Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕೂದಲು ಉದುರುವ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ
ಕೂದಲು ಉದುರುವುದು ಅನೇಕರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಅನಾರೋಗ್ಯ, ವಿಟಮಿನ್ ಗಳ ಕೊರತೆ, ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು ಅಥವಾ ph ಸಮತೋಲದಲ್ಲಿ ಇಲ್ಲದಿರುವ ಶ್ಯಾಂಪೂಗಳನ್ನು ಬಳಕೆ ಇವುಗಳು ಕೂದಲು ಉದುರಲು ಪ್ರಮುಖ ಕಾರಣಗಳಾಗಿವೆ. ಈ ರೀತಿ ಕೂದಲು ಉದುರುವುದನ್ನು ತಡೆಗಟ್ಟಲು ಆದಷ್ಟು ರಾಸಯನಿಕ ಇರುವ ಶ್ಯಾಂಪೂಗಳನ್ನು ಬಳಸಲು ಹೋಗಬಾರದು. ನೈಸರ್ಗಿಕ ಸಾಧನಗಳಾದ ಸೀಗೆಕಾಯಿ, ಅಂಟವಾಳ (ಅಂಟ್ವಾಳ) ಬಳಸಿ ತಲೆಯನ್ನು ಶುಚಿಗೊಳಿಸುವುದು ಒಳ್ಳೆಯದು. ಸ್ವಾಭಾವಿಕವಾಗಿ ದೊರೆಯುವ ಸಾಧನಗಳಿಂದ ನೀವೆ ಶ್ಯಾಂಪೂ ಕೂಡ ತಯಾರಿಸಿಬಹುದಾಗಿದ್ದು, ಈ ರೀತಿ ತಯಾರಿಸಿದ ಶ್ಯಾಂಪೂ ಕೂದಲಿಗೆ ಬಳಸಿದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುವುದು. ನೈಸರ್ಗಿಕ ಶ್ಯಾಂಪೂ ಬಳಸುವ ವಿಧಾನ ನೋಡಿ ಇಲ್ಲಿದೆ.

1. ಅಂಟವಾಳ ಶ್ಯಾಂಪೂ: ಅಂಟವಾಳ ಬಳಸಿ ಕೂದಲಿನ ಪೋಷಣೆ ಮಾಡವುದಷ್ಟೇ ಅಲ್ಲ ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಇದನ್ನು ಬಳಸಿದರೆ ಆ ಸಮಸ್ಯೆಯನ್ನು ಹೋಗಲಾಡಿಸಬಹುದು. 4-5 ಅಂಟವಾಳ ಕಾಯಿಗಳನ್ನು ತೆಗೆದುಕೊಂಡು ಸ್ವಲ್ಪ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಹಾಕಿ ಒಂದು ರಾತ್ರಿ ಬಿಡಬೇಕು. ನಂತರ ಸ್ನಾನ ಮಾಡುವ 20 ನಿಮಿಷ ಮುನ್ನ ಅಂಟವಾಳ ಚೆನ್ನಾಗಿ ಕೈಯಲ್ಲಿ ಹಿಸುಕಿ, ನಂತರ ನೀರನ್ನು ತಲೆಗೆ ಹಚ್ಚಿ 20 ನಿಮಿಷ ಬಿಡಬೇಕು. ನಂತರ ಸ್ನಾನ ಮಾಡುವಾಗ ತಲೆಯನ್ನು ಚೆನ್ನಾಗಿ ಉಜ್ಜಿ ತೊಳೆದರೆ ಕೂದಲು ನುಣುಪಾಗುವುದು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ.
2. ಅಡುಗೆ ಸೋಡಾ: ಅಡುಗೆ ಸೋಡಾ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು ಬಳಸಿ ಕೂದಲಿನಲ್ಲಿರುವ ಕೊಳೆಯನ್ನು ತೆಗೆಯಬಹುದು. ಒಂದು ಚಮಚ ಅಡುಗೆ ಸೋಡಾವನ್ನು ಒಂದು ಕಪ್ ನೀರಿಗೆ ಹಾಕಿ ಮಿಶ್ರ ಮಾಡಿ ಚೆನ್ನಾಗಿ ಕೂದಲಿಗೆ ಮಸಾಜ್ ಮಾಡಬೇಕು. ನಂತರ ಅದರಿಂದ ಮೆಲ್ಲನೆ ಮಸಾಜ್ ಮಾಡಿ 10 ನಿಮಿಷದ ಬಳಿಕ ತಲೆ ತೊಳೆದರೆ ಕೊಳೆ ಹೋಗುವುದು, ಕೂದಲು ಆರೋಗ್ಯವನ್ನು ಪಡೆಯುತ್ತದೆ. ದಪ್ಪ ಅಥವಾ ಗುಂಗುರು ಕೂದಲು ಇರುವವರಿಗೆ ಸ್ವಲ್ಪ ಅಧಿಕ ಅಡುಗೆ ಸೋಡಾ ಬೇಕಾಗುವುದು. ಈ ರೀತಿ ಮಾಡಿದಾಗ ಕೂದಲು ತುಂಬಾ ಒಣಗಿದಂತೆ ಭಾಸವಾದರೆ ಅರ್ಥ ಬಕೆಟ್ ನೀರಿಗೆ ಒಂದು ಚಮಚ ವಿನಿಗರ್ ಹಾಕಿ ಕಂಡೀಷನರ್ ಆಗಿ ಬಳಸಿದರೆ ಕೂದಲು ಮೃದುವಾಗುವುದು.
3.ವಿನಿಗರ್ ಮತ್ತು ನೀರು: 2 ಚಮಚ ವಿನಿಗರ್ ಅನ್ನು ಹದ ಬಿಸಿ ನೀರಿನಲ್ಲಿ ಕಲೆಸಿ ಅದನ್ನು ತಲೆಗೆ ಮಸಾಜ್ ಮಡಿ 15-20 ನಿಮಿಷ ಬಿಡಬೇಕು. ಅದರಲ್ಲೂ ಆಪಲ್ ವಿನಿಗರ್ ಸೈಡರ್ ಬಳಸಿದರೆ ಒಳ್ಳೆಯದು. ಈ ರೀತಿ ಮಾಡಿದರೆ ಕೂದಲಿನ ಆರೈಕೆ ಒಳ್ಳೆಯದು.
4. ಸೀಗೆಕಾಯಿ: ತಲೆಗೆ ಸೀಗೆಕಾಯಿ ಪುಡಿ ಹಚ್ಚಿ ತೊಳೆದರೆ ಕೂದಲು ಉದುರುವುದು ನಿಂತು ಸೊಂಪಾಗಿ ಬೆಳೆಯುವುದು. ಸೀಗೆಕಾಯಿ ಹಚ್ಚಿದಾಗ ಕೆಲವರಿಗೆ ಕಣ್ಣಿನಲ್ಲಿ ತುರಿಕೆ ಕಂಡು ಬರುತ್ತದೆ. ಆದ್ದರಿಂದ ಕಣ್ಣಿಗೆ ತಾಗಿಸಿದಂತೆ ಹಚ್ಚಿ.
ಸಲಹೆ: ಸ್ನಾನಕ್ಕೆ ಅರ್ಧ ಗಂಟೆ ಮುಂಚೆ ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿ.



Click it and Unblock the Notifications
