For Quick Alerts
ALLOW NOTIFICATIONS  
For Daily Alerts

ತಲೆಹೊಟ್ಟು ಹಾಗೂ ಒಣನೆತ್ತಿಯ ಸಮಸ್ಯೆಗೆ ಪವರ್‌ಫುಲ್ ಮನೆ ಮದ್ದುಗಳು

By Arshad
|

ತಲೆಯಲ್ಲಿ ಕೂದಲಿದ್ದರೆ ತಲೆಹೊಟ್ಟು ಅನಿವಾರ್ಯ ಎಂದು ಹೆಚ್ಚಿನವರು ಅಭಿಪ್ರಾಯ ಪಡುತ್ತಾರೆ. ತಲೆಹೊಟ್ಟು ಹೆಚ್ಚಾದಷ್ಟೂ ಕೂದಲು ಒಣದಾಗಿ ಬಾಚಿಕೊಳ್ಳಲು ಕಷ್ಟವಾಗುತ್ತದೆ ಹಾಗೂ ತುರಿಕೆಯೂ ಹೆಚ್ಚುತ್ತದೆ. ತಲೆಹೊಟ್ಟಿನ ಪುಡಿ ತಲೆಯಿಂದ ಉದುರತೊಡಗಿ ಮುಜುಗರವನ್ನೂ ಎದುರಿಸಬೇಕಾಗುತ್ತದೆ. ಆದ್ದರಿಂದ ಈ ತೊಂದರೆಗೆ ಒಳಗಾಗದಿರಲು ತಲೆಹೊಟ್ಟಿನ ಮೂಲದಿಂದಲೇ ಚಿಕಿತ್ಸೆ ನಡೆಸುವುದು ಅನಿವಾರ್ಯ. ಕೂದಲ ಬುಡಕ್ಕೆ ವಿಶೇಷ ಆರೈಕೆ ದೊರೆತರೆ ತಲೆಹೊಟ್ಟು ಕಡಿಮೆಯಾಗುವ ಜೊತೆಗೇ ಕೂದಲಿನ ಸೊಂಪು ಹಾಗೂ ಕಾಂತಿ ಹೆಚ್ಚುತ್ತದೆ.

ಬರೀ ಒಂದೇ ವಾರದಲ್ಲಿ 'ತಲೆಹೊಟ್ಟು ಸಮಸ್ಯೆ' ಮಂಗಮಾಯ!

ಈ ಕೆಲಸವನ್ನು ನಿರ್ವಹಿಸುವ ಹಲವಾರು ರಾಸಾಯನಿಕ ಆಧಾರಿತ ಪ್ರಸಾದನಗಳು ಮಾರುಕಟ್ಟೆಯಲ್ಲಿ ಭಾರೀ ಪ್ರಚಾರದೊಂದಿಗೆ ಲಭ್ಯವಿದ್ದರೂ ಇವುಗಳಲ್ಲಿ ಯಾವುವೂ ಅಡ್ಡಪರಿಣಾಮಗಳಿಂದ ಹೊರತಾಗಿಲ್ಲ. ಆದ್ದರಿಂದ ಕೊಂಚ ನಿಧಾನವಾಗಿಯಾದರೂ ಸರಿ, ಸುರಕ್ಷಿತ ಹಾಗೂ ಸಮರ್ಥವಾಗಿ ತಲೆಹೊಟ್ಟನ್ನು ನಿವಾರಿಸಬಲ್ಲ ನೈಸರ್ಗಿಕ ಪ್ರಸಾಧನಗಳ ಆಯ್ಕೆಯೇ ಜಾಣತನದ ಕ್ರಮವಾಗಿದೆ. ಬನ್ನಿ, ಕೆಲವು ಸುಲಭವಾದ ಹಾಗೂ ಸಮರ್ಥವಾದ ಮನೆಮದ್ದುಗಳನ್ನು ಬಳಸಿ ತಲೆಹೊಟ್ಟನ್ನು ಮೂಲದಲ್ಲಿಯೇ ನಿವಾರಿಸುವ ವಿಧಾನಗಳನ್ನು ನೋಡೋಣ..

ತಲೆಹೊಟ್ಟನ್ನು ಬೇರು ಸಮೇತ ಕಿತ್ತು ಹಾಕುವ ಮನೆಮದ್ದು

ಈ ನಿಟ್ಟಿನಲ್ಲಿ ಸುಲಭ ಹಾಗೂ ಉಪಯುಕ್ತ ಮನೆಮದ್ದುಗಳನ್ನು ಇಂದು ಪ್ರಸ್ತುತಪಡಿಸಲಾಗಿದ್ದು ನಿಮಗೆ ಸೂಕ್ತವಾದುದನ್ನು ಆರಿಸಿಕೊಂಡು ತಲೆಹೊಟ್ಟನ್ನು ನಿವಾರಿಸುವ ಜೊತೆಗೇ ತಲೆಗೂದಲ ಆರೈಕೆಯನ್ನೂ ನಿರ್ವಹಿಸಬಹುದು. ಆದರೆ ಯಾವುದೇ ನೈಸರ್ಗಿಕ ವಿಧಾನದಂತೆಯೇ ಈ ವಿಧಾನಗಳೂ ಕೊಂಚ ನಿಧಾನವಾಗಿ ಪರಿಣಾಮ ಬೀರುವ ಕಾರಣ ಇದರ ಬಳಕೆ ಸತತವಾಗಿರಬೇಕು ಹಾಗೂ ಕೊಂಚ ತಾಳ್ಮೆಯ ಅಗತ್ಯವೂ ಇದೆ....

ಮೆಂತೆ

ಮೆಂತೆ

ತಲೆಹೊಟ್ಟಿನ ನಿವಾರಣೆಗೆ ಮೆಂತೆ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಕೊಂಚ ಮೆಂತೆಕಾಳುಗಳನ್ನು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಡಬೇಕು. ಒಂದು ಕಪ್ ನಲ್ಲಿ ಎರಡು ದೊಡ್ಡ ಚಮಚ ಮೆಂತೆ ಹಾಕಬೇಕು. ಮರುದಿನ ಬೆಳಿಗ್ಗೆ ನೀರಿನ ಸಹಿತ ಮೆಂತೆಯನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ನುಣ್ಣಗೆ ಅರೆಯಿರಿ. ಈ ಲೇಪನವನ್ನು ಸ್ನಾನಕ್ಕೂ ಒಂದು ಗಂಟೆ ಮುನ್ನ ತಲೆಗೂದಲ ಬುಡಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ. ಬಳಿಕ ಸೌಮ್ಯ ಶಾಂಪೂ ಬಳಸಿ ತಲೆಗೂದಲನ್ನು ತೊಳೆದುಕೊಳ್ಳಿ.

ಮೊಸರು

ಮೊಸರು

ತಲೆಹೊಟ್ಟಿನ ನಿವಾರಣೆಗೆ ದಪ್ಪ ಮೊಸರನ್ನು ನೇರವಾಗಿ ಕೂದಲ ಬುಡಕ್ಕೆ ಹಚ್ಚಬಹುದು. ಗಟ್ಟಿ ಮೊಸರನ್ನು ತಯಾರಿಸಲು ತೆಳುವಾದ ಹತ್ತಿಯ ಬಟ್ಟೆಯಲ್ಲಿ ಮೊಸರನ್ನು ಹಾಕಿ ಸುಮಾರು ಅರ್ಧ ಗಂಟೆ ಕಾಲ ನೇತು ಹಾಕಿ. ನೀರು ಇಳಿದ ಬಳಿಕ ಘನವಾಗಿರುವ ಮೊಸರನ್ನು ತಲೆಗೂದಲಿಗೆ ಹಚ್ಚಿ ಒಂದು ಘಂಟೆ ಬಿಟ್ಟು ಸೌಮ್ಯ ಶಾಂಪೂ ಬಳಸಿ ತಲೆಯನ್ನು ತೊಳೆದುಕೊಳ್ಳಿ.

ಅಡುಗೆ ಸೋಡಾ

ಅಡುಗೆ ಸೋಡಾ

ಒಂದು ವೇಳೆ ಅಡುಗೆಸೋಡಾವನ್ನು ಬಳಸುವುದಾದರೆ ತಲೆಸ್ನಾನ ಮಾಡಿದ ದಿನವನ್ನು ಆಯ್ಕೆ ಮಾಡಿಕೊಳ್ಳಿ. ಒದ್ದೆಯಾದ ತಲೆಗೂದಲಿಗೆ ಅಡುಗೆ ಸೋಡಾವನ್ನು ಬಳಸಿ. ತಲೆಗೂದಲ ಬುಡಕ್ಕೆ ಸೋಡಾವನ್ನು ಕೊಂಚ ನೀರಿನಿಂದ ತೇವಗೊಳಿಸಿ ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳಿ. ಒಟ್ಟು ಎರಡು ದೊಡ್ಡ ಚಮಚ ಅಡುಗೆ ಸೋಡಾ ಸಾಕು. ಆದರೆ ಹೆಚ್ಚು ಹೊತ್ತು ಇರಿಸಬಾರದು. ಒಂದೇ ನಿಮಿಷದ ಬಳಿಕ ಸೌಮ್ಯ ಶಾಂಪೂ ಬಳಸಿ ಕೂದಲನ್ನು ತಕ್ಷಣ ತೊಳೆದುಕೊಳ್ಳಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಒಂದು ವೇಳೆ ತಲೆಹೊಟ್ಟು ತೀವ್ರವಾಗಿದ್ದು ನೆತ್ತಿಯ ಚರ್ಮ ಒಣಗಿದ್ದರೆ ಬೆಳ್ಳುಳ್ಳಿ ಉತ್ತಮ ಆಯ್ಕೆಯಾಗಿದೆ. ಕೊಂಚ ಬೆಳ್ಳುಳ್ಳಿಯ ಎಸಳುಗಳನ್ನು ಕೊಂಚ ನೀರಿನೊಂದಿಗೆ ನುಣ್ಣಗೆ ಅರೆದು ತೇವವಾಗಿರುವ ಕೂದಲಿಗೆ ನೇರವಾಗಿ ಹಚ್ಚಿಕೊಳ್ಳಬಹುದು. ಬೆಳ್ಳುಳ್ಳಿ ಅರೆದ ಬಳಿಕ ಇದರ ಘಾಟು ತೀವ್ರವಾಗಿರುವ ಕಾರಣ ಕೊಂಚ ತೊಂದರೆ ಎದುರಿಸಬೇಕಾಗಬಹುದು. ಹಚ್ಚಿಕೊಂಡು ಅರ್ಧ ಘಂಟೆಯಾದ ಬಳಿಕ ತಣ್ಣೀರು ಹಾಗೂ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಬೇಕು.

ಬೇವು

ಬೇವು

ಕೂದಲಿಗೆ ಬೇವಿನ ಎಲೆಗಳನ್ನು, ವಿಶೇಷವಾಗಿ ಕಹಿಬೇವಿನ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಬಹುದು. ತಲೆಹೊಟ್ಟಿನ ನಿವಾರಣೆಗೆ ಒಂದು ಕಪ್ ನಷ್ಟು ಈಗತಾನೇ ಕಿತ್ತ ಕಹಿಬೇವಿನ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಕುದಿಸಬೇಕು. ನೀರು ಗಾಢಹಸಿರು ಬಣ್ಣಕ್ಕೆ ತಿರುಗಿದ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ತಣ್ಣಗಾದ ಬಳಿಕ ಈ ನೀರನ್ನು ಸೋಸಿ ಎಲೆಗಳನ್ನು ನಿವಾರಿಸಿ. ಈ ನೀರಿನಿಂದ ತಲೆಯನ್ನು ತೋಯಿಸಿಕೊಂಡು ಕೊಂಚ ಹೊತ್ತು ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ತುಳಸಿ

ತುಳಸಿ

ತುಳಸಿಯನ್ನೂ ಮೇಲೆ ವಿವರಿಸಿದ ವಿಧಾನದಂತೆಯೇ ಬಳಸಬಹುದು. ಒಂದು ಲೀಟರ್ ನೀರಿನಲ್ಲಿ ಒಂದು ಮುಷ್ಠಿಯಷ್ಟು ತುಳಸಿ ಎಲೆಗಳನ್ನು ಹಾಕಿ ಕುದಿಸಿ. ನೀರು ಗಾಢ ಹಸಿರಾದ ಬಳಿಕ ನೀರನ್ನು ತಣಿಸಿ ಸೋಸಿ. ಮೊದಲು ಸೌಮ್ಯ ಶಾಂಪೂ ಬಳಸಿ ತಲೆಯನ್ನು ತೊಳೆದುಕೊಳ್ಳಿ ಬಳಿಕ ಈ ನೀರನ್ನು ಬಳಸಿ ತಲೆಯನ್ನು ತೊಳೆದುಕೊಳ್ಳಿ. ಬಳಿಕ ನಿಮ್ಮ ನಿತ್ಯದ ಕಂಡೀಶನರ್ ಬಳಸಿ ತೊಳೆದುಕೊಳ್ಳಿ.

ಉಪ್ಪು

ಉಪ್ಪು

ತಲೆಹೊಟ್ಟಿಗೆ ಸುಲಭವಾದ ಪರಿಹಾರವೆಂದರೆ ಉಪ್ಪಿನ ಬಳಕೆ. ಇದಕ್ಕಾಗಿ ಕೊಂಚ ಒಣ ಉಪ್ಪನ್ನು ತೇವವಾಗಿದ್ದ ತಲೆಯ ಮೇಲೆ ಚಿಮುಕಿಸಿ. ನಯವಾದ ಮಸಾಜ್ ಮೂಲಕ ಎಲ್ಲೆಡೆ ಹರಡಿಸಿ. ಹದಿನೈದು ನಿಮಿಷದ ಬಳಿಕ ನೀರಿನಿಂದ ತೊಳೆದುಕೊಳ್ಳಿ.

ಲೋಳೆಸರ

ಲೋಳೆಸರ

ಒಂದು ವೇಳೆ ತಲೆಯಲ್ಲಿ ತಲೆಹೊಟ್ಟಿನ ಜೊತೆಗೇ ತುರಿಕೆಯೂ ಇದ್ದರೆ ಲೋಳೆಸರ ಪ್ರಥಮ ಆಯ್ಕೆಯಾಗಿದೆ. ಈಗತಾನೇ ತುಂಡರಿಸಿದ ಒಂದು ಲೋಳೆಸರದ ಕೋಡನ್ನು ಸೀಳಿ ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸವನ್ನು ತಲೆಗೂದಲ ಬುಡಕ್ಕೆ, ವಿಶೇಷವಾಗಿ ತಲೆಗೂದಲಲ್ಲಿ ತಲೆಹೊಟ್ಟು ಇರುವಲ್ಲೆಲ್ಲಾ ಹೆಚ್ಚಾಗಿ ಹಚ್ಚಿ. ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ಶಾಂಪೂ ಹಾಗೂ ಕಂಡೀಶನರ್ ಬಳಸಿ ತಲೆಯನ್ನು ತೊಳೆದುಕೊಳ್ಳಿ

ಆಸ್ಪಿರಿನ್

ಆಸ್ಪಿರಿನ್

ಈ ಗುಳಿಗೆಯಲ್ಲಿರುವ ಸ್ಯಾಲಿಸಿಲಿಕ್ ಆಸಿಡ್ ಎಂಬ ಪೋಷಕಾಂಶ ತಲೆಗೂದಲ ಹೊಟ್ಟು ಕಡಿಮೆಗೊಳಿಸಲು ಅದ್ಭುತ ಆಯ್ಕೆಯಾಗಿದೆ. ಇದಕ್ಕಾಗಿ ಕೆಲವು ಆಸ್ಪಿರಿನ್ ಗುಳಿಗೆಗಳನ್ನು ಕುಟ್ಟಿ ಪುಡಿಮಾಡಿ. ಈ ಪುಡಿಯನ್ನು ನಿಮ್ಮ ನಿತ್ಯದ ಶಾಂಪೂವಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ. ಸುಮಾರು ಎರಡರಿಂದ ಐದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಂಡು ಬಳಿಕ ಕಂಡೀಶನರ್ ಬಳಸಿ ತೊಳೆದುಕೊಳ್ಳಿ.

ಹಸಿರು ಟೀ

ಹಸಿರು ಟೀ

ಎರಡಿ ಹಸಿರು ಟೀ ಬ್ಯಾಗ್ ಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೊಂಚ ಹೊತ್ತಿನ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಬಳಿಕ ಟೀ ಬ್ಯಾಗ್ ಗಳನ್ನು ಹಿಂಡಿ ನೀರು ಸಂಗ್ರಹಿಸಿ. ತಣ್ಣಗಿದ್ದಂತೆಯೇ ಈ ನೀರಿನಿಂದ ತಲೆಗೂದಲನ್ನು ತೋಯಿಸಿಕೊಂಡು ನಯವಾಗಿ ಕೂದಲ ಬುಡಕ್ಕೆ ಮಸಾಜ್ ಮಾಡಿ. ಸುಮಾರು ಇಪ್ಪತ್ತು ನಿಮಿಷದ ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಸೇಬಿನ ರಸ

ಸೇಬಿನ ರಸ

ತಾಜಾ ಸೇಬುಹಣ್ಣುಗಳನ್ನು ಅರೆದು ಹಿಂಡಿ ಸುಮಾರು ಎರಡು ಕಪ್ ನಷ್ಟು ತಾಜಾ ರಸವನ್ನು ಸಂಗ್ರಹಿಸಿ. ನಿಮ್ಮ ನಿತ್ಯದ ಶಾಂಪೂ ಬಳಸಿ ಒಮ್ಮೆ ಕೂದಲನ್ನು ತೊಳೆದುಕೊಂಡ ಬಳಿಕ ಈ ರಸವನ್ನು ತಲೆಗೂದಲ ಬುಡಕ್ಕೆ ಕೊಂಚವೇ ಮಸಾಜ್ ಮೂಲಕ ಹಚ್ಚಿ ಐದು ನಿಮಿಷ ಹಾಗೇ ಬಿಡಿ. ಬಳಿಕ ನಿಮ್ಮ ನಿತ್ಯದ ಕಂಡೀಶನರ್ ಬಳಸಿ ಕೂದಲನ್ನು ತೊಳೆದುಕೊಳ್ಳಿ.

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗ

ಸುಮಾರು ಎರಡು ದೊಡ್ಡ ಅಥವಾ ಮೂರು ಮಧ್ಯಮ ಗಾತ್ರದ ಮೊಟ್ಟೆಗಳ ಬಿಳಿಭಾಗವನ್ನು ಪ್ರತ್ಯೇಕಿಸಿ ಚೆನ್ನಾಗಿ ಗೊಟಾಯಿಸಿ. ಈ ಲೇಪನವನ್ನು ತಲೆಗೆಹಚ್ಚಿ ತಲೆಗೂದಲ ಬುಡಕ್ಕೆ ಕೊಂಚವೇ ಮಸಾಜ್ ಮಾಡಿ. ಸುಮಾರು ಮೂವತ್ತು ನಿಮಿಷಗಳವರೆಗೆ ಹಾಗೇ ಒಣಗಲು ಬಿಡಿ. ಬಳಿಕ ನಿಮ್ಮ ನಿತ್ಯದ ಶಾಂಪೂ ಬಳಸಿ ತೊಳೆದುಕೊಳ್ಳಿ.ಆದರೆ ಈ ವಿಧಾನದಿಂದ ಮುಂದಿನ ಒಂದು ಅಥವಾ ಎರಡು ದಿನಗಳವರೆಗೆ ಮೊಟ್ಟೆಯ ವಾಸನೆ ಇರುವ ಕಾರಣ ರಜೆ ಇರುವ ದಿನಗಳಲ್ಲಿ ಈ ವಿಧಾನ ಅನುಸರಿಸುವುದು ಸೂಕ್ತ. ಆದರೆ ತಲೆಹೊಟ್ಟು ನಿವಾರಣೆಯಾಗುವ ಕಾರಣ ಈ ವಾಸನೆಯನ್ನು ಕೊಂಚ ಸಹಿಸಬೇಕಾಗುತ್ತದೆ.

ಟೊಮೆಟೋ ಜ್ಯೂಸ್

ಟೊಮೆಟೋ ಜ್ಯೂಸ್

ತಲೆಹೊಟ್ಟು ಕೊಂಚವೇ ಪ್ರಮಾಣದಲ್ಲಿದ್ದು ಪುಡಿ ಉದುರುತ್ತಿದ್ದರೆ ಟೊಮಾಟೋ ಜ್ಯೂಸ್ ಬಳಸಬಹುದು. ಇದನ್ನು ತಯಾರಿಸಲು ಕೆಲವು ಚೆನ್ನಾಗಿ ಹಣ್ಣಾದ ಟೊಮಾಟೊಗಳಿಂದ ಬೀಜ ಮತ್ತು ಸಿಪ್ಪೆ ನಿವಾರಿಸಿ ತಿರುಳನ್ನು ಅರೆದು ಹಿಂಡಿ ರಸ ಸಂಗ್ರಹಿಸಿ. ಮುಂದಿನ ಬಾರಿ ಸ್ನಾನ ಮಾಡುವಾಗ ಮೊದಲು ಶಾಂಪೂವಿನಿಂದ ಕೂದಲನ್ನು ತೊಳೆದುಕೊಳ್ಳಿ. ಬಳಿಕ ಟೊಮಾಟೋ ರಸವನ್ನು ಹಚ್ಚಿ ಸುಮಾರು ಐದು ನಿಮಿಷ ಹಾಗೇ ಬಿಡಿ. ನಂತರ ಕಂಡೀಶನರ್ ಹಾಕಿ ಕೂದಲನ್ನು ತೊಳೆದುಕೊಳ್ಳಿ.

English summary

Home Remedies For Dandruff & Dry Scalp

Battling with dandruff and dry scalp becomes a root cause of frizzy and rough hair. So, to eradicate hair problems from core, it is important to start with dandruff treatments such that the root cause is itself removed and thereafter the hair is taken care of. To help you out further, here is a list of sixteen easy-to-get ingredients that you can try at home on your hair, to get rid of all kinds of hair problems such as dandruff and dry scalp. Be patient to repeat the treatment that you pick and the result will be as per what you'd desire
X
Desktop Bottom Promotion