For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಗೆ, ಮನೆಯಂಗಳದ 'ದಾಸವಾಳದ ಎಣ್ಣೆ'

By Hemanth
|

ಪ್ರಕೃತಿಯಲ್ಲಿರುವ ಪ್ರತಿಯೊಂದು ಗಿಡದಲ್ಲೂ ಏನಾದರೊಂದು ಔಷಧೀಯ ಗುಣಗಳು ಇದ್ದೇ ಇರುತ್ತದೆ. ಇದನ್ನು ತಿಳಿದುಕೊಂಡು ಅದರ ಲಾಭ ಪಡೆಯಲು ಮಾತ್ರ ನಮಗೆ ತಿಳಿದಿಲ್ಲ. ಗಿಡದ ತೊಗಟೆ, ಬೇರು, ಎಲೆ ಮತ್ತು ಹೂ ಹೀಗೆ ಏನಾದರೊಂದು ಭಾಗವು ಉಪಯೋಗಕ್ಕೆ ಬಂದೇ ಬರುತ್ತದೆ. ಆದರೆ ಇಂದಿನ ವೇಗದ ಯುಗದಲ್ಲಿ ನಮಗೆಲ್ಲವೂ ತಯಾರಿಸಿಟ್ಟಿರುವಂತಹ ವಸ್ತುಗಳೇ ಬೇಕು. ಆಹಾರದಿಂದ ಹಿಡಿದು ಔಷಧಿಯ ತನಕ ಪ್ರತಿಯೊಂದು ತಯಾರಿಸಿರುವುದೇ ಬೇಕಾಗಿದೆ. ಆರೋಗ್ಯ ಹಾಗೂ ತ್ವಚೆಯ ಆರೈಕೆಯಲ್ಲಿ ಕೂಡ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಉತ್ಪನ್ನಗಳನ್ನು ಬಳಸಿಕೊಳ್ಳುತ್ತೇವೆ.

ದಾಸವಾಳ ಹೂವಿನ ಚಹಾ-ಸ್ವಲ್ಪ ಹುಳಿ, ದುಪ್ಪಟ್ಟು ಸಿಹಿ..!

ಆದರೆ ಇದರಲ್ಲಿ ರಾಸಾಯನಿಕಗಳು ಇರುವ ಕಾರಣದಿಂದ ಅಡ್ಡಪರಿಣಾಮಗಳು ಇರುತ್ತದೆ. ಅದೇ ಕೂದಲಿಗೆ ಬಳಸುವಂತಹ ಶಾಂಪೂವಿನಲ್ಲೂ ಹಲವಾರು ರಾಸಾಯನಿಕಗಳು ಇರುವುದು. ಇದು ಕೂಡ ಕೂದಲಿಗೆ ಹಾನಿ ಉಂಟು ಮಾಡುತ್ತದೆ. ಕೂದಲು ತುಂಡಾಗುವುದು, ಕೂದಲು ಉದುರುವುದು, ತಲೆಹೊಟ್ಟು, ತುರಿಕೆ ಇತ್ಯಾದಿ ಸಮಸ್ಯೆಗಳಿಗೆ ಮಾರುಕಟ್ಟೆಯಲ್ಲಿ ಸಿಗುವ ಶಾಂಪೂ ಹಾಗೂ ಕಂಡೀಷನರ್‌ಗಳನ್ನು ಬಳಸುತ್ತೇವೆ. ಆದರೆ ದುಬಾರಿ ಹಣ ಖರ್ಚು ಮಾಡಿ ಇಂತಹ ಉತ್ಪನ್ನಗಳನ್ನು ಬಳಸುವ ಮೊದಲು ದಾಸವಾಳದ ಎಣ್ಣೆ ಬಳಸಿದರೆ ಅದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

Hibiscus leaves

ಇದು ಎಲ್ಲಾ ರೀತಿಯ ಕೂದಲಿನ ಸಮಸ್ಯೆ ನಿವಾರಣೆ ಮಾಡುವುದು. ದಾಸವಾಳದಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ, ಅಮಿನೋ ಆಮ್ಲ, ವಿಟಮಿನ್ ಎ ಮತ್ತು ಅಲ್ಪಾ ಹೈಡ್ರೊಕ್ಸಿ ಆಮ್ಲಗಳಿವೆ. ನಮ್ಮ ಹೂದೋಟದಲ್ಲಿ ಸುಲಭವಾಗಿ ಸಿಗುವಂತಹ ದಾಸವಾಳದ ಎಣ್ಣೆಯನ್ನು ನೇರವಾಗಿ ಕೂದಲು ಅಥವಾ ತಲೆಬುರುಡೆಗೆ ಹಚ್ಚಿಕೊಳ್ಳಬಹುದು. ಬೋಲ್ಡ್ ಸ್ಕೈ ಹೇಳಿರುವಂತಹ ದಾಸವಾಳದ ಎಣ್ಣೆಯನ್ನು ನಿಯಮಿತವಾಗಿ ಬಳಸಿಕೊಂಡರೆ ಅದರಿಂದ ಒಳ್ಳೆಯ ಫಲಿತಾಂಶ ಸಿಗುವುದು. ಕೆಲವೇ ದಿನಗಳಲ್ಲಿ ಫಲಿತಾಂಶ ಸಿಗಬೇಕೆಂದರೆ ಅದು ಸಾಧ್ಯವಿಲ್ಲ. ತಾಳ್ಮೆಯಿಂದ ಇದನ್ನು ಬಳಸಿ ನೋಡಿದರೆ ಖಂಡಿತವಾಗಿಯೂ ಫಲಿತಾಂಶ ಲಭ್ಯವಾಗುವುದು.

ದಾಸವಾಳ-ತೆಂಗಿನೆಣ್ಣೆ
ತುಂಬಾ ಸುಲಭವಾಗಿ ಸಿಗುವಂತಹ ದಾಸವಾಳ ಮತ್ತು ತೆಂಗಿನೆಣ್ಣೆ ಬಳಸಿಕೊಂಡು ಇದನ್ನು ತಯಾರಿಸಬಹುದು. ಮನೆಯಲ್ಲೇ ತಯಾರಿಸಬಹುದಾದ ಈ ಎಣ್ಣೆ ತುಂಬಾ ಪರಿಣಾಮಕಾರಿ. ಇದನ್ನು ಒಂದು ಗಾಜಿನ ಬಾಟಲಿಗೆ ಹಾಕಿಕೊಂಡು ಹಲವು ದಿನಗಳ ಕಾಲ ಬಳಸಿಕೊಳ್ಳಬಹುದು.

ಬೇಕಾಗುವ ಸಾಮಗ್ರಿಗಳು
*20 ದಾಸವಾಳದ ಹೂಗಳು
*500 ಮಿ.ಲೀ. ತೆಂಗಿನ ಎಣ್ಣೆ
*ಒಂದು ತವಾ

ವಿಧಾನ
*ಸಣ್ಣ ಬೆಂಕಿಯಲ್ಲಿ ಒಂದು ತವಾದಲ್ಲಿ ತೆಂಗಿನೆಣ್ಣೆ ಬಿಸಿ ಮಾಡಿ.
*ಐದು ನಿಮಿಷ ಕಾಲ ತೆಂಗಿನೆಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಮತ್ತು ಇದಕ್ಕೆ ತಾಜಾ 10-15 ದಾಸವಾಳ ಹಾಕಿ.
*ಎಣ್ಣೆ ಮತ್ತು ದಾಸವಾಳವನ್ನು ಸರಿಯಾಗಿ ಮಿಶ್ರಣ ಮಾಡಿ.
*ಸ್ವಲ್ಪ ಸಮಯದ ಬಳಿಕ ಎಣ್ಣೆಯು ಕಡು ಹಳದಿ ಅಥವಾ ಕೆಂಪು ಬಣ್ಣಕ್ಕೆ ತಿರುವುದು.(ದಾಸವಾಳದ ಗುಣಮಟ್ಟ ಆಧರಿಸಿ ಈ ಬಣ್ಣ ಬರುವುದು.)
*ಗ್ಯಾಸ್ ನಂದಿಸಿ ಉಳಿದಿರುವ 5-8 ದಾಸವಾಳದ ಹೂಗಳನ್ನು ಅದಕ್ಕೆ ಹಾಕಿ.
*ಐದು ಗಂಟೆ ಕಾಲ ಇದನ್ನು ಹಾಗೆ ಬಿಡಿ ಅಥವಾ ರಾತ್ರಿಯಿಡಿ ಹಾಗೆ ಬಿಟ್ಟು ಬೆಳಿಗ್ಗೆ ಬಳಸಿ.
*ಎಣ್ಣೆಯನ್ನು ಗಾಜಿನ ಬಾಟಲಿಗೆ ಹಾಕಿಡಿ. ತುಂಬಾ ಸುಲಭವಾಗಿರುವಂತಹ ದಾಸವಾಳದ ಎಣ್ಣೆಯು ಈಗ ಉಪಯೋಗಿಸಲು ತಯಾರಾಗಿದೆ.

ಆರೋಗ್ಯದ ಸಂಜೀವಿನಿ-ಮನೆಯಂಗಳದ 'ದಾಸವಾಳ'

ದಾಸವಾಳ-ತೆಂಗಿನೆಣ್ಣೆ ಮತ್ತು ಹರಳೆಣ್ಣೆ
ಈ ಎಣ್ಣೆಯಲ್ಲಿ ರಾತ್ರಿ ತಯಾರಿಸಿಟ್ಟುಕೊಂಡು ಬೆಳಿಗ್ಗೆ ಬಳಸಿಕೊಳ್ಳಬೇಕು. ದಾಸವಾಳದ ಹೂ, ಎರಡು ಬಗೆಯ ಎಣ್ಣೆಯೊಂದಿಗೆ ಸ್ವಲ್ಪ ಮೆಂತೆ ಕಾಳು ಇದಕ್ಕೆ ಬೇಕಾಗಿದೆ. ಇದರಿಂದ ದಾಸವಾಳದ ಕೂದಲಿನ ಎಣ್ಣೆ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು
*20 ಒಣಗಿಸಿದ ದಾಸವಾಳದ ಹೂಗಳು, ½ ಕಪ್ ಅಥವಾ 500 ಮಿ.ಲೀ. ತೆಂಗಿನೆಣ್ಣೆ
*1 ಚಮಚ ಮೆಂತೆಕಾಳು
2 ಚಮಚ ಹರಳೆಣ್ಣೆ
1 ತವಾ

ವಿಧಾನ
1.ಕಡಿಮೆ ಬೆಂಕಿಯ ಉರಿಯಲ್ಲಿ ಒಂದು ತವಾವನ್ನಿಡಿ.
2. ತೆಂಗಿನೆಣ್ಣೆ ತವಾಗೆ ಹಾಕಿ ಮತ್ತು ಐದು ನಿಮಿಷ ಇದನ್ನು ಬಿಸಿ ಮಾಡಿ.
3. ಒಣಗಿಸಿದ ದಾಸವಾಳದ ಹೂಗಳನ್ನು ಇದಕ್ಕೆ ಸೇರಿಸಿಕೊಳ್ಳಿ. ದಾಸವಾಳದ ಹೂಗಳನ್ನು ಬಿಸಿಲಿನಲ್ಲಿ ಒಣಗಿಸಿ. ಇದರಿಂದ ಹೂವಿನಲ್ಲಿ ನೀರಿನಾಂಶವಿರಲ್ಲ.
4. ತವಾದಲ್ಲಿರುವ ಎಣ್ಣೆಯು ಬಣ್ಣ ಬದಲಾಯಿಸಿದಾಗ ಅದಕ್ಕೆ ಒಂದು ಚಮಚ ಮೆಂತೆ ಕಾಳು ಹಾಕಿಕೊಳ್ಳಿ.
5. ಮೆಂತೆ ಕಾಳುಗಳನ್ನು ಹಾಕಿದ ಬಳಿಕ ಐದು ನಿಮಿಷ ಕಾಲ ಎಣ್ಣೆ ಬಿಸಿಯಾಗಲಿ, ಕಾಳುಗಳು ಕರಗಿ ಹೋಗಲಿ.
6. ಗ್ಯಾಸ್ ಆಫ್ ಮಾಡಿ ಸಂಪೂರ್ಣ ರಾತ್ರಿ ಎಣ್ಣೆ ಹಾಗೆ ಇರಲಿ.
7. ಮರುದಿನ ಬೆಳಿಗ್ಗೆ ಎಣ್ಣೆ ಸೋಸಿಕೊಂಡು ಒಂದು ಗಾಜಿನ ಪಾತ್ರೆಗೆ ಹಾಕಿ.
8. ಈ ಎಣ್ಣೆಗೆ ಎರಡು ಚಮಚ ಹರಳೆಣ್ಣೆ ಸೇರಿಸಿಕೊಂಡು ಮತ್ತೆ ಈ ಎಣ್ಣೆಯನ್ನು ಸೋಸಿಕೊಳ್ಳಿ.
9. ದಾಸವಾಳ-ತೆಂಗಿನೆಣ್ಣೆ-ಹರಳೆಣ್ಣೆಯ ಮಿಶ್ರಣದ ಎಣ್ಣೆಯು ಉಪಯೋಗಿಸಲು ಸಿದ್ಧವಾಗಿದೆ.

English summary

Hibiscus-based Hair Oil Recipes That Can Be Made At Home, Now!

Hair fall, split ends, damaged hair, dandruff, lice, frizz, dry hair, oily scalp and so many more kinds of hair problems are faced by many of us. When starting to treat these at home, we just limit to some mass-marketed hair oils, hair packs or hair masks.Let's expand the ingredient list for treating all common hair problems at home and one of the unusual yet very useful ones is hibiscus.
Story first published: Friday, July 14, 2017, 10:12 [IST]
X
Desktop Bottom Promotion