ಮನೆಮದ್ದು: ಕಾಡುವ ತಲೆ ತುರಿಕೆಗೆ ಬೆಸ್ಟ್ ಪರಿಹಾರ ಇಲ್ಲಿದೆ!

By: Jaya subramanya
Subscribe to Boldsky

ನೀಳವಾದ ದಟ್ಟನೆಯ ಕೇಶರಾಶಿ ಎಲ್ಲಾ ಹೆಣ್ಣುಮಕ್ಕಳೂ ಆಸೆ ಪಡುವ ಬೆಲೆಯುಳ್ಳ ಆಸ್ತಿಯಾಗಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಕೇಶರಾಶಿಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ನಮಗೆ ಸಮಯವೇ ಇಲ್ಲದಂತಾಗಿದೆ. ಯಾಂತ್ರೀಕೃತ ಜೀವನ ಶೈಲಿಯಲ್ಲಿ ನಮ್ಮ ಆರೋಗ್ಯದೆಡೆಗೆ ನಾವು ಕಡಿಮೆ ಗಮನವನ್ನು ನೀಡುತ್ತಿರುವುದರಿಂದ ನಮ್ಮ ಕೇಶ ಕೂಡ ಕೂಡ ದಿನದಿಂದ ದಿನಕ್ಕೆ ಕಂಗಾಲಾಗುತ್ತಿದೆ. ಕೂದಲಿನ ಎಲ್ಲಾ ಸಮಸ್ಯೆಗೆ ಪರ್ಫೆಕ್ಟ್ ಹೇರ್ ಪ್ಯಾಕ್ 

ತಲೆಗೂದಲಿನಲ್ಲಿ ನೀರಿನ ಪಸೆ ಇದ್ದಾಗ ತಲೆಬುರುಡೆಯಲ್ಲಿ ತುರಿಕೆ ಕಾಡುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದ ಕೂಡ ಕೂದಲಿನ ಕೋಶಗಳು ದುರ್ಬಲಗೊಂಡು ಹೆಚ್ಚುವರಿಯಾಗಿ ತಲೆಗೂದಲು ಉದುರಿ ಹೋಗುತ್ತದೆ. ತಲೆಯಲ್ಲಿ ತುರಿಕೆಯೇ? ಕರಿಬೇವಿನ ಹೇರ್ ಪ್ಯಾಕ್ ಪ್ರಯತ್ನಿಸಿ 

ಬೇಸಿಗೆಯಲ್ಲಿ ಸಮಯದಲ್ಲಿ ತಲೆತುರಿಕೆ ಸಮಸ್ಯೆ ತೀರಾ ಅತಿಯಾಗಿದ್ದು ಸೂರ್ಯನ ಪ್ರಖರ ಕಿರಣಗಳು, ತಪ್ಪಾದ ಶ್ಯಾಂಪೂವಿನ ಬಳಕೆ, ಕಂಡೀಶನರ್ ಸಮಸ್ಯೆ ಹೀಗೆ ಇನ್ನಷ್ಟು ಕಾರಣಗಳು ತಲೆಬುರುಡೆಯಲ್ಲಿ ತುರಿಕೆಯನ್ನು ಉಂಟುಮಾಡುತ್ತದೆ. ನಿಮ್ಮ ಈ ಸಮಸ್ಯೆಗೂ ನಮ್ಮ ಇಂದಿನ ಲೇಖನದಲ್ಲಿ ಖರ್ಚಿಲ್ಲದ ಕೆಲವೊಂದು ಪರಿಹಾರಗಳನ್ನು ನಾವು ನೀಡುತ್ತಿದ್ದು ನಿಮ್ಮ ದೈನಂದಿನ ಬಳಕೆಗೂ ಇದು ಪ್ರಯೋಜನಕಾರಿಯಾದುದಾಗಿದೆ.

ಟಿ ಟ್ರಿ ಆಯಿಲ್

ಟಿ ಟ್ರಿ ಆಯಿಲ್

ತುರಿಕೆಯುಳ್ಳ ತಲೆಬುರುಡೆಗೆ ಟಿ ಟ್ರಿ ಆಯಿಲ್ ಅತ್ಯುತ್ತಮ ಎಂದೆನಿಸಿದೆ. ಇದರಲ್ಲಿರುವ ನೈಸರ್ಗಿಕ ಪೋಷಕಾಂಶಗಳು ತಲೆಬುರುಡೆಯಲ್ಲಿರುವ ತುರಿಕೆಯನ್ನು ಚಿಟಿಕೆಯಲ್ಲಿ ನಿವಾರಿಸುತ್ತದೆ. ಅರ್ಧ ಕಪ್‌ನಷ್ಟು ಬೇಬಿ ಶ್ಯಾಂಪೂವನ್ನು ತೆಗೆದುಕೊಂಡು ಅದಕ್ಕೆ ಇಪ್ಪತ್ತು ಚಮಚ ಟಿ ಟ್ರಿ ಆಯಿಲ್ ಅನ್ನು ಸೇರಿಸಿ. ಶ್ಯಾಂಪೂವನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಮತ್ತು ಇದನ್ನು ನಿಮ್ಮ ತಲೆಬುರುಡೆಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದವರೆಗೆ ಕಾದು ನಂತರ ನೀರಿನಿಂದ ತಲೆಯನ್ನು ತೊಳೆದುಕೊಳ್ಳಿ.

ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ

ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ

ತಲೆಬುರುಡೆಯ ತುರಿಕೆಯನ್ನು ನಿವಾರಿಸಲು ಬೇಕಿಂಗ್ ಸೋಡಾ ಪರಿಣಾಮಕಾರಿ ವಿಧಾನವಾಗಿದೆ. ಡ್ರೈ ಮತ್ತು ತುರಿಕೆಯುಳ್ಳ ತಲೆಬುರುಡೆಯನ್ನು ನಿವಾರಿಸುವಲ್ಲಿ ಬೇಕಿಂಗ್ ಸೋಡಾ ಹೆಚ್ಚು ಉಪಯುಕ್ತ ಎಂದೆನಿಸಲಿದೆ. ಇದು ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಲಿದೆ.

ಅಡುಗೆ ಸೋಡಾ ಸುಮಾರು ನಾಲ್ಕೈದು ಚಿಕ್ಕಚಮಚ ಅಡುಗೆ ಸೋಡಾವನ್ನು ಒಂದು ಬಟ್ಟಲಿನಲ್ಲಿ ಹಾಕಿ ಇದಕ್ಕೆ ಕೊಂಚ ನೀರು ಸೇರಿಸಿ ಮಿಶ್ರಣ ಮಾಡಿ. ಇದು ತೀರಾ ತೆಳುವಾಗಿಯೂ ಇರಬಾರದು, ತೀರಾ ದಪ್ಪನಾಗಿಯೂ ಇರಬಾರದು ಆ ಹದಕ್ಕೆ ಬೆರೆಸಿಕೊಳ್ಳಿ. ಈ ಲೇಪನವನ್ನು ತಲೆಯ ಚರ್ಮಕ್ಕೆ ನೇರವಾಗಿ ಹಚ್ಚಿ ಕೊಂಚ ಕಾಲ ಒಣಗಲು ಬಿಡಿ.

ಲಿಂಬೆ ರಸ

ಲಿಂಬೆ ರಸ

ನೈಸರ್ಗಿಕ ಮೈಕ್ರೊಬಯಲ್ ಮತ್ತು ಆಸಿಡ್ ಅಂಶವನ್ನು ಒಳಗೊಂಡಿರುವ ಲಿಂಬೆಯು ನಿಮ್ಮ ತುರಿಕೆಯುಳ್ಳ ತಲೆಬುರುಡೆಯ ಸಮಸ್ಯೆಯನ್ನು ಕ್ಷಣ ಮಾತ್ರದಲ್ಲಿ ನಿವಾರಿಸಲಿದೆ. ಲಿಂಬೆಯಲ್ಲಿ ಪೈಥೊಕಿಮಿಕಲ್ಸ್ ಇದ್ದು ಇದು ತುರಿಕೆಯನ್ನು ಬುಡಸಮೇತ ನಿವಾರಣೆ ಮಾಡಲಿದೆ. ಒಂದು ತಾಜಾ ಲಿಂಬೆಯನ್ನು ತೆಗೆದುಕೊಂಡು ಅದರ ರಸವನ್ನು ಹಿಂಡಿಕೊಳ್ಳಿ. ಈಗ ಹತ್ತಿಯನ್ನು ರಸದಲ್ಲಿ ಅದ್ದಿಕೊಂಡು ನಿಮ್ಮ ತಲೆಬುರುಡೆಗೆ ಇದನ್ನು ಹಚ್ಚಿರಿ. ಸ್ವಲ್ಪ ಸಮಯಗಳ ನಂತರ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ವಿಧಾನವನ್ನು ದಿನವೂ ಬಳಸಿ. ಕೂದಲಿನ ಆರೋಗ್ಯಕ್ಕೆ ಬೇಕು-ಲಿಂಬೆ ಹಣ್ಣಿನ ಜ್ಯೂಸ್!

ಆಲೀವ್ ಎಣ್ಣೆಯ ಮಸಾಜ್

ಆಲೀವ್ ಎಣ್ಣೆಯ ಮಸಾಜ್

ಆಲೀವ್ ಎಣ್ಣೆಯ ಮಸಾಜ್‌ನಿಂದ ಕೂಡ ಕೂದಲಿನ ಈ ಸಮಸ್ಯೆಯನ್ನು ಶೀಘ್ರದಲ್ಲಿ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಆಂಟಿಸೆಪ್ಟಿಕ್ ಮತ್ತು ಆಂಟಿಇನ್‌ಫ್ಲಾಮೇಟರಿ ಅಂಶವನ್ನು ಆಲೀವ್ ಆಯಿಲ್ ಹೊಂದಿದ್ದು ಇದು ತುರಿಕೆಯುಳ್ಳ ತಲೆಬುರುಡೆಗೆ ಸಾಂತ್ವಾನವನ್ನು ನೀಡಲಿದೆ.

ಅಲೊವೇರಾ ಜೆಲ್

ಅಲೊವೇರಾ ಜೆಲ್

ತುರಿಕೆಯುಳ್ಳ ತಲೆಬುರುಡೆಗೆ ಪರಿಣಾಮಕಾರಿ ವಿಧಾನವಾಗಿದೆ ಅಲೊವೇರಾ ಜೆಲ್. ಆಂಟಿಇನ್‌ಫ್ಲಾಮೇಟರಿ ಅಂಶವನ್ನು ಇದು ಹೊಂದಿದ್ದು ಆಂಟಿಬ್ಯಾಕ್ಟೀರಿಯಲ್ ಅನ್ನು ಹೊಂದಿದೆ. ಇದು ತಲೆಗೂದಲನ್ನು ಮೃದುವಾಗಿಸಲಿದ್ದು, ತುರಿಕೆಯನ್ನು ನಿವಾರಿಸಲಿದೆ. ಡ್ರೈ ಮತ್ತು ಜಿಡ್ಡಿನ ಕೂದಲುಳ್ಳವರು ಅಲೊವೇರಾ ಜೆಲ್ ಅನ್ನು ಕೂದಲಿಗೆ ಬಳಸಿಕೊಳ್ಳಬಹುದಾಗಿದೆ. ಸ್ವಲ್ಪ ಅಲೊವೇರಾ ಜೆಲ್ ಅನ್ನು ತೆಗೆದುಕೊಂಡು ಅದಕ್ಕೆ ಲಿಂಬೆ ರಸವನ್ನು ಬೆರೆಸಿ ನಂತರ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. ನಂತರ ನೀರಿನಿಂದ ತಲೆಗೂದಲನ್ನು ತೊಳೆದುಕೊಳ್ಳಿ. ಕೂದಲುದುರುವ ಸಮಸ್ಯೆಗೆ ಬಿಸಿ ಎಣ್ಣೆಯ ಮಸಾಜ್...

ತೆಂಗಿನೆಣ್ಣೆ

ತೆಂಗಿನೆಣ್ಣೆ

ನಿಮ್ಮ ತಲೆಗೂದಲಿಗೆ ತೆಂಗಿನೆಣ್ಣೆಯನ್ನು ಹಚ್ಚುವುದು ತುರಿಕೆಯನ್ನು ನಿವಾರಣೆ ಮಾಡಲಿದ್ದು, ನಿಮಗೆ ತಲೆಹೊಟ್ಟು ರಹಿತ ಕೂದಲನ್ನು ನೀಡಲಿದೆ. ಕೂದಲಿನ ತುರಿಕೆಯು ಡ್ರೈನೆಸ್‌ನಿಂದ ಉಂಟಾಗುತ್ತದೆ. ನಿಮ್ಮ ತ್ವಚೆಗೆ ಹೈಡ್ರೇಟ್ ಮಾಡುವುದು ಅತ್ಯವಶ್ಯಕ ಅಂಶವಾಗಿದ್ದು ಸ್ವಲ್ಪ ತೆಂಗಿನೆಣ್ಣೆಯನ್ನು ತೆಗೆದುಕೊಂಡು ನಿಮ್ಮ ತಲೆಬುರುಡೆಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಮಸಾಜ್ ಮಾಡಿ ನಂತರ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ತೆಂಗಿನೆಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿಕೊಳ್ಳಿ ಇದು ಉತ್ತಮ ಕಂಡೀಶನರ್‌ನಂತೆ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕೂದಲಿಗೆ ತೆಂಗಿನೆಣ್ಣೆ ಒಳ್ಳೆಯದು ಏಕೆ ಗೊತ್ತೇ?

ಕೋಸುಗಡ್ಡೆಯ ಪ್ಯೂರಿ

ಕೋಸುಗಡ್ಡೆಯ ಪ್ಯೂರಿ

ನಿಮ್ಮ ತುರಿಕೆಯ ತಲೆಬುರುಡಿಗೆ ಬ್ರೊಕೊಲಿ ಅಥವಾ ಕೋಸುಗಡ್ಡೆಯ ಪ್ಯೂರಿ ಹೆಚ್ಚು ಉತ್ತಮ ಆಯ್ಕೆ ಎಂದೆನಿಸಿದೆ. ಉತ್ಕರ್ಷಣ ನಿರೋಧಿ ಅಂಶಗಳನ್ನು ಇದು ಒಳಗೊಂಡಿರುವುದರಿಂದ ನಿಮ್ಮ ತುರಿಕೆಯುಳ್ಳ ಕೂದಲಿಗೆ ಇದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಸ್ವಲ್ಪ ಬ್ರಕೋಲಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಬೇಯಿಸಿ. ನಂತರ ಅದನ್ನು ನಿಮ್ಮ ಕೂದಲಿನ ಬೇರುಗಳಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆದುಕೊಳ್ಳಿ. ವಾರದಲ್ಲಿ ಒಂದು ಬಾರಿ ಈ ವಿಧಾನವನ್ನು ಕೂದಲಿಗೆ ಪ್ರಯೋಗಿಸಿ.

ವಿಚ್ ಹೇಜಲ್ ಆಯಿಲ್

ವಿಚ್ ಹೇಜಲ್ ಆಯಿಲ್

ನಿಮ್ಮ ತುರಿಕೆಯುಳ್ಳ ತಲೆಗೂದಲಿಗೆ ಈ ಎಣ್ಣೆ ಹೆಚ್ಚು ಉತ್ತಮ ಆಯ್ಕೆ ಎಂದೆನಿಸಿದೆ. ಇದು ಆರೋಗ್ಯಯುಕ್ತ ಕೂದಲನ್ನು ಪೋಷಿಸಲಿದೆ. ಸ್ವಲ್ಪ ಹೇಜಲ್ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ತಲೆಬುರುಡೆಗೆ ಇದನ್ನು ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಮಸಾಜ್ ಮಾಡಿಕೊಳ್ಳಿ ನಂತರ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಅನುಸರಿಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.

English summary

Home Remedies To Treat Irritated Scalp Itchy scalp

Itching may occur due to several factors like use of a wrong shampoo, excessive exposure to the sun, conditioner problem and many more. However, if you are struggling with an irritated scalp, you can opt for easy home remedies, so that it treats the trouble easily. Before opting for these home remedies, it is very important to know the reason behind why the scalp has turned itchy. So, here are the perfect home remedies that can treat the condition of itchy scalp for life, take a look.
Subscribe Newsletter