಗಿದೆ. ಉತ್ತಮ ಪರಿಣಾಮವನ್ನು ಕಂಡುಕೊಳ್ಳಲು ಈ ವಿಧಾನವನ್ನು ಕನಿಷ್ಠ ಪಕ್ಷ ನಾಲ್ಕು ವಾರಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆಯಾದರೂ ಮಾಡಿ.

  English summary

  Homemade hair oil recipe for hair for Instant Hair growth

  Your tresses is the crown of your beauty. A beautiful mane over a showy dress elegantly completes your look. Your hair plays a great role in your looks. It gives your face the desired shape, it gives your dress the desired look and it enhances your beauty too. Thus, it is very important to take good care of your hair.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more