For Quick Alerts
ALLOW NOTIFICATIONS  
For Daily Alerts

  ಕೂದಲು ಉದುರಿ ತಲೆ ಬೋಳಾಗಿದೆಯೇ? ಇಲ್ಲಿದೆ ನೋಡಿ ಮನೆಮದ್ದುಗಳು

  By Manu
  |

  ಪ್ರಸಕ್ತ ದಿನಗಳಲ್ಲಿ ಕೂದಲು ಉದುರುವಿಕೆ ಸಾಮಾನ್ಯ. ಹಿಂದೊಂದು ಕಾಲದಲ್ಲಿ ವೃದ್ಧಾಪ್ಯ ಬಂದರೆ ಮಾತ್ರ ಕೂದಲು ಉದುರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ 20ನೇ ವಯಸ್ಸಿಗೇ ಕೂದಲು ಉದುರಲು ಪ್ರಾರಂಭವಾಗಿ ಬಿಟ್ಟಿದೆ. ಅಲ್ಲದೆ ಇಂತಹ ಸಮಸ್ಯೆ ಎದುರಿಸುವವರು ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಹೋಗಿ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ಬಗೆ ರಾಸಾಯನಿಕ ಶಾಂಪೂಗಳಿಗೆ ಮರುಳಾಗಿ, ಕೊನೆಗೆ ಯಾವುದೇ ಫಲಿತಾಂಶ ಕಾಣದೇ ಬೇಸತ್ತು ಹೋಗಿರುತ್ತಾರೆ.

  ಮೊದಲಿಗೆ ಕೂದಲು ಯಾಕೆ ಉದುರುತ್ತದೆ ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ನಾವು ತಿಳಿದುಕೊಳ್ಳುವುದು ಅತ್ಯಗತ್ಯ. ಸಾಮಾನ್ಯವಾಗಿ, ಆರೋಗ್ಯವಂತ ಮನುಷ್ಯನಲ್ಲಿ ಪ್ರತಿ ದಿನ 50 ರಿಂದ 100 ಕೂದಲು ಉದುರುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ. ಆದರೆ ಇವುಗಳಿಗಿಂತಲೂ ಮಿಗಿಲಾಗಿ ಇಂದಿನ ಒತ್ತಡ ಮತ್ತು ಅಧಿಕ ಕೆಲಸದಿಂದ ಕೂಡಿದ ಜೀವನ ಶೈಲಿಯೇ ಕೂದಲು ಉದುರುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

  ಯಾವಾಗ ನಾವು ಆರೋಗ್ಯಕರವಾದ ಆಹಾರ ಮತ್ತು ಜೀವನ ಶೈಲಿಗೆ ಬೆನ್ನು ಮಾಡಿ ಸಾಗುತ್ತೇವೆಯೋ, ಆಗ ಅದರಿಂದ ನಮ್ಮ ಸೌಂದರ್ಯ ಮತ್ತು ಕೂದಲಿನ ಮೇಲೆ ಇದರ ದುಷ್ಪರಿಣಾಮಗಳು ಕಂಡು ಬರುತ್ತವೆ. ಅಲ್ಲದೆ ಕೆಲವೊಮ್ಮೆ ಆರೋಗ್ಯಕರವಾದ ಡಯಟ್ ನಿಮ್ಮ ಕೂದಲಿಗೆ ಒಳ್ಳೆಯ ಲುಕ್ ನೀಡಿದರೆ, ಡಯಟ್‌ನಿಂದಾಗುವ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು, ನಿಮ್ಮ ಕೂದಲು ಉದುರುವಿಕೆಗೆ ಮತ್ತು ಇನ್ನಿತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಂದು ವೇಳೆ ನಿಮ್ಮ ತಲೆಯಲ್ಲಿ ಬೊಕ್ಕ ತಲೆಯ ಲಕ್ಷಣಗಳನ್ನು ನೀವು ಗುರುತಿಸಿದಲ್ಲಿ, ಅದಕ್ಕೆ ನೀವು ಸೇವಿಸುತ್ತಿರುವ ಕೆಟ್ಟ ಊಟ ಮತ್ತು ತಲೆ ಕೂದಲಿಗೆ ಬಳಸುತ್ತಿರುವ ಕೆಟ್ಟ ಪದಾರ್ಥಗಳೇ ಕಾರಣ ಎಂದು ತಿಳಿಯಿರಿ.

  ಚಿಂತಿಸಬೇಡಿ, ಬೊಕ್ಕ ತಲೆಯ ಮೇಲೆ ಕೂದಲು ಬೆಳೆಯಲು ಮನೆಯಲ್ಲಿಯೇ ಹಲವಾರು ಮನೆ ಮದ್ದುಗಳು ದೊರೆಯುತ್ತವೆ. ಅವುಗಳನ್ನು ಸುಲಭವಾಗಿ ಬಳಸಿಕೊಂಡು, ಸ್ವಾಭಾವಿಕವಾಗಿ ನಿಮ್ಮ ತಲೆಯಲ್ಲಿ ಕೂದಲನ್ನು ಬೆಳೆಯುವ ಹಾಗೆ ಮಾಡಬಹುದು!, ಬನ್ನಿ ಅದಕ್ಕಾಗಿ ಯಾವ ಮನೆ ಮದ್ದುಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ ಮುಂದೆ ಓದಿ.. 

  ಹೀರೇಕಾಯಿ (Ribbed Gourd)

  ಹೀರೇಕಾಯಿ (Ribbed Gourd)

  ಹಿಗ್ಗಿ ಹಿಗ್ಗಿ ಹೀರೇಕಾಯಿಯಾದ ಎಂಬ ಗಾದೆಯೇ ಇದೆ. ಇಲ್ಲಿ ಹಿಗ್ಗಲು ಕಾರಣ ಇದರ ಕೂದಲ ರಕ್ಷಣೆಯ ಶಕ್ತಿ. ಇದಕ್ಕಾಗಿ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಅದರಲ್ಲಿ ಹೀರೇಕಾಯಿಯನ್ನು ಅಡ್ಡಲಾಗಿ ಕತ್ತರಿಸಿದ ಕೆಲವು ಹೋಳುಗಳನ್ನು ಚಿಕ್ಕ ಉರಿಯಲ್ಲಿ ಕುದಿಸಿ. ಎಷ್ಟು ಕುದಿಸಬೇಕು ಎಂದರೆ ಈ ಹೋಳುಗಳು ಸುಟ್ಟು ಕಪ್ಪಗಾಗುವಷ್ಟು. ಬಳಿಕ ಈ ಎಣ್ಣೆಯನ್ನು ತಣಿಯಲು ಬಿಟ್ಟು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ಎಣ್ಣೆಯನ್ನು ನಿತ್ಯವೂ ತಲೆಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ನಯವಾಗಿ ಮಸಾಜ್ ಮಾಡಿ. ಇದರಿಂದ ಕೂದಲು ಉದುರುವ ಸಾಧ್ಯತೆ ಕಡಿಮೆಯಾಗುತ್ತದೆ.

  ಪೇರಳೆ ಮರದ ಎಲೆಗಳು

  ಪೇರಳೆ ಮರದ ಎಲೆಗಳು

  ಕೆಲವು ಪೇರಳೆ ಎಲೆಗಳನ್ನು (ತುಂಬಾ ಬಲಿತವೂ ಅಲ್ಲ, ತೀರಾ ಎಳೆಯವೂ ಅಲ್ಲ) ಕೊಂಚ ನೀರಿನೊಂದಿಗೆ ನಯವಗಿ ಅರೆಯಿರಿ. ಈ ಲೇಪನವನ್ನು ದಪ್ಪನಾಗಿ ತಲೆಯ ಕೂದಲಿಗೆ ಹಚ್ಚಿ ಒಣಗಲು ಬಿಡಿ. ಇಪ್ಪತ್ತು ನಿಮಿಷದ ಬಳಿಕ ಕೇವಲ ತಣ್ಣೀರು ಉಪಯೋಗಿಸಿ ತೊಳೆದುಕೊಳ್ಳಿ. ಇದು ಕೂದಲು ಉದುರುವುದನ್ನು ತಡೆಯುವುದರ ಜೊತೆಗೇ ಕೂದಲಿಗೆ ಕಾಂತಿ ನೀಡಲೂ ನೆರವಾಗುತ್ತದೆ.

   ಅಶ್ವಗಂಧ

  ಅಶ್ವಗಂಧ

  ಬೊಕ್ಕ ತಲೆ ತಡೆಯಲು ಅಶ್ವಗಂಧ ಸೂಕ್ತವಾಗಿದೆ. ಅಶ್ವಗಂಧ ಪುಡಿಯನ್ನು ಕೊಂಚ ಬಿಸಿ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ನಿತ್ಯದ ಉಪಯೋಗದಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಉದುರಿದ್ದ ಕೂದಲಿನ ಸ್ಥಾನದಲ್ಲಿ ಹೊಸ ಕೂದಲು ಬೆಳೆಯಲೂ ನೆರವಾಗುತ್ತದೆ.

  ಮಾವಿನ ಗೊರಟು

  ಮಾವಿನ ಗೊರಟು

  ಮಾವಿನ ಗೊರಟನ್ನು ತೆರೆದು ಒಳಗಿನ ಬೀಜವನ್ನು ಹೊರತೆಗೆಯಿರಿ. ಈ ಬೀಜವನ್ನು ಕುಟ್ಟಿ ಪುಡಿಮಾಡಿ ಕೊಂಚ ನೆಲ್ಲಿಕಾಯಿ ಪುಡಿಯೊಂದಿಗೆ ನೀರಿನಲ್ಲಿ ಸೇರಿಸಿ ದಪ್ಪನಾದ ಲೇಪನವಾಗುವಂತೆ ಅರೆಯಿರಿ. ಕೂದಲನ್ನು ನೀರಿನಿಂದ ಒದ್ದೆ ಮಾಡಿ ಈ ಲೇಪನವನ್ನು ದಪ್ಪನಾಗಿ ಕೂದಲಿಗೆ ಹಚ್ಚಿ ಇಪತ್ತು ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದಲೂ ಬೊಕ್ಕ ತಲೆಯಾಗುವ ಸಂಭವ ತಡವಾಗುತ್ತದೆ.

  ಗೋರಂಟಿ ಎಲೆಗಳು / ಮದರಂಗಿ ಎಲೆಗಳು

  ಗೋರಂಟಿ ಎಲೆಗಳು / ಮದರಂಗಿ ಎಲೆಗಳು

  ಇದು ಭಾರತದಲ್ಲಿ ಅತ್ಯಂತ ಪ್ರಸಿದ್ಧ ಕೇಶವರ್ಧಕ ಮತ್ತು ಕೂದಲನ್ನು ಕಪ್ಪಾಗಿಡಲು ಬಳಸುವ ಔಷಧ. ಇದು ಮದುವೆಯ ಸಮಯದಲ್ಲಿ ಕೈಯಲ್ಲಿ ಬಿಡಿಸುವ ವಿವಿಧ ಚಿತ್ತಾರಗಳ ಕಾರಣದಿಂದಲೂ ಬಹಳ ಪ್ರಸಿದ್ಧ. ಸಾಸಿವೆ ಎಣ್ಣೆಯಲ್ಲಿ ಮದರಂಗಿ ಎಲೆಗಳನ್ನು ಬೇಯಿಸಬೇಕು ಇದನ್ನು ಸಾಮಾನ್ಯ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹಾಗೂ ತಲೆಯ ಮೇಲೆ ಹಚ್ಚಿಕೊಳ್ಳಿ.

  ನೆಲ್ಲಿಕಾಯಿ

  ನೆಲ್ಲಿಕಾಯಿ

  ಕೂದಲಿನ ವೃದ್ಧಿಸಲು ಹಾಗೂ ಕೂದಲನ್ನು ಸುಸ್ಥಿತಿಯಲ್ಲಿಡುವಲ್ಲಿ ನೆಲ್ಲಿಕಾಯಿಯ ಪಾತ್ರ ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿರುವ ವಿಟಮಿನ್ ಸಿ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೆಲ್ಲಿಕಾಯಿ ರಸ ಮತ್ತು ಲಿಂಬೆ ಹಣ್ಣಿನ ರಸಗಳ ಮಿಶ್ರಣವನ್ನು ಕೂದಲು ಉದುರಿರುವ ಜಾಗಕ್ಕೆ ಹಚ್ಚಿ, ಅಲ್ಲದೆ ಒಂದು ದಿನ ಹಾಗೆಯೇ ಬಿಡಿ ಹಾಗೂ ಮರುದಿನ ಸ್ನಾನ ಮಾಡುವಾಗ ನೈಸರ್ಗಿಕ ಶಾಂಪೂ ಬಳಸಿ ಸ್ನಾನ ಮಾಡಿ.

  ಮೆಂತೆ ಗಿಡ

  ಮೆಂತೆ ಗಿಡ

  ಮೆಂತೆ ಗಿಡ ಮತ್ತು ಸೊಪ್ಪು ಕೂದಲು ಉದುರುವಿಕೆಯನ್ನು ತಡೆಯಲು ಬಹಳ ಸುಲಭದ ಮತ್ತು ಪರಿಣಮಕಾರಿ ದಾರಿಯಾಗಿದೆ. ಇವುಗಳಲ್ಲಿರುವ ಹಾರ್ಮೋನು ವರ್ಧಕ ಗುಣದಿಂದಾಗಿ ಕೂದಲು ಬಹಳ ಬೇಗನೆ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಇವುಗಳಲ್ಲಿ ನಿಕೊಟಿನಿಕ್ ಆಮ್ಲಗಳೂ ಇವೆ. ಮೆಂತೆ ಸೊಪ್ಪುನಿಂದ ಪೇಸ್ಟ್ ತಯಾರಿಸಿ ಇದನ್ನು ಸ್ನಾನದ ಒಂದು ಗಂಟೆಗೆ ಮುನ್ನ ಹಚ್ಚಿ ಸ್ನಾನ ಮಾಡಿ.

  ಹರಳೆಣ್ಣೆ

  ಹರಳೆಣ್ಣೆ

  ಹರಳೆಣ್ಣೆಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಒಂದು ಅಥವಾ ಎರಡು ಟೇಬಲ್ ಚಮಚ ಹರಳೆಣ್ಣೆಯನ್ನು ಅಂಗೈನಲ್ಲಿ ತೆಗೆದುಕೊಂಡು ಬೊಕ್ಕತಲೆಯ ಭಾಗದಲ್ಲಿ ಲೇಪಿಸಿಕೊಳ್ಳಿ. ಇದರಿಂದ ಸ್ವಾಭಾವಿಕವಾಗಿ ನಿಮ್ಮ ಕೂದಲು ಆ ಭಾಗದಲ್ಲಿ ಬೆಳೆಯುತ್ತದೆ.

  ಗ್ರೀನ್ ಟೀ!

  ಗ್ರೀನ್ ಟೀ!

  ಅಧ್ಯಯನಗಳ ಪ್ರಕಾರ ನಿಮ್ಮ ಕೂದಲಿಗೆ ಗ್ರೀನ ಟೀಯನ್ನು ಲೇಪಿಸುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಅದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ, ಎರಡು ಟೀ ಬ್ಯಾಗ್‍ಗಳನ್ನು ತೆಗೆದುಕೊಂಡು, ಅದನ್ನು ಬಿಸಿ ನೀರಿನಲ್ಲಿ ಕುದಿಸಿ. ಆಮೇಲೆ ತಣ್ಣಗಾದ ಬ್ಯಾಗ್‍ಗಳನ್ನು ಕೂದಲಿಗೆ ಲೇಪಿಸಿ. ಒಂದು ಗಂಟೆಯ ನಂತರ ಸ್ನಾನಮಾಡಿ. ಇದರ ಫಲಿತಾಂಶವನ್ನು ನೋಡಲು ಒಂದು ವಾರ ಹೀಗೆ ಮಾಡಿ. ಹತ್ತು ದಿನಗಳಲ್ಲಿ ನೀವು ಬದಲಾವಣೆಯನ್ನು ಗಮನಿಸುವಿರಿ.

  ಮೆಂತೆ ಕಾಳು

  ಮೆಂತೆ ಕಾಳು

  ಮೆಂತೆ ಕಾಳುಗಳೂ ಕೂಡ ಕೂದಲು ಉದುರುವಿಕೆಯನ್ನು ತಡೆಯಲು ಬಹಳ ಸುಲಭದ ಮತ್ತು ಪರಿಣಾಮಕಾರಿ ದಾರಿಯಾಗಿದೆ. ಇವುಗಳಲ್ಲಿರುವ ಹಾರ್ಮೋನು ವರ್ಧಕ ಗುಣದಿಂದಾಗಿ ಕೂದಲು ಬಹಳ ಬೇಗನೆ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಹಾಗಾಗಿ ಮೆಂತೆ ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.

  ಅಲೋವಿರಾ ಜೆಲ್

  ಅಲೋವಿರಾ ಜೆಲ್

  ಅಲೋವಿರಾ ಅಥವಾ ಲೋಳೆಯ ಜೆಲ್ ಅನ್ನು ತಾಜಾ ಆಗಿ ಗಿಡದಿಂದ ಕತ್ತರಿಸಿ ತೆಗೆದುಕೊಳ್ಳಿ. ಇದನ್ನು ಬೊಕ್ಕತಲೆಯ ಭಾಗದಲ್ಲಿ ನೇರವಾಗಿ ಲೇಪಿಸಿ. ತದನಂತರ ಸ್ವಲ್ಪ ಹೊತ್ತು ಇದನ್ನು ಹಾಗೆಯೇ ಒಣಗಲು ಬಿಡಿ, ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಎಲ್ಲಾ ಮುಗಿದ ಮೇಲೆ ಬೆಚ್ಚಗಿನ ನೀರಿನಿಂದ ತಲೆ ಕೂದಲನ್ನು ಚೆನ್ನಾಗಿ ತೊಳೆಯಿರಿ.

  ಬೀಟ್ ರೂಟ್ ಜ್ಯೂಸ್

  ಬೀಟ್ ರೂಟ್ ಜ್ಯೂಸ್

  ರಕ್ತದಂತೆ ಕೆಂಪಾಗಿರುವ ಬೀಟ್ ರೂಟ್ ತುಂಬಾ ಆರೋಗ್ಯಕಾರಿ ತರಕಾರಿಯಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ, ವಿಟಮಿನ್ ಬಿ ಮತ್ತು ಸಿ ಹಾಗೂ ಪ್ರೋಟೀನ್ ಇದೆ. ಕೂದಲು ಆರೋಗ್ಯಕರವಾಗಿ ಬೆಳೆಯಲು ಇದು ನೆರವಾಗುವುದು ಮತ್ತು ಬೊಕ್ಕ ತಲೆ ಸಮಸ್ಯೆ ನಿವಾರಣೆ ಮಾಡುವುದು.

  ಒಂದು ತುರಿದಿರುವ ಬೀಟ್ ರೂಟ್

  ಮೂರು ಚಮಚ ಗೋರಂಟಿ

  ಅಗತ್ಯವಿರುವಷ್ಟು ನೀರು

  ವಿಧಾನ

  *ತುರಿದುಕೊಂಡಿರುವ ತಾಜಾ ಬೀಟ್ ರೂಟ್ ನಿಂದ ರಸ ತೆಗೆಯಿರಿ.

  *ಇದಕ್ಕೆ ಗೋರಂಟಿ ಹಾಕಿಕೊಂಡು ಪೇಸ್ಟ್ ಮಾಡಿ. ಪೇಸ್ಟ್ ತುಂಬಾ ದಪ್ಪವಾಗಿದ್ದರೆ *ಸ್ವಲ್ಪ ನೀರು ಹಾಕಿ.

  *ಕೂದಲಿಗೆ ಇದನ್ನು ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ. ವಾರದಲ್ಲಿ ಎಷ್ಟು *ಸಲ ಸಾಧ್ಯವೋ ಅಷ್ಟು ಸಲ ಇದನ್ನು ಬಳಸಿಕೊಳ್ಳಿ.

  ಎಳ್ಳೆಣ್ಣೆಯಿಂದ ಮಸಾಜ್ ಮಾಡಿ

  ಎಳ್ಳೆಣ್ಣೆಯಿಂದ ಮಸಾಜ್ ಮಾಡಿ

  ಅವಶ್ಯಕ ಎಣ್ಣೆಗಳಾದ (Essential oils) ಎಳ್ಳೆಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆ ಸರಿಸುಮಾರು ನೀರಿನಷ್ಟೇ ತೆಳ್ಳಗಿರುವುದರಿಂದ ತಲೆಗೆ ಹಚ್ಚಿ ಮಾಲಿಶ್ ಮಾಡಿಕೊಳ್ಳುವುದು ಸುಲಭವೂ ಆರೋಗ್ಯಕರವೂ ಆಗಿದೆ. ಈ ಎಣ್ಣೆಯನ್ನು ತಲೆಯ ಚರ್ಮ ಸುಲಭವಾಗಿ ಹೀರಿಕೊಂಡು ಕೂದಲ ಬುಡಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇದರಿಂದ ಕೂದಲುದುರುವುದು ಕಡಿಮೆಯಾಗುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

  ಮೆಂತೆ ಗಿಡ

  ಮೆಂತೆ ಗಿಡ

  ಮೆಂತೆ ಗಿಡ ಮತ್ತು ಸೊಪ್ಪು ಕೂದಲು ಉದುರುವಿಕೆಯನ್ನು ತಡೆಯಲು ಬಹಳ ಸುಲಭದ ಮತ್ತು ಪರಿಣಮಕಾರಿ ದಾರಿಯಾಗಿದೆ. ಇವುಗಳಲ್ಲಿರುವ ಹಾರ್ಮೋನು ವರ್ಧಕ ಗುಣದಿಂದಾಗಿ ಕೂದಲು ಬಹಳ ಬೇಗನೆ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಇವುಗಳಲ್ಲಿ ನಿಕೊಟಿನಿಕ್ ಆಮ್ಲಗಳೂ ಇವೆ. ಮೆಂತೆ ಸೊಪ್ಪುನಿಂದ ಪೇಸ್ಟ್ ತಯಾರಿಸಿ ಇದನ್ನು ಸ್ನಾನದ ಒಂದು ಗಂಟೆಗೆ ಮುನ್ನ ಹಚ್ಚಿ ಸ್ನಾನ ಮಾಡಿ.

  ತ್ರಿಫಲ

  ತ್ರಿಫಲ

  ಎರಡು ಅಥವಾ ಮೂರು ಗಿಡಮೂಲಿಕೆಗಳನ್ನು ಹೊಂದಿರುವ ತ್ರಿಫಲ, ಕೂದಲು ಉದುರುವಿಕೆಯ ಸಮಸ್ಯೆಗೆ ಬಹಳ ಹಿಂದಿನಿಂದಲೂ ಬಳಸಿಕೊಂಡು ಬಂದಿರುವ ಸಸ್ಯ ಸಂಪತ್ತಾಗಿದೆ. ಮಾತ್ರೆ, ಟೀ ಅಥವಾ ಹುಡಿಯ ರೂಪದಲ್ಲಿ ತ್ರಿಫಲಾದ ಬಳಕೆಯನ್ನು ಮಾಡುತ್ತಾರೆ. ಕೂದಲಿನ ಕೋಶಗಳನ್ನು ಪುನರುತ್ಸಾಹಗೊಳಿಸಿ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ.

  ಬಳಕೆ

  ತ್ರಿಫಲಾದ ಪೇಸ್ಟ್ ಅನ್ನು ಮಾಡಿಕೊಂಡು ನಿಮ್ಮ ತಲೆಬುರುಡೆಗೆ ಹಚ್ಚಿಕೊಳ್ಳಿ. ಇದರಿಂದ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ.

  ಅಗಸೆ ಬೀಜಗಳು

  ಅಗಸೆ ಬೀಜಗಳು

  ಅಗಸೆ ಬೀಜಗಳ ನಿಯಮಿತ ಬಳಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಬೀಜದಲ್ಲಿ ಒಮೇಗಾ - 3 ಕೊಬ್ಬಿನ ಅಂಶಗಳಿದ್ದು ಬಕ್ಕ ತಲೆಯ ಸಮಸ್ಯೆಯನ್ನು ನಿವಾರಿಸಿ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ. ನಿಯಮಿತವಾಗಿ ಈ ಬೀಜವನ್ನು ಸೇವಿಸುವುದರಿಂದ ಸುದೃಢ ಆರೋಗ್ಯಕಾರಿ ಕೂದಲನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪನ್ನು ಈ ಬೀಜಗಳು ನೀಡುವುದರಿಂದ ಕೂದಲಿನ ಕಿರುಚೀಲಗಳನ್ನು ಬಲಗೊಳಿಸಿ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ.

  ಬಳಕೆ

  ನಿಮ್ಮ ಆಹಾರದಲ್ಲಿ ಹಲವಾರು ಬಗೆಯಲ್ಲಿ ಈ ಬೀಜಗ ಬಳಕೆಯನ್ನು ಮಾಡಬಹುದಾಗಿದೆ. ಬಿಸ್ಕತ್ತು ಮತ್ತು ಕೇಕು ತಯಾರಿಸುವಾಗ ಈ ಬೀಜಗಳನ್ನು ಬಳಸಿಕೊಳ್ಳುವುದರಿಂದ ಇದರ ನ್ಯೂಟ್ರಿನ್ ಮೌಲ್ಯ ಹೆಚ್ಚುತ್ತದೆ. ನಿಮ್ಮ ಬೆಳಗ್ಗಿನ ಶೇಕ್ಸ್‎ನಲ್ಲಿ ಈ ಬೀಜಗಳ ಬಳಕೆಯನ್ನು ಮಾಡಬಹುದಾಗಿದೆ. ನೀರಿನಲ್ಲಿ ನೆನೆಸಿಟ್ಟ ಅಗಸೆ ಬೀಜಗಳನ್ನು ಸೇವಿಸುವುದರಿಂದ ಕೂಡ ಬೋಳು ತಲೆಯ ಸಮಸ್ಯೆ ನಿವಾರಣೆಯಾಗುತ್ತದೆ.

  English summary

  Home Remedies To Cure Baldness Effectively

  Losing hair? It’s nothing short of a nightmare. Most of us are frightened at the sight of the hair falling off our head. The underlying fear is going bald. So, how do you deal with this problem? Read on to find out. Earlier, baldness was associated with old age, but today, even young people are affected by it. Bad lifestyle choices, including lack of proper nutrition and stress, has made baldness all pervasive. While it is common in males, a small population of women too deals with this embarrassing hair issue.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more