ಸಮೃದ್ಧ ಕೂದಲಿನ ಪೋಷಣೆಗೆ 'ಗಿಡಮೂಲಿಕೆ'ಗಳಿಂದ ಆರೈಕೆ...

By: Hemanth
Subscribe to Boldsky

ಕೂದಲು ಉದುರುವುದು, ತುಂಡಾಗುವುದು ಮತ್ತು ತಲೆಹೊಟ್ಟು ಇದು ಸಮಸ್ಯೆಯಾಗಿ ಕಾಡುವುದು ಮಹಿಳೆಯರನ್ನು. ಮನೆ ಹಾಗೂ ಕಚೇರಿ ನಡುವಿನ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವ ತವಕದಲ್ಲಿ ಕೂದಲಿನ ಆರೈಕೆಗೆ ಹೆಚ್ಚಿನ ಸಮಯ ನೀಡಲು ಅವರಿಗೆ ಸಾಧ್ಯವಾಗುವುದಿಲ್ಲ.

ಇಂತಹ ಸಮಯದಲ್ಲಿ ಕೂದಲು ಕಾಂತಿಯನ್ನು ಕಳೆದುಕೊಂಡು ಉದುರಲು ಆರಂಭವಾಗಬಹುದು ಮತ್ತು ತುಂಡಾಗಬಹುದು. ಇದಕ್ಕೆ ಒಳ್ಳೆಯ ಪರಿಹಾರವೆಂದರೆ ಕೂದಲನ್ನು ಗಿಡಮೂಲಿಕೆಯ ನೀರಿನಿಂದ ತೊಳೆಯುವುದು. ಗಿಡಮೂಲಿಕೆಗಳನ್ನು ಇತರ ಕೆಲವೊಂದು ನೈಸರ್ಗಿಕ ಸಾಮಾಗ್ರಿಗಳೊಂದಿಗೆ ಬೆರೆಸಿಕೊಂಡು ಬಳಸಿದರೆ ಅದರಿಂದ ಕೂದಲಿಗೆ ಹೆಚ್ಚಿನ ಲಾಭವಾಗಲಿದೆ.

ಕೂದಲು ಬಲಿಷ್ಠವಾಗಿ ಕಾಂತಿಯನ್ನು ಪಡೆಯುವಂತಹ ಗಿಡಮೂಲಿಕೆಯ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಕೂದಲಿನ ಕೋಶಗಳನ್ನು ಆರೋಗ್ಯವಾಗಿಡಲು ತಿಂಗಳಲ್ಲಿ ಎರಡು ಸಲ ಇದನ್ನು ಬಳಸಬೇಕು. ಕೂದಲಿಗೆ ನೈಸರ್ಗಿಕ ಚಿಕಿತ್ಸೆಯನ್ನು ಪಡೆಯಲು ಮುಂದಕ್ಕೆ ಓದುತ್ತಾ ಸಾಗಿ....

ಗ್ರೀನ್ ಟೀ ಮತ್ತು ಪುದೀನಾ ಎಲೆಗಳು

ಗ್ರೀನ್ ಟೀ ಮತ್ತು ಪುದೀನಾ ಎಲೆಗಳು

ಗ್ರೀನ್ ಟೀ ಮತ್ತು ಪುದೀನಾ ಎಲೆಗಳಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್‌ಗಳು ಇವೆ ಮತ್ತು ಇದು ಕೂದಲು ತುಂಡಾಗುವುದು, ಕೂದಲು ಉದುರುವುದನ್ನು ತಡೆದು ಕೂದಲಿಗೆ ನೈಸರ್ಗಿಕ ಕಾಂತಿ ನೀಡುವುದು.

ತಯಾರಿಸುವುದು ಹೇಗೆ?

ತಯಾರಿಸುವುದು ಹೇಗೆ?

ಕೆಲವು ಪುದೀನಾ ಎಲೆಗಳನ್ನು ಜಜ್ಜಿಕೊಂಡು ಅದನ್ನು ತಾಜಾವಾಗಿರುವ ಗ್ರೀನ್ ಟೀ ಕಪ್ ಗೆ ಹಾಕಿ. ಸ್ವಲ್ಪ ಹೊತ್ತು ಕುದಿಯಲು ಬಿಡಿ. ತಣ್ಣಗಾದ ಬಳಿಕ ಈ ಮಿಶ್ರಣವನ್ನು ಬಳಸಿಕೊಂಡು ಕೂದಲನ್ನು ಚೆನ್ನಾಗಿ ತೊಳೆಯಿರಿ.

ನೆಲ್ಲಿಕಾಯಿ ಮತ್ತು ದಾಸವಾಳ

ನೆಲ್ಲಿಕಾಯಿ ಮತ್ತು ದಾಸವಾಳ

ಕೂದಲ ಬೆಳವಣಿಗೆ, ತಲೆಬುರುಡೆಗೆ ಪೋಷಣೆ ಮತ್ತು ಕೂದಲಿಗೆ ನೈಸರ್ಗಿಕ ಕಾಂತಿ ನೀಡಲು ನೆಲ್ಲಿಕಾಯಿ ಮತ್ತು ದಾಸವಾಳವು ಸಾಂಪ್ರದಾಯಿಕವಾಗಿರುವ ಮದ್ದಾಗಿದೆ.

ತಯಾರಿಸುವುದು ಹೇಗೆ?

ತಯಾರಿಸುವುದು ಹೇಗೆ?

ಅರ್ಧ ಜಗ್ ನೀರಿಗೆ ಒಂದು ಚಮಚ ನೆಲ್ಲಿಕಾಯಿ ಹುಡಿ ಮತ್ತು ಒಂದು ಚಮಚ ದಾಸವಾಳದ ಹುಡಿ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ತೆಳುವಾದ ಪೇಸ್ಟ್ ಆಗುವಂತೆ ನೋಡಿಕೊಳ್ಳಿ. ನೀವು ನಿಯಮಿತವಾಗಿ ಬಳಸುವ ಕೂದಲಿನ ಉತ್ಪನ್ನದಲ್ಲಿ ಕೂದಲು ತೊಳೆದ ಬಳಿಕ ಈ ಮಿಶ್ರಣ ಬಳಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಬ್ಲ್ಯಾಕ್ ಟೀ ಮತ್ತು ರಾಸ್ಬೆರಿ

ಬ್ಲ್ಯಾಕ್ ಟೀ ಮತ್ತು ರಾಸ್ಬೆರಿ

ತುಂಬಾ ವೇಗವಾಗಿ ತಯಾರಿಸಬಹುದಾದ ಗಿಡಮೂಲಿಕೆಯ ಕೂದಲಿನ ಆರೈಕೆಯ ಔಷಧಿ ಇದಾಗಿದೆ. ಇವೆರಡು ಗಿಡಮೂಲಿಕೆಗಳು ಕೂದಲಿನ ಬುಡದಲ್ಲಿರುವ ಕೋಶಗಳನ್ನು ಬಲಗೊಳಿಸುತ್ತದೆ ಮತ್ತು ಇದರಿಂದ ಕೂದಲು ಕಾಂತಿಯುವಾಗಿ ಕಾಣುವುದು.

ತಯಾರಿಸುವುದು ಹೇಗೆ?

ತಯಾರಿಸುವುದು ಹೇಗೆ?

ರಾಸ್ಬೆರಿಯ ಎಲೆಗಳನ್ನು ಜಜ್ಜಿಕೊಂಡು ತಾಜಾವಾಗಿ ತಯಾರಿಸಿದ ಬ್ಲ್ಯಾಕ್ ಟೀ ಜತೆಗೆ ಬೆರೆಸಿಕೊಳ್ಳಿ. ಇದನ್ನು ಕೆಲವು ಹೊತ್ತು ಮಿಶ್ರಣ ಮಾಡಿಕೊಳ್ಳಿ. ಬಳಿಕ ತಲೆಬುರುಡೆಗೆ ಈ ಮಿಶ್ರಣವನ್ನು ಬಳಸಿಕೊಳ್ಳಿ.

English summary

Herbal Rinse For Shiny And Strong Hair

Using herbal hair rinse is an inexpensive way to treat hair-related woes such as breakage and dullness. This is a hair care practice that has existed since ages and is known for its effectiveness. That is mainly because herbs are rich in antioxidants, antiseptic agents and vitamins that can revitalize your scalp and tresses. From strengthening follicles to nourishing the locks, herbs can do it all.
Story first published: Tuesday, June 13, 2017, 10:01 [IST]
Subscribe Newsletter