ಮಿರಮಿರನೇ ಮಿಂಚುವ ಕೂದಲಿಗಾಗಿ ಮೆಂತೆ ಕರಿಬೇವಿನ ಎಣ್ಣೆ

By: Jaya subramanya
Subscribe to Boldsky

ಹೆಣ್ಣಿನ ಸೌಂದರ್ಯವೆಂಬುದು ಆಕೆಯ ಸುಂದರವಾದ ಮುಖಾರವಿಂದ ಮತ್ತು ಕೂದಲಿನಲ್ಲಿ ಅಡಗಿರುವ ಗುಟ್ಟಾಗಿದೆ. ಸ್ತ್ರೀ ತಮ್ಮ ಸುಂದರ ಮುಖಾರವಿಂದ ಮತ್ತು ಹೊಳೆಯುವ ಕೂದಲಿಗಾಗಿ ಏನೂ ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಮಾರುಕಟ್ಟೆಗೆ ಕಾಲಿಡುವ ಅತ್ಯುನ್ನತ ಸೌಂದರ್ಯ ಉತ್ಪನ್ನಗಳು ಮತ್ತು ಶಾಂಪೂ ಕಂಡೀಷನರ್‌ಗಳನ್ನು ಖರೀದಿಸಿ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವ ಆತುರದಲ್ಲಿರುತ್ತಾರೆ.

ಇಂದಿನ ಆಧುನಿಕ ಜೀವನ ಪದ್ಧತಿ ಮತ್ತು ಕ್ಷಣಹೊತ್ತು ಕೂಡ ಬಿಡುವೇ ಇಲ್ಲದಿರುವುದು ಇಂತಹ ಉತ್ಪನ್ನಗಳ ಕಡೆಗೆ ಮಹಿಳೆಯರನ್ನು ಆಕರ್ಷಿತಗೊಳಿಸುತ್ತಿದೆ. ಹಿಂದೆ ನಮ್ಮ ಅಜ್ಜಿ, ತಾಯಿ ಮಾಡುತ್ತಿದ್ದ ಮನೆಮದ್ದುಗಳ ಬಳಕೆಗೆ ನಾವು ಇಂದು ವಿದಾಯ ಹೇಳಿದ್ದೇವೆ. ಅದನ್ನೆಲ್ಲಾ ಮಾಡಲು ಸಮಯ ಇಲ್ಲವೆಂದೋ ಇಲ್ಲವೇ ಉದಾಸೀನವೆಂದೋ ನಾವು ಹೇಳುತ್ತಿದ್ದೇವೆ. ಆದರೆ ನಿಮ್ಮ ಕೂದಲು ಮತ್ತು ತ್ವಚೆಗಾಗಿ ಈ ಮನೆಯ ಔಷಧಗಳನ್ನು ನೀವು ಬಳಸಲೇಬೇಕು ಎಂದೇ ಇಂದಿನ ಲೇಖನದಲ್ಲಿ ಸಲಹೆ ನೀಡುತ್ತಿದ್ದೇವೆ.  

Oil for hair
 

ನೈಸರ್ಗಿಕವಾಗಿ ದೊರೆಯುವ ಯಾವುದೇ ಉತ್ಪನ್ನಗಳು ಕೂದಲು ಮತ್ತು ಸೌಂದರ್ಯವನ್ನು ವೃದ್ಧಿಸಲಿವೆ. ಇಂದಿನ ಲೇಖನದಲ್ಲಿ ನಿಮ್ಮ ಕೂದಲಿನ ಪೋಷಣೆಯನ್ನು ಮಾಡಿ ನಳನಳಿಸುವ ಕೂದಲನ್ನು ಪಡೆದುಕೊಳ್ಳಲು ಸಹಕಾರಿ ಎಂದೆನಿಸಿರುವ ಉತ್ತಮ ಎಣ್ಣೆ ತಯಾರಿಯೊಂದನ್ನು ತಿಳಿಸುತ್ತಿದ್ದೇವೆ. ಮೆಂತೆ ಬೀಜ ಮತ್ತು ಕರಿಬೇವು ಮೊದಲಾದ ಔಷಧೀಯ ಗುಣಗಳನ್ನು ಹೊಂದಿರುವ ಸಾಮಾಗ್ರಿಗಳಿಂದ ಈ ಎಣ್ಣೆಯನ್ನು ತಯಾರು ಮಾಡಬಹುದಾಗಿದ್ದು, ಒಮ್ಮೆ ಈ ಎಣ್ಣೆ ತಯಾರಿಗಾಗಿ ನಿಮ್ಮ ಸ್ವಲ್ಪ ಸಮಯವನ್ನು ವಿನಿಯೋಗಿಸಿ ಮತ್ತು ಅದ್ಭುತ ಫಲಿತಾಂಶವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.  

Fenugreek leaves
 

ಬೇಕಾದ ಸಾಮಾಗ್ರಿಗಳು

*2 ಚಮಚಗಳಷ್ಟು ಮೆಂತೆ ಬೀಜಗಳು

*ಅರ್ಧ ಬೌಲ್ ತೆಂಗಿನೆಣ್ಣೆ

*ಒಂದು ಚಮಚಗಳಷ್ಟು ಆಲೀವ್ ಎಣ್ಣೆ

*10-20 ಕರಿಬೇವಿನೆಸಳು

ಬೇಕಾಗುವ ಸಮಯ: 10 ನಿಮಿಷಗಳು

ಮಾಡುವ ವಿಧಾನ

* ಅರ್ಧ ಬೌಲ್‌ನಷ್ಟು ತೆಂಗಿನೆಣ್ಣೆಯನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡಿಕೊಳ್ಳಿ

* ಈಗ 2 ಚಮಚಗಳಷ್ಟು ಮೆಂತೆ ಬೀಜವನ್ನು ಸೇರಿಸಿ ಮತ್ತು ಅದನ್ನು ತೆಂಗಿನೆಣ್ಣೆಯೊಂದಿಗೆ ಕಾಯಿಸಿ.

*ಬೀಜಗಳು ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗುವವರೆಗೆ ಕಾಯಿರಿ

*ಈಗ ಒಂದು ಚಮಚಗಳಷ್ಟು ಆಲೀವ್ ಎಣ್ಣೆಯನ್ನು ಇದಕ್ಕೆ ಸೇರಿಸಿ

*10-20 ಕರಿಬೇವಿನೆಸಳನ್ನು ಎಣ್ಣೆಗೆ ಹಾಕಿ ಮತ್ತು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಇದನ್ನು ಕುದಿಸಿ.

*ಎಣ್ಣೆಯು ಗಾಢ ಕಂದು ವರ್ಣಕ್ಕೆ ಬಂದು ನಂತರ ಕಪ್ಪಾಗುತ್ತದೆ ಅಲ್ಲಿಯವರೆಗೆ ಎಣ್ಣೆಯನ್ನು ನೀವು ಕುದಿಸಬೇಕು.

*ಕೆಲವು ಸಮಯಗಳ ಕಾಲ ಎಣ್ಣೆ ತಣ್ಣಗಾಗಲು ಬಿಡಿ

*ಕರಿಬೇವಿನೆಸಳನ್ನು ಚೆನ್ನಾಗಿ ಹುಡಿ ಮಾಡಿ ಎಣ್ಣೆಯೊಂದಿಗೆ ಮಿಶ್ರ ಮಾಡಿ

*ಎಣ್ಣೆಯನ್ನು ಬಸಿದುಕೊಂಡು ನಿತ್ಯವೂ ಬಳಸಿ

ಕರಿಬೇವಿನೆಸಳಿನ ಪ್ರಯೋಜನಗಳು

*ಕರಿಬೇವಿನಲ್ಲಿ ಹೆಚ್ಚು ಪ್ರಮಾಣದ ಪ್ರೊಟೀನ್ ಅಂಶಗಳು ಮತ್ತು ಬೀಟಾ ಕ್ಯಾರೊಟಿನ್ ಇದ್ದು ಇದು ಕೂದಲು ಉದುರುವುದು ಮತ್ತು ತೆಳ್ಳಗಾಗುವ ಸಮಸ್ಯೆಯನ್ನು ತಡೆಯುತ್ತದೆ. ಅಂತೆಯೇ ಇದನ್ನು ಬಳಸಿಕೊಂಡು ತಯಾರಿಸುವ ಎಣ್ಣೆಯಿಂದ ಬಕ್ಕತಲೆಯನ್ನು ನಿವಾರಣೆ ಮಾಡಿಕೊಳ್ಳಬಹುದು.  

curry leaves
 

*ಕರಿಬೇವಿನೆಲೆಯಲ್ಲಿ ಅಮೀನೊ ಆಸಿಡ್ ಇದ್ದು ಇದು ಕೂದಲಿನ ಕೋಶಗಳನ್ನು ಬಲಶಾಲಿಯನ್ನಾಗಿಸುತ್ತದೆ ಮತ್ತು ಅವನ್ನು ಆರೋಗ್ಯವಾಗಿರಿಸುತ್ತದೆ. ಅದಲ್ಲದೆ ಕರಿಬೇವು ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿದ್ದು, ತಲೆಹೊಟ್ಟನ್ನು ಹೋಗಲಾಡಿಸಿ, ಕೂದಲಿನ ಕೋಶಗಳನ್ನು ಬಲಪಡಿಸುತ್ತದೆ ಅಂತೆಯೇ ಕೂದಲು ಬೆಳೆಯುವಂತೆ ಮಾಡುತ್ತದೆ.

ಮೆಂತೆ ಬೀಜದ ಪ್ರಯೋಜನಗಳು

*ವಿಟಮಿನ್ ಬಿ ಮೆಂತೆಯಲ್ಲಿದ್ದು, ಕೂದಲು ಅಕಾಲಿಕವಾಗಿ ನೆರೆಯುವನ್ನು ತಡೆಯುತ್ತದೆ. ಅಂತೆಯೇ ಕೂದಲಿನ ಬೇರಿಗೆ ಬೇಕಾದ ಶಕ್ತಿಯನ್ನು ಒದಗಿಸಿ ಕೂದಲು ತುಂಡಾಗುವುದನ್ನು ತಡೆಯುತ್ತದೆ. ಕೂದಲು ಹೊಳೆಯುವಂತೆ ಮಾಡುವ ಲೆಸಿತಿನ್ ಅಂಶವು ಮೆಂತೆಯಲ್ಲಿದ್ದು, ನಿಮ್ಮ ತಲೆಬುರುಡೆಗೆ ಇದು ದೃಢತೆಯನ್ನು ನೀಡಲಿದೆ.

*ಮೆಂತೆದಲ್ಲಿ ಹೆಚ್ಚು ಪ್ರಮಾಣದ ಉತ್ಕರ್ಷಣ ನಿರೋಧಿ ಅಂಶಗಳಿದ್ದು, ತಲೆಬುರುಡೆಯು ಹೆಚ್ಚು ಕಾಲ ಮಾಯಿಶ್ಚರೈಸ್ ಆಗಿರುವಂತೆ ಇದು ನೋಡಿಕೊಳ್ಳುತ್ತದೆ. ಅಂತೆಯೇ ಕೂದಲಿನ ಮೃತಕೋಶಗಳನ್ನು ಇದು ನಿವಾರಿಸುತ್ತದೆ. ಇದು ಕೂದಲಿನ ಬೇರನ್ನು ದೃಢಪಡಿಸಿ ನಿಮ್ಮ ಕೂದಲಿನ ಹಾನಿಯನ್ನು ತಡೆಯುತ್ತದೆ.

ಈ ಎಣ್ಣೆಯನ್ನು ಬಳಸುವುದರಿಂದ ಉಂಟಾಗುವ ಪ್ರಯೋಜನಗಳು

*ಹಾನಿಗೊಳಗಾದ ಬೇರುಗಳನ್ನು ಇದು ಉಪಚರಿಸುತ್ತದೆ

*ನಿಮ್ಮ ತಲೆಬುರುಡೆಯನ್ನು ಇದು ಮಾಯಿಶ್ಚರೈಸ್ ಆಗಿ ಇರಿಸುತ್ತದೆ

*ಕೂದಲು ಬೆಳೆಯುವಲ್ಲಿ ಸಹಕಾರಿ

*ಕೂದಲು ಉದುರುವುದನ್ನು ತಡೆಯುತ್ತದೆ

*ಕೂದಲಿನ ಸೀಳು ತುದಿ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ

*ಕೂದಲು ಅಕಾಲಿಕ ನೆರೆಯುವುದನ್ನು ಹೋಗಲಾಡಿಸುತ್ತದೆ

*ತಲೆಹೊಟ್ಟಿಗೆ ಉತ್ತಮ ಔಷಧಿ

*ತಲೆಬುರುಡೆಯ ಸೋಂಕನ್ನು ನಿವಾರಿಸುತ್ತದೆ.

English summary

Homemade Fenugreek &Curry leaves Infused Oil for Hair

Hair fall can be an upsetting issue and other hair-related problems can be as upsetting as this. In spite of lots of conditioners, shampoos and hair masks being available in the market we fail to protect and nurture our hair. Today, we would like to introduce to you a homemade hair oil which is made by infusing fenugreek seeds and curry leaves.
Story first published: Tuesday, March 7, 2017, 23:41 [IST]
Subscribe Newsletter